September 6, 2026
Mumbai News Kannada
ಪ್ರಕಟಣೆ

ಮೂಲ್ಕಿ: ಮಾರ್ಚ್ 10ರಂದು, ಹರಿಶ್ಚಂದ್ರ ಪಿ. ಸಾಲಿಯಾನ್ ಅವರ ‘ತುಳುನಾಡ್ಡ ತುಳು ಗಾದೆಲು’ ಕೃತಿ ಲೋಕಾರ್ಪಣೆ





ಹೊಸ ಅಂಗಣ ಪ್ರಕಟಣಾಲಯದ ವತಿಯಿಂದ ಹರಿಶ್ಚಂದ್ರ ಪಿ. ಸಾಲಿಯಾನ್ ಅವರ 22ನೇ ಕೃತಿ “ತುಳುನಾಡ್ಡ ತುಳು ಗಾದೆಲು” ಪುಸ್ತಕದ ಬಿಡುಗಡೆ ಸಮಾರಂಭವು ಇದೇ ಮಾರ್ಚ್ 10, 2026ರಂದು ಗುರುವಾರ ಸಂಜೆ 4:00 ಗಂಟೆಗೆ ಮೂಲ್ಕಿಯ ಕೆ.ಎಸ್. ರಾವ್ ನಗರದ ಬಿಲ್ಲವ ಸಮಾಜ ಸೇವಾ ಸಂಘದ ಸಭಾಂಗಣದಲ್ಲಿ ನಡೆಯಲಿದೆ. ಕರ್ನಾಟಕ ಸರ್ಕಾರದ ಮಾಜಿ ಸಚಿವರಾದ ಶ್ರೀ ಅಭಯಚಂದ್ರ ಜೈನ್ ಅವರು ಈ ಕೃತಿಯನ್ನು ಬಿಡುಗಡೆಗೊಳಿಸಲಿದ್ದು, ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ರಾಜ್ಯಾಧ್ಯಕ್ಷರಾದ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ಅವರು ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪೂವಾರಿ ಸಂಪಾದಕ ವಿಜಯ್ ಕುಮಾರ್ ಭಂಡಾರಿ ಹೆಬ್ಬಾರಬೈಲು,ಪುತ್ತೂರು, ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಮಹಾಬಲ ಎನ್. ಸನಿಲ್, ಸಾಮಾಜಿಕ ಕಾರ್ಯಕರ್ತ ಜನಾರ್ದನ ಬಂಗೇರ, ಯುಗಪುರುಷ ಸಂಪಾದಕ ಭುವನಾಭಿರಾಮ ಉಡುಪ, ಮೂಲ್ಕಿ ಬಂಟರ ಸಂಘದ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ ಹಾಗೂ ಸದಾನಂದ ಆಚಾರ್ಯ ಟಿಕಿಟರ್ ಭಾಗವಹಿಸಲಿದ್ದಾರೆ. ಹೊಸ ಅಂಗಣ ಪ್ರಕಾಶನದ ಹರಿಶ್ಚಂದ್ರ ಪಿ ಸಾಲಿಯಾನ್ ಅವರು ಕಾರ್ಯಕ್ರಮಕ್ಕೆ ಸರ್ವರಿಗೂ ಆದರದ ಸ್ವಾಗತ ಕೋರಿದ್ದಾರೆ.



Related posts

ಎ.14 : ಬಿಲ್ಲವರ ಅಸೋಸಿಯೇಶನಿನ ಭಾಯಂದರ್ ಸ್ಥಳೀಯ ಕಚೇರಿಯಲ್ಲಿ ಸಾರ್ವಜನಿಕ ಶ್ರೀ ಸತ್ಯನಾರಾಯಣ ಮಹಾಪೂಜೆ.

Mumbai News Desk

ಬ್ರಹ್ಮ ಶೀ ನಾರಾಯಣ ಗುರುಗಳ ದಂತ [ದಿವ್ಯ ದಂತ] ಪ್ರದರ್ಶನ

Mumbai News Desk

ಕರ್ನಾಟಕ ಸಮಾಜ ಸೂರತ್ : ನ. 24ರಂದು ಕರ್ನಾಟಕ ರಾಜ್ಯೋತ್ಸವ

Mumbai News Desk

ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಹೆಜಮಾಡಿ – 10.2.26ರಿಂದ 23.02.26ರ ವರೆಗೆ “ವರ್ಷಾವಧಿ ಉತ್ಸವ”

Mumbai News Desk

ಮೇ 2: ಇನ್ನಂಜೆ  ಶಶಿಧರ ಶೆಟ್ಟಿ  ದಂಪತಿಯ ನೇತೃತ್ವದಲ್ಲಿ ಕಾಪು ಶೃಷ್ಟಿ ರೆಸಿಡೆನ್ಸಿಯಲ್ಲಿ ಶ್ರೀನಿವಾಸ ಕಲ್ಯಾಣೋತ್ಸವ

Mumbai News Desk

ಮಲಾಡ್   ಶ್ರೀ ಚಾಮುಂಡೇಶ್ವರಿ ಸೇವಾ ಸಂಸ್ಥೆ ಪೆ 23 ರಂದು 12ನೇ ವಾರ್ಷಿಕ ಮಹಾಪೂಜೆ

Mumbai News Desk