30.6 C
Mumbai
April 23, 2026
Mumbai News Kannada
ಪ್ರಕಟಣೆ

ಶ್ರೀ ಕೋಡ್ಬಬ್ಬು ದೈವಸ್ಥಾನ ಬಸ್ತಿಪಡ್ಪು, ಹೆಜಮಾಡಿ : ಎ. 3 ಹಾಗೂ ಎ. 4ರಂದು ವಾರ್ಷಿಕ ನೇಮೋತ್ಸವ





ಉಡುಪಿ ಜಿಲ್ಲೆಯ ಹೆಜಮಾಡಿಯ ಬಸ್ತಿಪಡ್ಪು ಶ್ರೀಕೋಡ್ಬಬ್ಬು ದೈವಸ್ಥಾನದಲ್ಲಿ 2026ನೇ ಸಾಲಿನ ಶ್ರೀ ಕೋಡ್ಬಬ್ಬು ಮತ್ತು ಪರಿವಾರ ದೈವಗಳ ವಾರ್ಷಿಕ ನೇಮೋತ್ಸವವು ಏಪ್ರಿಲ್ 3 ರಿಂದ ಏಪ್ರಿಲ್ 4ರವರೆಗೆ ಅತ್ಯಂತ ಸಡಗರ ಸಂಭ್ರಮದಿಂದ ಜರುಗಲಿದೆ.
ಈ ಧಾರ್ಮಿಕ ಕಾರ್ಯಕ್ರಮಗಳ ಅಂಗವಾಗಿ ಏಪ್ರಿಲ್ 2ರ ಗುರುವಾರದಂದು ಬೆಳಿಗ್ಗೆ 7 ಗಂಟೆಗೆ ಆದಿಸ್ಥಳ ಕಲದಲ್ಲಿ ಕ್ಷೇತ್ರ ಶುದ್ಧಿ ಹೋಮ ಹಾಗೂ ಕಲಶಾಭಿಷೇಕ ನೆರವೇರಲಿದ್ದು, ಬೆಳಿಗ್ಗೆ 9 ಗಂಟೆಗೆ ಗಜಕಂಬ ಮುಹೂರ್ತದೊಂದಿಗೆ ಉತ್ಸವಕ್ಕೆ ಚಾಲನೆ ದೊರೆಯಲಿದೆ.
ಉತ್ಸವದ ಪ್ರಮುಖ ದಿನವಾದ ಏಪ್ರಿಲ್ 3ರ ಶುಕ್ರವಾರದಂದು ಬೆಳಿಗ್ಗೆ 10 ಗಂಟೆಗೆ ಮಹಾ ಚಪ್ಪರ ಮುಹೂರ್ತ ಮತ್ತು ಆರೋಹಣ ಕಾರ್ಯಕ್ರಮಗಳು ನಡೆಯಲಿವೆ. ಮಧ್ಯಾಹ್ನ 12 ಗಂಟೆಗೆ ಆದಿಸ್ಥಳ ಕಲದಲ್ಲಿ ವಿಶೇಷ ಪೂಜೆ ಹಾಗೂ 1 ಗಂಟೆಗೆ ಭಕ್ತಾದಿಗಳಿಗೆ ಮಹಾ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ.
ಅಂದು ರಾತ್ರಿ 7 ಗಂಟೆಗೆ ಭಂಡಾರ ಏರುವುದು ಮತ್ತು ಮಹಾ ಚಪ್ಪರ ಪ್ರವೇಶದ ಬಳಿಕ, ರಾತ್ರಿ 10 ಗಂಟೆಗೆ ಶಕ್ತಿ ಸ್ವರೂಪದ ಶ್ರೀ ಕೋಡ್ಬಬ್ಬು ದೈವದ ನೇಮೋತ್ಸವವು ಆರಂಭವಾಗಲಿದೆ. ತದನಂತರ ತಡರಾತ್ರಿ 1 ಗಂಟೆಗೆ ಶಕ್ತಿ ಸ್ವರೂಪಿಣಿ ಶ್ರೀ ತನ್ನಿಮಾನಿಗ ದೇವಿಯ ನೇಮೋತ್ಸವವು ವಿಜೃಂಭಣೆಯಿಂದ ನಡೆಯಲಿದೆ.
ಉತ್ಸವದ ಅಂತಿಮ ದಿನವಾದ ಏಪ್ರಿಲ್ 4ರ ಶನಿವಾರದಂದು ಮಧ್ಯಾಹ್ನ 3 ಗಂಟೆಗೆ ಧೂಮಾವತಿ ಮತ್ತು ಬಂಟ ದೈವಗಳ ನೇಮೋತ್ಸವದೊಂದಿಗೆ ವಾರ್ಷಿಕ ಕಾರ್ಯಕ್ರಮಗಳು ಸಂಪನ್ನಗೊಳ್ಳಲಿವೆ.
ಈ ಪುಣ್ಯ ಕಾರ್ಯಕ್ರಮದಲ್ಲಿ ಊರ ಪರವೂರ ಭಕ್ತಾದಿಗಳು ಕುಟುಂಬ ಸಮೇತರಾಗಿ ಆಗಮಿಸಿ, ತನು-ಮನ-ಧನಗಳಿಂದ ಸಹಕರಿಸಿ ಶ್ರೀ ದೈವಗಳ ಕೃಪೆಗೆ ಪಾತ್ರರಾಗಬೇಕೆಂದು ದೈವಸ್ಥಾನದ ಅನುವಂಶಿಕ ಮೊಕ್ತೇಸರ ಅರುಣ್ ಶೆಟ್ಟಿ ಪಡುಮನೆ, ಮೊಕ್ತೇಸರ ಸುರೇಶ್ ಶೆಟ್ಟಿ ಪಡುತೋಟ, ಅಧ್ಯಕ್ಷ ಭಾಸ್ಕರ್ ಭಟ್, ಪ್ರಧಾನ ಕಾರ್ಯದರ್ಶಿ ರಾಜು ಹೆಜಮಾಡಿ, ಜೊತೆ ಕಾರ್ಯದರ್ಶಿ ಕೇಶವ ಸಾಲಿಯನ್, ಹೆಜಮಾಡಿ, ಕೋಶಾಧಿಕಾರಿ ಎಚ್ ಪರಮೇಶ್ವರ್, ಪ್ರಧಾನ ಅರ್ಚಕ ಜಗನ್ನಾಥ ಸಾಲಿಯನ್, ಸಮಿತಿಯ ಸದಸ್ಯರು, 10 ಸಮಸ್ತರು ಮತ್ತು ಗ್ರಾಮಸ್ಥರು ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.



