28 C
Mumbai
October 5, 2026
Mumbai News Kannada
ಪ್ರಕಟಣೆ

ಫೆ.7, ಶ್ರೀ ನಿತ್ಯಾನಂದ ಸೇವಾ ಸಂಸ್ಥೆ ಮೀರಾಭಾಯಂದರ್ ವತಿಯಿಂದ ಗಣೇಶ್ ಪುರಿ ಪಾದಯಾತ್ರೆ



ಮೀರಾ ರೋಡ್ ಫೆ.2: ಮೀರಾಭಾಯಂದರ್ ಪರಿಸರದಲ್ಲಿ ಬೆಳಗಾವಿ ಬೇವಿನಕೊಪ್ಪ ಶ್ರೀ ವಿಜಯಾನಂದ ಸ್ವಾಮೀಜಿಯವರ ಆಶೀರ್ವಾದದೊಂದಿಗೆ ಸ್ಥಾಪನೆಗೊಂಡ ಶ್ರೀ ನಿತ್ಯಾನಂದ ಸೇವಾ ಸಂಸ್ಥೆ ಮೀರಾಭಾಯಂದರ್ ಎಂಬ ಧಾರ್ಮಿಕ ಸಂಸ್ಥೆಯು ಭಕ್ತಾದಿಗಳ ಮತ್ತು ದಾನಿಗಳ ಸಹಕಾರದೊಂದಿಗೆ ತನ್ನ ವಾರ್ಷಿಕ ದಿನಾಚರಣೆಯ ಅಂಗವಾಗಿ ಕಳೆದ 16 ವರ್ಷಗಳಿಂದ ಶ್ರೀಕ್ಷೇತ್ರ ಗಣೇಶ್ ಪುರಿಗೆ ಪಾದಯಾತ್ರೆಯೊಂದಿಗೆ ಆಚರಿಸುತ್ತಾ ಬಂದಿದೆ. ಇದೀಗ ಸಂಸ್ಥೆಯ 17ನೇ ವಾರ್ಷಿಕ ದಿನಾಚರಣೆಯ ಅಂಗವಾಗಿ ಫೆ.7ರಂದು ಗಣೇಶ್ ಪುರಿ (ನಮ್ಮಯ ನಡಿಗೆ ಸ್ವಾಮಿಯ ನೆಡೆಗೆ) ಪಾದಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ.
ಅಂದು ಸಂಜೆ 6 ಗಂಟೆಗೆ ಮೀರಾ ರೋಡ್ ಪೂರ್ವ ಸಿಲ್ವರ್ ಪಾರ್ಕ್ ಶ್ರೀಗಣೇಶ್ ಜೈ ಮಾತಾ ಮಂದಿರ ಇಲ್ಲಿ ಧಾರ್ಮಿಕ ವಿಧಿವಿಧಾನಗಳು, ಭಜನೆ ಹಾಗೂ ಮಂಗಳಾರತಿ ನಡೆಯಲಿದೆ. ಮೀರಾಗಾಂವ್ ಮಹಾಲಿಂಗೇಶ್ವರ ದೇವಸ್ಥಾನದ ಅರ್ಚಕರಾದ ಸಾಣೂರು ಸಾಂತಿಂಜ ಜನಾರ್ಧನ ಭಟ್ ಆಶೀರ್ವಚನ ನೀಡಿ ಪಾದಯಾತ್ರೆಗೆ ಚಾಲನೆ ನೀಡಲಿದ್ದಾರೆ. ಹಿರಿಯ ನಾಗರಿಕರಿಗೆ ಹಾಗೂ ಅಸ್ವಸ್ತರಿಗೆ ಬಸ್ಸಿನ ವ್ಯವಸ್ಥೆ ಮಾಡಲಾಗುವುದು.
ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಹೆಚ್ಚಿನ ಗುರು ಭಕ್ತರು ಭಾಗವಹಿಸಿ ಸಹಕರಿಸಬೇಕಾಗಿ ಸಂಸ್ಥೆಯ ಅಧ್ಯಕ್ಷ ಗೋಪಾಲಕೃಷ್ಣ ಜಿ.ಗಾಣಿಗ, ಗೌರವಾಧ್ಯಕ್ಷ ಆನಂದ ಶೆಟ್ಟಿ ಕುಕ್ಕುಂದೂರು , ಉಪಾಧ್ಯಕ್ಷರುಗಳಾದ ವಸಂತಿ ಶೆಟ್ಟಿ, ರವೀಂದ್ರ ಶೆಟ್ಟಿ ದೇರಳಕಟ್ಟೆ, ಸಂಚಾಲಕ ವೈ.ಟಿ.ಶೆಟ್ಟಿ, ಹೆಜಮಾಡಿ,ಗೌ.ಕಾರ್ಯದರ್ಶಿ ಸೀತಾರಾಮ್ ಸಿ. ಶೆಟ್ಟಿ ಅಮಾಸೆಬೈಲು , ಕೋಶಾಧಿಕಾರಿ ಶೈಲೇಶ್ ಶೆಟ್ಟಿ ಸೂಡ, ಜೊತೆ ಕಾರ್ಯದರ್ಶಿ ಬಾಬಾ ಪ್ರಸಾದ್ ಅರಸ ಕುತ್ಯಾರು, ಜೊತೆ ಕೋಶಾಧಿಕಾರಿ ಪ್ರಸಾದ್ ಶೆಟ್ಟಿ ನೀರೆ , ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಜಯಶ್ರೀ ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ರಾಜೇಶ್ ಶೆಟ್ಟಿ ಕಾಪು, ಮುಖ್ಯ ಸಲಹೆಗಾರ ಗುಣಪಾಲ್ ಉಡುಪಿ , ಅರ್ಚಕರಾದ ಲಕ್ಷ್ಮಣ್ ಶೆಟ್ಟಿ, ನಾರಾಯಣ ಶೆಟ್ಟಿ ಹಾಗೂ ಕಾರ್ಯಕಾರಿ ಸಮಿತಿ, ಭಜನಾ ಸಮಿತಿ ಹಾಗೂ ಸಾಂಸ್ಕೃತಿಕ ವಿಭಾಗದ ಸದಸ್ಯರು
ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ



