September 7, 2026
Mumbai News Kannada
ಪ್ರಕಟಣೆ

ಫೆ.1ರಂದು ಜಗಜ್ಯೋತಿ ಕಲಾವೃಂದದ 39ನೇ ವಾರ್ಷಿಕೋತ್ಸವ; ಪ್ರಶಸ್ತಿ ಪ್ರದಾನ





ಮುಂಬಯಿ: ಇಲ್ಲಿನ ಪ್ರತಿಷ್ಠಿತ ಸಾಂಸ್ಕೃತಿಕ ಸಂಸ್ಥೆ ‘ಜಗಜ್ಯೋತಿ ಕಲಾವೃಂದ (ರಿ.) ಮುಂಬಯಿ’ ಇದರ 39ನೇ ವಾರ್ಷಿಕೋತ್ಸವ ಹಾಗೂ **’ಶ್ರೀಮತಿ ಸುಶೀಲಾ ಸೀತಾರಾಮ ಶೆಟ್ಟಿ ಸ್ಮಾರಕ ಕಥಾ ಹಾಗೂ ಕಾವ್ಯ ಪ್ರಶಸ್ತಿ ಪ್ರದಾನ ಸಮಾರಂಭ’**ವು ಫೆಬ್ರವರಿ 1ರಂದು ಹಮ್ಮಿಕೊಳ್ಳಲಾಗಿದೆ.

ರವಿವಾರ ಸಾಯಂಕಾಲ 3.30 ಗಂಟೆಗೆ ಡೊಂಬಿವಲಿ (ಪೂರ್ವ) ಎಮ್.ಐ.ಡಿ.ಸಿ. ಎಲ್‌ಐಸಿ ಹತ್ತಿರವಿರುವ ಹೋಟೆಲ್ ಶಿವಮ್ ಸಭಾಗೃಹದಲ್ಲಿ ಸಮಾರಂಭ ಜರುಗಲಿದೆ. ಖ್ಯಾತ ಲೇಖಕಿ ಹಾಗೂ ಅನುವಾದಕಿ ಶ್ರೀಮತಿ ಶ್ಯಾಮಲಾ ಮಾಧವ ಅವರು ಸಭಾಧ್ಯಕ್ಷತೆ ವಹಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಡೊಂಬಿವಲಿ ಕರ್ನಾಟಕ ಸಂಘದ ಕಾರ್ಯಾಧ್ಯಕ್ಷ ಡಾ. ದಿವಾಕರ ಟಿ. ಶೆಟ್ಟಿ ಇಂದ್ರಾಳಿ, ಬಂಟರ ಸಂಘದ ಡೊಂಬಿವಲಿ ಪ್ರಾದೇಶಿಕ ಸಮಿತಿ ಕಾರ್ಯಾಧ್ಯಕ್ಷ ಶ್ರೀ ಆನಂದ ಡಿ. ಶೆಟ್ಟಿ ಎಕ್ಕಾರ್, ಬಂಟರ ಸಂಘ ಮುಂಬಯಿಯ ಸಮಾಜ ಕಲ್ಯಾಣ ಸಮಿತಿ ಉಪ ಕಾರ್ಯಾಧ್ಯಕ್ಷ ಶ್ರೀ ಸುಬ್ಬಯ್ಯ ಶೆಟ್ಟಿ ಸೂರಿಂಜೆ, ಭಿವಂಡಿ-ಬದ್ಲಾಪುರ ಪ್ರಾದೇಶಿಕ ಸಮಿತಿಯ ಮಾಜಿ ಕಾರ್ಯಾಧ್ಯಕ್ಷ ಶ್ರೀ ಸತೀಶ್ ಕೆ. ಶೆಟ್ಟಿ ಕೆ.ಎನ್. ಪಾರ್ಕ್, ಸದಸ್ಯ ನೋಂದಣಿ ಸಮಿತಿ ಕಾರ್ಯಾಧ್ಯಕ್ಷ ಶ್ರೀ ಅನಿಲ್ ಶೆಟ್ಟಿ ಪಾಂಗಾಳ, ಮತ್ತು ಡೊಂಬಿವಲಿ ಪ್ರಾದೇಶಿಕ ಸಮಿತಿಯ ಮಾಜಿ ಕಾರ್ಯಾಧ್ಯಕ್ಷ ಶ್ರೀ ರಾಜೀವ್ ಭಂಡಾರಿ ಅವರು ಉಪಸ್ಥಿತರಿರಲಿದ್ದಾರೆ.

