30.9 C
Mumbai
June 8, 2026
Mumbai News Kannada
ಸುದ್ದಿ

ಮೂರು ದಶಕಗಳ ಆಯುರ್ವೇದ ಸೇವೆ: ಘಾಟ್‌ಕೋಪರ್‌ನಲ್ಲಿ ಸಾಲ್ಮರ ಆಯುರ್ವೇದದ 10ನೇ ಶಾಖೆ ಶುಭಾರಂಭ





ಮುಂಬಯಿ ಮಹಾನಗರದ ತುಳು-ಕನ್ನಡಿಗರ ಪ್ರೀತಿ, ವಿಶ್ವಾಸ ಮತ್ತು ನಿರಂತರ ಸಹಕಾರದಿಂದ ಸಾಲ್ಮರ ಆಯುರ್ವೇದ ಸಂಸ್ಥೆಯು ಇಂದು ದೊಡ್ಡ ಮಟ್ಟಕ್ಕೆ ಬೆಳೆದು ನಿಂತಿದೆ ಎಂದು ಸಂಸ್ಥೆಯ ಸಂಸ್ಥಾಪಕ, ಪಾರಂಪರಿಕ ವೈದ್ಯ ಸಂಶುದ್ದೀನ್ ಸಾಲ್ಮರ ತಿಳಿಸಿದರು.
ಘಾಟ್‌ಕೋಪರ್ ಪಶ್ಚಿಮದ ಮೆಟ್ರೋ ಪೂಲ್ ಬಿಲ್ಡಿಂಗ್‌ನಲ್ಲಿ ಸಾಲ್ಮರ ಆಯುರ್ವೇದ ಪೈಲ್ಸ್ ಕ್ಲಿನಿಕ್‌ನ ಹತ್ತನೇ ಶಾಖೆಯು ಜನವರಿ 18ರ ಆದಿತ್ಯವಾರದಂದು ಅದ್ದೂರಿಯಾಗಿ ಲೋಕಾರ್ಪಣೆಗೊಂಡಿತು. ಸಂಸ್ಥೆಯ ಸಹ-ಸಂಸ್ಥಾಪಕ ಹಾಗೂ ಚಾರ್ಟೆಡ್ ಅಕೌಂಟೆಂಟ್ ನೌಫಾಲ್ ಅವರು ರಿಬ್ಬನ್ ಕತ್ತರಿಸುವ ಮೂಲಕ ನೂತನ ಕ್ಲಿನಿಕ್ ಅನ್ನು ಉದ್ಘಾಟಿಸಿದರು.
ಕಳೆದ 30 ವರ್ಷಗಳಿಂದ ಮಹಾರಾಷ್ಟ್ರದಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿರುವ ಈ ಸಂಸ್ಥೆಯು ರೋಗಿಗಳಿಗೆ ವಿಶ್ವಾಸಾರ್ಹ ಚಿಕಿತ್ಸೆ ನೀಡುವಲ್ಲಿ ಮುಂಚೂಣಿಯಲ್ಲಿದೆ. ಇಲ್ಲಿ ಮೂಲವ್ಯಾಧಿ (ಪೈಲ್ಸ್) ಸಮಸ್ಯೆಯ ಜೊತೆಗೆ ಕಿಡ್ನಿ ಸ್ಟೋನ್, ವಾತ ಸಂಬಂಧಿ ರೋಗಗಳು, ಸಂಧಿವಾತ, ಪಾರ್ಶ್ವವಾಯು, ಸೊಂಟ ನೋವು, ಮಂಡಿ ನೋವು, ಕಾಮಾಲೆ (ಜಾಂಡೀಸ್), ಗ್ಯಾಸ್ ಟ್ರಬಲ್ ಹಾಗೂ ಹೃದಯ ಸಂಬಂಧಿ ಕಾಯಿಲೆಗಳಿಗೆ ಪರಿಣಾಮಕಾರಿ ಆಯುರ್ವೇದ ಔಷಧಗಳು ಲಭ್ಯವಿವೆ.
2006ರಲ್ಲಿ ಕರ್ನಾಟಕ ಸಂಘದ ಸಹಕಾರದೊಂದಿಗೆ ಬೃಹತ್ ಉಚಿತ ನಾಟಿ ವೈದ್ಯಕೀಯ ಶಿಬಿರವನ್ನು ಮಹಾರಾಷ್ಟ್ರದಲ್ಲಿ ಆಯೋಜಿಸಿ ಸಾವಿರಾರು ರೋಗಿಗಳಿಗೆ ಉಚಿತ ಔಷಧ ವಿತರಿಸಿದ ಹೆಗ್ಗಳಿಕೆಯನ್ನು ಈ ಸಂಸ್ಥೆ ಹೊಂದಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಸಂಸ್ಥೆಯ ಸಂಸ್ಥಾಪಕ, ಪಾರಂಪರಿಕ ವೈದ್ಯ ಸಂಶುದ್ದೀನ್ ಸಾಲ್ಮರ “ಮಹಾನಗರದ ತುಳು-ಕನ್ನಡಿಗರ ಪ್ರೀತಿ, ವಿಶ್ವಾಸ ಮತ್ತು ನಿರಂತರ ಸಹಕಾರದಿಂದ ಸಾಲ್ಮರ ಆಯುರ್ವೇದ ಸಂಸ್ಥೆಯು ಇಂದು ದೊಡ್ಡ ಮಟ್ಟಕ್ಕೆ ಬೆಳೆದು ನಿಂತಿದೆ” ಎಂದು ನುಡಿದರು.
ಉದ್ಘಾಟನಾ ಸಮಾರಂಭದಲ್ಲಿ ಸಂಸ್ಥೆಯ ನಿಝಾರ್, ಸಲಿತ್ ಯಿಯಾನ್, ಸಹೇಲ್ ಝಾಹೆದ್, ವೈದ್ಯರಾದ ಚಾರುಶೀಲ (B.A.M.S) ಮತ್ತು ತೀಯಾ ಸಮಾಜ ಮುಂಬಯಿ ಗೌರವ ಕಾರ್ಯದರ್ಶಿ ಬಾಬು ಬೆಲ್ಚಡ ಉಪಸ್ಥಿತರಿದ್ದರು. ಹೆಚ್ಚಿನ ವಿವರಗಳಿಗಾಗಿ ಸಾರ್ವಜನಿಕರು ವೈದ್ಯರಾದ ಸಂಶುದ್ದೀನ್ ಸಾಲ್ಮರ ಅವರನ್ನು 9535476373 ಸಂಖ್ಯೆಯ ಮೂಲಕ ಸಂಪರ್ಕಿಸಬಹುದಾಗಿದೆ.



