September 6, 2026
Mumbai News Kannada
ಪ್ರಕಟಣೆ

ಮುಂಬಯಿ ಕನ್ನಡ ಸಂಘ : ಜ.18 ರಂದು ಶ್ರೀ ಪುರಂದರದಾಸರ ಆರಾಧನೆ





 

ನಿರಂತರ ಕನ್ನಡದ ಸೇವೆಯಲ್ಲಿ  90 ವರ್ಷಗಳನ್ನು ಪೂರೈಸಿ ಮುನ್ನಡೆಯುತ್ತಿರುವ ಮಾಟುಂಗಾ ಪೂರ್ವದ ಮುಂಬಯಿ ಕನ್ನಡ ಸಂಘದ ವತಿಯಿಂದ
ರವಿವಾರ ಜನವರಿ 18 ರಂದು ಶ್ರೀ ಪುರಂದರದಾಸರ ಆರಾಧನಾ ಮಹೋತ್ಸವವನ್ನು ನಡೆಸಲು ಯೋಜಿಸಲಾಗಿದೆ.  ಅಂದು ಸಂಜೆ ಗಂಟೆ 5-30ಕ್ಕೆ
ಮಾಟುಂಗಾದ ಮೈಸೂರು ಅಸೋಸಿಯೇಷನ್‌ನ ಕಿರು ಸಭಾಗೃಹದಲ್ಲಿ ಜರಗಲಿರುವ ಈ ಸಮಾರಂಭಕ್ಕೆ ಕನ್ನಡ ಕಲಾಕೇಂದ್ರ, ಮುಂಬಯಿ ಇದರ ಅಧ್ಯಕ್ಷ ಹಾಗೂ ಉದ್ಯಮಿ ಟಿ.ಆರ್‌.ಮಧುಸೂದನ ಅವರು ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ. ಅಂದಿನ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಂಬಯಿ ಕನ್ನಡ ಸಂಘದ ಅಧ್ಯಕ್ಷರಾದ ಗುರುರಾಜ ಎಸ್‌.ನಾಯಕ್‌ ವಹಿಸಲಿದ್ದಾರೆ.
ಬಳಿಕ ಶೀ ರಾಮ ಭಜನಾ ಮಂಡಳ, ಪುಣೆ ಇದರ ಸದಸ್ಯರು ಶ್ರೀ ಪುರಂದರದಾಸರ ಕೀರ್ತನೆಗಳನ್ನು ಸಾದರಪಡಿಸಲಿದ್ದಾರೆ.  ಇತ್ತೀಚೆಗಷ್ಟೇ ಅಸ್ತಿತ್ವಕ್ಕೆ ಬಂದಿರುವ ಶ್ರೀ ರಾಮ ಭಜನಾ ಮಂಡಳವು ಕಳೆದ 18 ತಿಂಗಳಲ್ಲಿ ಪುಣೆಯಾದ್ಯಂತ ಸುಮಾರು 40 ಕಡೆ ತಮ್ಮ ಭಜನಾ ಕಾರ್ಯಕ್ರಮಗಳನ್ನು ನಡೆಸಿ ಅಪಾರ ಜನ ಮನ್ನಣೆಗಳಿಸಿದೆ.  ಈ ತಂಡವು ಪ್ರಥಮ ಬಾರಿಗೆ ಮುಂಬಯಿಯಲ್ಲಿ ತಮ್ಮ ಭಜನಾ ಸೇವೆಯನ್ನು ನೀಡುತ್ತಿದ್ದು ಶ್ರೀ ದತ್ತಾತ್ರೇಯ ರಾವ್‌ ಅವರಿಂದ ಸ್ಥಾಪಿಸಲ್ಪಟ್ಟ ಶ್ರೀ ರಾಮ ಭಜನಾ ಮಂಡಳದಲ್ಲಿ ಅನುಪಮಾ ಶಣೈ, ಅರ್ಚನಾ ಪೈ, ದತ್ತಾತ್ರೇಯ ರಾವ್‌, ಗೀತಾ ಪ್ರಭು, ಗಿರೀಶ್ಚಂದ್ರ ಪೈ, ಕಮಾಕ್ಷಿ ಕಿಣಿ, ಮಿನಾಕ್ಷಿ ರಾವ್‌, ಪ್ರಭಾ ಕಿಣಿ, ರೇಖಾ ಶಾನುಭಾಗ್‌, ಶ್ವೇತಾ ಶಾನುಭಾಗ್‌, ಸ್ಮಿತಾ ಬಾಳಿಗಾ, ಸುಧಾ ಪ್ರಭು, ವೈಶಾಲಿ ಕಾಮತ್‌, ವಂದನಾ ನಾಯಕ್‌, ವಿಜಯಲಕ್ಷ್ಮೀ ಕಾಮತ್‌, ಯೋಗಿತಾ ಕಾಮತ್‌ ಮುಂತಾದವರು ದಾಸರ ಕೀರ್ತನೆಗಳನ್ನು ಸಾದರಪಡಿಸಲಿದ್ದಾರೆ.

