September 6, 2026
Mumbai News Kannada
ಮುಂಬಯಿ

ತುಳು ಸಂಘ ಬೊರಿವಲಿ ವತಿಯಿಂದ ಅರಸಿನ ಕುಂಕುಮ ಕಾರ್ಯಕ್ರಮ





ತುಳು ನಾಡಿನ ಮಹಿಳೆಯರನ್ನು ಒಗ್ಗೂಡಿಸುವ ಕಾರ್ಯ ಪ್ರಶಂಸನೀಯ – ಕವಿತಾ ವೇದಪ್ರಕಾಶ್ ಶ್ರೀಯಾನ್

 ಮುಂಬಯಿ : ತುಳು ನಾಡಿನ ಸಂಸ್ಕೃತಿಯನ್ನು ಹೊರನಾಡಿನಲ್ಲಿ ಉಳಿಸಿ, ಇಲ್ಲಿರುವ ನಾಡಿನ ಮಹಿಳೆಯರನ್ನು ಅರಸಿನ ಕುಂಕುಮ ದಂತಹ ಕಾರ್ಯಕ್ರಮದ ಮೂಲಕ ಒಗ್ಗೂಡಿಸುತ್ತಿರುವ ತುಳು ಸಂಘ ಬೊರಿವಲಿ ಯನ್ನು ಅಭಿನಂದಿಸಬೇಕಾಗಿದೆ ಎಂದು ಉದ್ಯಮಿ, ದಿವ್ಯ ಲೋಜಿಸ್ಠಿಕ್ ಗ್ರೂಪ್ ನ ಕವಿತಾ ವೇದಪ್ರಕಾಶ್ ಶ್ರೀಯಾನ್ ಅಭಿಪ್ರಾಯ ಪಟ್ಟರು.

 ಫೆಬ್ರವರಿ  28 ರಂದು ಬೋರಿವಲಿ ಪಶ್ಚಿಮದ ಮ್ಹಾತ್ರೆ ಗಾರ್ಡನ್ಸ್ ಹಾಲ್ ನಲ್ಲಿ ತುಳು ಸಂಘ, ಬೋರಿವಲಿ ಇದರ ಮಹಿಳಾ ವಿಭಾಗದಿಂದ ಜರಗಿದ ಹಳದಿ ಕುಂಕುಮ ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಯಾಗಿ ಮಾತನಾದುತ್ತಾ ಹಳದಿ ಕುಂಕುಮದ ಮಹತ್ವದ ಬಗ್ಗೆ ತಿಳಿಸಿ, ಮಹಿಳೆಯರ ಏಕತೆ, ಸಂಸ್ಕೃತಿ ಮತ್ತು ಪರಂಪರೆಯ ಮಹತ್ವವನ್ನು ವಿವರಿಸಿದರು.

ಸಂಘದ ಅಧ್ಯಕ್ಷರಾದ ಹರೀಶ್ ಮೈಂದನ್ ಮಾತನಾಡುತ್ತ ಸಂಘದ ಇತ್ತೀಚಿನ ಕಾರ್ಯಕ್ರಮಗಳು ಹಾಗೂ ಸಾಧನೆಗಳ ಮಾಹಿತಿಯಿತ್ತರು. ಮಹಿಳಾ ಅಧ್ಯಕ್ಷೆ  ಶೋಭಾ ಶೆಟ್ಟಿ ಅವರು ಮುಖ್ಯ ಅತಿಥಿ ಕವಿತಾ ವೇದಪ್ರಕಾಶ್ ಶ್ರೀಯಾನ್ ಅವರನ್ನು ಪರಿಚಯಿಸಿದರು. ಮಹಿಳಾ ಕಾರ್ಯದರ್ಶಿ ವಿಜಯಲಕ್ಷ್ಮಿ ದೇವಾಡಿಗ ಅವರು ಸ್ವಾಗತಿಸಿದರು. ಸಂಘದ ಜೊತೆ ಕಾರ್ಯದರ್ಶಿ ತಿಲ್ಲೋತ್ತಮಾ ವೈದ್ಯ ಸಂಘದ ಚಟುವಟಿಕೆಗಳ ಬಗ್ಗೆ ತಿಳಿಸಿದರು. 

ಮಹಿಷಮರ್ಧಿನಿ ಭಜನಾ ಮಂಡಳಿಯವರಿಂದ ಭಕ್ತಿಗೀತೆ ನಡೆಯಿತು.

 ಈ ಸಂದರ್ಭದಲ್ಲಿ 2026ರ ಎನ್‌ಪಿಎಲ್ ಪಂದ್ಯದಲ್ಲಿ ವಿಜೇತರಾದ ತುಳು ಯುವ ಕ್ರಿಕೆಟ್ ತಂಡದ ಸದಸ್ಯರನ್ನು ಸನ್ಮಾನಿಸಲಾಯಿತು. ತಂಡದ ನಾಯಕ ರೋಹಿತ್ ಪೂಜಾರಿ, ಆಕರ್ಷ್ ಪೂಜಾರಿ,

ಅಕ್ಷಯ್ ಸುವರ್ಣ, ಧೀರಜ್ ಶೆಟ್ಟಿ, ವಿಜಯ್ ಆಚಾರ್ಯ, ವಿಕಾಸ್ ಆಚಾರ್ಯ, ಹರ್ಷ ಸೋಲಂಕಿ ಮತ್ತು  ಸಚಿನ್ ಆಚಾರ್ಯ ಅವರನ್ನು ಗೌರವಿಸಲಾಯಿತು. ತಂಡಕ್ಕೆ ಬೆಂಬಲ ನೀಡಿದ ನ್ಯಾ. ರಾಘವ ಎಂ ಅವರಿಗೂ ಅಭಿನಂದನೆ ಸಲ್ಲಿಸಲಾಯಿತು.

