32.3 C
Mumbai
June 7, 2026
Mumbai News Kannada
ಮುಂಬಯಿ

ಬಿಲ್ಲವರ ಅಸೋಸಿಯೇಷನ್ ಮುಂಬೈ ಡೊಂಬಿವಲಿ ಸ್ಥಳೀಯ ಸಮಿತಿಯಲ್ಲಿ ಗಣರಾಜ್ಯೋತ್ಸವ ಆಚರಣೆ.





ಬಿಲ್ಲವರ ಅಸೋಸಿಯೇಷನ್ ಡೊಂಬಿವಲಿ ಸ್ಥಳೀಯ ಸಮಿತಿಯಲ್ಲಿ ಗಣರಾಜ್ಯೋತ್ಸವ ಆಚರಣೆ ಕಾರ್ಯಕ್ರಮ ದಿನಾಂಕ 26.01.2026 ರಂದು ಸಂಘದ ವಠಾರದಲ್ಲಿ ಜರಗಿತು.

ಅಂದು ಬೆಳಗ್ಗೆ ಗುರುಪೂಜೆ ಆದ ನಂತರ ಮುಖ್ಯ ಅತಿಥಿಯಾಗಿ ಆಗಮಿಸಿದ ಹಿರಿಯ ಸದಸ್ಯರಾದ ರಾಜು ಪೂಜಾರಿ ದಂಪತಿಯವರಿಂದ ಧ್ವಜಾರೋಹಣ ನೆರವೇರಿಸಿ ರಾಷ್ಟ್ರ ಧ್ವಜಕ್ಕೆ ಗೌರವ ಸಲ್ಲಿಸಲಾಯಿತು.

ತದ ನಂತರ ಜರಗಿದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾರ್ಯಾಧ್ಯಕ್ಷರಾದ ಶ್ರೀಧರ್ ಬಿ ಅಮೀನ್ ರವರು ವಹಿಸಿದರು. ಮುಖ್ಯ ಅತಿಥಿಯಾಗಿ ರಾಜು ಪೂಜಾರಿಯವರು ಮತ್ತು ಅವರ ಧರ್ಮ ಪತ್ನಿ ಗಿರಿಜಕ್ಕನವರು ಉಪಸ್ಥಿತರಿದ್ದರು.
ಸಭಿಕರಲ್ಲಿ ಪುಟಾಣಿಗಳು ದೇಶ ಭಕ್ತಿ ಗೀತೆ ಮತ್ತು ರಾಷ್ಟ್ರದ ಬಗ್ಗೆ ಭಾಷಣ ಮಾಡಿದರು, ಈ ಸಂದರ್ಭದಲ್ಲಿ ಅಥಿತಿಗಳನ್ನು ಫಲಪುಷ್ಪ ಸ್ಮರಣಿಕೆ ಮತ್ತು ಶಾಲು ನೀಡಿ ಗೌರವಿಸಲಾಯಿತು.

ವೇದಿಕೆಯಲ್ಲಿ ಉಪ ಕಾರ್ಯಾಧ್ಯಕ್ಷರಾದ ಚಂದ್ರಹಾಸ ಪಾಲನ್ ಮತ್ತು ಸಚಿನ್ ಪೂಜಾರಿ, ಗೌರವ ಕಾರ್ಯಾಧ್ಯಕ್ಷರಾದ ಮಂಜಪ್ಪ ಪೂಜಾರಿ ಮತ್ತು ಜತೆ ಕೋಶಾಧಿಕಾರಿ ಜಗನ್ನಾಥ್ ಸನಿಲ್ ರವರು ಉಪಸ್ಥಿತರಿದ್ದರು.
ಅತಿಥಿಗಳು ತಮ್ಮ ಭಾಷಣದಲ್ಲಿ ತನ್ನ ಅನುಭವ ಮತ್ತು ಪ್ರಸಕ್ತ ದೇಶದ ರಾಜಕೀಯದ ಬಗ್ಗೆ ಮಾತನಾಡಿದರು.

ಗೌರವ ಕಾರ್ಯದರ್ಶಿ ಜೇ ಜೇ ಕೋಟ್ಯಾನ್ ರವರು ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮ ನಿರೂಪಿಸಿದರು.



Related posts

ಶ್ರೀ ನಾರಾಯಣ ಗುರು ಭಜನಾ ಮಂಡಳಿ ಸಾಂತಾಕ್ರೂಜ್ ಘಟಕದಿಂದ ಕಲಿನಾ ಭಗವತಿ ದೇವಸ್ಥಾನದಲ್ಲಿ ಭಜನೆ

Mumbai News Desk

ಮುಂಬೈ : ಪೋವೈಯಲ್ಲಿ ಮಕ್ಕಳನ್ನು ಒತ್ತೆಯಾಳಾಗಿ ಇರಿಸಿದ್ದ ಆರೋಪಿ ಮುಂಬೈ ಪೊಲೀಸರೊಂದಿಗಿನ ಎನ್ಕೌಂಟರ್ ನಂತರ ಗುಂಡೇಟಿಗೆ ಬಲಿ

Mumbai News Desk

ಮೊಗವೀರ ವ್ಯವಸ್ಥಾಪಕ ಮಂಡಳಿ ಮುಂಬಯಿ: ನವಿ ಮುಂಬೈ ಶಾಖೆಯಲ್ಲಿ ಮಂಡಳಿಯ 124ನೇ ಸಂಸ್ಥಾಪನಾ ದಿನಾಚರಣೆ

Mumbai News Desk

ಕಾಂದಿವಲಿ ಕನ್ನಡ ಸಂಘದ ಮಹಿಳಾ ವಿಭಾಗದ ಸಂಯೋಜನೆಯಲ್ಲಿ ಯಕ್ಷಗಾನ ತಾಳಮದ್ದಳೆ,

Mumbai News Desk

ಗಣಪನ ಭಕ್ತಿ ಸಿಂಚನದಲ್ಲಿ ತೇಲಿದ ಕಾಂದಿವಲಿ ಕನ್ನಡ ಸಂಘ

Mumbai News Desk

ಕಾಲಘೋಡಾ ಸಾಯಿಬಾಬಾ ಪೂಜಾ ಸಮಿತಿಯ 54ನೇ ವಾರ್ಷಿಕ ಮಹಾಪೂಜೆ.

Mumbai News Desk