32.3 C
Mumbai
June 7, 2026
Mumbai News Kannada
ಮುಂಬಯಿ

ಶ್ರೀ ಅಯ್ಯಪ್ಪ ಭಕ್ತ ಮಂಡಳಿ, ಶ್ರೀ ಲಕ್ಷ್ಮೀ ನಾರಾಯಣ ಭಜನಾ ಸಮಿತಿ ಮೀರಾ ರೋಡ್ ಶ್ರೀ ಅಯ್ಯಪ್ಪ ಸ್ವಾಮಿ 29ನೇ ಮಹಾಪೂಜೆ





ಆರಾಧನೆ ಮನಸ್ಸಿನ ಉತ್ತಮ ಭಾವನೆಗಳನ್ನು ಏಕಾಗ್ರತೆಗೊಳಿಸುತ್ತದೆ. – ಗುರುಸ್ವಾಮಿ ಜಯಶೀಲ ತಿಂಗಳಾಯ

ಚಿತ್ರ, ವರದಿ; ರಮೇಶ್ ಉದ್ಯಾವರ

  ಮೀರಾರೋಡ್, ಡಿ. 24:    ಶ್ರೀ ಅಯ್ಯಪ್ಪ ಭಕ್ತ  ಮಂಡಳಿ ಮೀರಾರೋಡ್, ಶ್ರೀ ಲಕ್ಷ್ಮಿ ನಾರಾಯಣ ಭಜನಾ ಸಮಿತಿ ಮೀರಾರೋಡ್ ಯುನಿಟಿ ಅಪಾರ್ಟ್ಮೆಂಟ್ ಭಾರತಿ ಪಾರ್ಕ್ ಇಲ್ಲಿನ ಶ್ರೀ ಅಯ್ಯಪ್ಪ ಸ್ವಾಮಿಯ 29ನೇ  ಮಹಾಪೂಜೆಯು ಡಿ. 21ರಂದು ಗುರುಸ್ವಾಮಿ ಜಯಶೀಲ ಬಿ ತಿಂಗಳಾಯ ಬಡಾ ಎರ್ಮಾಳು ಇವರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಗಳೊಂದಿಗೆ ಜರುಗಿತು.

    ಸಾಣೂರು ಸಾಂತಿಂಜ ಜನಾರ್ಧನ್ ಭಟ್ ರವರ ನೇತೃತ್ವದಲ್ಲಿ   ಪ್ರಾತಃ ಕಾಲದಲ್ಲಿ ಗಣ ಹೋಮ ಬಳಿಕ ಶ್ರೀ ಲಕ್ಷ್ಮೀನಾರಾಯಣ ಭಜನಾ ಸಮಿತಿ ಸದಸ್ಯರಿಂದ ಭಜನೆ ಜರುಗಿತು. ಮಧ್ಯಾಹ್ನ ಹಿರಿಕಿರಿಯ ವ್ರತಧಾರಿ ಸ್ವಾಮಿಯವರ ಶರಣಘೋಷ ಹರಿಹರ ಪುತ್ರ ಅಯ್ಯಪ್ಪ ಸ್ವಾಮಿಗೆ ಕರ್ಪೂರ ದೀಪ ಬೆಳಗಿಸಿ ಪಡಿಪೂಜೆ, ಗುರುಸ್ವಾಮಿ ಜಯಶೀಲ ತಿಂಗಳಾಯರವರು ವಿವಿಧ ಪೂಜಾಕೈಂಕರ್ಯ ನೆರವೇರಿಸಿ ಮಹಾ ಮಂಗಳಾರತಿಗೈದರು.

