July 23, 2026
Mumbai News Kannada
ಮುಂಬಯಿ

ಬಿಲ್ಲವರ ಅಸೋಸಿಯೇಶನ್ ಸಂಚಾಲಿತ ಗುರು ನಾರಾಯಣ ರಾತ್ರಿ ಪ್ರೌಢ ಶಾಲೆಯ 65ನೇ ವಾರ್ಷಿಕೋತ್ಸವ ಮತ್ತು ಪಾರಿತೋಷಕ ವಿತರಣಾ ಸಮಾರಂಭ







ಸಂತಾಕ್ರೂಜ್ : ಹೊರನಾಡ ಕನ್ನಡಿಗರ ಪ್ರತಿಷ್ಟಿತ ಜಾತಿಯ ಸಂಘ-ಸಂಸ್ಥೆಗಳಲ್ಲಿ ಒಂದಾದ ಬಿಲ್ಲವರ ಅಸೋಸಿಯೇಶನ್ ಮುಂಬೈ ಸಂಚಾಲಿತ ಗುರು ನಾರಾಯಣ ರಾತ್ರಿ ಪ್ರೌಢ ಶಾಲೆಯ 65ನೇ ವಾರ್ಷಿಕೋತ್ಸವ ಮತ್ತು ಪಾರಿತೋಷಕ ವಿತರಣಾ ಸಮಾರಂಭವು ದಿನಾಂಕ 10 ಜನೇವರಿ 2026ರ ಶನಿವಾರ ಸಾಯಂಕಾಲ 4. 00 ಗಂಟೆಯ ಸುಮಾರಿಗೆ ಸಾಂತಾಕ್ರೂಜ್ ಪೂರ್ವದ ನೆಹರು ಮಾರ್ಗದಲ್ಲಿರುವ ಬಿಲ್ಲವ ಭವನದ 5ನೇ ಮಹಡಿಯ ಗುರು ನಾರಾಯಣ ಆಡಿಟೋರಿಯಂ ನಲ್ಲಿ ವಿದ್ಯಾರ್ಥಿಗಳ ಮತ್ತು ಹಳೆ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.ಈ ಶಾಲೆಯ ವಾರ್ಷಿಕೋತ್ಸವವು ಮಾತೃ ಸಂಸ್ಥೆಯ ಅಧ್ಯಕ್ಷ ಶ್ರೀ ಹರೀಶ ಜಿ. ಅಮೀನ್ ಅವರ ಅಧ್ಯಕ್ಷತೆಯಲ್ಲಿ ಜರುಗಲಿದೆ.

ಶಾಲೆಯ 65ನೇ ವಾರ್ಷಿಕೋತ್ಸವ ಮತ್ತು ಪಾರಿತೋಷಕ ವಿತರಣಾ ಸಮಾರಂಭದಲ್ಲಿ ಗೌರವ ಅಧ್ಯಕ್ಷ ಶ್ರೀ ಎಲ್. ವಿ. ಅಮೀನ್ ಮುಖ್ಯ ಅತಿಥಿಗಳಾಗಿ ಶ್ರೀಮತಿ ಜ್ಯೋತಿ ರವಿ. ಹೊಸ್ಕೋಟಿ (ಸಂಸ್ಥಾಪಕರು: ಪೋರ್ ಕ್ಲಾಜ್ ಅಕಾಡೆಮಿ IB ಮತ್ತು IGCSE ಕೋಚಿಂಗ್ ಡೊಂಬಿವಲಿ ಪೂರ್ವ) ಮತ್ತು ಗೌರವ ಅತಿಥಿಗಳಾಗಿ ಶ್ರೀ.ಸಿ ಎ.ಪ್ರಕಾಶ ಶೆಟ್ಟಿ (ಚಾರ್ಟೆಡ್ ಅಕೌಂಟೆಂಟ್ ಸಂತಾಕ್ರೂಜ್ ಪೂರ್ವ) ಇನ್ನೋರ್ವ ಅತಿಥಿಗಳಾದ
ಡಾ ಈಶ್ವರ್ ಅಲೆವೂರು ( ಪ್ರದಾನ ಸಂಪಾದಕರು: ಅಕ್ಷಯ ಮಾಸಿಕ ಪತ್ರಿಕೆ) ಆಶೀರ್ವಚನ: ಶ್ರೀ ಅಶೋಕ ಪುರೋಹಿತ (ಅಂತಾರಾಷ್ಟ್ರೀಯ ಖ್ಯಾತ ವಾಸ್ತು ಶಾಸ್ತ್ರಜ್ಞರು ಮತ್ತು ಜ್ಯೋತಿಷ್ಯರು) ಭಾಗವಹಿಸಲಿದ್ದಾರೆ.

