30 C
Mumbai
April 24, 2026
Mumbai News Kannada
ಮುಂಬಯಿ

ವರ್ಲಿ ಶ್ರೀ ಅಪ್ಪಾಜಿ ಬೀಡು ಫೌಂಡೇಶನ್: ರಮೇಶ್ ಗುರುಸ್ವಾಮಿ ಗೆ ನುಡಿ ನಮನ.





 

ಜಗದ ಮನುಕುಲವೇ ತನ್ನ ಕುಟುಂಬ ಎಂದು ತಿಳಿದವರು:
ಚಂದ್ರಹಾಸ ಗುರುಸ್ವಾಮಿ ಇನ್ನಂಜೆ.

 ಚಿತ್ರ, ವರದಿ: ದಿನೇಶ್ ಕುಲಾಲ್ 

ವರ್ಲಿ ಪರಿಸರದಲ್ಲಿ ಸಾಮಾಜಿಕ,ಧಾರ್ಮಿಕ ಸೇವೆಗಳನ್ನು ಸದ್ದಿಲ್ಲದೆ ಮಾಡುತ್ತಾ ಮಧುಸೂದನ್ ಮಿಲ್ ಕಂಪೌಂಡಿನ ಆಭರಣದಲ್ಲಿರು ಶ್ರೀ ಸಿದ್ದೇಶ್ವರ ದೇವಸ್ಥಾನದಲ್ಲಿ ಧರ್ಮಕಾರ್ಯಗಳನ್ನು ಮಾಡುತ್ತಾ  ಅಸಂಖ್ಯಾತ ಶಿಷ್ಯಗಣಕ್ಕೆ ಮಾರ್ಗದರ್ಶಕರಾಗಿದ್ದ
ಶ್ರೀ ಸಿದ್ಧೇಶ್ವರ ಅನ್ನದಾತ ಅಪ್ಪಾಜಿ ಬೀಡು ಫೌಂಡೇಶನ್ ನ ಸಂಸ್ಥಾಪಕರೂ   ಶ್ರೀ ರಮೇಶ್ ಗುರುಸ್ವಾಮಿ ಪಡುಬಿದ್ರಿ ಬೆಂಗ್ರೆಯವರು  ಫೆಬ್ರವರಿ. 10,ಮಂಗಳವಾರದಂದು ಬೆಳಗ್ಗೆ ನಿಧನವಾಗಿದ್ದು ಈ ಬಗ್ಗೆ ವೈಕುಂಠ ಸಮಾರಾಧನೆ ಕುರ್ಲಾ ಪೂರ್ವದ ಬಂಟರ ಭವನದ ಸ್ವಾಮಿ ಮುಕ್ತಾಾನಂದ ಸಭಾಗ್ರದಲ್ಲಿ ನಡೆಯಿತು. 

ಅಪಾರ ಸಂಖ್ಯೆಯಲ್ಲಿ ಸೇರಿಕೊಂಡಿರುವ ರಮೇಶ್ ಗುರುಸ್ವಾಮಿಯವರ ಶಿಷ್ಯ ವೃಂದದವರು ಹಿತೈಷಿಗಳು, ಪರಿವಾರ ಮಿತ್ರರು, ನಗರದ ವಿವಿಧ ಸಂಘ ಸಂಸ್ಥೆಯ ಪದಾಧಿಕಾರಿಗಳು, ಧಾರ್ಮಿಕ ಸೇವಾ ಕೇಂದ್ರಗಳ ಪದಾಧಿಕಾರಿಗಳು, ವಿವಿಧ ಅಯ್ಯಪ್ಪ ಭಕ್ತ ವೃಂದದ ಪದಾಧಿಕಾರಿಗಳು, ಹಿರಿಯ ಗುರುಸ್ವಾಮಿಗಳು ಪಾಲ್ಗೊಂಡು ರಮೇಶ್ ಗುರುಸ್ವಾಮಿಯವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.