       ಗುರುಸ್ವಾಮಿ ಜಯಶೀಲ ತಿಂಗಳಾಯ  ಮಾತನಾಡಿ,  ನಿಯಮಿತ ಶ್ರದ್ಧಾ ಭಕ್ತಿ ಯ ಪೂಜಾ ಪುರಸ್ಕಾರಗಳಿಂದ ನಮ್ಮ ಆಧ್ಯಾತ್ಮಿಕ ಶಕ್ತಿ ಬೆಳೆಯುತ್ತದೆ. ದೇವರ ಪ್ರತಿಬಿಂಬವನ್ನು ನಾವು ಹತ್ತಿರದಿಂದ ನೋಡುವ ಮೂಲಕ ನಮ್ಮ ಅಂತರಾಳದಲ್ಲಿ  ಮನಸ್ಸಿನ ಭರವಸೆ ಧೈರ್ಯ ಸುರಕ್ಷಾ ಭಾವನೆಗಳು ಮೂಡುತ್ತದೆ. ಆರಾಧನೆಯ ಮೂಲಕ ಮನಸ್ಸಿನ ಉತ್ತಮ ಭಾವನೆಗಳು ಏಕಾಗ್ರತೆಗೊಳ್ಳುತ್ತದೆ. ಭಜನೆ  ಕೀರ್ತನೆಯಿಂದ ಭಗವಂತನ ಸಾನಿಧ್ಯ ಪಡೆಯಲು ಮತ್ತು. ಕಠಿಣ ಪರಿಶ್ರಮದ  ಮೂಲಕ ಮಾಡುವ ವ್ರತದಿಂದ  ಅಯ್ಯಪ್ಪ    ವ್ರತಧಾರಿಗಳು ಕಠಿಣ ಶ್ರಮ ಮತ್ತು ಶ್ರದ್ಧಾ ಭಕ್ತಿಯ ಮೂಲಕ ಪರಿಪೂರ್ಣ ಫಲಸಿದ್ಧಿ ಪಡೆಯಲು ಸಾಧ್ಯ‌. ಭಕ್ತರು ದಾನಿಗಳು ಹಾಗೂ ಸಮಿತಿಯ ಸದಸ್ಯರು ಮತ್ತು ಶ್ರೀ ಲಕ್ಷ್ಮಿನಾರಾಯಣ ಭಜನಾ ಮಂಡಳಿ ಸರ್ವ ಸದಸ್ಯರ ನಿಸ್ಸಾರ್ಥ ಸೇವೆ ಸಹಕಾರದಿಂದ 29ನೇ  ಅಯ್ಯಪ್ಪ ಸ್ವಾಮಿ ಮಹಾಪೂಜೆ ಯಶಸ್ವಿಯಾಗಿ ಜರುಗಿದೆ ಎಂದು ಹೇಳಿ ಗುರುಸ್ವಾಮಿಯವರಿಗೆ ಅನುಗ್ರಹ ಪ್ರಸಾದ ನೀಡಿದರು. ಬಳಿಕ ಭಕ್ತರಿಗೆ ತೀರ್ಥ ಪ್ರಸಾದ ವಿತರಣೆ ನೆರವೇರಿತು. 

ದೇವರ ಪ್ರತಿಬಿಂಬದ ಮೂಲಕ ದೇವರನ್ನು ಸ್ಮರಿಸಿದಾಗ ದೇವರ ರೂಪ ನಮ್ಮ ಮನಸ್ಸಿನಲ್ಲಿ ನೆಲೆ ನಿಲ್ಲುತ್ತದೆ. ಪೂಜಾ ವೇಳೆಯ ಸಂಕಲ್ಪ ಹೃದಯದ ಅಂತರಾಳದಲ್ಲಿ ಸ್ಥಾಪಿತಗೊಳ್ಳುತ್ತದೆ    ಶ್ರೀ ಲಕ್ಷ್ಮಿನಾರಾಯಣ ನೆಲೆನಿಂತ ಈ ಪುಣ್ಯ ಜಾಗದಲ್ಲಿ ಶ್ರೀ ಹರಿಪುತ್ರ ಅಯ್ಯಪ್ಪ ಸ್ವಾಮಿಯ ಈ ವಿಶೇಷ ಪೂಜಾ   ಕಾರ್ಯಕ್ರಮಕ್ಕೆ ವಿಶೇಷವಾಗಿ  ತನುಮನಧನಗಳಿಂದ ಸಹಕರಿಸಿದ ಭಕ್ತರಿಗೂ ಹಾಗೂ ಭಕ್ತಿಯಿಂದ ದರ್ಶನ ಪಡೆದ ಸರ್ವರಿಗೂ ಅಯ್ಯಪ್ಪ ಸ್ವಾಮಿಯ ಅನುಗ್ರಹ  ಪ್ರಾಪ್ತಿಯಾಗಲಿ 

ಸಾಣೂರು ಸಾಂತಿಂಜ  ಜನಾರ್ಧನ ಭಟ್, ಪ್ರಧಾನ ಅರ್ಚಕರು, ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಮೀರಾಗಾಂವ್

ಪ್ರೀತಿ ಪ್ರೇಮ ಭಾವೈಕ್ಯತೆಯ ಸೌಹಾರ್ದತೆ ಜೊತೆಗೆ ಆಧ್ಯಾತ್ಮಿಕತೆಯ ಸಂಸ್ಕೃತಿ ಯೊಂದಿಗೆ ಬೆಳೆಯುತ್ತಿರುವ ಮೀರಾ-ಬಾಯಂಧರ್ ನಗರಕ್ಕೆ ದಕ್ಷಿಣ ಭಾರತದ ಕೊಡುಗೆ ಅನನ್ಯವಾಗಿದೆ . ಮೂಲಭೂತ ಪ್ರಗತಿಯ ಚಿಂತನೆಗೆ ಹೆಚ್ಚು ಒತ್ತು ನೀಡುವ ಮೂಲಕ ಇಲ್ಲಿನ ಜನರ ಆಶಯದಂತೆ ನಗರವನ್ನು ಸಮೃದ್ಧ ಗೊಳಿಸುವ ಪ್ರಯತ್ನ ನಡೆಯುತ್ತಿದೆ. ಸುಭದ್ರ ದೇಶದ ಪ್ರಗತಿಯ ಕಾಲಘಟ್ಟದಲ್ಲಿ ದೇಶವು ಇನ್ನಷ್ಟು ದೂರ ದೃಷ್ಟಿ ಚಿಂತನೆಯ ಮೂಲಕ ದೇಶವು ಉನ್ನತ ಭವಿಷ್ಯದತ್ತ ಸಾಗಲಿದೆ.