Related posts

ಸಸಿಹಿತ್ಲು ಶ್ರೀ ಭಗವತಿ ದೇವಸ್ಥಾನದ ಬ್ರಹ್ಮಕಲಶೋತ್ಸವ: ಮಾರ್ಚ್ 8ರಂದು ಇತಿಹಾಸ ಪ್ರಸಿದ್ಧ ಗಂಗಾರತಿ ವೈಭವ

Mumbai News Desk

ವಿದ್ಯಾವಿಹಾರ್‌ನಲ್ಲಿ ನಾಳೆ ‘ಶ್ರೀ ರಾಮ ಕಥಾ ಹೃದಯಂ’ ತಾಳಮದ್ದಳೆ

Mumbai News Desk

ಬೊಯಿಸರ್ ಪಶ್ಚಿಮದ ಶ್ರೀ ಗಣೇಶ ಅಯ್ಯಪ್ಪ ಮಂದಿರದಲ್ಲಿ ಪೂಜಾ ಕಾರ್ಯಕ್ರಮ

Mumbai News Desk

ಬೆಂಗ್ರೆಯಲ್ಲಿ ಭಕ್ತಿ-ಸಂಸ್ಕೃತಿಯ ಸಂಗಮ: ಶ್ರೀ ವೀರಭಾರತಿ ವ್ಯಾಯಾಮ ಶಾಲೆಯ ಶತಮಾನೋತ್ಸವ ಹಾಗೂ ಶ್ರೀ ಪಟ್ಟಾಭಿರಾಮ ದೇವರ ಪುನರ್ ಪ್ರತಿಷ್ಠಾಪನಾ ಮಹೋತ್ಸವ

Mumbai News Desk

ಜ. 31 ರಂದು ಗೋರೆಗಾಂವ್ ಕರ್ನಾಟಕ ಸಂಘ, ಮುಂಬೈ: ಗ್ರಂಥಾಯನ ವಿಭಾಗ’ದ ಆಶ್ರಯದಲ್ಲಿ ಎರಡು ಕೃತಿಗಳ ಬಿಡುಗಡೆ

Mumbai News Desk

ಜ. 1 ರಂದು ಶ್ರೀ ಸಿದ್ದೇಶ್ವರ ಅನ್ನದಾತ ಅಪ್ಪಾಜಿ ಬೀಡು ನಲ್ಲಿ ಸತ್ಯನಾರಾಯಣ ಮಹಾಪೂಜೆ ಮತ್ತು ಅನ್ನ ಸಂತರ್ಪಣೆ

Mumbai News Desk