September 6, 2026
Mumbai News Kannada
ಮುಂಬಯಿ

ತೋನ್ಸೆ ಶ್ರೀ ಬ್ರಹ್ಮ ಬೈದರ್ಕಳ ಪಂಚ ಧೂಮಾವತಿ ಗರಡಿ ಸೇವಾ ಟ್ರಷ್ಟ್, ಮುಂಬಯಿ; ಎ. 5 ರಂದು ಸಮಾಲೋಚನಾ ಸಭೆ ಹಾಗೂ ಮನವಿ ಪತ್ರ ಬಿಡುಗಡೆ





ಮುಂಬಯಿ : ಅನಾದಿಕಾಲದಿಂದ ಭಕ್ತಿ ಶ್ರದ್ಧೆಯ ಬೀಡಾದ ಜನಪದ ಪ್ರತೀತಿಯ 66 ಪ್ರಾಚೀನ ಗರಡಿಗಳಲ್ಲಿ ತೋನ್ಸೆ ಶ್ರೀ ಬ್ರಹ್ಮ ಬೈದರ್ಕಳ ಪಂಚ ಧೂಮಾವತಿ ಗರಡಿಯು ಒಂದು. ಭಕ್ತರ ರಕ್ಷಣೆಗಾಗಿ ದುಷ್ಟರ ಸಂಹಾರಕ್ಕಾಗಿ ಅವತರಿಸಿದ ತುಳುನಾಡ ವೀರ ಪುರುಷರಾದ ಕೋಟಿ ಚೆನ್ನಯರು ಮತ್ತು ಅವರ ಆರಾಧ್ಯ ದೈವರಾದ ಶ್ರೀ ಬ್ರಹ್ಮ ಬೈದರನ್ನು ನಂಬಿ ಪೂಜಿಸುತ್ತಿದ್ದು, ಊರ ಪರವೂರ ಜನರ ಇಷ್ಟಾರ್ಥವನ್ನು ಪೂರೈಸುತ್ತಾ, ಪ್ರಕೃತಿ ಮಾತೆಯ ಸುಂದರ ಮಡಿಲಲ್ಲಿ ಹಸಿರು ಬಯಲಿನ ಮಧ್ಯದಲ್ಲಿ, ಸುವರ್ಣ ನದಿಯ ತೀರದಲ್ಲಿ ನೆಲೆಸಿರುವ ಆಸ್ತಿಕ ಶ್ರದ್ದಾ ಕೇಂದ್ರ ತೋನ್ಸೆ ಗರಡಿ. ಇದೀಗ ಹಲವು ಕಾಲದಿಂದ ಭೌತಿಕ ಸವೆತ, ಪ್ರಕೃತಿಯ ವಿಕೋಪಕ್ಕೆ ಒಳಗೊಂಡು ಶಿಥಿಲಗೊಂಡಿರುವ ಈ ಗರಡಿಯ ಪುನರ್ ನಿರ್ಮಾಣ ಅನಿವಾರ್ಯವಾಗಿದೆ. ಪುನರ್ ನಿರ್ಮಾಣಕ್ಕೆ ಅಂದಾಜು ವೆಚ್ಚ ರೂ. 7.5 ಕೋಟಿ ಎಂದು ಅಂದಾಜಿಸಲಾಗಿದೆ.

ಜನ್ಮಭೂಮಿಯನ್ನು ತೊರೆದು ಮರಾಠಿ ಮಣ್ಣಿನ ಕರ್ಮಭೂಮಿಯಲ್ಲಿ ಮಾತ್ರವಲ್ಲದೆ ಜಗತ್ತಿನ ವಿವಿದೆಡೆ ನೆಲೆಸಿ, ತಾನ್ನಾಡಿನ ಪ್ರತಿಯೊಂದು ಶುಭ ಕಾರ್ಯದಲ್ಲಿ ಸ್ಪಂದಿಸಿ, ಕೈಜೋಡಿಸಿ ಸಹಕರಿಸುತ್ತಿರುವ ದಾನಿಗಳ ಸಹಕಾರ ತುಂಬಾ ಪ್ರಾಮುಖ್ಯ. ಶ್ರೀ ಬ್ರಹ್ಮ ದೈವರ್ಕಳ ಪಂಚಧೂಮಾವತಿ ಗರೋಡಿಯ ಪುನರ್ ನಿರ್ಮಾಣದ ಶುಭ ಪರ್ವಕಾಲವು ಇದೀಗ ಒದಗಿ ಬಂದಿರುವುದು ನಮ್ಮೆಲ್ಲರ ಪೂರ್ವ ಜನ್ಮದ ಪುಣ್ಯದ ಫಲವೇ ಸರಿ. ಇದು ನಮಗೆ ಬಂದ ಸುವರ್ಣಾವಕಾಶವೆಂದು ತಿಳಿದು ತಾವೆಲ್ಲರೂ ಈ ಪುಣ್ಯ ಸೇವಾ ಕೈಂಕರ್ಯದಲ್ಲಿ ತನು-ಮನ-ಧನ ಸಹಾಯ ನೀಡಿ ಸಹಕರಿಸಬೇಕಾಗಿ ಕೃತಜ್ಞತಾಪೂರ್ವಕವಾಗಿ ವಿನಂತಿಸುತ್ತಿದ್ದೇವೆ.