ನರೇಂದ್ರ ಎಲ್. ಮೆಹ್ತಾ ,ಸ್ಥಳೀಯ ಶಾಸಕರು ಮೀರಾ ಬಾಯಂಧರ್

ಕಾರ್ಯಕ್ರಮದಲ್ಲಿ ಬಂಟರ ಸಂಘ ಮೀರಾ ಬಾಯಂಧರ್ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ರವೀಂದ್ರ ಶೆಟ್ಟಿ ಕೊಟ್ರಪಾಡಿಗುತ್ತು ಬಂಟರ ಸಂಘ ಮುಂಬೈ ಜೊತೆ ಕಾರ್ಯದರ್ಶಿ, ಗಿರೀಶ್ ಶೆಟ್ಟಿ ತೆಳ್ಳಾರು ಸ್ಥಳೀಯ ಬಿಜೆಪಿ ನೇತಾರ ಸಂಪತ್ ಶೆಟ್ಟಿ ಬಂಟ್ಸ್ ಫೋರಂ ಮೀರಾ ಬಾಯಂಧರ್ ಅಧ್ಯಕ್ಷರಾದ ಉದಯ ಶೆಟ್ಟಿ ಮಲಾರ್ ಬೀಡು ಇನ್ನಿತರ ಸ್ಥಳೀಯ ಸಂಘ ಸಂಸ್ಥೆ ಗಳ ಪದಾಧಿಕಾರಿಗಳು  ಗಣ್ಯರು,  ಉದ್ಯಮಿಗಳು ಅಯ್ಯಪ್ಪ ಸ್ವಾಮಿಯ ಸಾವಿರಾರು ಭಕ್ತರು ದರ್ಶನ ಪಡೆದರು ಶ್ರೀ ಅಯ್ಯಪ್ಪ ಸ್ವಾಮಿ ಕೃಪೆಗೆ ಪಾತ್ರರಾದರು  ಬಳಿಕ ಅನ್ನ ಸಂತರ್ಪಣೆ ನೆರವೇರಿತು.. ರಂಗನಟ ನಿರ್ದೇಶಕ ಜಿ.ಕೆ.ಕೆಂಚನಕೆರೆ ಕಾರ್ಯಕ್ರಮ ನಿರ್ವಹಣೆ ಮಾಡಿದರು.



Related posts

ಮಲಾಡ್ ಶ್ರೀ ವರಮಹಾಲಕ್ಷ್ಮೀ  ಪೂಜಾ ಸಮಿತಿಯಿಂದ 16 ನೇ ವಾರ್ಷಿಕ  ಸಾಮೂಹಿಕ ವರಮಹಾಲಕ್ಷ್ಮೀ ಪೂಜೆ, ಕುಣಿತ ಭಜನೆ, ಯಕ್ಷಗಾನ ತಾಳಮದ್ದಳೆಗೆ ಚಾಲನೆ,

Mumbai News Desk

ಭಾರತ್ ಕೋ-ಆಪರೇಟಿವ್ ಬ್ಯಾಂಕ್ (ಮುಂಬಯಿ) ಲಿಮಿಟೆಡ್ -ಖೋಪರ್‌ಖೈರ್ನೆ ಶಾಖೆಯಲ್ಲಿ ವಿಜೃಂಭಣೆಯಿಂದ ಜರಗಿದ ದಶಮಾನೋತ್ಸವ ಆಚರಣೆ

Mumbai News Desk

“ಕನ್ನಡಿಗರ ಜ್ಞಾನ ವಿಕಾಸ ಮಂಡಲ ಮೆಹತಾ ಮಹಾವಿದ್ಯಾಲಯ ಐರೋಲಿ: 78ನೇ ಸ್ವಾತಂತ್ರೋತ್ಸವ ಸಂಭ್ರಮದ ಆಚರಣೆ

Mumbai News Desk

ಬಿಲ್ಲವರ ಅಸೋಸಿಯಶನ್ ಮುಂಬಯಿ ಇದರ ಡೊಂಬಿವಲಿ ಸ್ಥಳೀಯ ಸಮಿತಿಯಲ್ಲಿ ಶನಿ ಪೂಜೆ

Mumbai News Desk

ಬಂಟರ ಸಂಘ ಮುಂಬಯಿ ಜೋಗೇಶ್ವರಿ-ದಹಿಸರ್ ಪ್ರಾದೇಶಿಕ ಸಮಿತಿ; ಆಟಿಡೊಂಜೆ ಬಂಟರೆ ಕೂಟ

Mumbai News Desk

ಭಜನೆಯಿಂದ ಭಾವನಾತ್ಮಕ ಸಮಸ್ಯೆಗೆ ಪರಿಹಾರ: ಶ್ರೀ ನಾರಾಯಣಗುರು ಭಜನ ಮಂಡಳಿ ಮಲಾಡ್ ವಲಯಕ್ಕೆ ಸೂರ್ಯಕಾಂತ್ ಜೆ. ಸುವರ್ಣ ಚಾಲನೆ

Mumbai News Desk