30.9 C
Mumbai
June 8, 2026
Mumbai News Kannada
ಪ್ರಕಟಣೆ

ಏಪ್ರಿಲ್ 4 ರಂದು ಶ್ರೀ ನಾರಾಯಣ ಗುರು ಭಜನಾ ಮಂಡಳಿ (ರಿ), ಮುಂಬೈ ವತಿಯಿಂದ ಶನಿ ಪೂಜೆ ಮತ್ತು ಭಜನಾ ಸಂಧ್ಯಾ





ಮುಂಬಯಿ: ಶ್ರೀ ನಾರಾಯಣ ಗುರು ಭಜನಾ ಮಂಡಳಿ (ರಿ), ಮುಂಬೈ, ಜಯ ಸಿ. ಸುವರ್ಣ ಅಭಿಮಾನಿಗಳು ಮತ್ತು ಮುಂಬಯಿ ಬಿಲ್ಲವಾಸ್ ವತಿಯಿಂದ ಶನಿ ಪೂಜೆ ಮತ್ತು ಭಜನಾ ಸಂಧ್ಯಾ ಕಾರ್ಯಕ್ರಮಗಳು ಏಪ್ರಿಲ್ 4ರ ಶನಿವಾರ ಮಧ್ಯಾಹ್ನ 1 ಗಂಟೆಯಿಂದ ಜಯಲೀಲಾ ಬ್ಯಾಂಕ್ವೆಟ್, 3ನೇ ಮಹಡಿ, ರೈಲ್ವೆ ನಿಲ್ದಾಣದ ಎದುರು, ಗೋರೆಗಾಂವ್ (ಪೂರ್ವ), ಮುಂಬಯಿ ಇಲ್ಲಿ ನಡೆಯಲಿದೆ.

​ಅಂದು ಮಧ್ಯಾಹ್ನ 1.00 ಗಂಟೆಗೆ ಕಲಶ ಸ್ಥಾಪನೆ, ಸಂಜೆ 7.30ಕ್ಕೆ ಭಜನೆ, ರಾತ್ರಿ 8.00 ಗಂಟೆಗೆ ಮಹಾಮಂಗಳಾರತಿ ಹಾಗೂ ರಾತ್ರಿ 8.30ಕ್ಕೆ ಅನ್ನಸಂತರ್ಪಣೆ ನಡೆಯಲಿದೆ.

ಧಾರ್ಮಿಕ ಸಭಾ ಕಾರ್ಯಕ್ರಮ:

ಧಾರ್ಮಿಕ ಸಭೆಯನ್ನು ಭಾರತ್ ಕೋ-ಆಪರೇಟಿವ್ ಬ್ಯಾಂಕ್ ಕಾರ್ಯಾಧ್ಯಕ್ಷರು ಮತ್ತು ರಾಷ್ಟ್ರೀಯ ಬಿಲ್ಲವರ ಮಹಾಮಂಡಲ (ಮುಲ್ಕಿ) ಅಧ್ಯಕ್ಷರಾದ ಸೂರ್ಯಕಾಂತ್ ಜಯ ಸುವರ್ಣ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಭಾರತ್ ಕೋ-ಆಪರೇಟಿವ್ ಬ್ಯಾಂಕ್ ಉಪಾಧ್ಯಕ್ಷರಾದ ಅಡ್ವೊಕೇಟ್ ಸೋಮನಾಥ್ ಅಮೀನ್ ಹಾಗೂ ಬ್ಯಾಂಕಿನ ಎಂ.ಡಿ. ಮತ್ತು ಸಿಇಒ ವಿದ್ಯಾನಂದ್ ಎಸ್. ಕರ್ಕೇರ ಆಗಮಿಸಲಿದ್ದಾರೆ.

​ಗೌರವ ಅತಿಥಿಗಳಾಗಿ ಖ್ಯಾತ ಜ್ಯೋತಿಷಿ ಡಾ. ಪ್ರವೀಣ್ ಎಂ. ಭಟ್, ಹರೀಶ್ ಎಸ್. ಪೂಜಾರಿ (ವಾಡಾಲ), ರಘು ಎಂ. ಪೂಜಾರಿ (ಗೋರೆಗಾಂವ್), ಉದ್ಯಮಿ ರಾಮ ಜಿ. ಸುವರ್ಣ, ಉದ್ಯಮಿ ಉಮೇಶ್ ಕಾಪು, ಸುಭಾಷ್ ಇಲೆಕ್ಟ್ರಿಕಲ್ಸ್‌ನ ಅರುಣ್ ಎಂ. ಪೂಜಾರಿ, ಸುಧಾಕರ ಪೂಜಾರಿ (ಕೇಮಂತೂರು), ಉದ್ಯಮಿ ಗಣೇಶ್ ಆರ್. ಪೂಜಾರಿ, ಸಾಯಿ ಕೇರ್ ಲಾಜಿಸ್ಟಿಕ್ಸ್‌ನ ಸುರೇಂದ್ರ ಎ. ಪೂಜಾರಿ, ಪ್ರದೀಪ್ ಪೂಜಾರಿ (ಪೊವಾಯಿ), ಶಿವರಾಮ ಸಿ. ಪೂಜಾರಿ (ಕಾಂದಿವಲಿ), ಜೆ. ವಿ. ಕೋಟ್ಯಾನ್ (ಗೋರೆಗಾಂವ್), ಕೇಶವ್ ಸಾಲಿಯನ್ (ಮಲಾಡ್) ಮತ್ತು ಕೃಷ್ಣ ಎಂ. ಪೂಜಾರಿ (ನವಿ ಮುಂಬಯಿ) ಉಪಸ್ಥಿತರಿರಲಿದ್ದಾರೆ.