ಈ ವರ್ಷದ ಪ್ರತಿಷ್ಠಿತ ಕಥಾ ಪ್ರಶಸ್ತಿಗೆ ಧಾರವಾಡದ ಕೆಲೆಗೇರಿಯ ಶ್ರೀಮತಿ ಪ್ರಜ್ಞಾ ಮತ್ತಿಹಳ್ಳಿ ಹಾಗೂ ಕಾವ್ಯ ಪ್ರಶಸ್ತಿಗೆ ಹುಬ್ಬಳ್ಳಿಯ ಶ್ರೀಮತಿ ತೇಜಾವತಿ ಎಚ್.ಡಿ. ಅವರು ಭಾಜನರಾಗಿದ್ದಾರೆ. ಸಮಾರಂಭದಲ್ಲಿ ಇಬ್ಬರು ಸಾಹಿತಿಗಳನ್ನು ಗೌರವಿಸಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.

ವಾರ್ಷಿಕೋತ್ಸವದ ಅಂಗವಾಗಿ ಮುಂಬಯಿ ಹಾಗೂ ಪರಿಸರದ ಕನ್ನಡ ಬಾಂಧವರಿಗಾಗಿ ‘ಸಾಂಸ್ಕೃತಿಕ ಸಮೂಹ ನೃತ್ಯ ಸ್ಪರ್ಧೆ’ ಮತ್ತು ವಿವಿಧ ಸಂಘ-ಸಂಸ್ಥೆಗಳ ಸದಸ್ಯರಿಂದ ‘ನೃತ್ಯ ವೈಭವ’ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ಸಲಹೆಗಾರರಾದ ಶ್ರೀ ಸುಕುಮಾರ ಎನ್. ಶೆಟ್ಟಿ, ಹಾಗೂ ಪ್ರಶಸ್ತಿ ಸಮಿತಿಯ ಸಲಹೆಗಾರರಾದ ಶ್ರೀ ಆಶಿಷ್ ಎಸ್. ಶೆಟ್ಟಿ ಮತ್ತು ಶ್ರೀಮತಿ ಅಭಿಜಾ ಹೆಗಡೆ ಅವರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಲಿದ್ದಾರೆ.

ಸಂಸ್ಥೆಯ ಅಧ್ಯಕ್ಷ ಶ್ರೀ ರಮೇಶ್ ಎ. ಶೆಟ್ಟಿ, ಉಪಾಧ್ಯಕ್ಷ ಶ್ರೀ ಜಯಕರ ಜಿ. ಶೆಟ್ಟಿ, ಗೌರವ ಪ್ರಧಾನ ಕಾರ್ಯದರ್ಶಿ ಶ್ರೀ ಸಂತೋಷ ಪಿ. ಶೆಟ್ಟಿ, ಜೊತೆ ಕಾರ್ಯದರ್ಶಿ ಶ್ರೀ ತಾರಾನಾಥ ಎಸ್. ಅಮೀನ್, ಗೌರವ ಕೋಶಾಧಿಕಾರಿ ಶ್ರೀ ಚಂದ್ರ ಎನ್. ನಾಯ್ಕ್, ಜೊತೆ ಕೋಶಾಧಿಕಾರಿ ಶ್ರೀ ಸಂದೀಪ್ ಆರ್. ಕೋಟ್ಯಾನ್, ಸಂಘಟನಾ ಕಾರ್ಯದರ್ಶಿ ಶ್ರೀ ಬಾಬು ಕೆ. ಮೊಗವೀರ ಹಾಗೂ ಜೊತೆ ಸಂಘಟನಾ ಕಾರ್ಯದರ್ಶಿ ಶ್ರೀ ಸುರೇಂದ್ರ ಆರ್. ನಾಯ್ಕ್, ಕಾರ್ಯಕಾರಿ ಸಮಿತಿಯ ಸದಸ್ಯರಾದ ವಸಂತ ಎನ್. ಸುವರ್ಣ, ಉಮೇಶ್ ಡಿ. ಸುವರ್ಣ, ಲಕ್ಷ್ಮಣ್ ಸಿ. ಮೂಲ್ಯ, ದಯಾನಂದ ಸಾಲಿಯಾನ್, ಎಲ್.ಆರ್. ಮೂಲ್ಯ, ಅಶೋಕ್ ವಿ. ಶೆಟ್ಟಿ, ರಾಜು ಆರ್. ಸುವರ್ಣ, ಆನಂದ್ ಕೆ. ಪೂಜಾರಿ, ರಾಮಚಂದ್ರ ಸಾಲಿಯಾನ್, ಸದಾಶಿವ ಶ್ರೀಯಾನ್, ಸಂತೋಷ್ ಬಿ. ಪುತ್ರನ್, ಸಲಹೆಗಾರರಾದ ಸುಕುಮಾರ ಎನ್. ಶೆಟ್ಟಿ, ಆಶಿಷ್ ಎಸ್. ಶೆಟ್ಟಿ, ಶ್ರೀಮತಿ ಅಭಿಜಾ ಹೆಗಡೆ ಹಾಗೂ ಆಂತರಿಕ ಲೆಕ್ಕಪರಿಶೋಧಕ ಪದ್ಮನಾಭ ಎಸ್. ಶೆಟ್ಟಿ ಅವರ ಸಹಯೋಗದಲ್ಲಿ ಈ ಸಾಂಸ್ಕೃತಿಕ ಹಬ್ಬ ನಡೆಯಲಿದೆ.

