30.9 C
Mumbai
June 8, 2026
Mumbai News Kannada
ತುಳುನಾಡು

ಉಡುಪಿ ಇಂದ್ರಾಣಿ ನದಿ ಮಾಲಿನ್ಯ ನಿವಾರಣೆಗೆ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯಿಂದ ಜಿಲ್ಲಾಡಳಿತಕ್ಕೆ ತುರ್ತು ಮನವಿ





ಜಯಶ್ರೀಕೃಷ್ಣ ಪರಸರ ಪ್ರೇಮಿ ಜಿಲ್ಲಾ ಸಮಿತಿಯು ( NGO ) ಉಡುಪಿಯ ಇಂದ್ರಾಣಿ ನದಿ ಮಾಲಿನ್ಯದ ಕುರಿತು ಮುನಿಸಿಪಲ್ ಕಮಿಷನರ್ ಮತ್ತು ಸಂಬಂಧಿತ ಅಧಿಕಾರಿಗಳಿಗೆ ತುರ್ತು ಮನವಿ ಸಲ್ಲಿಸಿ, ಇಂದ್ರಾಣಿ ನದಿಯ ಮಾಲಿನ್ಯ ನಿವಾರಣೆಗೆ ತುರ್ತು ಮನವಿ ಪತ್ರ ಸಲ್ಲಿಸಿದೆ.

ಉಡುಪಿ ಮುನ್ಸಿಪಲ್ ಮಿತಿಯ ಸುಮಾರು 375 ಕಿಂತಲು ಅಧಿಕ ವಸತಿ ಸಮುಚ್ಚಯದ ಎಲ್ಲಾ ತಾಜ್ಯ, ಮಣಿಪಾಲ, ಮಲ್ಪೆಯ ಎಲ್ಲಾ ಅಪರಿಷ್ಕೃತ ತ್ಯಾಜ್ಯ ನೀರು ಇಂದ್ರಾಣಿ ನದಿಯನ್ನು ಸೇರಿ , ಪರಿಸರದ ಹಾಗು ಹಾಸುಪಾಸಿನ ಜನರ ದೈನಂದಿನ ಬದುಕು ದುರ್ಬರವಾಗಿದೆ. ಇದರ
ನಿರ್ಲಕ್ಷ್ಯದಿಂದ 500 ಕಿಂತಲೂ ಅಧಿಕ ಕುಟುಂಬಗಳ ಆರೋಗ್ಯ (ಜ್ವರ, ಚರ್ಮರೋಗ, ಡೆಂಘಿ ಭೀತಿ) ಹದಗೆಟ್ಟಿದೆ . ಅದಲ್ಲದೆ ಅಂತರ್ಜಲ ಕೂಡ ಕಲುಷಿತವಾಗಿ, ಮನೆಯ ಬಾವಿಯ ನೀರು ಕೂಡ ಕುಡಿಯಲು ಯೋಗ್ಯವಾಗಿಲ್ಲ. ಬಾವಿಯಿಂದ ದುರ್ಗಂಧ ಹಾಗು ಸಾಯಂಕಾಲದ ನಂತರ ಸೊಳ್ಳೆಗಳ ಕಾಟದಿಂದ ಇಡಿ ಪರಿಸರ ಹಾಳಾಗಿದೆ ಹಾಗು ಇಂದ್ರಾಣಿ ನದಿ ಒಂದು ಕಲುಷಿತ ಒಳಚರಂಡಿ ಕಾಲುವೆ ಯಾಗಿ ಪರಿವರ್ತನೆಯಾಗಿದೆ ಎಂದು ಸಂಬದ ಪಟ್ಟವರಲ್ಲಿ ಆಗ್ರಹಿಸಿ, ಇದರ ಶೀಘ್ರ ನಿವಾರಣೆಗೆ ಒತ್ತಾಯಿಸಿದೆ.

