August 4, 2026
Mumbai News Kannada
ಸುದ್ದಿ

ಅಯೋಧ್ಯೆಯ ಶ್ರೀ ರಾಮ ಮಂದಿರದಲ್ಲಿ ಪೂಜ್ಯ ಶ್ರೀ ಬಾಲಯೋಗಿ ಸದಾನಂದ ಸ್ವಾಮಿ ತುಂಗಾರೇಶ್ವರ ಅವರ ನೇತೃತ್ವವದಲ್ಲಿ ದೀಪೋತ್ಸವ : ಮುಂಬೈಯ ನವೀನ್ ಶೆಟ್ಟಿ ತೋನ್ಸೆಗೆ ಗೌರವ





ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಪವಿತ್ರ ಅಂಗಳದಲ್ಲಿ ಇತ್ತೀಚೆಗೆ ಭಕ್ತಿ ಮತ್ತು ಆಧ್ಯಾತ್ಮದ ಅಲೆ ಎದ್ದಿತು. ಗಣೇಶಪುರಿಯ ಪರಮ ಪೂಜ್ಯ ಶ್ರೀ ಬಾಲಯೋಗಿ ಸದಾನಂದ ಸ್ವಾಮಿ ತುಂಗಾರೇಶ್ವರ ಅವರ ದಿವ್ಯ ನೇತೃತ್ವದಲ್ಲಿ ನಡೆದ ಪಾರಾಯಣ ಮತ್ತು ದೀಪೋತ್ಸವ ಕಾರ್ಯಕ್ರಮವು ನೆರೆದಿದ್ದ ಸಾವಿರಾರು ಭಕ್ತರ ಕಣ್ಮನ ಸೆಳೆಯಿತು. ಮಂದಿರದ ಪ್ರಾಂಗಣವು ಮಂತ್ರಘೋಷಗಳಿಂದ ಮೊಳಗುತ್ತಿದ್ದರೆ, ಸಾಲು ಸಾಲಾಗಿ ಬೆಳಗಿದ ಹಣತೆಗಳು ಅಯೋಧ್ಯೆಯ ಧರ್ಮದೀಪ್ತಿಯನ್ನು ಜಗತ್ತಿಗೆ ಸಾರುವಂತಿದ್ದವು.
ಈ ಶುಭ ಸಂದರ್ಭದಲ್ಲಿ, ಧಾರ್ಮಿಕ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಮುಲುಂಡು ನಿವಾಸಿ, ಖ್ಯಾತ ಉದ್ಯಮಿ ನವೀನ್ ಶೆಟ್ಟಿ ತೋನ್ಸೆ ಅವರ ಸೇವೆಯನ್ನು ಗುರುತಿಸಿ ಗೌರವಿಸಲಾಯಿತು.

ಶ್ರೀ ಬಾಲಯೋಗಿ ಸದಾನಂದ ಸ್ವಾಮೀಜಿಯವರು ನವೀನ್ ಶೆಟ್ಟಿ ಅವರನ್ನು ಸನ್ಮಾನಿಸಿ ಆಶೀರ್ವದಿಸಿದ್ದು ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿತ್ತು. ಈ ಸಂಭ್ರಮದ ಕ್ಷಣಕ್ಕೆ ಸಾಕ್ಷಿಯಾಗಿ ರಾಮ ಮಂದಿರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿಗಳಾದ ಚಂಪತ್ ರಾಯ್ ಜಿ ಅವರು ಉಪಸ್ಥಿತರಿದ್ದು, ಕಾರ್ಯಕ್ರಮದ ಶೋಭೆಯನ್ನು ಹೆಚ್ಚಿಸಿದರು. ಭಕ್ತರ ಸಮ್ಮುಖದಲ್ಲಿ ನಡೆದ ಈ ದೀಪೋತ್ಸವವು ಕೇವಲ ಒಂದು ಧಾರ್ಮಿಕ ವಿಧಿಯಾಗಿರದೆ, ಭಕ್ತಿ ಮತ್ತು ಸಮರ್ಪಣಾ ಭಾವದ ಮಹಾಸಂಗಮವಾಗಿ ಮೂಡಿಬಂತು.



Related posts

ಬಿಲ್ಲವರ ಎಸೋಸಿಯೇಶನ ನ ಮಾಜಿ ಉಪಾಧ್ಯಕ್ಷ ಸಿ. ಟಿ. ಸಾಲ್ಯಾನ್ ನಿಧನ

Mumbai News Desk

ಸಿ ಎ ಪರೀಕ್ಷೆ ಫಲಿತಾಂಶ 2024 ಸ್ನೇಹ ಶಿವಪ್ಪ ಮೊಗವೀರ ಉತ್ತೀರ್ಣ

Mumbai News Desk

ಜು. 13 :ಮೊಗವೀರ ವ್ಯವಸ್ಥಾಪಕ ಮಂಡಳಿಯ ಮಾಜಿ ಅಧ್ಯಕ್ಷ ಹೊಸಬೆಟ್ಟು ಕೆ. ಆರ್. ಪುತ್ರನ್ ಅವರಿಗೆ ಮೊಗವೀರ ವ್ಯವಸ್ಥಾಪಕ ಮಂಡಳಿಯಿಂದ ಭಾವಪೂರ್ಣ ಶ್ರದ್ಧಾಂಜಲಿ ಸಭೆ

Mumbai News Desk

ಯುಎಇ ಬಂಟ್ಸ್‌ನಿಂದ ಹನ್ನೊಂದನೇ ವರ್ಷದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ

Mumbai News Desk

ಪಕ್ಷಿಕೆರೆ : ಪತ್ನಿ ಮಗುವನ್ನು ಹತ್ಯೆಗೈದು ಪತಿ ರೈಲಿಗೆ ತಲೆಕಕೊಟ್ಟು ಅತ್ಮಹತ್ಯೆ

Mumbai News Desk

ಉಭಯ ಜಿಲ್ಲೆಗಳ ಹೆದ್ದಾರಿ ಸಮಸ್ಯೆಯ ಪರಿಹಾರಕ್ಕೆ ಕೇಂದ್ರ ಸಚಿವರನ್ನು ಭೇಟಿಯಾದ ಉಡುಪಿ/ ಮಂಗಳೂರು ಸಂಸದರು

Mumbai News Desk