30.9 C
Mumbai
June 8, 2026
Mumbai News Kannada
ಸುದ್ದಿ

ಉಡುಪಿ : ತೋನ್ಸೆ ಗರೋಡಿ ಜೀರ್ಣೋದ್ಧಾರಕ್ಕೆ ಭಾರತ್ ಬ್ಯಾಂಕ್ ಕಾರ್ಯಧ್ಯಕ್ಷ ಸೂರ್ಯಕಾಂತ್ ಸುವರ್ಣ ಅವರಿಗೆ ಮನವಿ ಸಲ್ಲಿಕೆ





ತೋನ್ಸೆ ಗರೋಡಿಯ ಕಾಲಾವಧಿ ನೇಮೋತ್ಸವದ ಪ್ರಯುಕ್ತ ದಿನಾಂಕ 26/02/2026ರ ಗುರುವಾರದಂದು ಭಾರತ್ ಬ್ಯಾಂಕಿನ ಕಾರ್ಯಧ್ಯಕ್ಷರಾದ ಸೂರ್ಯಕಾಂತ್ ಜಯ ಸುವರ್ಣರು ಗರೋಡಿಗೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಅವರಿಗೆ ಗರೋಡಿಯ ಅರ್ಚಕರಾದ ಸುರೇಶ್ ಅವರು ಪ್ರಾರ್ಥನೆ ಸಲ್ಲಿಸಿ ಬೈದರ್ಕಳರ ಪ್ರಸಾದವನ್ನು ನೀಡಿ ಗೌರವಿಸಿದರು.


ಇದೇ ಸಂದರ್ಭದಲ್ಲಿ ತೋನ್ಸೆ ಗರೋಡಿಯ ಸಂಪೂರ್ಣ ಜೀರ್ಣೋದ್ಧಾರಕ್ಕೆ ಸಂಬಂಧಿಸಿದಂತೆ ಸವಿಸ್ತಾರವಾದ ಮನವಿ ಪತ್ರವನ್ನು ಗರೋಡಿ ಸಮಿತಿಯ ಪದಾಧಿಕಾರಿಗಳು ಹಸ್ತಾಂತರಿಸಿದರು. ಒಕ್ಕೂಟದ ಅಧ್ಯಕ್ಷರಾದ ಹರೀಶ್ ನಿಡಂಬಳ್ಳಿ, ಪ್ರಧಾನ ಕಾರ್ಯದರ್ಶಿ ವಿಷು ಕುಮಾರ್ ಕಲ್ಯಾಣಪುರ ಹಾಗೂ ಜೀರ್ಣೋದ್ಧಾರ ಸಮಿತಿಯ ಪ್ರಧಾನ ಕಾರ್ಯದರ್ಶಿ ನಂದಕಿಶೋರ್ ಕೆಮ್ಮಣ್ಣು ಅವರು ಈ ಮನವಿಯನ್ನು ಬ್ಯಾಂಕಿನ ಅಧ್ಯಕ್ಷರಿಗೆ ಸಲ್ಲಿಸಿ, ಜೀರ್ಣೋದ್ಧಾರ ಕಾರ್ಯಕ್ಕೆ ಸಹಕಾರ ನೀಡುವಂತೆ ಕೋರಿದರು.
​ಈ ಸಂದರ್ಭದಲ್ಲಿ ಒಕ್ಕೂಟದ ಖಜಾಂಚಿ ಸುಭಾಷ್, ಜೀರ್ಣೋದ್ಧಾರ ಖಜಾಂಚಿ ಸಂದೀಪ್ ಶಂಕರ್, ಜೊತೆ ಜೊತೆ ಕಾರ್ಯದರ್ಶಿ ಉದಯ ಕಂಡಾಳ, ರವಿ ತೋನ್ಸೆ, ರವಿ ಹೂಡೆ, ಭಾರತ್ ಬ್ಯಾಂಕಿನ ನಿವೃತ್ತ ವ್ಯವಸ್ಥಾಪಕ ನವೀನ್ ಗುಳಿಬೆಟ್ಟು, ಗುರಿಕಾರರಾದ ಜಯಂತ್, ಸುರೇಶ್ ಅಂಚನ್, ಮಧುಸೂದನ್, ಜನಾರ್ಧನ ತೊಟ್ಟಂ, ರತ್ನಾಕರ ಸಾಲಿಯನ್, ಸತೀಶ್ ಅಂಚನ್ ಹಾಗೂ ಸಮಿತಿ ಸದಸ್ಯರು ಉಪಸ್ಥಿತರಿದ್ದರು.
ಮನವಿ ಪತ್ರವನ್ನು ಸ್ವೀಕರಿಸಿದ ಶ್ರೀ ಸೂರ್ಯಕಾಂತ್ ಸುವರ್ಣ ಅವರು ಮಾತನಾಡಿ, ಗರೋಡಿಯ ಜೀರ್ಣೋದ್ಧಾರದಂತಹ ಪುಣ್ಯ ಕಾರ್ಯಕ್ಕೆ ಉತ್ತಮ ರೀತಿಯಲ್ಲಿ ಸ್ಪಂದಿಸುವುದಾಗಿ ಭರವಸೆ ನೀಡಿದರು.



Related posts

ಭಾರತ್ ಬ್ಯಾಂಕ್ ನ ಕಾರ್ಯಧ್ಯಕ್ಷ ಸೂರ್ಯಕಾಂತ್ ಜೆ ಸುವರ್ಣರಿಗೆ ಅತ್ಯುತ್ತಮ ಬ್ಯಾಂಕ್ ಕಾರ್ಯಧ್ಯಕ್ಷ ಪ್ರಶಸ್ತಿ.

Mumbai News Desk

ಮಂಗಳೂರು ವಕೀಲರ ಸಂಘದ ಚುನಾವಣೆ: ಜಗದೀಶ ಕೆ. ಶೇಣವ ನೂತನ ಅಧ್ಯಕ್ಷರಾಗಿ ಆಯ್ಕೆ

Mumbai News Desk

ಬಂಟ್ಸ್ ಹಾಸ್ಟೇಲ್ ಗಣೇಶೋತ್ಸವದಲ್ಲಿ ಧಾರ್ಮಿಕ ಸಭೆ

Mumbai News Desk

ಶಿಕ್ಷಣತಜ್ಞ ಶ್ರೀಧರ್ ಸುವರ್ಣರಿಗೆ ‘ಭಾರತ ರತ್ನ ಐಕಾನಿಕ್ ಪ್ರಶಸ್ತಿ 2025’

Mumbai News Desk

ಅಗಸ್ಟ್ 23 : ಹರಿಣಿ ಎಂ ಶೆಟ್ಟಿ ಕಾಪು ಇವರ ಮುತ್ತುದಾ… ಪನಿ… ಕವನ ಸಂಕಲನ ಲೋಕಾರ್ಪಣೆ

Mumbai News Desk

ಉಭಯ ಜಿಲ್ಲೆಗಳ ಹೆದ್ದಾರಿ ಸಮಸ್ಯೆಯ ಪರಿಹಾರಕ್ಕೆ ಕೇಂದ್ರ ಸಚಿವರನ್ನು ಭೇಟಿಯಾದ ಉಡುಪಿ/ ಮಂಗಳೂರು ಸಂಸದರು

Mumbai News Desk