ಕಳೆದ ಸುಮಾರು ಸಮಯದಿಂದ ಈ ಬಗ್ಗೆ ಚಿಂತನೆ, ಬೈದೆರ್ಲು, ಪಂಚಧೂಮಾವತಿ ದೇವರುಗಳ ಆಶೀರ್ವಾದ ಅಭಯವನ್ನು ಹಿರಿಯರು, ಗುರಿಕಾರರು, ಜೀರ್ಣೋದ್ಧಾರ ಸಮಿತಿ ಮತ್ತು ಇತರ ವಿಭಾಗದ ಸರ್ವರೂ, ಒಮ್ಮತದಿಂದ ಈ ಪುಣ್ಯದ ಕಾರ್ಯವನ್ನು ಮುಂದುವರಿಸಲು ನಿರ್ಧರಿಸಲಾಗಿದೆ. ಈಗಾಗಲೇ ತಾ. 15.03.2026ರಂದು ಊರ ಹಾಗೂ ಪರವೂರ ಸದ್ಭಕ್ತರು ಸೇರಿಕೊಂಡು ಕರಸೇವೆ ಪ್ರಾರಂಭಗೊಂಡಿದೆ.

ನಮ್ಮೊಂದಿಗೆ ತೋನ್ಸೆಯ ಉದ್ಯಮಿಗಳಾಗಿರುವ ತೋನ್ಸೆ ಎಂ. ಆನಂದ ಶೆಟ್ಟಿ, ತೋನ್ಸೆ ಜಯಕೃಷ್ಣ ಎ. ಶೆಟ್ಟಿ, ತೋನ್ಸೆ ರವಿನಾಥ ಶೆಟ್ಟಿ, ಬಿಲ್ಲವರ ಎಸೋಸಿಯೇಶನ್ ಮುಂಬಯಿ ಅಧ್ಯಕ್ಷ ಹರೀಶ್ ಜಿ. ಅಮೀನ್, ಭಾರತ್ ಬ್ಯಾಂಕ್‌ನ ಕಾರ್ಯಾಧ್ಯಕ್ಷ ಸೂರ್ಯಕಾಂತ ಜಯ ಸುವರ್ಣ, ಹಿರಿಯ ಸಮಾಜ ಸೇವಕರು ಎಲ್ ವಿ ಅಮೀನ್, ಎನ್. ಟಿ. ಪೂಜಾರಿ, ಧರ್ಮಪಾಲ ದೇವಾಡಿಗ, ಸಿಎ ಐ ಆರ್ ಶೆಟ್ಟಿ, ವಿಲ್ಸನ್ ಫರ್ನಾಂಡಿಸ್, ಹೆರ್ಗ ಜಾಬು ಪೂಜಾರಿ, ಧರ್ಮಪ್ರಕಾಶ್ ಜಿ. ಕೃಷ್ಣ ಶೆಟ್ಟಿ, ರಘುರಾಮ ಶೆಟ್ಟಿ, ಡಾ. ರಾಜಶೇಖರ್ ಕೋಟ್ಯಾನ್, ಪುರುಷೋತ್ತಮ ಕೋಟ್ಯಾನ್, ಸುರೇಶ್ ಕಾಂಚನ್, ಭಾಸ್ಕರ್ ಸಾಲ್ಯಾನ್, ಗಂಗಾಧರ ಪೂಜಾರಿ, ರಾಜಗೋಪಾಲ ಶೆಟ್ಟಿ, ಬಿ ರಮಾನಂದ ರಾವ್, ತೋನ್ಸೆ ನವೀನ್ ಶೆಟ್ಟಿ, ತೋನ್ಸೆ ವಿಜಯಕುಮಾರ್ ಶೆಟ್ಟಿ, ಪ್ರಶಾಂತ್ ಸಿ. ಪೂಜಾರಿ, ಸಿಎ ಅಶ್ವಿನ್ ಎಸ್ ಸುವರ್ಣ, ಸದಾನಂದ ಅಂಚನ್, ಲಕ್ಷ್ಮಣ್ ಕಾಂಚನ್, ಸದಾನಂದ ಎನ್ ಆಚಾರ್ಯ, ಕಿರಣ್ ವಿ. ಪೂಜಾರಿ, ರವಿ ಎಸ್ ಪೂಜಾರಿ, ದಿನೇಶ್ ವಿ. ಕೋಟ್ಯಾನ್, ಬಿ. ರಾಮಪ್ರಸಾದ್ ರಾವ್, ರಮೇಶ್ ಸುವರ್ಣ, ಸಚಿನ್ ಪೂಜಾರಿ, ರವಿನಾಥ್ ಅಮೀನ್, ಗಿಲ್ಬರ್ಟ್ ಡಿಸೋಜಾ, ಅಶೋಕ್ ಶೆಟ್ಟಿ, ಮನೋಹರ ತೋನ್ಸೆ, ಪಿ. ಧನಂಜಯ ಶೆಟ್ಟಿ ಇವರೆಲ್ಲರೂ ಸಹಕರಿಸಿದ್ದಾರೆ. ನಮ್ಮ ಗರೋಡಿಗೆ ದಿ. ಜಯ ಸಿ. ಸುವರ್ಣ, ದಿ. ತೋನ್ಸೆ ಶಂಕರ ಸುವರ್ಣ, ದಿ. ಗೋಪಾಲ್ ಪಾಲನ್, ದಿ. ಪಾಂಗಾಳ ಗುಡ್ಡೆ ಗರಡಿ ಭಾಸ್ಕರ್ ಆಮೀನ್, ದಿ. ಲಾಜರ್ ಟಿ. ಮುತ್ತಪ್ಪ ಕೋಟ್ಯಾನ್ ಹೀಗೆ ಅನೇಕರ ಮಾರ್ಗದರ್ಶನ ದೊರಕಿದೆ.

