33 C
Mumbai
March 11, 2026
Mumbai News Kannada
ಮುಂಬಯಿ

ಗೋರೆಗಾಂವ್ ಕರ್ನಾಟಕ ಸಂಘದ ಮಹಿಳಾ ದಿನಾಚರಣೆ, ಪ್ರಶಸ್ತಿ ಪ್ರಧಾನ ಸಮಾರಂಭ






ಮಹಿಳಾ ದಿನಾಚರಣೆಯಂದು ಪ್ರಶಸ್ತಿ ಲಭಿಸುತ್ತಿರುವುದು ಸಂತೋಷ ತಂದಿದೆ – ನ್ಯಾ. ಅಮಿತಾ ಭಾಗ್ವತ್

ಮುಂಬಯಿ : ಗೋರೆಗಾಂವ್ ಕರ್ನಾಟಕ ಸಂಘದ ಮಹಿಳಾ ವಿಭಾಗದ ವತಿಯಿಂದ ಜಾಗತಿಕ ಮಹಿಳಾ ದಿನಾಚರಣೆಯನ್ನು ಆಚರಿಸುವ ಸಂದರ್ಭದಲ್ಲಿ, ಇಂದಿನ ದಿನ ಅದೂ ಒಬ್ಬ ಆದರ್ಶ್ ಮಹಿಳೆಯ ಹೆಸರಿನಲ್ಲಿ ಪ್ರಶಸ್ತಿಯನ್ನು ಸ್ವೀಕರಿಸುವ ಅವಕಾಶ ದೊರೆತಿರುವುದು ನನಗೆ ಬಹಳ ಸಂತೋಷ ತಂದಿದೆ ಎಂದು ಸಾಹಿತಿ, ಲೇಖಕಿ ಹಾಗೂ ನ್ಯಾಯವಾದಿ ಶ್ರೀಮತಿ ಅಮಿತಾ ಭಾಗ್ವತ್ ಹೇಳಿದರು.

ಮಾರ್ಚ್ 8ರಂದು ಸಂಘದ ಅಧ್ಯಕ್ಷರಾದ ವಿಶ್ವನಾಥ ಕೆ. ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸುಗುಣಾ ಎಸ್ ಬಂಗೇರರ ಉಪಸ್ಥಿತಿಯಲ್ಲಿ ಗೋರೆಗಾಂವ್ ಪಶ್ಚಿಮದ ಕೇಶವ ಗೋರೆ ಸ್ಮಾರಕ ಟ್ರಸ್ಟ್ ಸಭಾಗೃಹದಲ್ಲಿ ಸಂಘದ ಮಹಿಳಾ ವಿಭಾಗದ ವತಿಯಿಂದ ಜರಗಿದ ಜಾಗತಿಕ ಮಹಿಳಾ ದಿನಾಚರಣೆಯ ಸಮಾರಂಭದಲ್ಲಿ ಸುಜಾತ ವಿ. ಕೋಟ್ಯಾನ್, ಶೈಲಜಾ ರವಿ ಅಂಚನ್ ಹಾಗೂ ಪ್ರೊ. ನಳಿನಿ ವಿಶ್ವನಾಥ ಕಾರ್ನಾಡ್ ರವರ ಸಂಸ್ಮರಣೆಯಲ್ಲಿ ನಡೆದ ದತ್ತಿನಿಧಿ ಕಾರ್ಯಕ್ರಮದಲ್ಲಿ ಪ್ರೊ. ನಳಿನಿ ವಿಶ್ವನಾಥ ಕಾರ್ನಾಡ್ ಸಂಸ್ಮರಣಾ ದತ್ತಿನಿಧಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು ಈ ಪ್ರಶಸ್ತಿಯೊಂದಿಗೆ ನನ್ನ ಹೊಣೆಗಾರಿಕೆ ಹೆಚ್ಚಿದೆ. ಪ್ರಶಸ್ತಿಗೆ ತಕ್ಕಂತೆ ವ್ಯಕ್ತಿತ್ವವನ್ನು ನಾವು ಬೆಳೆಸಿಕೊಳ್ಳಬೇಕು. ಈಗಲೂ ಕೂಡಾ ಸಾಹಿತ್ಯ ಕೃಷಿಯನ್ನು ಬೆಳೆಸಿಕೊಳ್ಳುವ ಡಾ. ವಿಶ್ವನಾಥ ಕಾರ್ನಾಡರು ಕೂಡಾ ನಮಗೆ ಮಾದರಿ. ಗೋರೆಗಾಂವ್ ಕರ್ನಾಟಕ ಸಂಘದಲ್ಲಿ ಎಲ್ಲಾ ಕನ್ನಡ ಮನಸ್ಸುಗಳು ಒಂದಾಗುತ್ತಿದೆ. ಮುಂಬಯಿ ಮಾತ್ರವಲ್ಲ ಕರ್ನಾಟಕದಲ್ಲಿಯೂ ಗೋರೆಗಾಂವ್ ಕರ್ನಾಟಕ ಸಂಘ ಪ್ರಸಿದ್ದವಾಗಿದೆ. ಆದುದರಿಂದ ಈ ಸಂಘದ ಮೂಲಕ ಪ್ರಶಸ್ತಿ ಪಡೆಯುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು.

