30.9 C
Mumbai
June 8, 2026
Mumbai News Kannada
ಸುದ್ದಿ

ಕುಂದರ್ ಮೂಲಸ್ಥಾನ ಸಭಾ ಮುಂಬೈ ವಾರ್ಷಿಕ ವಿಹಾರಕೂಟ ಮತ್ತು ಪ್ರತಿಭಾ ಪುರಸ್ಕಾರ





ಕುಂದರ್ ಮೂಲಸ್ಥಾನ ಸಭಾ ಮುಂಬೈ ಇದರ ವಾರ್ಷಿಕ ವಿಹಾರಕೂಟ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮವು ತಾರೀಕು 21 – 12- 25ರಂದು ವಸಾಯಿ ತಾಲೂಕಿನ ನಾಯ್ಗoವ್, ಮುಂಬೈ – ಅಹಮದಾಬಾದ್ ಹೈವೇ ಯ ಬಳಿಯ ಸಾಸುರ್ ನಗರದಲ್ಲಿರುವ ರೇವಂತ್ ರೆಸ್ಟೋರ್ಟ್ ನಲ್ಲಿ ಜರಗಿತು.
ಪ್ರಧಾನ ಕಾರ್ಯದರ್ಶಿಯವರಾದ ನೀಲಾಧರ್ ಎಸ್ ಕುಂದರ್ ವಿಹಾರಕೂಟದಲ್ಲಿ ಉಪಸ್ಥಿತರಿದ್ದ ಸರ್ವ ಕುಂದರ್ ಬಂಧುಗಳನ್ನು ಹಾಗೂ ಅವರ ಮಿತ್ರ ವೃಂದದವರನ್ನು ಸ್ವಾಗತಿಸಿದರು.ವಿಹಾರಕೂಟದ ಉದ್ಘಾಟನೆಯನ್ನು ಗೌರವ ಅಧ್ಯಕ್ಷರಾದ ಲೋಕನಾಥ್ ಕುಂದರ್, ಉಪಸ್ಥಿತರಿದ್ದ ಹಿರಿಯ ಗಣ್ಯರೊಂದಿಗೆ ದೀಪ ಬೆಳಗಿ ಆರಂಭಿಸಿದ್ದರು. ಮನೋರಮ ಸುವರ್ಣ ಪ್ರಾರ್ಥನೆಗೈದರು.


ಬಳಿಕ ವಿಹಾರಕೂಟದಲ್ಲಿ ಭಾಗವಹಿಸಿದ ಎಲ್ಲ ಸದಸ್ಯರು ಮನ ಸಂತಸವಾಗುವಂತೆ ವಿವಿಧ ಆಟೊಟ, ಮನೋರಂಜನ ಕಾರ್ಯಕ್ರಮದ ಚಟುವಟಿಕೆಯಲ್ಲಿ ಪಾಲ್ಗೊಂಡರು.ಮನೋರಂಜನ್ ಅವರು ಕಾರ್ಯಕ್ರಮದ ಉಸ್ತುವಾರಿ ವಹಿಸಿದ್ದರು. ಮಕ್ಕಳು ಈಜುಕೊಳದಲ್ಲಿ ಈಜಾಡಿ ಸಂತಸ ಪಟ್ಟರು.


ಸಮಾರೋಪ ಸಮಾರಂಭದಲ್ಲಿ ಕುಂದರ್ ಮೂಲಸ್ಥಾನ ಸಭಾದ ಉಪಾಧ್ಯಕ್ಷರು,ಮೊಗವೀರ ವ್ಯವಸ್ಥಾಪಕ ಮಂಡಳಿಯ ಅಧ್ಯಕ್ಷರಾದ ಗಣೇಶ್ ಕಾಂಚನ್ ಮಾತನಾಡುತ್ತಾ ವಿಹಾರ ಕೂಟದ ಮಹತ್ವ ಹಾಗೂ ಪ್ರತಿಭಾ ಪುರಸ್ಕಾರದಿಂದ ವಿದ್ಯಾರ್ಥಿಗಳಿಗೆ ಆಗುವ ಪ್ರಯೋಜನದ ಕುರಿತು ವಿವರವಾಗಿ ತಿಳಿಸಿದರು. ಹಾಗೂ ಕಳೆದ ಆರು ತಿಂಗಳಿಂದ ಮೊಗವೀರ ಹಾಗೂ ತುಳು ಬಾಂಧವರ ಏಳಿಗೆಗಾಗಿ ಮಂಡಳಿ ಹಲವಾರು ಉತ್ತಮ ಕಾರ್ಯಕ್ರಮಗಳನ್ನು ಆಯೋಜಿಸುತ್ತ ಬರುತ್ತಿದ್ದು, ಇನ್ನೂ ಹೆಚ್ಚಿನ ಕಾರ್ಯಗಳನ್ನು ಸಾಧಿಸುವರೆ, ಮಂಡಳಿಯ ಕಾರ್ಯಕಾರಿ ಸಮಿತಿಯು ಪ್ರಯತ್ನಿಸುತ್ತಿದೆ ಎಂದು ತಿಳಿಸಿದರು.