ಅಯ್ಯಪ್ಪ ಸ್ವಾಮಿಯ ಪರಮ ಭಕ್ತ ಕಾಲ್ನಡಿಗೆಯಲ್ಲಿ ಶಬರಿಮಲೆ ಯಾತ್ರೆ ಮಾಡಿರುವ  ಇನ್ನಂಜೆ ಚಂದ್ರಹಾಸ್ ಗುರುಸ್ವಾಮಿ ಅವರು ರಮೇಶ್ ಗುರುಸ್ವಾಮಿಯವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಶಿಸ್ತು ಮತ್ತು ಧಾರ್ಮಿಕ ಪ್ರಜ್ಞೆಯನ್ನು ಬದುಕಿನಲ್ಲಿ ಅಳವಡಿಸಿ ಅಪಾರ ಸಂಖ್ಯೆಯ ಶಿಷ್ಯಬಂದದವರನ್ನು ಬೆಳೆಸಿಕೊಂಡವರು. ರಮೇಶ್ ಗುರುಸ್ವಾಮಿಯವರ ಶಿಸ್ತಿನ ಬದುಕು ಅಯ್ಯಪ್ಪ ಭಕ್ತರಿಗೆ ಆದರ್ಶವಾಗಲಿದೆ ಶಿಷ್ಯರನ್ನು ಮನೆಯನ್ನು ಸಮಾಜವನ್ನು ಸಮಾನ ರೀತಿಯಲ್ಲಿ ಬೆಳೆಸಿಕೊಂಡವರು ಅವರ ಆತ್ಮಕ್ಕೆ ಚಿರಶಾಂತಿ ಕರುಣಿಸಲಿ ಕಲಿಯುಗ ವರದ ಎಂದು ನುಡಿದರು.

ಶ್ರೀ ಅಯ್ಯಪ್ಪ ಸ್ವಾಮಿ ಭಕ್ತವೃಂದ ರೈ ರೋಡ್.ನ ಸ್ಥಾಪಕರಾಗಿರುವ ಸತೀಶ್ ಶೆಟ್ಟಿ ಗುರುಸ್ವಾಮಿ ಯವರು ರಮೇಶ್ ಗುರುಸ್ವಾಮಿಯವರು ಪ್ರಾರ್ಥಿಸಿ ಪುಷ್ಪ ನಮನ ಸಲ್ಲಿಸಿದರು,

ರಮೇಶ್ ಗುರುಸ್ವಾಮಿ ಆತ್ಮೀಯರಾಗಿರುವ ಬಂಟರ ಸಂಘ ಮುಂಬೈಯ ಗೌರವ ಪ್ರಧಾನ ಕಾರ್ಯದರ್ಶಿ ಡಾ. ಆರ್ ಕೆ ಶೆಟ್ಟಿ. ಪಡುಬಿದ್ರಿ ಬಂಟರ ಸಂಘದ ಮಾಜಿ ಅಧ್ಯಕ್ಷ ನವೀನಚಂದ್ರ ಜೆ. ಶೆಟ್ಟಿ, ಪಡುಬಿದ್ರಿ,ಅಶೋಕ್ ಪಕ್ಕಳ, ಡಾ ಸುಧಾಕರ ಶೆಟ್ಟಿ, ಜ್ಞಾನಸುಧ, ಶಶಿಕಲಾ ಯು ಶೆಟ್ಟಿ, ⁠ಜಯಶೀಲ ತಿಂಗಳಾಯ ಗುರುಸ್ವಾಮಿ, ಸದಾಶಿವ ಕರ್ಕೇರ ಗುರುಸ್ವಾಮಿ,ರಘುವೀರ್ ಹೆಗ್ಡೆ, ಹೋಟೆಲ್ ಉದ್ಯಮಿ , ಸಂತೋಷ್ ಶೆಟ್ಟಿ ಎಚ್‌ಡಿಎಫ್‌ಸಿ ಯವರು ಗುರುಸ್ವಾಮಿ ಗಳು ಸೇವಾ ಕಾರ್ಯಗಳ ಅನುಭವದ ಮಾತುಗಳನ್ನು ತಿಳಿಸಿದರು.