Related posts

ಹೈದರಾಬಾದ್ ಹೊರವಲಯದಲ್ಲಿ ರೈಲ್ವೆ ಹಳಿ ಮೇಲೆ ಕಿಯಾ ಸೋನೆಟ್ ಕಾರನ್ನು 8 ಕಿಲೋಮೀಟರ್ ಓಡಿಸಿದ ಮಹಿಳೆ, ರೈಲು ಸಂಚಾರ ಸ್ಥಗಿತ.

Mumbai News Desk

ನೆಲೆ ಫೌಂಡೇಶನ್ ಗೆ 11ನೇ ಮೂಲತ್ವ ವಿಶ್ವ ಪ್ರಶಸ್ತಿ ಪ್ರದಾನ : ಮೂಲತ್ವ ಪೌಂಡೇಶನ್ ನ ಕಾರ್ಯ ಶ್ಲಾಘನೀಯ – ಆರ್ ಎಸ್ ಎಸ್ ಮುಖಂಡ ವಾಮನ್ ಶೆಣೈ ಅಭಿಮತ

Mumbai News Desk

ಫರಂಗಿಪೇಟೆ : ಬಾಲಕ ನಾಪತ್ತೆ ಪ್ರಕರಣ, ನಾಳೆ (ಶನಿವಾರ ) ಫರಂಗಿಪೇಟೆ ಬಂದ್

Mumbai News Desk

ಅಕ್ಟೋಬರ್ 26: ಕವಿ ಗವಿಸಿದ್ಧ ಎನ್. ಬಳ್ಳಾರಿ ಸಾಹಿತ್ಯೋತ್ಸವದಲ್ಲಿ ಅನಿತಾ ಪಿ. ತಾಕೊಡೆಯವರ ‘ಮೇಣಕ್ಕಂಟಿದ ಬತ್ತಿ’ ಕವನ ಸಂಕಲನ ಬಿಡುಗಡೆ, ಪ್ರಶಸ್ತಿ ಪ್ರದಾನ, ಸಾಹಿತ್ಯ ಚರ್ಚೆ

Mumbai News Desk

ಪಿಯುಸಿ ವಿಜ್ಞಾನ ವಿಭಾಗ ಪರೀಕ್ಷೆ ಕುಮಾರಿ ಶ್ರೇಯಾ ಪಿ ಕುಲಾಲ್ ರವರಿಗೆ 90%_ಅಂಕ.

Mumbai News Desk

ಒಡಿಶಾ ಕರಾವಳಿಗೆ ಅಪ್ಪಳಿಸಿದ ಡಾನಾ ಚಂಡಮಾರುತ; ಭಾರಿ ಮಳೆ, ಹಲವೆಡೆ ಭೂಕುಸಿತ,

Mumbai News Desk