July 23, 2026
Mumbai News Kannada
ಮುಂಬಯಿ

ಭಾಂಡೂಪ್ ಶ್ರೀ ಪಿಂಪಲೇಶ್ವರ ಮಹಾದೇವ ಮಂದಿರದಲ್ಲಿ ಶ್ರೀ ಶನೀಶ್ವರ ದೇವರ 47ನೇ ವಾರ್ಷಿಕ ಮಹಾಪೂಜೆ: ಸಾವಿರಾರು ಭಕ್ತರ ಪಾಲ್ಗೊಳ್ಳುವಿಕೆ!







ಚಿತ್ರ: ಧನಂಜಯ ಪೂಜಾರಿ, ವರದಿ: ಇನ್ನಂಜೆ ಜಯರಾಮ್

​ಮುಂಬಯಿ:
​ಸಾವಿರಾರು ಭಕ್ತರ ಪಾಲಿಗೆ ಪುಣ್ಯಕ್ಷೇತ್ರವಾಗಿ ರೂಪುಗೊಂಡಿರುವ ಭಾಂಡೂಪ್ ಪಶ್ಚಿಮದ  ಬ್ಯಾಂಕ್ ಆಫ್ ಬರೋಡಾ ಸ್ಟ್ರಾಪ್ ಕ್ಯಾರ್ಟಸ್್ರ ಹತ್ತಿರದ ಶ್ರೀ ಪಿಂಪಲೇಶ್ವರ ಮಹಾದೇವ ಮಂದಿರದಲ್ಲಿ ನೆಲೆಸಿರುವ ಶ್ರೀ ಶನೀಶ್ವರ ಭಕ್ತವೃಂದ ಮಿತ್ರ ಮಂಡಳಿಯ ವತಿಯಿಂದ ಆಯೋಜಿಸಲಾಗಿದ್ದ 47ನೇ ವಾರ್ಷಿಕ ಶ್ರೀ ಸತ್ಯನಾರಾಯಣ ಹಾಗೂ ಶ್ರೀ ಶನೀಶ್ವರ ದೇವರ ಮಹಾಪೂಜೆಯು ಡಿ. 6ರ ಶನಿವಾರದಂದು ಅತೀವ ಭಕ್ತಿ, ಶ್ರದ್ಧೆ ಮತ್ತು ವೈಭವದಿಂದ ನೆರವೇರಿತು.

​ಐತಿಹಾಸಿಕ ಮಹತ್ವವನ್ನು ಹೊಂದಿರುವ ಈ ವಾರ್ಷಿಕೋತ್ಸವವು ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಸರಣಿಯೊಂದಿಗೆ ಡಿ. 2ರ ಮಂಗಳವಾರದಂದು ವಿಘ್ನನಿವಾರಕ ಗಣಪತಿಗೆ ಗಣಹೋಮದೊಂದಿಗೆ ಚಾಲನೆ ಪಡೆಯಿತು. ಡಿ. 3ರ ಬುಧವಾರ ಸಂಜೆ ನಾಗದೇವರಿಗೆ ಪ್ರಿಯವಾದ ಆಶ್ಲೇಷಾ ಬಲಿಯನ್ನು ನೆರವೇರಿಸಲಾಯಿತು. ಡಿ. 4ರ ಗುರುವಾರದಂದು ಬೆಳಿಗ್ಗೆ, ಭಕ್ತರು ಪರಮೇಶ್ವರನಿಗೆ ಭಕ್ತಿ ಸಮರ್ಪಿಸಿ 108 ಕಲಶ ಕ್ಷೀರಾಭಿಷೇಕವನ್ನು ನೆರವೇರಿಸಿದರು. ಡಿ. 5ರ ಶುಕ್ರವಾರದಂದು ಸಾಯಂಕಾಲ, ದೇವಿಯ ಅನುಗ್ರಹಕ್ಕಾಗಿ ವಿಶೇಷ ಭಗವತಿ ಸೇವಾ ದುರ್ಗಾ ನಮಸ್ಕಾರ ಪೂಜೆಯನ್ನು ಭಕ್ತಿಪೂರ್ವಕವಾಗಿ ಸಲ್ಲಿಸಲಾಯಿತು.

