32 C
Mumbai
April 24, 2026
Mumbai News Kannada
ಸುದ್ದಿ

ಮೀರಾ ಭಾಯಂದರ್ ಮಹಾನಗರಪಾಲಿಕೆಯ ಚುನಾವಣೆಯಲ್ಲಿ ಗಣೇಶ್ ಗೋಪಾಲ್ ಶೆಟ್ಟಿ ವಿಜಯ





.

ಮೀರಾಭಯಂದರ್ ಮಹಾನಗರಪಾಲಿಕೆಯ ಜ.15ರಂದು ನಡೆದ ಚುನಾವಣೆಯಲ್ಲಿ ವಾರ್ಡ್ ನಂಬ್ರ 3 ರಿಂದ ಬಿಜೆಪಿ ಅಭ್ಯರ್ಥಿಯಾಗಿ ಗಣೇಶ್ ಗೋಪಾಲ್ ಶೆಟ್ಟಿಯವರು ಚುನಾಯಿತರಾಗಿದ್ದಾರೆ. ಈ ವಾರ್ಡಿನಲ್ಲಿ 16234 ಮತಗಳ ಚಲಾವಣೆ ಆಗಿದ್ದು ಅದರಲ್ಲಿ 4915 ಮತ ಪಡೆದು ಸಮೀಪದ ಪ್ರತಿಸ್ಪರ್ಧಿ ಶಿವಸೇನೆಯ ದಿನೇಶ್ ನಲವಡೆಯವರಿಂದ ಸುಮಾರು 800 ಮತಗಳು ಅಂತರದಿಂದ ಶೆಟ್ಟಿಯವರು ವಿಜಯಿಯಾಗಿದ್ದಾರೆ.
ಕಳೆದ 2007ರಿಂದ ನಗರ ಸೇವಕರಾಗಿ ಪರಿಸರದಲ್ಲಿ ಸಮಾಜಸೇವೆ ಮಾಡುತ್ತಿದ್ದು ಮತ್ತೊಮ್ಮೆ ಅವಕಾಶ ಲಭಿಸಿದ ಶೆಟ್ಟಿಯವರನ್ನು ಪರಿಸರದ ಸಂಘಸಂಸ್ಥೆಗಳು, ತುಳು ಕನ್ನಡಿಗರು ಅಭಿನಂದಿಸಿದ್ದಾರೆ
ಭಾಯಂದರ್ ಪಶ್ಚಿಮದ ಎಸ್.ವಿ.ರೋಡ್ ನಿವಾಸಿಯಾಗಿರುವ ಶೆಟ್ಟಿಯವರು 2007ರಿಂದ ನಗರ ಸೇವಕರಾಗಿ ಜನಸೇವೆಯಲ್ಲಿ ನಿರತರಾಗಿದ್ದಾರೆ. ಪರಿಸರದ ಯಾವುದೇ ಸಂಘಸಂಸ್ಥೆಗಳ ಕಾರ್ಯಕ್ರಮಗಳಲ್ಲಿ ಸಭೆಯಲ್ಲಿ ಉಪಸ್ಥಿತರಿದ್ದು, ಸಂಪೂರ್ಣ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸುತ್ತಾ ಜಾತಿಭೇದ ಮಾಡದೆ ಅಪಾರ ಅಭಿಮಾನಿಗಳನ್ನು ಪಡೆದಿದ್ದಾರೆ.ತನ್ನ ವಾರ್ಡಿನಲ್ಲಿ ಸುರಕ್ಷೆ ಮತ್ತು ಸ್ವಚ್ಛತೆಗಾಗಿ ಹೆಚ್ಚಿನ ಒತ್ತು ನೀಡಿ ಪರಿಸರದಲ್ಲಿ ಹಿರಿಯ ನಾಗರಿಕರ ಸೆಲ್ಫೀ ಪೋಯಿಂಟ್ ಸ್ಟ್ಯಾಂಡ್ ನಿರ್ಮಿಸಿ ಪ್ರಶಂಶಿಸಲ್ಪಟ್ಟಿದ್ದಾರೆ.



Related posts

ಬಂಟ್ವಾಳ: ‘ಯಕ್ಷರಂಗದ ರಾಜ’ ಖ್ಯಾತಿಯ ಪೆರುವಾಯಿ ನಾರಾಯಣ ಶೆಟ್ಟಿ ಇನ್ನಿಲ್ಲ,

Mumbai News Desk

ಭಾರತ್ ಬ್ಯಾಂಕ್ ಗೆ ಅತ್ಯುತ್ತಮ ಮಾನವ ಸಂಪನ್ಮೂಲ ನಿರ್ವಹಣಾ ಪ್ರಶಸ್ತಿ ( Best HR Management Award )

Mumbai News Desk

ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಜು16 ರಿಂದು 27 ವರೆಗೆ ಮುಂಬಯಿ ನಗರದಲ್ಲಿ.

Mumbai News Desk

ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ, ಜಾರ್ಜ್ ಫರ್ನಾಂಡಿಸ್ ಸಂಸ್ಮರಣಾ ರಾಷ್ಟ್ರೀಯ ಪ್ರಶಸ್ತಿ ನಿಮಿತ್ತ ಪೂರ್ವಬಾವೀ ಸಭೆ

Mumbai News Desk

ಮಂಗಳೂರಿನ ಕುಲಾಲ ಭವನ ಲೋಕಾರ್ಪಣೆ; 

Mumbai News Desk

2023-24ರ ಎಚ್ ಎಸ್ ಸಿ ಪರೀಕ್ಷೆಯಲ್ಲಿ ಶ್ರಾವಣಿ ರಾಜೇಶ್ ಕೋಟ್ಯಾನ್ ಗೆ ಶೇ 94.50 ಅಂಕ.

Mumbai News Desk