ಪರಿಸರದ ಸಾರ್ವಜನಿಕರ ಅಹವಾಲಿನ ಮೇರೆಗೆ, ಜಯಶ್ರೀಕೃಷ್ಣ ಪರಿಸರ ಪ್ರೇಮಿ ಜಿಲ್ಲಾ ಸಮಿತಿಯು ತ್ವರತಿವಾಗಿ ಸ್ಪಂದಿಸಿ ಸ್ಥಳೀಯ ಆಡಳಿತದೊಂದಿಗೆ ಇದರ ಶೀಘ್ರ ನಿವಾರಣೆಗೆ ತುರ್ತು ಮನವಿ ಮಾಡಿದೆ. ಸಮಿತಿಯ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಎಂ ಶೆಟ್ಟಿಯವರು ಸೂಕ್ತ ದಾಕಲೆಗಳೊಂದಿಗೆ ಉಡುಪಿಯ ಮಾನ್ಯ ಜಿಲ್ಲಾಧಿಕಾರಿ ಶ್ರೀಮತಿ ಸ್ವರೂಪ ಟಿ ಕೆ, ಮುನ್ಸಿಪಲ್ ಕಮಿಷನರ್ ಶ್ರೀ ಮಹತೇಶ ಹಂಗರಾಗಿ, ಸ್ಥಳೀಯ ಶಾಶಕರಾದ ಶ್ರೀ ಯಶಪಾಲ್ ಸುವರ್ಣ, ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯ ಉಡುಪಿ ವಿಭಾಗಕ್ಕೆ ತುರ್ತು ಮನವಿ ಸಲ್ಲಿಸಿದ್ಸಾರೆ.

ಜಿಲ್ಲಾಧಿಕಾರಿ ಕಚೇರಿಯಲ್ಲಿ, ಮಾನ್ಯ ಜಿಲ್ಲಾಡಿಕಾರಿಗಳೊಂದಿಗೆ ಸುಧೀಘ ಚರ್ಚೆ ನದೆಸಿದ ಮೇಲೆ, ಸಂಭದ ಪಟ್ಟ ಅಧಿಕಾರಿಗಳಿಗೆ ತ್ವರಿತವಾಗಿ ಇಂದ್ರಾಣಿ ನದಿ ಮಾಲಿನ್ಯದ ಸಮಗ್ರ ವರದಿ ಮತ್ತು ನದಿ ಶುದ್ಧೀಕರಣಕ್ಕೆ ಬೇಕಾದ ವ್ಯವಸ್ಥೆಗಳನ್ನು ಮಾಡಿ, ವರದಿ ನೀಡಲು ಆದೇಶ ಮಾಡಿದ್ದಾರೆ.
ಇಂದ್ರಾಣಿ ನದಿ ಕಲುಷಿತ ಬಗ್ಗೆ ನಮ್ಮ ಸಮಿತಿಯು ಕೈಗೊಂಡ ಕಾರ್ಯವೈಕರಿಯ ಬಗ್ಗೆ ಮೆಚ್ಚುಗೆ ಸೂಚಿಸಿ, ಮುಂದಿನ ಸುತ್ತಿನ ಸಭೆಗೆ ಸಮಿತಿಯನ್ನು ಆಹ್ವಾನಿಸಿದ್ದಾರೆ.