ಗೋರೆಗಾಂವ್ ಕರ್ನಾಟಕ ಸಂಘದ ಅಧ್ಯಕ್ಷರಾದ ವಿಶ್ವನಾಥ ಕೆ. ಶೆಟ್ಟಿಯವರು ಮಾತನಾಡುತ್ತಾ ಎಲ್ಲಾ ಕ್ಷೇತ್ರಗಳಲ್ಲಿ ಮಹಿಳೆಯರು ಮುಂದೆ ಎನ್ನುವುದಕ್ಕೆ ನಮ್ಮ ಗೋರೆಗಾಂವ್ ಕರ್ನಾಟಕ ಸಂಘದಲ್ಲಿ ಕಾಣಬಹುದು. ನಮ್ಮ ಸಂಘ ಪ್ರತಿಯೊಂದು ಕಾರ್ಯಕ್ರಮದ ಯಶಸ್ಸಿಗೆ ಅವರೂ ಕಾರಣರಾಗಿದ್ದಾರೆ. ಇವರೊಂದಿಗೆ ಇನ್ನು ಹೆಚ್ಚು ಯುವ ಜನಾಂಗ ಸೇರಿದಲ್ಲಿ ನಮ್ಮ ಎಲ್ಲಾ ಕಾರ್ಯಕ್ರಮಗಳು ಅತೀ ಉತ್ತಮವಾಗಿ ನಡೆಯುದರಲ್ಲಿ ಸಂದೇಹವಿಲ್ಲ ಎಂದರು

ಪ್ರೊ. ನಳಿನಿ ವಿಶ್ವನಾಥ ಕಾರ್ನಾಡ್ ಸಂಸ್ಮರಣಾ ದತ್ತಿನಿಧಿ ಪ್ರಶಸ್ತಿಯ ಪ್ರಾಯೋಜಕರಾದ ಡಾ. ವಿಶ್ವನಾಥ ಕಾರ್ನಾಡ್ ಮಾತನಾಡುತ್ತಾ ಇಂದು ಮಹಿಳೆಯರ ದಿನ. ಮಹಿಳೆಯರ ಸಾಧನೆ ಎಂದೂ ಮರೆಯಬಾರದು. ಈ ಪರಿಸರದ ಖ್ಯಾತ ಸಾದಕಿ ಪಾನಿವಾಲಿ ಬಾಯಿ ಎಂದೇ ಖ್ಯಾತರಾಗಿದ್ದ ಮೃಣಾಲ್ ಗೊರೆಯವರನ್ನು ನೆನಪಿಸುತ್ತಾ ಸಾಹಿತ್ಯ ಕ್ಷೇತ್ರದಲ್ಲಿ ಅದೆಷ್ಠೋ ಮಹಿಳೆಯರಿದ್ದಾರೆ. ಸಮಾಜ ಅಭಿವೃದ್ದಿಯಲ್ಲಿ ಮಹಿಳೆಯರ ಪಾತ್ರ ಮಹತ್ವದ್ದು. ಇಂದು ಮಹಿಳೆಯರು ವಿವಿಧ ಕ್ಷೇತ್ರದಲ್ಲಿದ್ದು ಸಾಧನೆ ಮಾಡುತ್ತಿದ್ದು ಮಹಿಳೆಯರನ್ನು ಗೌರವದಿಂದ ನೋಡಬೇಕಾಗಿದೆ ಎನ್ನುತ್ತಾ ಪ್ರೊ. ನಳಿನಿ ವಿಶ್ವನಾಥ ಕಾರ್ನಾಡ್ ಸಂಸ್ಮರಣಾ ಪ್ರಸ್ಥಸ್ತಿ ಪ್ರಧಾನಿಸುವ ಗೋರೆಗಾಂವ್ ಕರ್ನಾಟಕ ಸಂಘಕ್ಕೆ ಆದರದಿಂದ ಅಭಿನಂದಿಸಿದರು.