ಮುಂಬಯಿಯ ಗರೋಡಿ ಟ್ರಷ್ಟ್ ಗೆ ಅನೇಕರು ಸದಾ ತುಂಬು ಹೃದಯದಿಂದ ಸಹಕರಿಸಿದ್ದೀರಿ. ಮುಂಬಯಿಯ ಗರೋಡಿ ಟ್ರಷ್ಟ್ ದಶಮಾನೋತ್ಸವ, ಹದಿನಾಲ್ಕನೇ ವಾರ್ಷಿಕೋತ್ಸವ ಸಂದರ್ಭದಲ್ಲಿ “ತೋನ್ಸೆ ಸ್ಪೂರ್ಥಿ” “ತೋನ್ಸೆ ಪ್ರಯ್ಡ್” “ತೋನ್ಸೆ ಅಚೀವರ್” ಮತ್ತು “ಯಂಗ್ ಟ್ಯಾಲೆಂಟ್” ಗೌರವದೊಂದಿಗೆ ಖ್ಯಾತ ಅತಿಥಿಗಳ ಉಪಸ್ಥಿತಿಯಲ್ಲಿ ಯಶಸ್ವೀ ಕಾರ್ಯಕ್ರಮ ನಡೆಯಲು ಎಲ್ಲರೂ ಸಹಕರಿಸಿದ್ದು ತುಳು ನಾಡಿನ ಪ್ರಖ್ಯಾತ ರಾಜ್ಯೋತ್ಸವ ಪುರಸ್ಕೃತ ಪಾತ್ರಿ ಕೋಟಿ ಪೂಜಾರಿ ಮತ್ತು ಹಿರಿಯ ಪಾತ್ರಿ ಶ್ಯಾಮರಾಯ ಪೂಜಾರಿಯವರನ್ನು ಎಲ್ಲರ ಉಪಸ್ಥಿತಿಯಲ್ಲಿ ಗೌರವಿಸಲಾಗಿದೆ. ಇದೀಗ ತುಳು ನಾಡಿನ ವೀರ ಪುರುಷರಾದ “ನಂಬುನಕ್ಲೆಗ್ ಇಂಬು ಕೊರ್ಪ, ಸತ್ಯ ಗೆಂದಾದ್ ಕೊರ್ಪ” ಎಂಬ ನುಡಿಯಿಂದ ಸದಾ ಹರಸಲಿ ಎಂದು ತಾ. 01.04.2026ರಂದು ಬುಧವಾರ ಸಮಯ 9.50ಕ್ಕೆ ಸರಿಯಾಗಿ ಗರೋಡಿಯ ಸಂಪೂರ್ಣ ಪುನ‌ರ್ ನಿರ್ಮಾಣದ ಪ್ರಯುಕ್ತ ಶಿಲಾನ್ಯಾಸ ಮತ್ತು ಮುಷ್ಟಿ ಕಾಣಿಕೆಯನ್ನು ನಿರ್ಧರಿಸಲಾಗಿದೆ. ಈ ಪ್ರಯುಕ್ತ ಮುಂಬಯಿ ಟ್ರಸ್ಟ್‌ನ ನಿರ್ಧಾರದಂತೆ ತಾ. 05.04.2026ರಂದು ಆದಿತ್ಯವಾರ ಸಂಜೆ 4.30ಕ್ಕೆ ಸಾಂತಾಕ್ರೂಜ್ ಪೂರ್ವದ ಬಿಲ್ಲವ ಭವನದಲ್ಲಿ ಸಮಾಲೋಚನಾ ಸಭೆ ಹಾಗೂ ಮನವಿ ಪತ್ರ ಬಿಡುಗಡೆಯನ್ನು ಮಾಡಲಿದ್ದೇವೆ. ತೋನ್ಸೆ ಪರಿಸರದ ಉದ್ಯಮಿಗಳು, ಮುಂಬಯಿಯ ನಮ್ಮ ಅಭಿಮಾನಿಗಳು, ಸದಸ್ಯರುಗಳು ನಮ್ಮೊಂದಿಗೆ ಸಹಕರಿಸಬೇಕಾಗಿ ತೋನ್ಸೆ ಶ್ರೀ ಬ್ರಹ್ಮ ಬೈದರ್ಕಳ ಪಂಚ ಧೂಮಾವತಿ ಗರಡಿ ಸೇವಾ ಟ್ರಷ್ಟ್, ಮುಂಬಯಿಯ ಪರವಾಗಿ ಅದ್ಯಕ್ಷರಾದ ನಿತ್ಯಾನಂದ ಡಿ. ಕೋಟ್ಯಾನ್, ಉಪಾಧ್ಯಕ್ಷರುಗಳಾದ , ಡಿ. ಬಿ. ಅಮೀನ್, ಸಿ. ಕೆ. ಪೂಜಾರಿ, ವಿಶ್ವನಾತ್ ತೋನ್ಸೆ, ಗೌರವ ಕಾರ್ಯದರ್ಶಿ ಸಂಜೀವ ಪೂಜಾರಿ ತೋನ್ಸೆ, ಗೌರವ ಕೋಶಾಧಿಕಾರಿ ರವಿರಾಜ್ ಕಲ್ಯಾಣ್ ಪುರ, ಜೊತೆ ಕಾರ್ಯದರ್ಶಿ ಕರುಣಾಕರ್ ಬಿ. ಪೂಜಾರಿ, ಜೊತೆ ಕೋಶಾಧಿಕಾರಿ ವಿಜಯ್ ಸನಿಲ್ ಸಮಿತಿಯ ಸದಸ್ಯರುಗಳು, ಸಲಹೆಗಾರರು ಮತ್ತು ಮಹಿಳಾ ವಿಭಾಗದ ಎಲ್ಲಾ ಸದಸ್ಯರು ವಿನಂತಿಸಿದ್ದಾರೆ.