ಸನತ್‌ಕುಮಾರ್ ರಮೇಶ್ ಶೆಟ್ಟಿ ಆಗಮಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿ ಇನ್ನು ಮುಂದಕ್ಕೂ ಅಪ್ಪಾಜಿ ಬೀಡಿನ ನಂಟು ಗಟ್ಟಿಯಾಗಿರಲಿ ನಮ್ಮೆಲ್ಲರ ಆಶೀರ್ವಾದ ಮಾರ್ಗದರ್ಶನ ನಮ್ಮ ಪರಿವಾರ ಮತ್ತು ಸಂಸ್ಥೆ ಮೇಲೆ ಇರಲಿ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ  ಊರಿನಿಂದ ಗುರುಸ್ವಾಮಿಯ ಹಿತೈಷಿಗಳದ ಸದಾಶಿವ ರೈ ಗೋಶಾಡ, ಹರೀಶ್ ಸಾಲಿಯಾನ್ ಗೋವಾ, ರಮೇಶ್ ಶೆಟ್ಟಿ ಗೋವಾ, ಡಾ. ಸುಧಾಕರ್ ಶೆಟ್ಟಿ ಜ್ಞಾನಸುಧಾ ಅಜೆಕಾರ್, ಶಶಿಕಲಾ ಶೆಟ್ಟಿ ನಿಟ್ಟೆ ಕಂಬಳ ಕೊಡಿ,ಅಪ್ಪಾಜಿ  ಬೀಡು ಫೌಂಡೇಶನ್ ನ ಮಾಜಿ ಅಧ್ಯಕ್ಷ ಸುರೇಶ್ ಶೆಟ್ಟಿ ಕೆದಗೇ.
ಹೀಗೆ ಸುಮಾರು ಮಂದಿ ಆತ್ಮೀಯರು ಆಗಮಿಸಿ, ಪುಷ್ಪ ನಮನ ಸಲ್ಲಿಸಿದರು,

ನಗರದ ಪ್ರಸಿದ್ಧ ಗಾಯಕ ವಿಜಯ್ ಶೆಟ್ಟಿ ಮೂಡೂಬೆಳ್ಳೆ ಮತ್ತು ತಂಡದವರಿಂದ ಭಜನೆ ನಡೆಯಿತು.

  ಗುರುಸ್ವಾಮಿ ಪತ್ನಿ ಶಾಂಭವಿ ಶೆಟ್ಟಿ ಹಿರಿಯ ಮಗ ಸನತ್ ಕುಮಾರ್,ಕಿರಿಯ ಮಗ ಪಾರ್ಥಸಾರತಿ, .ಅವಳಿ ಪುತ್ರಿಯರಾದ ರಾಣಿ ,ರಾಗಿಣಿ, ಸೊಸೆ ರಮ್ಯಾ , ಅಳಿಯ ಅರವಿಂದ ಶೆಟ್ಟಿ ಹಾಗೂ ಮೊಮ್ಮಕ್ಕಳು ಮತ್ತು ಪರಿವಾರದವರು , ಪಡುಬಿದ್ರೆ ಬೇಂದ್ರೆ ಕಲ್ಯಾಣಿ ನಿವಾಸದ ಪರಿವಾರದವರು,ಸುನೀಲ್‌ ಶೆಟ್ಟಿ, ಮಾಲಾಶ್ರೀ ಸುನೀಲ್ ಶೆಟ್ಟಿ,  ಶಾಂತಾ ಜಿ. ಶೆಟ್ಟಿ,  ಸಾಣೂರು ದೇವಿಕೃಪಾ ಮತ್ತು ನಿಟ್ಟೆ ಶಶಿನಿವಾಸ (ಕಂಬಳಕೋಡಿ) ಮನೆಯವರು ಪಾಲ್ಗೊಂಡಿದ್ದರು.