​ಮಹೋತ್ಸವದ ಪ್ರಮುಖ ದಿನವಾದ ಡಿ. 6ರ ಶನಿವಾರದಂದು ಬೆಳಿಗ್ಗೆ ಪುಣ್ಯ ಪ್ರದಾತ ಶ್ರೀ ಸತ್ಯನಾರಾಯಣ ಪೂಜೆಯನ್ನು ವಿಧಿವತ್ತಾಗಿ ಆಚರಿಸಲಾಯಿತು.

ಮಧ್ಯಾಹ್ನ, ಸದ್ಗುರು ಶ್ರೀ ಸಾಯಿಬಾಬಾ ಆರತಿಯ ಬಳಿಕ ಮಧ್ಯಾಹ್ನದಿಂದ ಸಾಯಂಕಾಲದವರೆಗೆ ಸಮಸ್ತ ಭಕ್ತರ ಗಮನ ಸೆಳೆದ ಶ್ರೀ ಶನೀಶ್ವರ ಮಹಾಪೂಜೆಯು ವಿಶೇಷವಾಗಿ ಯಕ್ಷಗಾನ ತಾಳಮದ್ದಳೆಯ ರೂಪದಲ್ಲಿ ಮೂಡಿಬಂತು.


​ಈ ಪೂಜಾ ಕೈಂಕರ್ಯದಲ್ಲಿ ಸ್ಥಳೀಯ ಶ್ರೀ ಶನೀಶ್ವರ ಭಕ್ತ ವೃಂದ ಮಿತ್ರ ಮಂಡಳಿಯ ಸದಸ್ಯರು ಮಾತ್ರವಲ್ಲದೆ, ನಗರದಾದ್ಯಂತ ಇರುವ ಅನೇಕ ಶನೀಶ್ವರ ಸಮಿತಿ ಮತ್ತು ಮಂಡಳಿಗಳ ಪ್ರಮುಖ ಅರ್ಥಧಾರಿಗಳು ಹಾಗೂ ಶನಿಗ್ರಂಥ ವಾಚಕರು, ಭಾಗವತರು, ಹಿಮ್ಮೇಳ ಕಲಾವಿದರು  ಪಾಲ್ಗೊಂಡಿದ್ದು, ಭಕ್ತಿಯ ಪರಾಕಾಷ್ಠೆಯನ್ನು ಸಾರಿತು.

​ಮಹಾಪೂಜೆಯಲ್ಲಿ ಪ್ರಧಾನ ಅರ್ಚಕರಾದ ಶ್ರೀ ಕಿಶೋರ್ ಆರ್. ಸಾಲಿಯಾನ್ ಅವರ ನೇತೃತ್ವದಲ್ಲಿ ಪೂಜಾ ವಿಧಿವಿಧಾನಗಳು ಶಾಸ್ತ್ರೋಕ್ತವಾಗಿ ಜರುಗಿದವು.
​ಅರ್ಚಕರಾಗಿ: ಶ್ರೀ ಅರುಣ್ ಬಂಗೇರ ಮತ್ತು ಶ್ರೀ ಪ್ರಶಾಂತ್ ಡಿ. ಕುಂದರ್ ಅವರು ಪೂಜಾ ಕಾರ್ಯಗಳನ್ನು ನೆರವೇರಿಸಿದರು.
ಶ್ರೀ ದಿನೇಶ್ ಗೋಸ್ವಾಮಿ, ಶ್ರೀ ಶ್ರೀಧರ್ ಅಯ್ಯರ್, ಶ್ರೀ ನಾರಾಯಣ್ ಅಯ್ಯರ್ ಮತ್ತು ಶ್ರೀ ಹರಿ ಸ್ವಾಮಿ ಅವರು ನೆರವಾದರು. ​ಸಹ ಅರ್ಚಕರಾಗಿ: ಶ್ರೀ ಉದಯ್ ಆರ್. ಸಾಲಿಯಾನ್, ಶ್ರೀ ಸಚಿನ್ ಕೋಟ್ಯಾನ್, ಶ್ರೀ ಶರದ್ ಸಾಲಿಯಾನ್ ಮತ್ತು ಶ್ರೀ ಪುನೀತ್ ಸಾಲಿಯಾನ್ ಅವರು ಪೂಜಾ ಕೈಂಕರ್ಯಗಳಿಗೆ ಸಹಕರಿಸಿದರು.

