September 6, 2026
Mumbai News Kannada
ಪ್ರಕಟಣೆ

ಮಾ.7, ಬಿಲ್ಲವರ ಅಸೋಸಿಯೇಶನ್ ಭಾಯಂದರ್ ಸ್ಥಳೀಯ ಕಚೇರಿಯ ವತಿಯಿಂದ ಶ್ರೀ ಶನೀಶ್ವರ ಗ್ರಂಥ ಪಾರಾಯಣ.





ಭಾಯಂದರ್. ಮಾ.2: ಬಿಲ್ಲವರ ಅಸೋಸಿಯೇಶನ್ ಇದರ ಭಾಯಂದರ್ ಸ್ಥಳೀಯ ಕಚೇರಿಯ ವತಿಯಿಂದ ಶ್ರೀ ಶನೀಶ್ವರ ಗ್ರಂಥ ಪಾರಾಯಣವು ಮಾ.7ರ ಶನಿವಾರ ಮಧ್ಯಾಹ್ನ ಗಂಟೆ 1ರಿಂದ ನಡೆಯಲಿದೆ.
ಈ ಧಾರ್ಮಿಕ ಕಾರ್ಯಕ್ರಮವು ಭಾಯಂದರ್ ಪೂರ್ವ, ಬಿ.ಪಿ.ರೋಡ್ ನಾಕಾದ ಭಾರತ್ ಬ್ಯಾಂಕ್ ಮೇಲ್ಗಡೆ ಇರುವ ಮಂಗಳಮೂರ್ತಿ ಹಾಲ್ ನಲ್ಲಿ ವೆಸ್ಟರ್ನ್ ಇಂಡಿಯಾ ಶನಿ ಮಹಾತ್ಮಾ ಸೇವಾ ಸಮಿತಿಯವರಿಂದ ಯಕ್ಷಗಾನ ತಾಳಮದ್ದಳೆ ರೂಪದಲ್ಲಿ ಜರುಗಲಿದೆ.
ಅಂದು ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಅಧ್ಯಕ್ಷ ಹರೀಶ್ ಜಿ.ಅಮೀನ್ ಅವರಿಂದ ದೀಪ ಪ್ರಜ್ವಲನೆ ಯೊಂದಿಗೆ ಪೂಜಾ ಕಾರ್ಯಕ್ರಮವು ಆರಂಭಗೊಳ್ಳಲಿದೆ. ತದನಂತರ ಗಂಟೆ 1.30ಕ್ಕೆ ಕಲಶ ಪ್ರತಿಷ್ಠಾಪನೆಯಾಗಿ ಶನಿಗ್ರಂಥ ಪಾರಾಯಣ ನಡೆದು ಸಾಯಂಕಾಲ ಗಂಟೆ 7.30ಕ್ಕೆ ಮಹಾ ಮಂಗಳಾರತಿ, ಪ್ರಸಾದ ವಿತರಣೆ ಹಾಗೂ ಮೀರಾಬಾಯಂದರ್ ಮಹಾನಗರ ಪಾಲಿಕೆಯ ನಗರಸೇವಕ ಗಣೇಶ್ ಶೆಟ್ಟಿಯವರ ವತಿಯಿಂದ ಅನ್ನಸಂತರ್ಪಣೆ ನಡೆಯಲಿದೆ.
ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಸದ್ಭಕ್ತರಾದ ತಾವೆಲ್ಲರೂ ಬಂಧು ಮಿತ್ರರೊಂದಿಗೆ ಉಪಸ್ಥಿತರಿರಬೇಕಾಗಿ ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಗೌರವಾಧ್ಯಕ್ಷ ಎಲ್.ವಿ.ಅಮೀನ್, ಗೌರವ ಕಾರ್ಯದರ್ಶಿ ಹರೀಶ್ ಜಿ.ಸಾಲ್ಯಾನ್, ಗೌರವ ಕೋಶಾಧಿಕಾರಿ ರವಿ ಎಸ್.ಸನಿಲ್, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶಕುಂತಳಾ ಕೆ. ಕೋಟ್ಯಾನ್, ಕೇಂದ್ರ ಕಚೇರಿಯ ಪ್ರಭಾರಿ ಮೋಹನ್ ಸಿ.ಕೋಟ್ಯಾನ್, ಕೇಂದ್ರ ಕಚೇರಿಯ ಪ್ರತಿನಿಧಿ ಜಿ.ಕೆ.ಕೆಂಚನಕೆರೆ, ಧಾರ್ಮಿಕ ಮತ್ತು ಸಾಮಾಜಿಕ ಉಪಸಮಿತಿಯ ಅಧ್ಯಕ್ಷ ಧರ್ಮಪಾಲ್ ಜಿ.ಅಂಚನ್, ಕಾರ್ಯದರ್ಶಿ ಸದಾಶಿವ ವೈ.ಕೋಟ್ಯಾನ್, ಭಾಯಂದರ್ ಸ್ಥಳೀಯ ಕಚೇರಿಯ ಗೌರವಾಧ್ಯಕ್ಷ ಪ್ರಮೋದ್ ಕೆ.ಕೋಟ್ಯಾನ್, ಕಾರ್ಯಾಧ್ಯಕ್ಷ ಶೇಕರ್ ಆರ್.ಪೂಜಾರಿ, ಉಪಕಾರ್ಯಾಧ್ಯಕ್ಷರುಗಳಾದ ಸುಧಾಕರ್ ಜಿ.ಪೂಜಾರಿ, ಸತೀಶ್ ಜೆ.ಪೂಜಾರಿ , ಕಾರ್ಯದರ್ಶಿ ಜ್ಯೋತಿ ಆರ್.ಪೂಜಾರಿ, ಕೋಶಾಧಿಕಾರಿ ಹರೀಶ್ ಎಂ.ಸಾಲ್ಯಾನ್, ಜೊತೆ ಕಾರ್ಯದರ್ಶಿಗಳಾದ ಜಯಶ್ರೀ ಸಂತೋಷ್ ಕರ್ಕೇರ, ದೀಪಕ್ ಎಸ್.ಕರ್ಕೇರ, ಜೊತೆ ಕೋಶಾಧಿಕಾರಿ ಅಶೋಕ್ ಟಿ.ಪೂಜಾರಿ, ಅರ್ಚಕರಾದ ರಾಕೇಶ್ ಅಮೀನ್, ಬಾಲಕೃಷ್ಣ ಸುವರ್ಣ , ಮಹಿಳಾ ವಿಭಾಗ, ಯುವ ವಿಭಾಗ ಹಾಗೂ ಸರ್ವ ಸದಸ್ಯರು ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.