 ಅಪ್ಪಾಜಿ ಬೀಡು ಫೌಂಡೇಶನ್ ಟ್ರಸ್ಟಿ ರಘುನಾಥ್ ಎನ್ ಶೆಟ್ಟಿ ಅವರು ರಮೇಶ್ ಗುರು ಸ್ವಾಮಿಯ ಬಗ್ಗೆ ತಿಳಿಸುತ್ತಾ ಸಾಮಾನ್ಯ ಕುಟುಂಬದಿಂದ ಬಂದಂತ ವ್ಯಕ್ತಿ ಒಬ್ಬ ಧಾರ್ಮಿಕ ಚಿಂತನೆ ಮೂಲಕ ಸಾವಿರಾರು ಶಿಷ್ಯರಿಗೆ ಗುರುಗಳಾಗಿರುವ ರಮೇಶ್ ಗುರುಸ್ವಾಮಿಯವರು
ಸಾವಿರಾರು ಜನರ ಮದ್ಯೆಯೂ ಎದ್ದು ಕಾಣುವ ನೀಳ ಕಾಯದ ವ್ಯಕ್ತಿತ್ವವನ್ನು ಹೊಂದಿದವರು ಗುರುಸ್ವಾಮಿಗಳು. ವ್ಯಕ್ತಿತ್ವಕ್ಕೊಪ್ಪುವ  ತುಳುನಾಡಿನ ಸಾಂಪ್ರದಾಯಿಕ ಉಡುಗೆ ತೊಡುಗೆಗಳು. ತೇಜೋಪುಂಜದಂತೆ ಕಳೆ ಸೂಸುತ್ತಿರುವ ಮುಖದಲ್ಲಿ ಸದಾ ಹರಿಯುತ್ತಿರುವ ಮಂದಹಾಸ, ಮಿತ ಭಾಷಿಗಳಾಗಿ ನಯ- ವಿನಯದ ಮಧುರ ನುಡಿಗಳಿಂದ, ಪ್ರಥಮ ಭೇಟಿಯಲ್ಲಿಯೇ ಯಾರ ಮೇಲೂ ಪ್ರಭಾವವನ್ನು ಬೀರ ಬಲ್ಲ  ಉತ್ಸಾಹದ ಚಿಲುಮೆ. ಸ್ವಾಮಿಗಳ ಮನಸ್ಸು ಎಷ್ಟು ನಿರ್ಮಲವೋ ಅಷ್ಟೇ ಶುಭ್ರವಾಗಿರುತ್ತಿತ್ತು ಅವರು ತೊಡುತ್ತಿದ್ದ ಶ್ವೇತ ವರ್ಣದ ಶುಭ್ರವಾದ ವಸ್ತ್ರಗಳು. 

 ಸಮಾಜದಲ್ಲಿ ಎಲ್ಲರಿಗೂ ಬೇಕಾಗಿದ್ದ ಸ್ವಾಮಿಗಳು .