ಇದಾಗಲೇ ಕರ್ನಾಟಕ ಘನ ಸರಕಾರಕ್ಕೆ ಸಲ್ಲಿಸಿದ, ಇಂದಿನ ಅಭಿವೃದ್ಧಿ ನಾಳಿನ ವಿಪತ್ತಾಗಬಾರದು ಎಂಬ ನಮ್ಮ ಸಮಿತಿಯು ತಯಾರಿಸಿದ 2023ರ ಕೋಸ್ಟಲ್ ವಿಷನ್ ಪ್ಲಾನ್‌ಗೆ ಅನುಗುಣವಾಗಿ ಉಡುಪಿಯ ಇಂದ್ರಾಣಿ ನದಿಯ ಕಲುಷಿತ ನಿವಾರಣೆಗೆ ತ್ವರಿತ ಕ್ರಮ ಅಗತ್ಯ ಎಂದು ಸಮಿತಿಯ ಜಿಲ್ಲಾ ಸಮಿತಿಯು ಆಗ್ರಹ ಮಾಡಿದೆ. ಇಂದ್ರಾಣಿ ನದಿ ಕಲುಷಿತದ ಬಗ್ಗೆ ಜಿಲ್ಲಾಡಳಿತ ಶೀಘ್ರ ಕ್ರಮ ಕೈಗೊಳ್ಳದಿದ್ದರೆ, ಕರ್ನಾಟಕದ ಉಪ ಲೋಕಾಯುಕ್ತರಾದ ನ್ಯಾ. ಬಿ. ವೀರಪ್ಪ ಅವರಿಗೆ ಮನವಿ ಸಲ್ಲಿಸಲು ಜಿಲ್ಲಾ ಸಮಿತಿ ನಿರ್ಧರಿಸಿದೆ. ಮಾನ್ಯ ಉಪ ಲೋಕಾಯುಕ್ತರು ಇತ್ತೀಚಿಗೆ ಇಂದ್ರಾಣಿ ನದಿ ಕಲುಷಿತವಾದ ಬಗ್ಗೆ ಅಸಮಾಧಾನ ವ್ಯಕ್ತ ಪಡಿಸಿದ್ದನ್ನು ಇಲ್ಲಿ ಸ್ಮರಿಸಬಹುದು.



Related posts

ಮೂಲ್ಕಿ : ಹೊಸ ಅಂಗಣ ಪತ್ರಿಕೆಯ ತಿಂಗಳ ಬೆಳಕು ಕಾರ್ಯಕ್ರಮದಲ್ಲಿ ವರ್ಷದ ವ್ಯಕ್ತಿಯಾದ ಡಾ. ಮುರಲೀ ಮೋಹನ್ ಚೂಂತಾರು ಅವರಿಗೆ ಸನ್ಮಾನ

Mumbai News Desk

ಸಾಲ್ಯಾನ್ ಮೂಲಸ್ಥಾನ ಕದಿಕೆ, ಹಳೆಯಂಗಡಿ – ವಾರ್ಷಿಕ ಮಹಾಸಭೆ, ಪ್ರತಿಭಾ ಪುರಸ್ಕಾರ, ಪ್ರೋತ್ಸಾಹ ಧನ ವಿತರಣೆ.

Mumbai News Desk

ಶ್ರೀ ಸಾಯಿ ಈಶ್ವರ್ ಗುರೂಜಿ ಅವರ ಮಹಾ ಸಂಕಲ್ಪದ 19ನೇ ದಿನ – ಕಾಪು ಶ್ರೀ ಹಳೆ ಮಾರಿಗುಡಿಗೆ ಪ್ರದಕ್ಷಿಣೆ.

Mumbai News Desk

ಜಾಗತಿಕ ಬಂಟರ ಸಂಘಗಳ ಒಕ್ಕೂಟದ ವತಿಯಿಂದ ಪಟ್ಲ ಸತೀಶ್ ಶೆಟ್ಟಿಯವರಿಗೆ  ಗೌರವ.

Mumbai News Desk

ಸಾಲಿಯಾನ್ ಆದಿ ಮೂಲಸ್ಥಾನ ಪಲಿಮಾರು : ವಾರ್ಷಿಕ ನಾಗದರ್ಶನ ಹಾಗೂ ದೈವದ ತಂಬಿಲ ಸೇವೆ ಸಂಪನ್ನ

Mumbai News Desk

ಹೆಜಮಾಡಿ ಗ್ರಾಮೀಣ ಕಾಂಗ್ರೆಸ್ ನ ನೂತನ ಅಧ್ಯಕ್ಷರಾಗಿ ಪ್ರಭೋದ್ ಚಂದ್ರ ಹೆಜಮಾಡಿ ಆಯ್ಕೆ

Mumbai News Desk