
ಜೋಗೇಶ್ವರಿ ಪೂರ್ವ ಠಾಕೂರ್ ನಗರದ ಇತಿಹಾಸ ಪ್ರಸಿದ್ಧ ಮಹಾಕಾಳಿ ಗುಹೆಯ ಸನಿಹದಲ್ಲಿರುವ, ಕಾರಣಿಕ ಕ್ಷೇತ್ರ, ಶ್ರೀ ಜಗದಂಬಾ ಕಾಲಭೈರವ ದೇವಸ್ಥಾನದಲ್ಲಿ ಕಾಲಭೈರವ ಜಯಂತೋತ್ಸವವು ಇದೇ ಬರುವ ನವಂಬರ್ 17, ಬುಧವಾರ, ಬೆಳಿಗ್ಗೆ 9:00 ರಿಂದ 12ರ ತನಕ ಜರಗಲಿದೆ.
ಆ ಪ್ರಯುಕ್ತ ಅಂದು ಬೆಳಿಗ್ಗೆ ಗಂಟೆ 11ಕ್ಕೆ ಅಭಿಷೇಕ, ಮಧ್ಯಾಹ್ನ ಗಂಟೆ 12ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ ಬಳಿಕ ಅನ್ನಸಂತರ್ಪಣೆಯು ಜರಗಲಿದೆ.
ಭಕ್ತಾದಿಗಳು ಈ ಉತ್ಸವಕ್ಕೆ ಆಗಮಿಸಿ ಶ್ರೀ ಕಾಲಭೈರವ ದೇವರ ಸೇವೆಯಲ್ಲಿ ಭಾಗವಹಿಸಿ ಪ್ರಸಾದವನ್ನು ಸ್ವೀಕರಿಸುವಂತೆ ದೇವಸ್ಥಾನದ ಆಡಳಿತ ಟ್ರಸ್ಟಿ ಸಂಜೀವ ಪಿ ಪೂಜಾರಿ, ಗೌರವ ಕಾರ್ಯದರ್ಶಿ ಶೇಖರ್ ಕರ್ಕೇರ, ಪ್ರಧಾನ ಅರ್ಚಕರಾದ ಪಾದೂರು ನರಹರಿ ತಂತ್ರಿ, ಹಾಗೂ ಟ್ರಸ್ಟಿಗಳು, ಪದಾಧಿಕಾರಿಗಳು ವಿನಂತಿಸಿದ್ದಾರೆ.