​ಭಕ್ತಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಶ್ರೀ ನಾರಾಯಣ ಗುರು ಭಜನಾ ಮಂಡಳಿ (ರಿ), ಜಯ ಸಿ. ಸುವರ್ಣ ಅಭಿಮಾನಿಗಳು ಮತ್ತು ಮುಂಬಯಿ ಬಿಲ್ಲವಾಸ್ ಪರವಾಗಿ ಅಧ್ಯಕ್ಷ ಅಶೋಕ್ ಸಸಿಹಿತ್ಲು, ಗೌರವ ಪ್ರಧಾನ ಕಾರ್ಯದರ್ಶಿ ಕೇಶವ ಪೂಜಾರಿ, ಗೌರವ ಕೋಶಾಧಿಕಾರಿ ಸಬಿತಾ ಜಿ. ಪೂಜಾರಿ ಹಾಗೂ ಸರ್ವ ಸದಸ್ಯರು, ಮಹಿಳಾ ಮತ್ತು ಯುವ ವಿಭಾಗದವರು ವಿನಂತಿಸಿದ್ದಾರೆ.



Related posts

ಸಾರ್ವಜನಿಕ ಶ್ರೀ ಶನಿಶ್ಚರ ಸೇವಾ ಸಮಿತಿ, ವಸಾಯಿ : ಫೆ. 14ರಂದು ವಾರ್ಷಿಕ ಶ್ರೀ ಸತ್ಯನಾರಾಯಣ ಮಹಾಪೂಜೆ ಹಾಗೂ ಶ್ರೀ ಶನಿಶ್ಚರ ಮಹಾಪೂಜೆ

Mumbai News Desk

ಫೆ. 22 ರಂದು ಬಿಲ್ಲವರ ಅಸೋಸಿಯೇಶನ್ ಮುಂಬಯಿ, ಡೊಂಬಿವಲಿ ಸ್ಥಳೀಯ ಕಛೇರಿಯಲ್ಲಿ ವಾರ್ಷಿಕ ಶನಿಗ್ರಂಥ ಪಾರಾಯಣ

Mumbai News Desk

ಶ್ರೀ ಶನಿಮಹಾತ್ಮಾ ಪೂಜಾ ಸಮಿತಿ ಕೋಟೆ; ನಾಲಾಸೋಪಾರ ಮೇ 27. ಶ್ರೀ ಶನಿ ಜಯಂತಿ ಉತ್ಸವ.

Mumbai News Desk

 ನ 29,30 ಮತ್ತು ಡಿ 1 ಸತತ ಮೂರು ದಿವಸ  ಮಕ್ಕಳ ಕಲರವದಲ್ಲಿ ನಾಟಕೋತ್ಸವ, ಯಕ್ಷಗಾನೋತ್ಸವ, ವಾರ್ಷಿಕೋತ್ಸವಗಳ ವಿಜೃಂಭಣೆಯ ಮಹಾಮೇಳ.

Mumbai News Desk

ಶ್ರೀ ಸಾಯಿನಾಥ ಮಿತ್ರ ಮಂಡಳಿ ಡೊಂಬಿವಲಿ ವತಿಯಿಂದ (ನಾಳೆ) ಫೆ.26 ರಂದು ಪಾನಕ ಸೇವೆ

Mumbai News Desk

ಬಿಲ್ಲವರ ಅಸೋಸಿಯೇಷನ್ ಭಾಯಂದರ್ ‌ ಸ್ಥಳೀಯ ಕಚೇರಿ:ಸೆ.13 ರಂದು ಬ್ರಹ್ಮ ಶ್ರೀ ನಾರಾಯಣ ಗುರುಗಳ 171ನೇ ಜಯಂತಿ ಆಚರಣೆ

Mumbai News Desk