ಮುಖ್ಯ ಅತಿಥಿಯಾಗಿ ಆಗಮಿಸಿದ ಜಯಂತಿ ರಮೇಶ್ ಶೆಟ್ಟಿ ಪಯ್ಯಾರ್ ಅವರು ಕಾರ್ಯಕ್ರಮಕ್ಕೆ ಶುಭ ಕೋರಿದರು. ಇವರನ್ನು ಮಹಿಳಾ ವಿಭಾಗದ ಮಾಜಿ ಕಾರ್ಯಾಧ್ಯಕ್ಷ ಇಂದಿರಾ ಮೈಲಿಯವರು ಪರಿಚಯಿಸಿದರು
ಸುಮಿತ್ರ ಗುಜರನ್ ಅವರು ಮಹಿಳಾ ದಿನಾಚರಣೆಯ ಮಾತನಾಡುತ್ತಾ ಮಹಿಳೆಯರಿಗೆ ಪರಿವಾರದ ಮುಖ್ಯ ಜವಾಬ್ಧಾರಿಯಿದೆ. ಆದುನಿಕ ಯುಗದಲ್ಲಿ ಕೆಲವು ಯುವ ಜನಾಂಗವು ತಮ್ಮ ಸಂಸ್ಕಾರವನ್ನು ಉಳಿಸುವಲ್ಲಿ ವಿಫಲರಾದಲ್ಲಿ ಅದು ಕೆಲವು ಘಟನೆಗಳಿಗೆ ಪೂರಕವಾಗಲು ಸಾಧ್ಯ. ಮಹಿಳೆಯರು ಧೈರ್ಯಶಾಲಿಯಾಗಿದ್ದು ವಿವಿಧ ಕ್ಷೇತ್ರದಲ್ಲಿ ಇಂದು ಯಶಸ್ವಿಯಾಗಿದ್ದು ಪುರುಷರಂತೆ ಮಹಿಳೆಯರು ಉನ್ನತ ಮಟ್ಟದ ಸಾಧನೆ ಮಾಡುತ್ತಿರುವುದು ಅಭಿನಂದನೀಯ ಎಂದರು. ಇವರನ್ನು ಶೈಲಜಾ ನಾಯಕ್ ಅವರು ಪರಿಚಯಿಸಿದರು.
ಡಾ. ವಿಶ್ವನಾಥ ಕಾರ್ನಾಡ್ ಅವರ ಸೊಸೆ ನಿಲಿಮಾ ರೋಹಿತ್ ಕಾರ್ನಾಡ್ ಅವರು ಮಾತನಾಡುತ್ತಾ ಪ್ರೊ. ನಳಿನಿ ವಿಶ್ವನಾಥ ಕಾರ್ನಾಡ್ ಅವರ ಹೆಸರಲ್ಲಿ ಪ್ರತಿಭಾವಂತರಿಗೆ ಪ್ರಶಸ್ತಿ ನೀಡಿ ಗೌರವಿಸುತ್ತಿರುವುದು ಅಭಿನಂದನೀಯ. ಮಹಿಳಾ ದಿನಾಚರಣೆಯ ಬಗ್ಗೆ ಮಾತನಾಡಿದ ಅವರು. ಮಹಿಳೆಯರಿಗೆ ಸಮಾನ ಹಕ್ಕು ನೀಡಿದರೆ ಮಾತ್ರ ಸಮಾಜಾಭಿವೃದ್ದಿ ಸಾದ್ಯ ಎಂದರು.
ದಿ. ಸುಜಾತ ವಿ. ಕೋಟ್ಯಾನ್, ದಿ. ಶೈಲಜಾ ರವಿ ಅಂಚನ್ ಅವರ ಬಗ್ಗೆ ಸುಜಾತಾ ಆಚಾರ್ಯ ರವರು ಮಾತನಾಡಿದರು. ದಿ. ಪ್ರೊ. ನಳಿನಿ ವಿಶ್ವನಾಥ ಕಾರ್ನಾಡ್ ಬಗ್ಗೆ ಮಹಿಳಾ ವಿಭಾಗದ ಉಪ ಕಾರ್ಯಾದ್ಯಕ್ಷೆ ಚಂದ್ರಾವತಿ ಬಿ . ಶೆಟ್ಟಿ ಮಾತನಾಡಿದರು.