ಇದೇ ಸಂದರ್ಭ ಮೊಗವೀರ ವ್ಯವಸ್ಥಾಪಕ ಮಂಡಳಿಯ 2025 – 28ರ ಅವಧಿಗೆ ಮಂಡಳಿಗೆ ಚುನಾಯಿತರಾದ ದಾಮೋದರ್ ಬಿ ಪುತ್ರನ್ ರನ್ನು ಶಾಲು ಹೊದಿಸಿ. ಗೌರವಿಸಲಾಯಿತು.
ಕುಂದರ್ ಮೂಲಸ್ಥಾನದ ಏಳಿಗೆಗಾಗಿ ಹಲವಾರು ವರ್ಷಗಳಿಂದ ಶ್ರಮಿಸುತ್ತಿರುವ ಮುಂಬೈ ಸಬಾದ ಗೌರವ ಅಧ್ಯಕ್ಷರಾದ ಲೋಕನಾಥ್ ಕುಂದರ್ ಅವರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು.ಸನ್ಮಾನ ಸ್ವೀಕರಿಸಿದ ಲೋಕನಾಥ್ ಕುಂದರ್ ಮಾತನಾಡುತ್ತಾ ಕುಂದರ್ ಮೂಲಸ್ಥಾನ 1892 ರಲ್ಲಿ ಹೆಜಮಾಡಿ ಗುಂಡಿಯಲ್ಲಿ ಸ್ಥಾಪನೆಯಾಗಿ ಕಳೆದ 133 ವರ್ಷಗಳಿಂದ ನಾಗಬ್ರಹ್ಮ ದೇವರು ಹಾಗೂ ಮೂಲ ಮೈಸಂದಾಯ, ಪರಿವಾರ ದೈವಗಳಿಗೆ ಪೂಜೆ- ಪುರಸ್ಕಾರ ಮಾಡುತ್ತಾ ಬಂದಿರುತ್ತದೆ ಎಂದು ಮೂಲಸ್ಥಾನದ ಇತಿಹಾಸವನ್ನು ವಿವರವಾಗಿ ತಿಳಿಸಿದರು.


ಆ ಬಳಿಕ ವಿಜೇತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಕ್ರೀಡೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಮಾಡಲಾಯಿತು . ಮಹಿಳಾ ವಿಭಾಗದ ಕೋಶಾಧಿಕಾರಿ ಗೌರಿ ಪನಿಯಾಡಿ ಅವರು ವಿಹಾರಕೂಟದಲ್ಲಿ ಭಾಗವಹಿಸಿದ ಎಲ್ಲರಿಗೂ ಕುಂದರ್ ಮೂಲಸ್ಥಾನದ ಹೆಸರನ್ನು ಒಳಗೊಂಡ ಹೊಸ ವರ್ಷದ ಡೈರಿ ಹಾಗೂ ಪೆನ್ನನ್ನು ಉಡುಗೊರೆಯಾಗಿ ನೀಡಿದರು. ಸದಸ್ಯರಾದ ಸೂರಪ್ಪ ಕುಂದರ್ ಅವರು ಡೈರಿಯಲ್ಲಿ ಚಿತ್ರಿಸಿದ ನಾಗದೇವರ ಭಾವಚಿತ್ರದ ಕುರಿತು, ಕಾರ್ಯಕಾರಿ ಸಮಿತಿ ಸದಸ್ಯರ ಹೆಸರನ್ನು ನಮೂದಿಸಿದ ಕುರಿತು ವಿವರವಾಗಿ ತಿಳಿಸುತ್ತಾ ದೇವರಲ್ಲಿ ನಮ್ಮ ಸಮಕ್ಷ ಕಾಣಬರುವ ದೇವರೆಂದರೆ ನಾಗ ದೇವರು ಮಾತ್ರ ಎಂದರು.
ಅಧ್ಯಕ್ಷತೆ ವಹಿಸಿದ್ದ ಗಣೇಶ್ ಕಾಂಚನ್, ಕೋಶಾಧಿಕಾರಿ ಸಂತೋಷ ಸುವರ್ಣ ಜೊತೆ ಕಾರ್ಯದರ್ಶಿ ನಾಗೇಶ್ ಕೆ ಕುಂದರ್, ಸದಸ್ಯರುಗಳಾದ ಪುರಂದರ ಕಾಂಚನ್, ಕಿಶೋರ್ ಕುಂದರ್, ಮಹಿಳಾ ವಿಭಾಗದ ಅಧ್ಯಕ್ಷ ವೇದಾ ಕೆ ಪುತ್ರನ್, ಕೋಶಾಧಿಕಾರಿ ಗೌರಿ ಡಿ ಪನಿಯಾಡಿ ಅವರು ಕಾರ್ಯಕ್ರಮದ ನಿರ್ವಹಣೆಯಲ್ಲಿ ಸಹಕರಿಸಿದ್ದರು. ಪ್ರಧಾನ ಕಾರ್ಯದರ್ಶಿಯವರಾದ ನೀಲಾಧರ್ ಕುಂದರ್ ಕೊನೆಗೆ ಧನ್ಯವಾದ ಸಮರ್ಪಿಸಿದರು.