ಶಾಲೆಯ ವಾರ್ಷಿಕೋತ್ಸವ ಮತ್ತು ಪಾರಿತೋಷಕ ವಿತರಣಾ ಸಮಾರಂಭದಲ್ಲಿ ಸಂಸ್ಥೆಯ ಪದಾಧಿಕಾರಿಗಳು,ಕನ್ನಡಾಭಿಮಾನಿಗಳು,ಶಿಕ್ಷಣ ಪ್ರೇಮಿಗಳು,ಪಾಲಕರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತಿದ್ದು ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಬೇಕೆಂದು ಮಾತೃಸಂಸ್ಥೆಯ ಗೌರವ ಪ್ರದಾನ ಕಾರ್ಯದರ್ಶಿ ಶ್ರೀ ಹರೀಶ ಜಿ ಸಾಲಿಯಾನ್,ಗೌರವ ಪ್ರದಾನ ಕೋಶಾಧಿಕಾರಿ ಮತ್ತು ಶಾಲಾ ಸಮಿತಿಯ ಕಾರ್ಯಧ್ಯಕ್ಷ ಶ್ರೀ ರವಿ ಸನಿಲ್ ಮಹಿಳಾ ವಿಭಾಗ ಕಾರ್ಯಾಧ್ಯಕ್ಷೆ ಶಕುಂತಲಾ ಕೆ. ಕೋಟ್ಯಾನ್ ಹಾಗೂ ಪದಾಧಿಕಾರಿಗಳು ಗುರು ನಾರಾಯಣ ರಾತ್ರಿ ಪ್ರೌಢ ಶಾಲೆಯ ಸಲಹೆಗಾರ ಬನ್ನಂಜೆ ರವೀಂದ್ರ ಅಮೀನ ಶಾಲೆಯ ಮುಖ್ಯೋಪಾಧ್ಯಾಯ ಶ್ರೀ ಮಲ್ಲಿಕಾರ್ಜುನ ಈ.ಬಡಿಗೇರ ಮತ್ತು ಶಿಕ್ಷಕ ವೃಂದವು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಕಾರ್ಯಕ್ರಮದ ಮೊದಲು ಲಘು ಉಪಹಾರ ಮತ್ತು ರಾತ್ರಿ ಪ್ರೀತಿ ಭೋಜನದ ವ್ಯವಸ್ಥೆ ಮಾಡಲಾಗಿದೆ.

===============================

===============================



Related posts

ನೃತ್ಯ ಸ್ಪರ್ಧಾಳುಗಳಿಗೆ ಬಿಲ್ಲವರ ಎಸೋಶಯೆಷನ್ ಬೊರಿವಲಿ – ದಹಿಸರ್ ಸ್ಥಳೀಯ ಕಚೇರಿಯ ವತಿಯಿಂದ ಗೌರವ

Mumbai News Desk

ಶ್ರೀ ಮಹಾ ವಿಷ್ಣು ಮಂದಿರ ಡೊಂಬಿವಲಿ: ಮಹಿಳಾ ವಿಭಾಗದ ವತಿಯಿಂದ ಸಂಭ್ರಮದ ‘ಅರಿಶಿನ-ಕುಂಕುಮ’ ಕಾರ್ಯಕ್ರಮ

Mumbai News Desk

ಕಲೆಂಬೋಲಿ ಶ್ರೀ ಅಯ್ಯಪ್ಪ ಸ್ವಾಮಿ ಭಕ್ತ ಸಂಸ್ಥ -ವಾರ್ಷಿಕ ಅಯ್ಯಪ್ಪ ಮಹಾಪೂಜೆ ಭಕ್ತಿ, ಸಂಭ್ರಮದೊಂದಿಗೆ ಸಂಪನ್ನ,

Mumbai News Desk

ಕಲೀನಾ ಸೌತ್ ಸೇವಾ ಸಂಘದ ಸಾರ್ವಜನಿಕ ಗಣೇಶೋತ್ಸವ.

Mumbai News Desk

ಬಾಂಬೆ ಬಂಟ್ಸ್ ಅಸೋಸಿಯೇಶನ್ ಮಹಿಳಾ ವಿಭಾಗ ಸೀರೆಗಳು, ಫ್ಯಾಷನ್ ಜುವೆಲರಿ, ಡ್ರೆಸ್‌ ಮೆಟೀರಿಯಲ್ ಪ್ರದರ್ಶನ – ಮಾರಾಟ.

Mumbai News Desk

ಬಿಲ್ಲವರ ಎಸೋಶಿಯೇಶನ್ ಮುಂಬಯಿ ಬೊರಿವಲಿ-ದಹಿಸರ್ ಸ್ಥಳೀಯ ಕಚೇರಿ 16ನೇ ವರ್ಧಂತಿ ಗುರುಮೂರ್ತಿ ಪ್ರತಿಷ್ಠಾಪನೆ.

Mumbai News Desk