September 6, 2026
Mumbai News Kannada
Uncategorized

ಭಾರತ್ ಬ್ಯಾಂಕಿನ ನಿರ್ದೇಶಕರಾದ ಗಂಗಾಧರ್ ಜೆ. ಪೂಜಾರಿಯವರಿಗೆ ಪಿತೃ ವಿಯೋಗ





ಬಂಟ್ವಾಳ, ನವೆಂಬರ್ 29:

​ಬಂಟ್ವಾಳ ತಾಲೂಕಿನ ಬಡಗ ಬೈಲೂರು ಕೊಪ್ಪಳದ, ಜೆ. ನಾಗಮ್ಮ ಶ್ರೀ ನಿವಾಸಿ. ಭಾರತ್ ಬ್ಯಾಂಕಿನ ನಿರ್ದೇಶಕರಾದ ಗಂಗಾಧರ್ ಜೆ. ಪೂಜಾರಿಯವರ ತಂದೆ ಜಾರಪ್ಪ ಪೂಜಾರಿಯವರು ಅಲ್ಪಕಾಲದ ಅನಾರೋಗ್ಯದಿಂದ ನವೆಂಬರ್ 29 ರಂದು ನಿಧನರಾಗಿದ್ದಾರೆ.

​ಸಮಾಜ ಸೇವೆಯೊಂದಿಗೆ ಕೃಷಿ ಚಟುವಟಿಕೆಗಳಲ್ಲಿ ನಿರತರಾಗಿದ್ದ ಜಾರಪ್ಪ ಪೂಜಾರಿಯವರು, ತಮ್ಮ ಪತ್ನಿ, ಮಕ್ಕಳು, ಸೊಸೆಯಂದಿರು, ಅಳಿಯಂದಿರು, ಮೊಮ್ಮಕ್ಕಳು ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

​ಜಾರಪ್ಪ ಪೂಜಾರಿ ಅವರ ನಿಧನಕ್ಕೆ ಭಾರತ್ ಬ್ಯಾಂಕಿನ ಕಾರ್ಯಾಧ್ಯಕ್ಷ ಸೂರ್ಯಕಾಂತ್ ಜಯ ಸುವರ್ಣ, ನಿರ್ದೇಶಕ ಮಂಡಳಿ, ಜಯ ಸಿ. ಸುವರ್ಣ ಅಭಿಮಾನಿಗಳು, ಮುಂಬಯಿ ಬಿಲ್ಲವರು, ಹಾಗೂ ಶ್ರೀ ನಾರಾಯಣ ಗುರು ಭಜನಾ ಮಂಡಳಿ (ರಿ) ಆಳವಾದ ದುಃಖ ಮತ್ತು ಸಂತಾಪ ವ್ಯಕ್ತಪಡಿಸಿದ್ದಾರೆ.

​ಮೃತರ ಅಂತ್ಯ ಸಂಸ್ಕಾರದ ಕ್ರಿಯೆಯು ನವೆಂಬರ್ 30 ರಂದು, ಬೆಳಗ್ಗೆ 11.30 ಗಂಟೆಗೆ ಅವರ ಬಂಟ್ವಾಳದಲ್ಲಿರುವ ಬಡಗ ಬೈಲೂರು ಕೊಪ್ಪಳದ ಸ್ವಗೃಹ/ಸ್ವಜಾಗದಲ್ಲಿ ನೆರವೇರಲಿದೆ.



Related posts

ಡಾ. ರಶ್ಮಾ ಎಂ. ಶೆಟ್ಟಿ ಗೆ ಮಿಸೆಸ್ ಇಂಡಿಯಾ ಕರ್ನಾಟಕ ಮಂಗಳೂರು ಸ್ಪರ್ಧೆಯಲ್ಲಿ ಪ್ರಥಮ ರನ್ನರ್ ಅಪ್ ಪ್ರಶಸ್ತಿ

Mumbai News Desk

ಶಿವಸೇನೆ ದಕ್ಷಿಣ ಭಾರತದ ವಿಭಾಗ, ಡೊಂಬಿವಲಿ – ಆಟಿಡ್ ಒಂಜಿ ದಿನ

Mumbai News Desk

ಗೋರೆಗಾಂವ್ ಕರ್ನಾಟಕ ಸಂಘದ 66ನೇ ಸಂಸ್ಥಾಪನಾ ದಿನಾಚರಣೆ.

Mumbai News Desk

ಮುಂಬಯಿ ಬಿಲ್ಲವರ ಹಿತಚಿಂತಕರು ಮತ್ತು ಜಯ ಸಿ ಸುವರ್ಣ ಅಭಿಮಾನಿಗಳ ವತಿಯಿಂದ ಪತ್ರಕರ್ತ,ವಾಗ್ಮಿ ,ದಿನೇಶ್ ಮಟ್ಟು ಅವರಿಗೆ ಗೌರವ.

Mumbai News Desk

U.S. vs China Trade Wars: Qualcomm Scraps $44 Billion NXP Deal After China Inaction

admin

ಮುಂಬೈ: ಶ್ರೀ ರಾಮಾಭಿವಂದ್ಯ ಯಕ್ಷಸೇವಾ ಬಳಗ ಹಾಗೂ ಮುಂಬೈ ವಿ.ವಿ. ಜಂಟಿ ಆಯೋಜನೆಯ ‘ಶ್ರೀ ರಾಮ ಕಥಾ ಹೃದಯಂ’ ಸರಣಿಯ ನವಮ ಪ್ರಸ್ತುತಿ,ಆನಂದ ಶೆಟ್ಟಿ ಇನ್ನಾ ಅವರಿಗೆ ಸನ್ಮಾನ

Mumbai News Desk