ಕೇವಲ  ಒಂದು ಬಾರಿ ಶಬರಿಮಲೆ ಯಾತ್ರೆಯನ್ನು ಕೈಗೊಳ್ಳುತ್ತೇನೆ ಎಂದು ಸಂಕಲ್ಪಿಸಿದ ಗುರುಸ್ವಾಮಿಗಳು, ನಿರಂತರವಾಗಿ 36 ವರ್ಷಗಳ ಪರ್ಯಂತ ಅದನ್ನು ಮುಂದುವರಿಸಿಕೊಂಡು ಹೋಗಿದ್ದಾರೆ ,.ನಿಜ ಜೀವನದಲ್ಲಿಯೂ ನಿತ್ಯ ನಿರಂತರ ಸಾಧು ಸಂತರಂತಯೇ ಬದುಕಿದವರು. ಇವರು ಶ್ರೀ ಅಯ್ಯಪ್ಪನ ಪೂಜೆಯ ವಿಧಿವಿಧಾನಗಳನ್ನು, ವೃತ ನಿಯಮಗಳ ಪಾಲನೆ ಹಾಗೂ ಅನುಷ್ಠಾಗಳನ್ನು ಮತ್ತು  ಶಿಬಿರದ ಶಿಸ್ತು ಸಂಯಮಗಳನ್ನು,  ತನ್ನ ಶಿಬಿರದಲ್ಲಿ ಅನುಷ್ಠಾನಗೊಳಿಸಿ ಪಾಲಿಸಿಕೊಂಡು ಬರುವುದರ ಜೊತೆಗೆ ತನ್ನ ಶಿಷ್ಯವೃಂದಕ್ಕೂ ಭೋಧಿಸಿರುತ್ತಾರೆ.  ಸಮಾಜದಲ್ಲಿ ಹಿರಿ ಕಿರಿಯರೆನ್ನದೇ ಎಲ್ಲರನ್ನೂ ಯಾವಾಗಲೂ “ಸ್ವಾಮಿಗಳು” ಎಂದೇ ಸಂಭೋದಿಸುತ್ತಿದ್ದರು.ಹಲವಾರು ವರ್ಷಗಳಿಂದ ತಾನೊಂದು ಶಿಬಿರದ ಗುರುಸ್ವಾಮಿಯಾಗಿದ್ದುಕೊಂಡು, ಸಾವಿರಾರು ಶಿಷ್ಯರಿಗೆ  ಶಬರಿಮಲೆ ದರ್ಶನ ಮಾಡಿಸಿದ್ದರೂ ಕೂಡ, ಅವರು ತನ್ನನ್ನು ಎಂದೂ ಇತರರಿಂದ ವಿಭಿನ್ನವಾಗಿ ಗುರುತಿಸಿಕೊಳ್ಳಲು ಸರ್ವಥಾ ಒಪ್ಪುತ್ತಿರಲಿಲ್ಲ. , ಮಾನವ, ಮಹಾತ್ಮನಾಗುವುದು ಅವನು ಪಡೆದ ಸಂಸ್ಕಾರ ಹಾಗೂ ಅದನ್ನು ಪಾಲಿಸುವುದರಿಂದ ಎಂದು ತೋರಿಸಿಕೊಟ್ಟ ಮಹಾತ್ಮರಿವರು. ಆಗಲಿದ ಅವರ ದಿವ್ಯಾತ್ಮವು  ಮೋಕ್ಷವನ್ನು ಹೊಂದಿ ಕಡೆಕಾಲದ ಒಡೆಯನಾದ ಪರ ಶಿವನ ಪಾದತಲದಲ್ಲಿ ಚಿರಕಾಲ ಸಾಯುಜ್ಯವನ್ನು ಪಡೆಯಲಿ ಎಂದರು.