Related posts

ಮುಂಬಯಿಯ ಉದ್ಯಮಿ ಸುರೇಶ್ ಕಾಂಚನ್ ನೇತೃತ್ವದಲ್ಲಿ   ಹುಟ್ಟೂರು, ಉಪ್ಪಿನಕುದ್ರು ಶಾಲೆಯಲ್ಲಿ ವಿದ್ಯಾರ್ಥಿ ವೇತನ, ಪುಸ್ತಕ , ಆರ್ಥಿಕ ನೆರವು ವಿತರಣೆ.

Mumbai News Desk

ಬೊಯಿಸರ್ ಪಶ್ಚಿಮದ ಶ್ರೀ ಗಣೇಶ ಅಯ್ಯಪ್ಪ ಮಂದಿರದಲ್ಲಿ ಪೂಜಾ ಕಾರ್ಯಕ್ರಮ ಸಂಪನ್ನ.

Mumbai News Desk

ಮೊಗವೀರ ಪ್ರೀಮಿಯರ್ ಲೀಗ್ (MPL 2026): ಹರಾಜು ಪ್ರಕ್ರಿಯೆ ಯಶಸ್ವಿ; ₹4 ಲಕ್ಷಕ್ಕೆ ಕುಂದಾಪುರ ಲೆಜೆಂಡ್ಸ್ ಮುಂಚೂಣಿಯಲ್ಲಿ

Mumbai News Desk

ಸುರವಿ ಹಂಡೇಲ್ ಇವರ ಭರತನಾಟ್ಯ ಆರಂಗೇಟ್ರಮ್

Mumbai News Desk

ಖಾರ್ ಪೂರ್ವ ಶ್ರೀ ಶನಿಮಹಾತ್ಮ ಸೇವಾ ಸಮಿತಿಯ ಗೌರವ ಪ್ರಧಾನ ಕಾರ್ಯದರ್ಶಿಯಾದ ಯೋಗೇಶ್ ಕೆ. ಹೆಜ್ಮಾಡಿ ಹಾಗೂ ಅವರ ಧರ್ಮಪತ್ನಿಯವರಾದ ಲೀಲಾವತಿ ವೈ. ಹೆಜ್ಮಾಡಿ* ಯವರು ದಾಂಪತ್ಯ ಜೀವನದ ಸುವರ್ಣ ಮಹೋತ್ಸವಕ್ಕೆ ಪಾದಾರ್ಪಣೆ

Mumbai News Desk

ಜ.11 : ಡಿವೈನ್ ಪಾರ್ಕ್‌ನ ಮಹಾರಾಷ್ಟ್ರ ಘಟಕದ ವತಿಯಿಂದ ಡಾಕ್ಟರ್‌ಜೀ ಅವರಿಗೆ ಶ್ರದ್ಧಾಂಜಲಿ ಹಾಗೂ ಪ್ರಾರ್ಥನಾ ಸಭೆ

Mumbai News Desk