ನ್ಯಾ. ಅಮಿತಾ ಭಾಗ್ವತ್ ಅವರನ್ನು ಮಹಿಳಾ ವಿಭಾಗದ ಸಂಚಾಲಕಿ ಮೇರಿ ಲಿಲ್ಲಿ ಡಿ. ಸೋಜಾ ಪರಿಚಯಿಸಿದರು. ಮಹಿಳಾ ವಿಭಾಗದ ಮಾಜಿ ಕಾರ್ಯಾದ್ಯಕ್ಷೆ ವಸಂತಿ ಕೋಟೆಕ್ಕಾರ್ ಪ್ರಶಸ್ತಿ ಪತ್ರವನ್ನು ವಾಚಿಸಿದರು. ,
ಸಂದ್ಯಾ ಬಸರೂರ್ ಅವರು ಡಾ. ವಿಶ್ವನಾಥ ಕಾರ್ನಾಡ್ ರನ್ನು ಪರಿಚಯಿಸಿದರು.
ಪ್ರಾರಂಭದಲ್ಲಿ ವಸಂತಿ ಕೋಟೆಕ್ಕಾರ್, ಚಂದ್ರಾವತಿ ಬಿ ಶೆಟ್ಟಿ ಮತ್ತು ಸುಜಾತ ಆಚಾರ್ಯ ಪ್ರಾರ್ಥನೆ ಮಾಡಿದರು.
ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ಶಾಂತ ಎನ್ ಶೆಟ್ಟಿ ಅವರು ಸ್ವಾಗತಿಸಿದರು. ಪಾರುಪತ್ಯಗಾರರಾದ ನಾರಾಯಣ ಆರ್. ಮೆಂಡನ್, ದೇವಲ್ಕುಂದ ಭಾಸ್ಕರ ಶೆಟ್ಟಿ, ಮಾಜಿ ಪಾರುಪತ್ಯಗಾರರಾದ ರಮೇಶ್ ಶೆಟ್ಟಿ ಪಯ್ಯಾರ್, ನಿಕಟ ಪೂರ್ವ ಅಧ್ಯಕ್ಷೆ ವಿಶಾಲಾಕ್ಷಿ ಊಳೂವಾರ, ಸಮಿತಿಯ ಸದಸ್ಯರಾದ ಎಂ. ಆನಂದ ಶೆಟ್ಟಿ, ಸುರೇಶ್ ಪೂಜಾರಿ, ಪೇಟೆಮನೆ ಪ್ರಕಾಶ್ ಶೆಟ್ಟಿ, ಸುಧಾಕರ ಎಲ್ಲೂರು, ವಿಶೇಷ ಆಮಂತ್ರಿತರಾದ ಪದ್ಮಜಾ ಮಣ್ನೂರು, ಸುಚಲತ ಪೂಜಾರಿ, ಹರಿಶ್ಚಂದ್ರ ಆಚಾರ್ಯ, ವನಿತಾ ಪಾಲನ್, ಯುವ ವಿಭಾಗದ ಕಾರ್ಯಾಧ್ಯಕ್ಷೆ ಶಿವಾನಿ ಎಚ್. ಆಚಾರ್ಯ, ಗ್ರಂಥಾಯನದ ನಿರ್ದೇಶಕಿ ಶೈಲಾ ಎಸ್ ನಾಯಕ್, ರಂಗಸ್ಥಳದ ನಿರ್ದೇಶಕಿ ಲೀಲಾ ಗಣೇಶ್ ಕಾರ್ಕಳ ಉಪಸಮಿತಿಗಳ ಇತರ ಪದಾಧಿಕಾರಿಗಳು, ಸಂಚಾಲಕರು ಮತ್ತು ಸದಸ್ಯರುಗಳು ಉಪಸ್ಥಿತರಿದ್ದರು.
ಸೀಮಾ ಕುಲಕರ್ಣಿ ಮತ್ತು ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸುಗುಣಾ ಎಸ್ ಬಂಗೇರ ಅವರು ಕಾರ್ಯಕ್ರಮವನ್ನು ನಿರ್ವಹಿಸಿದ್ದು ಮಹಿಳಾ ಉಪಕಾರ್ಯಧ್ಯಕ್ಷ ಚಂದ್ರಾವತಿ ಶೆಟ್ಟಿ ಅವರು ವಂದನಾರ್ಪಣೆ ಮಾಡಿದರು.