ಅರುಣ್ ಗುರುಸ್ವಾಮಿ, ಅಪ್ಪಾಜಿಬೀಡು ವರ್ಲಿ,ಮೋಹನ್ ಚೌಟ,ಉದಯ ಶೆಟ್ಟಿ ಗುರು ಸ್ವಾಮಿ, ಮುದ್ರಾಡಿ, ಪ್ರವೀಣ್ ಕುಮಾರ್ ಶೆಟ್ಟಿ ಕುರ್ಕಾಲ್, ಕೇದಗೆ ಭೋಜ ಶೆಟ್ಟಿ,ಅರುಣ್ ಆಳ್ವ, ಕಾಂತಾಡಿ ಗುತ್ತು, ಸಂತೋಷ್ ಶೆಟ್ಟಿ ಪರಾರಿ ಗುತ್ತು,ಹರೀಶ್ ಶೆಟ್ಟಿ, ವಸಯಿ, ಪ್ರಸಾದ್ ಶೆಟ್ಟಿ ಅರುವ, ರಾಜೇಶ್ ಶೆಟ್ಟಿ ಮುನಿಯಲ್, 
ಭರತ್ ಶೆಟ್ಟಿ ಅತ್ತೂರು, ಶ್ರೀಕಾಂತ್ ಶೆಟ್ಟಿ  ಸೀ ಕಾರ್ನರ್ ವರ್ಲಿ, ವಿಜಯ ಬಿ ಶೆಟ್ಟಿ ವರ್ಲಿ , ಜನಾರ್ಧನ ಮೊಗವೀರ,
ಲೋಕೇಶ್ ತೋಳರ್, ಮನೋಹರ್ ಶೆಟ್ಟಿ,
ನಂದಲಿಕೆ. ಅಶೋಕ್ ಕುಮಾರ್,
ಕೊದ್ಯಡ್ಕ.ರತ್ನಾಕರ್ ಶೆಟ್ಟಿ,ಹೋಟೆಲ್   
ಶಿವ್ ಸಾಗರ್, ವರ್ಲಿ, ಬಾಲಚಂದ್ರ ಶೆಟ್ಟಿ, ವರ್ಲಿ, ಶೇಖರ್ ಶೆಟ್ಟಿ, ವರ್ಲಿ ಮತ್ತಿತರ ಅಪ್ಪಾಜಿ ಬೀಡಿನ ಸದಸ್ಯರು  ಶಿಬಿರದಲ್ಲಿ ಮಾಲಾಧಾರಣೆ ಮಾಡಿದ ಅಯ್ಯಪ್ಪ ಭಕ್ತರು, ಅನ್ನಪೂರ್ಣೇಶ್ವರಿ ಮಹಿಳಾ ಮಂಡಳಿಯ ಕಾರ್ಯಾಧ್ಯಕ್ಷೆ  ಕವಿತಾ ಗೋಪಾಲ್ ಶೆಟ್ಟಿ. ಮತ್ತು ಪದಾಧಿಕಾರಿಗಳು ಮಹಿಳಾ ಸದಸ್ಯರುಗಳು ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.



Related posts

ಭಾರತ್ ಬ್ಯಾಂಕ್‌ನ ಬಾಂದ್ರ ಪೂರ್ವ ಶಾಖೆಯಲ್ಲಿ 47ನೇ ಸಂಸ್ಥಾಪನಾ ದಿನಾಚರಣೆ ಸಂಭ್ರಮದ ಆಚರಣೆ

Mumbai News Desk

ಶ್ರೀ ಮೂಕಾಂಬಿಕ ದೇವಿ ದೇವಸ್ಥಾನ ಬಿರ್ಲಾ ಗೇಟ್ ಶಹಾಡ್ : ಮಹಾ ಶಿವರಾತ್ರಿಯ ಅಂಗವಾಗಿ ಏಕಹಾ ಭಜನೆ

Mumbai News Desk

ಶ್ರೀ ಬ್ರಹ್ಮಲಿಂಗೇಶ್ವರ ಅಬ್ಬಗದಾರಗ ಆಲಡೆ ಹೆಜಮಾಡಿ : ಸಿರಿ -ನುಡಿ ವಿಶೇಷ ಉಪನ್ಯಾಸ ಹಾಗೂ ಜೀರ್ಣೋದ್ಧಾರ ಕಾರ್ಯದ ಪ್ರಗತಿ ಪರಿಶೀಲನಾ ಸಭೆ

Mumbai News Desk

ಭಾರತ್ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್ ಮಲಾಡ್ ಕೊಂಕಣಿ ಪಾಡದಶಾಖೆಯಲ್ಲಿ 46ನೇ ಸಂಸ್ಥಾಪನಾ ದಿನಾಚರಣೆ .

Mumbai News Desk

ಬಿಲ್ಲವರ ಅಸೋಸಿಯೇಶನ್ ಭಾಯಂದರ್ ಸ್ಥಳೀಯ ಕಚೇರಿಯಲ್ಲಿ ವಿಶೇಷ ಗುರು ಪೂಜೆ. ನಾರಾವಿ ಸತೀಶ್ ಸ್ವಾಮಿಯ ಸನ್ಮಾನ

Mumbai News Desk

ಭಂಡಾರಿ ಸೇವಾ ಸಮಿತಿ ಮುಂಬಯಿ – 70ನೇ ವಾರ್ಷಿಕ ಕೌಟುಂಬಿಕ ಸ್ನೇಹ ಸಮ್ಮಿಲನ

Mumbai News Desk