ಈ ಸಮಾರಂಭದಲ್ಲಿ ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಮುಂಬಯಿ ಕನ್ನಡ ಸಂಘದ ಗೌರವ ಪ್ರಧಾನ ಕಾಯದರ್ಶಿ ಸೋಮನಾಥ ಎಸ್‌. ಕರ್ಕೇರರು ಪತ್ರಿಕಾ ಪ್ರಕಟಣೆಯ ಮೂಲಕ ವಿನಂತಿಸಿಕೊಂಡಿದ್ದಾರೆ.               



Related posts

ಮಲಾಡ್ ಕನ್ನಡ ಸಂಘದ ಆಶ್ರಯದಲ್ಲಿ ಡಿ. 29 ರಂದು ಸದಸ್ಯ ಬಾಂಧವರಿಗೆ ಮತ್ತು ಮಕ್ಕಳಿಗಾಗಿ ಒಳಾಂಗಣ ಕ್ರೀಡಾಕೂಟ

Mumbai News Desk

ಮೂಲ್ಕಿ: ಮಾರ್ಚ್ 10ರಂದು, ಹರಿಶ್ಚಂದ್ರ ಪಿ. ಸಾಲಿಯಾನ್ ಅವರ ‘ತುಳುನಾಡ್ಡ ತುಳು ಗಾದೆಲು’ ಕೃತಿ ಲೋಕಾರ್ಪಣೆ

Mumbai News Desk

ಶ್ರೀ ಅಯ್ಯಪ್ಪ ಸೇವಾ ಸಮಿತಿ ಕಿಸನ್ ನಗರ ಥಾಣೆ, ಫೆ. 1ರಂದು 18ನೇ ವಾರ್ಷಿಕ ಶ್ರೀ ಶನಿ ಮಹಾ ಪೂಜೆ

Mumbai News Desk

ಆಗಸ್ಟ್ 22 ರಂದು ಭಾರತ್ ಬ್ಯಾಂಕಿನ 49ನೇ ವಾರ್ಷಿಕ ಮಹಾಸಭೆ

Mumbai News Desk

ಅ 11: ಬಂಟರ ಸಂಘ ಮುಂಬಯಿ ಇದರ ಡೊಂಬಿವಲಿ ಪ್ರಾದೇಶಿಕ ಸಮಿತಿ ಮಹಿಳಾ ವಿಭಾಗದ ವತಿಯಿಂದ ಆಟಿದ ಸೊಗಸ್ ಕಾರ್ಯಕ್ರಮ

Mumbai News Desk

ಹಿಂದೂ ಸಂಗಮ ಆಯೋಜನಾ ಸಮಿತಿ ಮೂಲ್ಕಿ : ಜ. 25ರಂದು “ಭವ್ಯ ಹಿಂದೂ ಸಂಗಮ”

Mumbai News Desk