
ಬಿಲ್ಲವರ ಅಸೋಸಿಯೇಷನ್ ಮುಂಬೈ ಇದರ ಡೊಂಬಿವಲಿ ಸ್ಥಳೀಯ ಕಚೇರಿಯಲ್ಲಿ ಸಾಮೂಹಿಕ ಶ್ರೀ ಶನೀಶ್ವರ ಪೂಜೆ ಫೆಬ್ರವರಿ 28 ರಂದು ಶನಿವಾರ ಹಲವಾರು ಧಾರ್ಮಿಕ ಕಾರ್ಯಕ್ರಮದೊಂದಿಗೆ ಜರಗಿತು. ಅಂದು ಬೆಳಿಗ್ಗೆ ಗುರು ಪೂಜೆ ಮತ್ತು ಶನಿದೇವರ ಕಳಶ ಪ್ರತಿಷ್ಠೆ ಆದ ನಂತರ ಸಂಘದ ಸದಸ್ಯರ ಮಕ್ಕಳಿಂದ ಕುಣಿತ ಭಜನೆ ಕಾರ್ಯಕ್ರಮ ಜರಗಿತು.




ಮಧ್ಯಾಹ್ನ ಗಂಟೆ 2 ರಿಂದ ಶ್ರೀ ಶನೀಶ್ವರ ಮಹಾತ್ಮೆ ಯಕ್ಷಗಾನ ತಾಳಮದ್ದಳೆ ರೂಪದಲ್ಲಿ ಜರಗಿತು. ಸಂಜೆ ಗಂಟೆ 7:00 ಕ್ಕೆ ಜರಗಿದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಡೊಂಬಿವಲಿ ಸ್ಥಳೀಯ ಸಮಿತಿಯಲ್ಲಿ ಕಳೆದ 35 ವರ್ಷಗಳಿಂದ ವಿವಿಧ ಹುದ್ದೆಯಲ್ಲಿ ಸೇವೆ ಸಲ್ಲಿಸಿದ ಪುರಂದರ ಪೂಜಾರಿಯವರನ್ನು ಮತ್ತು ಉಡುಪಿ ರಾಜೋತ್ಸವ ಪ್ರಶಸ್ತಿ ಪುರಸ್ಕೃತ ನವೀನ್ ಪೂಜಾರಿ ಪಡು ಇನ್ನ ಇವರನ್ನು ಬಿಲ್ಲವರ ಅಸೋಸಿಯೇಷನ್ ಮುಂಬೈ ಇದರ ಉಪಾಧ್ಯಕ್ಷರಾದ ಪುರುಷೋತ್ತಮ್ ಎಸ್ ಕೋಟ್ಯಾನ್ ಮತ್ತು ಮೋಹನ್ ಸಿ ಕೋಟ್ಯಾನ್, ಕೋಶಾಧಿಕಾರಿ ಯಾದ ರವಿ ಸನಿಲ್ ರವರ ಉಪಸ್ಥಿತಿಯಲ್ಲಿ ಸನ್ಮಾನಿಸಲಾಯಿತು.


ಈ ಸಂದರ್ಭದಲ್ಲಿ ಡೊಂಬಿವಲಿ ಸ್ಥಳೀಯ ಕಚೇರಿಯ ಕಾರ್ಯಾಧ್ಯಕ್ಷರಾದ ಶ್ರೀಧರ್ ಬಿ ಅಮೀನ್ ಉಪಾಧ್ಯಕ್ಷರಾದ ಚಂದ್ರಹಾಸ್ ಪಾಲನ್ ಮತ್ತು ಸಚಿನ್ ಪೂಜಾರಿ ಹಾಗೂ ಗೌರವ ಕಾರ್ಯಾಧ್ಯಕ್ಷರಾದ ಮಂಜಪ್ಪ ಪೂಜಾರಿಯವರು , ಕೋಶಾಧಿಕಾರಿ ಆನಂದ ಪೂಜಾರಿ ಹಾಗೂ ಸಮಿತಿಯ ಪದಾಧಿಕಾರಿಗಳು ಮಹಿಳಾ ವಿಭಾಗ , ಯುವ ವಿಭಾಗದವರು ಉಪಸ್ಥಿತರಿದ್ದರು.







ಸತೀಶ್ ಎನ್ ಕೋಟ್ಯಾನ್ ರವರು ಕಳಶ ಪ್ರತಿಷ್ಠೆ ಮಾಡಿದರೆ ಪೂಜೆಗೆ ಕುಳಿತುಕೊಳ್ಳುವ ಮುಂದಾಳತ್ವವನ್ನು ದಾಂಪತ್ಯ ಜೀವನದ ಬೆಳ್ಳಿ ಹಬ್ಬವನ್ನು ಆಚರಿಸುತ್ತಿರುವ ರಾಮಚಂದ್ರ ಬಂಗೇರ ಮತ್ತು ಚಾಂದಿನಿ ಆರ್ ಬಂಗೇರ ದಂಪತಿಗಳು ವಹಿಸಿದರು.
ಹಲವಾರು ದಾನಿಗಳ ಸಹಕಾರದಿಂದ ಅನ್ನದಾನ ಮತ್ತು ಪೂಜಾ ಕಾರ್ಯಕ್ರಮಗಳು ಯಶಸ್ವಿಯಾಗಿ ಜರಗಿತು.
ಗೌ. ಕಾರ್ಯದರ್ಶಿ ಜೆಜೆ ಕೋಟ್ಯಾನ್ ರವರು ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.