ನಂತರ ಮಹಿಳೆಯರಿಂದ ಹಳದಿ ಕುಂಕುಮ ಕಾರ್ಯಕ್ರಮ ನೆರವೇರಿತು. ಚಂದ್ರಿಕಾ ಭಟ್ ಅವರ ತೀರ್ಪಿನಲ್ಲಿ ಪ್ರತಿಭಾ ಸ್ಪರ್ಧೆ ಆಯೋಜಿಸಲಾಯಿತು. ಬಹುಮಾನಗಳನ್ನು ಸರಸ್ವತಿ ರಾವ್ ಹಾಗೂ ಶೋಭಾ ಶೆಟ್ಟಿ ಪ್ರಾಯೋಜಿಸಿದರು.

ಸಂಘದ ಗೌರವ ಕೋಶಾಧಿಕಾರಿ ದಿವಾಕರ ಕರ್ಕೇರ ವಂದನಾರ್ಪಣೆ ಮಾಡಿದರು. 

ಸಂಘದ ಉಪಾಧ್ಯಕ್ಷ ರಜಿತ್ ಸುವರ್ಣ, ಮಾಜಿ ಅಧ್ಯಕ್ಷ ಪೇಟೆಮನೆ ಪ್ರಕಾಶ್ ಶೆಟ್ಟಿ, ರತಿ ಶಂಕರ್ ಶೆಟ್ಟಿ  ಕುಸುಮಾ ಶೆಟ್ಟಿ, ಟಿ.ವಿ. ಪೂಜಾರಿ, ಲಕ್ಷ್ಮಿ ದೇವಾಡಿಗ,  ಮಾಜಿ ಮಹಿಳಾ ಅಧ್ಯಕ್ಷೆ  ಹರಿಣಿ ಶೆಟ್ಟಿ, ಸುನಂದ ಶೆಟ್ಟಿ, ವೇದ ಶೆಟ್ಟಿ ಪ್ರಿಯಲಕ್ಷ್ಮಿ ಉಪ್ಪೊರ್ ವಸುದಾ ಪೈ ಜಯಂತಿ ಶೆಟ್ಟಿ, ಕಸ್ತೂರಿ ಶೆಟ್ಟಿ, ಜಯಂತಿ ಶೆಟ್ಟಿ, ಕೃಷ್ಣ ಸಾಲಿಯನ್, ಅಶೋಕ್ ಪೂಜಾರಿ, ಯಶವಂತ್ ಪೂಜಾರಿ, ಬಾಲಕೃಷ್ಣ ಬಂಗೇರ, ವಿಜಯಕುಮರ್ ಮೂಲ್ಕಿ, ಸಮಿತಿಯ ಮತ್ತು ಉಪಸಮಿತಿಗಳ ಪದಾಧಿಕಾರಿಗಳು ಮತ್ತು ಸದಸ್ಯರುಗಳು ಹೆಚ್ಚಿನ ಸಂಖ್ಯೆಯಲ್ಲಿ  ಉಪಸ್ಥಿತರಿದ್ದರು.

ಚಿತ್ರ / ವರದಿ : ಈಶ್ವರ ಎಂ. ಐಲ್



Related posts

ತುಳು ಸಂಘ, ಬೋರಿವಲಿ, 13ನೇ ವಾರ್ಷಿಕೋತ್ಸವ,  ಸಾಂಸ್ಕೃತಿಕ ವೈಭವ, ಸನ್ಮಾನ

Mumbai News Desk

ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ; “ಮೆಟ್ರೋ ಮ್ಯಾನ್” ಆಫ್ ಇಂಡಿಯಾ ಪದ್ಮವಿಭೂಷಣ ಡಾ. ಇ. ಶ್ರೀಧರನ್ ಗೆ ಜಾರ್ಜ್ ಫೆರ್ನಾಂಡಿಸ್ ಸಂಸ್ಮರಣಾ ರಾಷ್ಟ್ರೀಯ ಪ್ರಶಸ್ತಿ – 2024 ಪ್ರದಾನ

Mumbai News Desk

ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿ ಮಲಾಡ್ – ಆಷಾಢ ಹಬ್ಬ ಆಚರಣೆ,

Mumbai News Desk

ಕರ್ನಾಟಕ ಸಂಘ ಡೊಂಬಿವಲಿ ಅದ್ಧೂರಿ ಕ್ರೀಡಾ ಕೂಟ ದಂಗಲ್ 2024 ಸಮಾರೋಪ ಸಮಾರಂಭ

Mumbai News Desk

ಜೋಗೇಶ್ವರಿ ಶ್ರೀ ಜಗದಂಬಾ ಕಾಲಭೈರವ ದೇವಸ್ಥಾನದ ಆಡಳಿತ ಮೊಕ್ತೇಸರ ಹಾಗೂ ಅಧ್ಯಕ್ಷರಾಗಿ ಮುಂಡ್ಕೂರು ಸುರೇಂದ್ರ ಸಾಲ್ಯಾನ್

Mumbai News Desk

ಮುಂಬಯಿ: ಭಾರತ್ ಕೋ-ಆಪರೇಟಿವ್ ಬ್ಯಾಂಕ್ ಫೋರ್ಟ್ ಶಾಖೆ ಸ್ಥಳಾಂತರ; ನೂತನ ಆವರಣ ಉದ್ಘಾಟನೆ

Mumbai News Desk