September 6, 2026
Mumbai News Kannada
ಪ್ರಕಟಣೆ

ನಡಿಕುದ್ರು ಶ್ರೀ ಜಾರಂದಾಯ ದೈವಸ್ಥಾನ: ಫೆ. 21ಕ್ಕೆ ಭಜನಾ ಮಂಗಳೋತ್ಸವ; ಫೆ. 28ಕ್ಕೆ ಧರ್ಮ ದೈವದ ನೇಮೋತ್ಸವ





ಹೆಜಮಾಡಿ: ಇಲ್ಲಿನ ಪ್ರಸಿದ್ಧ ನಡಿಕುದ್ರು ಶ್ರೀ ಧರ್ಮದೈವ ಜಾರಂದಾಯ ದೈವಸ್ಥಾನದಲ್ಲಿ, ಶ್ರೀ ಜಾರಂದಾಯ ಸೇವಾ ಯುವಕ ವೃಂದದ 48ನೇ ವಾರ್ಷಿಕ ಭಜನಾ ಮಂಗಳೋತ್ಸವ ಮತ್ತು ಧರ್ಮ ದೈವದ ನೇಮೋತ್ಸವವು ಅತ್ಯಂತ ಸಡಗರ ಸಂಭ್ರಮದಿಂದ ಜರುಗಲಿದೆ.
ಫೆಬ್ರವರಿ 21, ಶನಿವಾರದಂದು ದೈವಸ್ಥಾನದ ಆವರಣದಲ್ಲಿ ಭಜನಾ ಮಂಗಳೋತ್ಸವದ ಅಂಗವಾಗಿ ಬೆಳಿಗ್ಗೆ ಪಂಚಕಜ್ಜಾಯ ಸೇವೆಯಾದ ಬಳಿಕ ಸೂರ್ಯಸ್ತದಿಂದ ಮರುದಿನ ಸೂರ್ಯೋದಯದವರೆಗೆ ವಿವಿಧ ಭಜನಾ ಮಂಡಳಿಯರಿಂದ ಭಜನಾ ಕಾರ್ಯಕ್ರಮ ಜರಗಲಿರುವುದು.ಮರುದಿನ ಬೆಳಿಗ್ಗೆ ಮಂಗಲೋತ್ಸವದ ಪ್ರಸಾದ ವಿತರಣೆಯಾಗಲಿದೆ.

28.02.26ರ ಕಾರ್ಯಕ್ರಮಗಳು :

ಬೆಳಿಗ್ಗೆ 7ಕ್ಕೆ – ನವಕಲಶಾಭಿಷೇಕ
8 ಗಂಟೆಗೆ – ನಾಗದೇವರಿಗೆ ಹಾಲು ಅಭಿಷೇಕ
ಗಂಟೆ 11ಕ್ಕೆ – ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮ ಹಾಗೂ ಡಾ. ರೇಷ್ಮಾ ರಾಜೇಶ್ ಸನಿಲ್ ನಡಿಕುದ್ರು ಹಾಗೂ ಡಾ. ಪೂರ್ವಿ ಪ್ರವೀಣ್ ನಡಿಕುದ್ರು ಇವರಿಗೆ ಸನ್ಮಾನ ಕಾರ್ಯಕ್ರಮ
ಮಧ್ಯಾಹ್ನ ಗಂಟೆ 12ಕ್ಕೆ – ಪುಷ್ಪಲತಾ ನರಸಪ್ಪ ಸಾಲಿಯನ್ ಮುಂಬೈ ಹಾಗೂ ಲೀಲಾವತಿ ಜಗನ್ನಾಥ್ ವಿ ಕೋಟ್ಯಾನ್ ಮುಂಬೈ ಇವರ ವತಿಯಿಂದ ಮಹಾ ಅನ್ನಸಂತರ್ಪಣೆ ರಾತ್ರಿ 7ಕ್ಕೆ – ಭಂಡಾರ ಇಳಿಯುವುದು
ರಾತ್ರಿ 8ಕ್ಕೆ – ಜಾರಂದಾಯ ದರ್ಶನ ಪಾತ್ರಿ ಹೆಜಮಾಡಿ ದಿ. ಚೆನ್ನಪ್ಪ ಪೂಜಾರಿ ಮತ್ತು ಇವರ ಧರ್ಮಪತ್ನಿ ದಿ.ಪದ್ಮಾವತಿ ಇವರ ಸ್ಮರಣಾರ್ಥ ಮಕ್ಕಳ ವತಿಯಿಂದ ಅನ್ನ ಸಂತರ್ಪಣೆ ರಾತ್ರಿ 9ಕ್ಕೆ – ಮೈಸಂದ್ರಾಯ ನೇಮ
ರಾತ್ರಿ 10ಕ್ಕೆ – ಧರ್ಮದೈವ ಜಾರಂದಾಯ ಬಂಟ ಪರಿವಾರ ದೈವಗಳ ಗಡುವಾಡು ನೇಮೋತ್ಸವ.