​ಮಹಾಪೂಜೆಯ ಸಂದರ್ಭದಲ್ಲಿ, ಯಕ್ಷಗಾನ ಕಲಾವಿದ, ಶನಿ ಗ್ರಂಥ ಪಾರಾಯಣದ ಅರ್ಥಧಾರಿ ನಾಗೇಶ್ ಸುವರ್ಣ ಎರ್ಮಾಳ್ ಅವರಿಗೆ ವಿಶೇಷ ಸನ್ಮಾನ ಮಾಡಲಾಯಿತು. ಅವರು ಚಿನ್ಮಯ ದಾಸರ ‘ಶ್ರೀ ಶನಿದೇವರ ಮಹಾತ್ಮ’ ಗ್ರಂಥದ ಪದ್ಯಗಳಿಗೆ ತುಳುವಿನಲ್ಲಿ ಅರ್ಥ ಬರೆದು ಸಾರಸ್ವತ ಲೋಕಕ್ಕೆ ಮಹತ್ವದ ಕೊಡುಗೆ ನೀಡಿದ್ದರಿಂದ, ಅವರನ್ನು ಭಾಂಡೂಪ್ ಶ್ರೀ ಶನೀಶ್ವರ ಭಕ್ತ ವೃಂದ ಮಿತ್ರ ಮಂಡಳಿಯ ಪರವಾಗಿ ಗೌರವಿಸಲಾಯಿತು.

​ಈ ಪುಣ್ಯ ಸಂದರ್ಭದಲ್ಲಿ ಶ್ರೀ ಶನೀಶ್ವರ ಭಕ್ತವೃಂದ ಮಿತ್ರ ಮಂಡಳಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು. ಮಹಾಪೂಜೆಯ ಬಳಿಕ ಶ್ರೀ ಕೃಷ್ಣ ಪ್ರಸಾದಿತ ಭಜನಾ ಮಂಡಳಿಯವರಿಂದ ಸುಮಧುರ ಭಜನಾ ಕಾರ್ಯಕ್ರಮ ನಡೆಯಿತು. ರಾತ್ರಿ ತೀರ್ಥ ಪ್ರಸಾದ ವಿತರಣೆ ಮತ್ತು  ಅನ್ನ ಸಂತರ್ಪಣೆಯನ್ನು ಆಯೋಜಿಸಲಾಗಿತ್ತು. ಈ ಪವಿತ್ರ ಅನ್ನಸೇವೆಗೆ ವಸಂತ್ ಎನ್. ಪೂಜಾರಿ ವಿರಾರ್, ಪಟೇಲ್ ಬಿಲ್ಡರ್ಸ್ ಸಾಯಿನಾಥ್ ಡೆವಲಪರ್ಸ್ ಜಂಗಲ್-ಮಂಗಲ್ ರೋಡ್ ಭಾಂಡೂಪ್, ಹಾಗೂ ಹರಿ ಓಂ ಗ್ರೂಪ್ ಮುಲುಂಡ್ ಇವರು ಸೇವಾ ರೂಪದಲ್ಲಿ ನೆರವು ನೀಡಿದರು.


​ನಗರದ ವಿವಿಧ ಸಾಮಾಜಿಕ, ಧಾರ್ಮಿಕ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಮತ್ತು ಸದಸ್ಯರು ಸೇರಿದಂತೆ ಸಾವಿರಾರು ಮಂದಿ ಭಕ್ತರು ಈ ಮಹಾಪೂಜೆಯಲ್ಲಿ ಪಾಲ್ಗೊಂಡು ಶನೀಶ್ವರ ದೇವರ ಗಂಧ ಪ್ರಸಾದ ಹಾಗೂ ಅನ್ನಪ್ರಸಾದವನ್ನು ಸ್ವೀಕರಿಸಿ ಕೃತಾರ್ಥರಾದರು.