ವರದಿ : ಈಶ್ವರ ಎಂ. ಐಲ್



Related posts

ಲಾಲ್ ಬಾಗ್ ಚಾ ರಾಜ ಪಂಡಲ್ ನಲ್ಲಿ ವಿಐಪಿ ದರ್ಶನ ಪಕ್ಷಪಾತವನ್ನು ಖಂಡಿಸಿ, ನೋಟಿಸ್ ಜಾರಿ ಮಾಡಿದ ಮಾನವ ಹಕ್ಕುಗಳ ಆಯೋಗ

Mumbai News Desk

ಬಿಲ್ಲವ ಸೇವಾ ಸಂಘ ಕುಂದಾಪುರ- ಮುಂಬಯಿ: ಸಂಘದ ಗೌ.ಅಧ್ಯಕ್ಷ ಸುರೇಶ್ ಎಸ್ ಪೂಜಾರಿ ಪಡುಕೋಣೆಯವರಿಗೆ ನುಡಿ ನಮನ

Mumbai News Desk

ಬೊರಿವಲಿ: ಜಗದೀಶ್ವರಿ ಸನ್ನಿಧಿಯಲ್ಲಿ ಬ್ರಹ್ಮಕಲಶೋತ್ಸವ ಸಂಭ್ರಮ; ಕುಣಿತ ಭಜನೆಯ ಭಕ್ತಿಪರವಶತೆ

Mumbai News Desk

ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ಗೆ ಚುನಾವಣಾ ದಿನಾಂಕ ಪ್ರಕಟ : ಜನವರಿ 15ರಂದು ಮತದಾನ, ಜ. 16ಕ್ಕೆ ಫಲಿತಾಂಶ

Mumbai News Desk

ಭಾರತ್ ಬ್ಯಾಂಕ್ ಇದರ ಭಾಯಂದರ್ ಶಾಖಾ ಪ್ರಭಂದಕರಾದ ಪ್ರವೀಣ್ ಎಂ. ಬಂಗೇರ ಸೇವಾ ನಿವೃತಿ

Mumbai News Desk

ಶ್ರೀ ರಾಧಾಕೃಷ್ಣ ಶನೀಶ್ವರ ಮಂದಿರ ಡೊಂಬಿವಲಿ, ಸಂಚಾಲಕರು ಶ್ರೀ ರಾಧಾಕೃಷ್ಣ ಭಜನಾ ಮಂಡಳಿಯ ಅಧ್ಯಕ್ಷರಾಗಿ ಸೋಮನಾಥ ಪೂಜಾರಿ ಪುನರಾಯ್ಕೆ

Mumbai News Desk