
ಮುಂಬಯಿ: ‘ಸೃಜನಾ’ ಮುಂಬಯಿ ಕನ್ನಡ ಲೇಖಕಿಯರ ಬಳಗದ ವತಿಯಿಂದ ಮಯೂರವರ್ಮ ಸಾಂಸ್ಕೃತಿಕ ಪ್ರತಿಷ್ಠಾನ, ಮುಂಬಯಿ ಇದರ 9 ಕೃತಿಗಳ ಸಮೀಕ್ಷೆ ಕಾರ್ಯಕ್ರಮವು ನವೆಂಬರ್ 29ರಂದು ಸಂಜೆ 5:15ಕ್ಕೆ ಮಾಟುಂಗಾ ಪೂರ್ವದ ಭಾವುದಾಜಿ ರಸ್ತೆಯ ಮೈಸೂರು ಅಸೋಸಿಯೇಷನ್ ಮುಂಬಯಿ ಇದರ ಮೊದಲ ಮಹಡಿಯಲ್ಲಿ ನಡೆಯಲಿದೆ.
ಸೃಜನಾ ಬಳಗದ ಸಂಚಾಲಕಿ ಪದ್ಮಜಾ ಮಣ್ಣೂರ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು ಬಳಗದ ಸದಸ್ಯೆಯರಾದ ಡಾ. ದಾಕ್ಷಾಯಣಿ ಯಡಹಳ್ಳಿ ಅವರು ಸೂರ್ಯ ಪ್ರಭೆ- ಪೌರಾಣಿಕ ನಾಟಕ, ಡಾ. ಜಿ ಪಿ ಕುಸುಮಾ ಅವರು ‘ಹೊರನಾಡಿನಲ್ಲಿ ತುಳುವರು’ ಲಲಿತಾ ಪ್ರಭು ಅಂಗಡಿ ಅವರು ‘ಮುಂಬಯಿ ಕನ್ನಡಿಗರ ದೇವಾಲಯಗಳ ಮಾಹಿತಿ ಕೋಶ’ ಶಾರದಾ ಅಂಬೆಸಂಗೆ ಅವರು ‘ಸೌಹಾರ್ದ ಸೇತು’ ಲತಾ ಸಂತೋಷ್ ಶೆಟ್ಟಿ ಅವರು ‘ಕನ್ನಡ ಶಾಲೆಯ ಸವಿನೆನಪುಗಳು’ ಸುಶೀಲಾ ದೇವಾಡಿಗ ಅವರು ‘ಸನಾತನ ಧರ್ಮವೂ ಪ್ರಕೃತಿಯ ಆರಾಧನೆಯೂ’ ಹಾಗೂ ಅಶ್ವಿತಾ ಶೆಟ್ಟಿ ಅವರು ‘ಯಾರು ಆಳಿದರೇನು ನಾವು ರಾಗಿ ಬೀಸೋದು ತಪ್ಪುತ್ತ’ ಕೃತಿಗಳ ಸಮೀಕ್ಷೆಯನ್ನು ನಡೆಸಲಿದ್ದಾರೆ..
ಬಳಗದ ಸದಸ್ಯೆಯರು, ಸಾಹಿತ್ಯ ಪ್ರೇಮಿಗಳು ಹಾಗೂ ಕನ್ನಡಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸುವಂತೆ ‘ಸೃಜನಾ’ ಮುಂಬಯಿ ಕನ್ನಡ ಲೇಖಕಿಯರ ಬಳಗದ ಪ್ರಕಟಣೆ ತಿಳಿಸಿದೆ.




