30.5 C
Mumbai
June 8, 2026
Mumbai News Kannada
ಪ್ರಕಟಣೆ

ಮುಂಬೈ ವಿಶ್ವವಿದ್ಯಾನಿಲಯದಲ್ಲಿ ಎ. 4: ಮಾಜಿ ಮುಖ್ಯಮಂತ್ರಿ ಡಾ. ವೀರಪ್ಪ ಮೊಯ್ಲಿ ಅವರಿಂದ ‘ಧೀಮಂತ ಧರ್ಮಪಾಲ’ ಆತ್ಮಕಥನ ಕೃತಿ ಲೋಕಾರ್ಪಣೆ





ಮುಂಬಯಿ: ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗ ಮತ್ತು ದೇವಾಡಿಗ ಸಂಘ ಮುಂಬಯಿ ಇವರ ಜಂಟಿ ಆಯೋಜನೆಯಲ್ಲಿ, ಲೇಖಕಿ ಸುರೇಖಾ ಹೇಮನಾಥ ದೇವಾಡಿಗ ಅವರು ಬರೆದ, ದೇವಾಡಿಗ ಸಂಘ ಮುಂಬಯಿಯ ಮಾಜಿ ಅಧ್ಯಕ್ಷ ಹಾಗೂ ದೇವಾಡಿಗ ಮಹಾಮಂಡಲದ ಅಧ್ಯಕ್ಷ ಧರ್ಮಪಾಲ ದೇವಾಡಿಗ ಅವರ ‘ಧೀಮಂತ ಧರ್ಮಪಾಲ’ ಆತ್ಮಕಥನ ಗ್ರಂಥ ಲೋಕಾರ್ಪಣೆ ಕಾರ್ಯಕ್ರಮವು ಎಪ್ರಿಲ್ 4ರಂದು ಅಪರಾಹ್ನ 3.30ಕ್ಕೆ ಸಾಂತಾಕ್ರೂಜ್ ಪೂರ್ವದ ಕಲಿನಾದಲ್ಲಿರುವ ಮುಂಬೈ ವಿಶ್ವವಿದ್ಯಾನಿಲಯದ ವಿದ್ಯಾನಗರಿ ಕ್ಯಾಂಪಸ್‌ನ ಕವಿ ಕುಸುಮಾಗ್ರಜ್ ಮರಾಠಿ ಭಾಷಾ ಭವನದ ಸಭಾಗೃಹದಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.

ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥ ಹಾಗೂ ಪ್ರಾಧ್ಯಾಪಕ ಡಾ. ಜಿ. ಎನ್. ಉಪಾಧ್ಯ ಅವರ ಅಧ್ಯಕ್ಷತೆಯಲ್ಲಿ ಜರಗಲಿರುವ ಸಭಾ ಕಾರ್ಯಕ್ರಮದಲ್ಲಿ, ಕರ್ನಾಟಕ ಸರ್ಕಾರದ ಮಾಜಿ ಮುಖ್ಯಮಂತ್ರಿ ಹಾಗೂ ಮಾಜಿ ಕೇಂದ್ರ ಸಚಿವ ಡಾ. ಎಂ. ವೀರಪ್ಪ ಮೊಯ್ಲಿ ಅವರು ಮುಖ್ಯ ಅತಿಥಿಯಾಗಿ ಪಾಲ್ಗೊಂಡು ‘ಧೀಮಂತ ಧರ್ಮಪಾಲ’ ಆತ್ಮಕಥನ ಗ್ರಂಥವನ್ನು ಬಿಡುಗಡೆಗೊಳಿಸಿ, ಧರ್ಮಪಾಲ್ ಯು. ದೇವಾಡಿಗ ಮತ್ತು ಸುಜಾತಾ ಧರ್ಮಪಾಲ್ ದೇವಾಡಿಗ ದಂಪತಿಯನ್ನು ಅಭಿನಂದಿಸಲಿದ್ದಾರೆ.

​ಗೌರವ ಅತಿಥಿಗಳಾಗಿ ಬಂಟರ ಸಂಘ ಮುಂಬಯಿ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿ, ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಸಂಸ್ಥಾಪಕ ತೋನ್ಸೆ ಜಯಕೃಷ್ಣ ಎ. ಶೆಟ್ಟಿ, ಭವಾನಿ ಫೌಂಡೇಶನ್ ಟ್ರಸ್ಟ್ ಮುಂಬಯಿ ಇದರ ಸಂಸ್ಥಾಪಕಾಧ್ಯಕ್ಷ ಕೆ. ಡಿ. ಶೆಟ್ಟಿ, ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಗೌರವಾಧ್ಯಕ್ಷ ಎಲ್. ವಿ. ಅಮೀನ್, ಎಂ.ಇ.ಎ ಇದರ ಚಾನ್ಸೆಲರ್ ಜನರಲ್ ಲೆ. ಜ. ಅಂಬಾಸಿಡರ್ ಡಾ. ಡೆವಿಡ್ ಫ್ರಾಂಕ್ ಫರ್ನಾಂಡಿಸ್ ದುಬಾಯಿ, ದೇವಾಡಿಗ ಸಂಘ ಮುಂಬಯಿ ಅಧ್ಯಕ್ಷ ರವಿ ಎಸ್. ದೇವಾಡಿಗ, ಆಲ್ ಬಸ್ತಿ ಆ್ಯಂಡ್ ಮುಕ್ತಾ ಎಲ್‌ಎಲ್‌ಸಿ ದುಬಾಯಿ ಇದರ ಕಾರ್ಯನಿರ್ವಹಣ ನಿರ್ದೇಶಕ ನಾರಾಯಣ ಎಂ. ಡಿ., ದೇವಾಡಿಗ ಸಂಘ ದುಬಾಯಿ ಅಧ್ಯಕ್ಷ ದಿನೇಶ್ ಕುಮಾರ್, ಸಾಫಲ್ಯ ಸೇವಾ ಸಂಘ ಮುಂಬಯಿ ಅಧ್ಯಕ್ಷ ಸಿ.ಎ. ಶ್ರೀನಿವಾಸ್ ಪಿ. ಸಾಫಲ್ಯ, ತೀಯಾ ಸಮಾಜ ಮುಂಬಯಿ ಇದರ ಮಾಜಿ ಅಧ್ಯಕ್ಷ ಚಂದ್ರಶೇಖರ ಆರ್. ಬೆಳ್ಳಡ, ವಿಶ್ವ ದೇವಾಡಿಗ ಮಹಾಮಂಡಳದ ಗೌರವ ಪ್ರಧಾನ ಕಾರ್ಯದರ್ಶಿ ಹಿರಿಯಡ್ಕ ಮೋಹನದಾಸ್ ಆಗಮಿಸಲಿದ್ದಾರೆ.