​”ಕನ್ನಡಿಗರೆಲ್ಲರೂ ಈ ಸಂಭ್ರಮದಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು” ಎಂದು ಕಲಾವೃಂದವು ಪತ್ರಿಕಾ ಪ್ರಕಟಣೆಯ ಮೂಲಕ ಆಹ್ವಾನಿಸಿದೆ.



Related posts

ಡೊಂಬಿವಲಿಯ ಶ್ರೀ ಜಗದಂಬ ಮಂದಿರದಲ್ಲಿ ಆಗಸ್ಟ್ 21ರಂದು ಶ್ರೀ ವರಮಹಾಲಕ್ಷ್ಮೀ ಪೂಜಾ ಮಹೋತ್ಸವ

Mumbai News Desk

ನ. 19 ರಂದು ಕನ್ನಡ ಸಾಂಸ್ಕೃತಿಕ ಕೇಂದ್ರ ಕಲ್ಯಾಣ್ (ರಿ) – 21ನೇ ವಾರ್ಷಿಕೋತ್ಸವ.

Mumbai News Desk

ಬಂಟರ ಸಂಘ ಮುಂಬಯಿ ಜೋಗೇಶ್ವರಿ – ದಹಿಸರ್ ಪ್ರಾದೇಶಿಕ ಸಮಿತಿ, ಮಾ 16 ರಂದು ವಿದ್ಯಾರ್ಥಿ ವೇತನ, ವಿಕಲಚೇತನ ಹಾಗೂ ವಿಧವಾ ವೇತನಗಳಿಗೆ ಅರ್ಜಿಗಳ ಆಹ್ವಾನ,

Mumbai News Desk

ಮದರ್ ಇಂಡಿಯಾ ಫ್ರೀ ನೈಟ್ ಹೈಸ್ಕೂಲ್ ನ 19ನೇ ಈಸ್ಟ್ ಬಾಂಬೆ ಸ್ಕೌಟ್ ಗ್ರೂಪ್ ವತಿಯಿಂದ ಸೆ. 14, 15ರಂದು ಗುರುವಂದನೆ ಮತ್ತು ತವರೂರು ಕಾಣಿಕೆ ಕಾರ್ಯಕ್ರಮ

Mumbai News Desk

ವಸಾಯಿ ತಾಲೂಕು ಮೊಗವೀರ ಸಂಘದ ವತಿಯಿಂದ ಆಗಸ್ಟ್ 10ರಂದು ‘ಪ್ರತಿಭಾ ಪುರಸ್ಕಾರ’, “ಆಟಿಡೊಂಜಿ ದಿನ”

Mumbai News Desk

ಶ್ರೀ ಸೀತಾರಾಮ ಭಜನಾ ಮಂದಿರ,ಹೆಜಮಾಡಿ, ಜುಲೈ 16ರಿಂದ “ಕುಮಾರವ್ಯಾಸ ಭಾರತ”, ಕಥಾ ವಾಚನ.

Mumbai News Desk