Related posts

ಅ  29   ಗೋರೆಗಾಂವ್ ಪಶ್ಚಿಮದಲ್ಲಿ ಕಡಬ ಸಂಸ್ಕರಣಾ ಸಮಿತಿಯ ವಾರ್ಷಿಕೋತ್ಸವ –

Mumbai News Desk

ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ (ರಿ.) ಪದ್ಮವಿಭೂಷಣ ಜಾರ್ಜ್ ಫರ್ನಾಂಡಿಸ್ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿ-2025 ಪ್ರದಾನ ಸಮಾರಂಭ,

Mumbai News Desk

‘ಶ್ರೀ ರಾಮ ಕಥಾ ಹೃದಯಂ’ ಸರಣಿ ತಾಳಮದ್ದಳೆಯ ಮೂರನೆಯ ಪ್ರಸ್ತುತಿ

Mumbai News Desk

ಮೊಗವೀರ ಮಹಾಜನ ಸೇವಾ ಸಂಘ (ಬಗ್ವಾಡಿ ಹೋಬಳಿ) ಮುಂಬಯಿ: ವೈದ್ಯಕೀಯ ನೆರವು ಹಾಗೂ ವಿದ್ಯಾರ್ಥಿವೇತನ ವಿತರಣೆ ಸಮಾರಂಭ

Mumbai News Desk

ಶ್ರೀ ರಾಜನ್ ದೈವ ಶ್ರೀ ಧೂಮವತಿ ದೈವಸ್ಥಾನ ಬಳ್ಕುಂಜೆ : ಅಭಿವೃದ್ಧಿ ಸಮಿತಿ ಮುಂಬಯಿ 15 ನೇ ವಾರ್ಷಿಕ ಮಹಾಸಭೆ.

Mumbai News Desk

2023-24ರ ಎಸ್ ಎಸ್ ಸಿ ಪರೀಕ್ಷೆಯಲ್ಲಿ    ಯುಗ್ ಸಂತೋಷ್ ಶೆಟ್ಟಿ  ಗೆ ಶೇ 82. 60 ಅಂಕ.

Mumbai News Desk