​ಪತ್ರಕರ್ತ ಕಳ್ಳಿಗೆ ದಯಾಸಾಗರ ಚೌಟ ಕೃತಿ ಪರಿಚಯಿಸಲಿದ್ದಾರೆ. ಕನ್ನಡ ವಿಭಾಗದ ಸಹಾಯ ಪ್ರಾಧ್ಯಾಪಕಿ ಡಾ. ಪೂರ್ಣಿಮಾ ಎಸ್. ಶೆಟ್ಟಿ ಕಾರ್ಯಕ್ರಮ ನಿರೂಪಿಸಲಿದ್ದಾರೆ.

​ಸಾಂಸ್ಕೃತಿಕ ಕಾರ್ಯಕ್ರಮವಾಗಿ ಸಂಗೀತ, ನೃತ್ಯ ಇನ್ನಿತರ ಕಾರ್ಯಕ್ರಮಗಳು ಹಾಗೂ ಧರ್ಮಪಾಲ ದೇವಾಡಿಗ ಅವರ ಸಿದ್ಧಿ-ಸಾಧನೆಗಳನ್ನು ಒಳಗೊಂಡ ಸಾಕ್ಷ್ಯಚಿತ್ರ ಪ್ರದರ್ಶನಗೊಳ್ಳಲಿದೆ. ಈ ಎಲ್ಲ ಕಾರ್ಯಕ್ರಮಗಳಲ್ಲಿ ಸಾಹಿತ್ಯಾಸಕ್ತರು, ತುಳು-ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸಮಾರಂಭವನ್ನು ಯಶಸ್ವಿಗೊಳಿಸಬೇಕೆಂದು ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗ ಮತ್ತು ದೇವಾಡಿಗ ಸಂಘ ಮುಂಬಯಿ ಇದರ ಎಲ್ಲ ಪದಾಧಿಕಾರಿಗಳು ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



Related posts

ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಥಾಣೆ : ಅ. 8ಕ್ಕೆ ಶ್ರೀ ದುರ್ಗಾ ಹೋಮ, ಶ್ರೀ ದೇವಿ ದರ್ಶನ

Mumbai News Desk

ಶ್ರೀ ಉಮಾಮಹೇಶ್ವರಿ ದೇವಸ್ಥಾನ ಕಾಜುಪಾಡ, ಕುರ್ಲಾ (ಪ ) : ಅ.25ರಂದು ಸಂಪೂರ್ಣ ಶ್ರೀ ದೇವಿ ಮಹಾತ್ಮೆ ಯಕ್ಷಗಾನ

Mumbai News Desk

ನವೆಂಬರ್ 23ರಿಂದ ಸತತ 17ನೇ ವರ್ಷದ ಮುಂಬಯಿ ಪ್ರವಾಸದಲ್ಲಿ ಕರಾವಳಿಯ ಪ್ರಸಿದ್ಧ ನಾಟಕ ತಂಡಕಿನ್ನಿಗೋಳಿ

Mumbai News Desk

ಮಾ.8. ಶ್ರೀ ಕ್ಷೇತ್ರ ಶಂಕರಪುರದಲ್ಲಿ ಮಹಾಶಿವರಾತ್ರಿ ಆಚರಣೆ

Mumbai News Desk

ಸೆ.7: ಸಾಫಲ್ಯ ಸೇವಾ ಸಂಘ, ಮುಂಬೈ – ವಿದ್ಯಾರ್ಥಿ ಸಹಾಯಧನ, ಮಹಿಳೆಯರಿಗೆ ಘರ್‌ಘಂಟಿ ವಿತರಣೆ ಹಾಗೂ ನಾನಾ ಸಮಾಜಮುಖಿ ಕಾರ್ಯಕ್ರಮಗಳು

Mumbai News Desk

ಶ್ರೀ ದುರ್ಗಾ ಭಜನಾ ಸೇವಾ ಮಂಡಳ, ಜ.21ಕ್ಕೆ 17ನೇ ವಾರ್ಷಿಕ ಮಹಾಪೂಜೆ.

Mumbai News Desk