Related posts

ಕರ್ನಾಟಕ ಸಂಘ, ಕಲ್ಯಾಣ : ಮೇ 1ರಂದು ಮಹಾರಾಷ್ಟ್ರ ದಿನಾಚರಣೆ

Mumbai News Desk

ಪೇಜಾವರ ಮಠದಲ್ಲಿ ಹರಿಕಥಾ ವಿದ್ವಾನ್ “ವಿಶ್ವೇಶ ದಾಸ” ಕೈರ ಬೆಟ್ಟು ವಿಶ್ವನಾಥ್ ಭಟ್ ಅವರ  “ತ್ರಿದಿನ ಹರಿಕಥಾ ಸಂಕೀರ್ತನೆ”

Mumbai News Desk

ಸಾಫಲ್ಯ ಸೇವಾ ಸಂಘ, ಮುಂಬಯಿ ಇದರ ದೀಪಾವಳಿ ಸಾಹಿತ್ಯ ಸ್ಪರ್ಧೆ 2024 : ಸಣ್ಣ ಕಥೆ ಮತ್ತು ಲೇಖನಗಳ ಸ್ಪರ್ಧೆ

Mumbai News Desk

ವಸಯಿ ಕರ್ನಾಟಕ ಸಂಘ 38ನೇ ವಾರ್ಷಿಕೋತ್ಸವ ಸಂಭ್ರಮ, ನೃತ್ಯ ವೈಭವ, ಸನ್ಮಾನ

Mumbai News Desk

ಗೋರೆಗಾಂವ್ ಸಹಕಾರ್ ವಾಡಿ  ಶ್ರೀ ಸದ್ಗುರು ನಿತ್ಯಾನಂದ ಆಶ್ರಮ . ಜ. 25 ರಂದು 59ನೇ ವಾರ್ಷಿಕ ಮಹೋತ್ಸವ, ಗುರು ಮೂರ್ತಿ ಅಭಿಷೇಕ 

Mumbai News Desk

ಎ.14 : ಬಿಲ್ಲವರ ಅಸೋಸಿಯೇಶನಿನ ಭಾಯಂದರ್ ಸ್ಥಳೀಯ ಕಚೇರಿಯಲ್ಲಿ ಸಾರ್ವಜನಿಕ ಶ್ರೀ ಸತ್ಯನಾರಾಯಣ ಮಹಾಪೂಜೆ.

Mumbai News Desk