ಕ್ಷೇತ್ರದ ಪ್ರಧಾನ ದೈವವಾದ ಶ್ರೀ ಜಾರಂದಾಯ ದೈವದ ನೇಮೋತ್ಸವವು ಪರಂಪರೆಯಂತೆ ವಿಜೃಂಭಣೆಯಿಂದ ನಡೆಯಲಿದೆ. ತುಳುನಾಡಿನ ದೈವಾರಾಧನೆಯ ಈ ಭವ್ಯ ಆಚರಣೆಯಲ್ಲಿ ಸಾವಿರಾರು ಭಕ್ತಾದಿಗಳು ಪಾಲ್ಗೊಳ್ಳುವ ನಿರೀಕ್ಷೆಯಿದೆ.
ಶ್ರೀ ಜಾರಂದಾಯ ಸೇವಾ ಸಮಿತಿ ನಡಿಕುದ್ರು ಇದರ ವತಿಯಿಂದ ನಡೆಯುವ ಈ ಕಾರ್ಯಕ್ರಮಗಳಿಗೆ ಊರ-ಪರವೂರ ಸಮಸ್ತ ಭಕ್ತಾದಿಗಳು ಆಗಮಿಸಿ ದೈವದ ಕೃಪೆಗೆ ಪಾತ್ರರಾಗಬೇಕೆಂದು ಅರ್ಚಕರಾದ ಗಂಗೆ ಬೈದೆತಿ ನಟ್ಟಿ ಸಾನದ ಮನೆ, ನಡಿಕುದ್ರು ಗ್ರಾಮದ ಗುರಿಕಾರರು ಮತ್ತು 10 ಸಮಸ್ತರು, ಶ್ರೀ ಜಾರಂದಾಯ ಸೇವಾ ಸಮಿತಿ ನಡಿಕುದ್ರು ಮತ್ತು ಮುಂಬೈ, ಶ್ರೀ ಜಾರಂದಾಯ ಸೇವಾ ಯುವಕ ವೃಂದ ಮತ್ತು ಮಹಿಳಾ ವೃಂದ ನಡಿಕುದ್ರು ವಿನಂತಿಸಿದ್ದಾರೆ.



Related posts

ತುಳು ಸಂಘ ಬೊರಿವಲಿ  ಸೆ. 19 ರಂದು  15ನೇ  ವಾರ್ಷಿಕ ಮಹಾಸಭೆ

Mumbai News Desk

ಶ್ರೀ ಧರ್ಮ ಜಾರಂದಾಯ ದೈವಸ್ಥಾನ, ಕರ್ನಿರೆ ಎ 1 ರಿಂದ 3 ವರೆಗೆ    ಜಾರಂದಾಯ ದೈವದ ಕಾಲಾವಧಿ ನೇಮೋತ್ಸವ,

Mumbai News Desk

ಮದರ್ ಇಂಡಿಯಾ ಫ್ರೀ ನೈಟ್ ಹೈಸ್ಕೂಲ್ ನ 19ನೇ ಈಸ್ಟ್ ಬಾಂಬೆ ಸ್ಕೌಟ್ ಗ್ರೂಪ್ ವತಿಯಿಂದ ಸೆ. 14, 15ರಂದು ಗುರುವಂದನೆ ಮತ್ತು ತವರೂರು ಕಾಣಿಕೆ ಕಾರ್ಯಕ್ರಮ

Mumbai News Desk

ಮಲಾಡ್ ಪೂರ್ವ   ಶ್ರೀ ಮಹತೋಭಾರ ಶನೀಶ್ವರ ದೇವಸ್ಥಾನ ಜೂ 6 ರಂದು ಶನಿ ಜಯಂತಿ ಉತ್ಸವ

Mumbai News Desk

ಬಂಟರ ಸಂಘ ಮುಂಬಯಿ ಜೋಗೇಶ್ವರಿ-ದಹಿಸರ್ ಪ್ರಾದೇಶಿಕ ಸಮಿತಿ; ಜು. 6 ರಂದು  ಮಲಾಡ್ ನಲ್ಲಿ ಉಚಿತ ವೈದ್ಯಕೀಯ ಶಿಬಿರ.

Mumbai News Desk

ಸಿ. ಟಿ. ಸಾಲ್ಯಾನ್ ಅವರಿಗೆ ಅ. 14ರಂದು ಶ್ರದ್ದಾಂಜಲಿ ಸಭೆ.

Mumbai News Desk