September 6, 2026
Mumbai News Kannada
ಪ್ರಕಟಣೆ

ಡೊಂಬಿವಲಿ: ಫೆ. 28ರಂದು ಶ್ರೀ ಪುರಂದರ ದಾಸರ ಆರಾಧನಾ ಮಹೋತ್ಸವ ಮತ್ತು ಭಜನಾ ಸ್ಪರ್ಧೆ





ಡೊಂಬಿವಲಿ: ಇಲ್ಲಿನ ಕರ್ನಾಟಕ ಸಂಘದ ಲಲಿತ ಕಲಾ ವಿಭಾಗದ ವತಿಯಿಂದ ಶ್ರೀ ಪುರಂದರ ದಾಸರ ಆರಾಧನಾ ಮಹೋತ್ಸವ ಹಾಗೂ ಶ್ರೀ ಪುರಂದರ ದಾಸರ ಭಜನಾ ಸ್ಪರ್ಧೆಯನ್ನು ಫೆಬ್ರುವರಿ 28ರ ಶನಿವಾರದಂದು ಹಮ್ಮಿಕೊಳ್ಳಲಾಗಿದೆ.

ಡೊಂಬಿವಲಿ ಪೂರ್ವದ ಎಂ.ಐ.ಡಿ.ಸಿ ವಿಭಾಗದ ಎಲ್.ಐ.ಸಿ ಕಚೇರಿ ಬಳಿ ಇರುವ ‘ಹೋಟೆಲ್ ಶಿವಂ ಹಾಲ್’ನಲ್ಲಿ ಈ ಸಮಾರಂಭ ನಡೆಯಲಿದೆ. ಅಂದು ಬೆಳಿಗ್ಗೆ 11.00 ಗಂಟೆಗೆ ಮಕ್ಕಳಿಂದ ‘ಕುಣಿತ ಭಜನಾ ಸ್ಪರ್ಧೆ’ ಆಯೋಜಿಸಲಾಗಿದ್ದು, ನಂತರ ಶ್ರೀ ಪುರಂದರ ದಾಸರ ಭಜನಾ ಸ್ಪರ್ಧೆ ನಡೆಯಲಿದೆ. ಸಂಜೆ 6.30ಕ್ಕೆ ಸಭಾ ಕಾರ್ಯಕ್ರಮ ಜರುಗಲಿದೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಸಂಘ ಡೊಂಬಿವಲಿಯ ಅಧ್ಯಕ್ಷರಾದ ಶ್ರೀ ಸುಕುಮಾರ ಎನ್. ಶೆಟ್ಟಿ ಅವರು ವಹಿಸಲಿದ್ದಾರೆ. ಸಂಘದ ಕಾರ್ಯಾಧ್ಯಕ್ಷರಾದ ಡಾ|| ದಿವಾಕರ ಟಿ. ಶೆಟ್ಟಿ, ಇಂದ್ರಾಳಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಮುಖ್ಯ ಉಪನ್ಯಾಸಕರಾಗಿ ಶ್ರೀ ಸಚಿನ್ ಸುವರ್ಣ ಸಸಿಹಿತ್ಲು ಅವರು ಆಗಮಿಸಲಿದ್ದಾರೆ.

ಸಂಘದ ಉಪಾಧ್ಯಕ್ಷರಾದ ಶ್ರೀ ಲೋಕನಾಥ ಎ. ಶೆಟ್ಟಿ, ಉಪ-ಕಾರ್ಯಾಧ್ಯಕ್ಷರಾದ ಶ್ರೀ ದೇವದಾಸ ಎಲ್. ಕುಲಾಲ್, ಗೌರವ ಪ್ರಧಾನ ಕಾರ್ಯದರ್ಶಿ ಪ್ರೊ. ಅಜಿತ್ ಬಿ. ಉಮ್ರಾಣಿ, ಗೌರವ ಕೋಶಾಧಿಕಾರಿ ಶ್ರೀ ತಾರಾನಾಥ ಎಸ್. ಅಮೀನ್, ಜೊತೆ ಕಾರ್ಯದರ್ಶಿ ಶ್ರೀ ದಿನೇಶ್ ಬಿ. ಕುಡ್ವ ಹಾಗೂ ಜೊತೆ ಕೋಶಾಧಿಕಾರಿ ಶ್ರೀಮತಿ ವಿಮಲಾ ವಿ. ಶೆಟ್ಟಿ, ಲಲಿತ ಕಲಾ ವಿಭಾಗದ ಕಾರ್ಯಾಧ್ಯಕ್ಷೆ ಶ್ರೀಮತಿ ಸುಷ್ಮಾ ಡಿ. ಶೆಟ್ಟಿ, ಕಾರ್ಯದರ್ಶಿ ಶ್ರೀ ರಮೇಶ ಎ. ಶೆಟ್ಟಿ ಹಾಗೂ ಸಂಘದ ಸರ್ವ ಕಾರ್ಯಕಾರಿ ಮಂಡಳಿಯ ಸದಸ್ಯರು ಕಾರ್ಯಕ್ರಮದ ಯಶಸ್ಸಿಗಾಗಿ ಪರಿಸರದ ಕನ್ನಡಿಗರು ಹಾಗೂ ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಸಂಘವು ಪ್ರಕಟಣೆಯಲ್ಲಿ ಕೋರಿದೆ.



Related posts

ಆಗಸ್ಟ್ 22 ರಂದು ಭಾರತ್ ಬ್ಯಾಂಕಿನ 49ನೇ ವಾರ್ಷಿಕ ಮಹಾಸಭೆ

Mumbai News Desk

ಮಾ 8. ಮಲಾಡ್ ಕನ್ನಡ ಸಂಘ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ

Mumbai News Desk

ಕನ್ನಡ ಸಂಘ ಸಾಂತಾಕ್ರೂಜ್ : ಫೆ. 10 ರಂದು 66ನೇ ವಾರ್ಷಿಕೋತ್ಸವ;ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ವಿತರಣಾ ಸಮಾರಂಭ

Mumbai News Desk

ಜ‌ 5, ಶ್ರೀ ಅಯ್ಯಪ್ಪ ಸೇವಾ ಸಮಿತಿ ಫೋರ್ಟ್, ಮುಂಬಯಿ, 42 ವರ್ಷದ ಮಹಾಪೂಜೆ ಇರುಮುಡಿ ಸೇವೆ

Mumbai News Desk

ನ. 30 ರಂದು ಡೊಂಬಿವಲಿ ಶ್ರೀ ಜಗದಂಬಾ ಮಂದಿರದ ವಠಾರದಲ್ಲಿ “ಕುಲದೈವೋ ಬ್ರಹ್ಮ” ಯಕ್ಷಗಾನ ಪ್ರದರ್ಶನ

Mumbai News Desk

ಬಂಟರ ಸಂಘ ಮುಂಬಯಿ ಮೀರಾ-ಭಾಯಂದರ್ ಪ್ರಾದೇಶಿಕ ಸಮಿತಿ, ಮಾ. 8ಕ್ಕೆ , ಸಮಾಜ ಕಲ್ಯಾಣ ಸಮಿತಿ ವತಿಯಿಂದ ಆರ್ಥಿಕ ಸಹಾಯದ ಅರ್ಜಿ ವಿತರಣೆ,

Mumbai News Desk