​47ನೇ ವಾರ್ಷಿಕ ಮಹಾಪೂಜೆಯು ಅತ್ಯಂತ ಯಶಸ್ವಿಯಾಗಿ ಜರಗಲು ಆಡಳಿತ ಮಂಡಳಿಯ ​ಗೌರವ ​​ಅಧ್ಯಕ್ಷರಾದ ಸಿ. ಲಕ್ಷ್ಮಣ್, ​ಅಧ್ಯಕ್ಷರಾದ ಅರುಣ್ ಬಂಗೇರ, ​ಉಪಾಧ್ಯಕ್ಷರುಗಳಾದ ಶ್ಯಾಮ್ ಪ್ಯಾರೆ ಯಾದವ್, ನಿತಿನ್ ಸಾವಂತ್, ​ಪ್ರಧಾನ ಕಾರ್ಯದರ್ಶಿ ನವೀನ್ ಅಂಚನ್, ​ಸಂಘಟನಾ ಕಾರ್ಯದರ್ಶಿ: ಸತೀಶ್ ಸುವರ್ಣ, ​ಖಜಾಂಚಿ: ದಿನೇಶ್ ಕೆ. ಸಾಲಿಯಾನ್,
​ಸಹ ಕಾರ್ಯದರ್ಶಿ: ಕಿಶೋರ್ ರಾಮ ಸಾಲಿಯಾನ್,
​ಸಹ ಖಜಾಂಚಿ: ಪ್ರಶಾಂತ್ ಕುಂದರ್, ​ಮಂಡಳಿಯ ಎಲ್ಲಾ ಸಲಹೆಗಾರರು, ಸದಸ್ಯರು ಹಾಗೂ ಮಹಿಳಾ ಮಂಡಳಿಯ ಸದಸ್ಯೆಯರ ಶ್ರಮ ಮತ್ತು ಸಹಕಾರದಿಂದ ಈ ಬೃಹತ್ ಕಾರ್ಯಕ್ರಮವು ಯಶಸ್ಸಿಯಾಗಿ ಸಂಪನ್ನಗೊಂಡಿತು.



Related posts

ಡೊಂಬಿವಲಿ ಶ್ರೀ ರಾಧಾಕೃಷ್ಣ ಮತ್ತು ಶ್ರೀ ಶನೀಶ್ವರ ಮಂದಿರ: 67ನೇ ವಾರ್ಷಿಕ ಮಹಾಪೂಜೆ ಸಂಭ್ರಮ

Mumbai News Desk

ಬಂಟ್ಸ್ ನ್ಯಾಯ ಮಂಡಳಿ ಮುಂಬಯಿ : ನೂತನ ಅಧ್ಯಕ್ಷರಾಗಿ  ಅಂತರಾಷ್ಟ್ರೀಯ ಕಬ್ಬಡಿ ತೀರ್ಪುಗಾರ ಜಯ ಎ ಶೆಟ್ಟಿ ಶಿಮಂತೂರು  ಆಯ್ಕೆ,

Mumbai News Desk

ರತನ್ ಪೂಜಾರಿ ಯವರಿಗೆ ಶ್ರೀ ವಿಷ್ಣು ಮಂದಿರದಲ್ಲಿ ಗೌರವಾರ್ಪಣೆ.

Mumbai News Desk

ಸ್ಮಿತಾ ಬೆಳ್ಳೂರ್ ಯವರು  ಸಂಗೀತ  ಕಛೇರಿ ಮೂಲಕ ಸಂಗೀತಕಲಾ ರಸಿಕರನ್ನು ಮನಮೋಹಕಗೊಳಿಸಿದರು

Mumbai News Desk

ಪಶ್ಚಿಮ ವಿಭಾಗ ಸಾರ್ವಜನಿಕ ನವರಾತ್ರೋತ್ಸವ ಮಂಡಳಿ, ಡೊಂಬಿವಲಿ: 61ನೇ ವರ್ಷದ ನವರಾತ್ರಿ ಉತ್ಸವ ಯಶಸ್ವಿ ಸಂಪನ್ನ

Mumbai News Desk

ಕಲಂಬೋಲಿ  ಶ್ರೀ ಅಯ್ಯಪ್ಪ ಸ್ವಾಮಿ ಭಕ್ತವೃಂದ ದ  34 ನೆ  ವಾರ್ಷಿಕ ಮಹಾಪೂಜೆ .

Mumbai News Desk