Related posts

ಡೊಂಬಿವಲಿ: ಫೆ. 14ರಂದು ಶ್ರೀ ಜೈ ಭವಾನಿ ಶನೀಶ್ವರ ಮಂದಿರದ 36ನೇ ವಾರ್ಷಿಕ ಮಂಗಳೋತ್ಸವ

Mumbai News Desk

ಕನ್ನಡ ಸಂಘ ಸಯನ್ ವತಿಯಿಂದ ಅಗಸ್ಟ್ 3 ರಂದು ಯಕ್ಷಗಾನ ತಾಳಮದ್ದಳೆ

Mumbai News Desk

ಸೆ 15.ಡೊಂಬಿವಲಿ ಶ್ರೀ ಜಗದಂಬಾ ಮಂದಿರದ ಶರನ್ನವರಾತ್ರಿ ಮಹೋತ್ಸವ ಆಚರಣೆ ನಿಮ್ಮಿತ್ತ ವಿಶೇಷ ಮಹಾಸಭೆ

Mumbai News Desk

ಶ್ರೀ ಮದ್ಭಾರತ ಮಂಡಳಿ ಮುಂಬೈ : ಫೆ. 21-22ರಂದು “148ನೇ ವಾರ್ಷಿಕ ಮಂಗಳೋತ್ಸವ” ಮತ್ತು “ಕುಮಾರವ್ಯಾಸ ಭಾರತ” ಗ್ರಂಥ ಪಾರಾಯಣದ ಸಮಾಪ್ತಿ ಮಂಗಳೋತ್ಸವ, 24ನೇ ಪ್ರತಿಷ್ಠಾ ವರ್ಧಂತಿ ಮಹೋತ್ಸವ

Mumbai News Desk

  ಜ 22 :  ಪುಣೆ  ಪಿಂಪ್ರೀ ಚಿಂಚ್ವಾಡ್ ಬಂಟರ ಸಂಘ ವತಿಯಿಂದ ವಿದ್ವಾನ್ ಕೈರಬೆಟ್ಟು ವಿಶ್ವನಾಥ್ ಭಟ್ ರಿಂದ  “ಸೀತಾರಾಮ ಕಲ್ಯಾಣ” ಹರಿಕಥೆ, ಶ್ರೀರಾಮ ದೇವರಿಗೆ ಮಹಾಪೂಜೆ .

Mumbai News Desk

ಮಹತೋಭಾರ ಶನೀಶ್ವರ ದೇವಸ್ಥಾನ ಮಲಾಡ್ ಪೂರ್ವ. ಮೇ27:- ಶನಿ ಜಯಂತಿ ಉತ್ಸವ .ತಿಲದೀಪೋತ್ಸವ.

Mumbai News Desk