ಹಳೆಯಂಗಡಿ ಪಾವಂಜೆ ಗ್ರಾಮದ ಉಬಾರಮಣ್ಣು ಶ್ರೀ ಕೋಡ್ಬಬ್ಬು ದೈವಸ್ಥಾನ ಅನಾದಿ ಕಾಲದಿಂದಲೂ ಕೊಳುವೈಲು ಮಣ್ಣಿನಲ್ಲಿ ನೆಲೆಯಾಗಿ ನಂಬಿ ಬಂದ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವ ಒಂದು ಶಕ್ತಿ ಕೇಂದ್ರವಾಗಿದೆ.
ಇಲ್ಲಿನ ಶ್ರೀ ಕೋಡ್ಬಬ್ಬು ಹಾಗೂ ಪರಿವಾರ ದೈವಗಳ ವಾರ್ಷಿಕ ನೇಮೋತ್ಸವವು ದಿನಾಂಕ 04-04-2026 ಶನಿವಾರ ಹಾಗೂ 05-04-2026 ಆದಿತ್ಯವಾರ ಅತ್ಯಂತ ಸಡಗರ ಸಂಭ್ರಮದಿಂದ ಜರುಗಲಿದೆ. ಶ್ರೀ ದೈವದ ಸನ್ನಿಧಿಯಲ್ಲಿ ನಡೆಯುವ ಸಾಂಪ್ರದಾಯಿಕ ವಿಧಿವಿಧಾನಗಳಿಗೆ ಭಕ್ತಾದಿಗಳನ್ನು ಆತ್ಮೀಯವಾಗಿ ಆಹ್ವಾನಿಸಲಾಗಿದೆ. ಏಪ್ರಿಲ್ 4ರ ಶನಿವಾರದಂದು ದೈವಗಳ ಭಂಡಾರ ಇಳಿಯುವುದರೊಂದಿಗೆ ನೇಮೋತ್ಸವದ ಧಾರ್ಮಿಕ ಕಾರ್ಯಕ್ರಮಗಳು ಆರಂಭಗೊಳ್ಳಲಿವೆ.
ಈ ಪುಣ್ಯ ಕಾರ್ಯಕ್ರಮದಲ್ಲಿ ಸಮಸ್ತ ಭಕ್ತಾದಿಗಳು, ಕುಟುಂಬಸ್ಥರು ಹಾಗೂ ಊರ ಪರವೂರ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು, ಶ್ರೀ ಸ್ವಾಮಿಯ ಗಂಧ ಪ್ರಸಾದವನ್ನು ಸ್ವೀಕರಿಸಿ ದೈವಗಳ ಕೃಪೆಗೆ ಪಾತ್ರರಾಗಬೇಕೆಂದು ಆಡಳಿತ ಸಮಿತಿ 10 ಸಮಸ್ತರು ಹಾಗೂ ಊರ ಗ್ರಾಮಸ್ಥರು, ಅಧ್ಯಕ್ಷ ಷಣ್ಮುಖಾನಂದ ದೇವಾಡಿಗ , ಗೌರವ ಅಧ್ಯಕ್ಷರಾದ ಚಂದ್ರಶೇಖರ್ ಅಮೀನ್, ಶಂಕರ ಸಾಲಿಯಾನ್, ಎಸ್ ಎಸ್ ಸತೀಶ್ ಭಟ್, ಪ್ರವೀಣ್ ಕೋಟಿಯನ್, ಸುಧಾಕರ್ ಜೆ ಸುವರ್ಣ, ಉಮೇಶ್ ದೇವಾಡಿಗ, ರವಿ ದೇವಾಡಿಗ, ರತ್ನಾಕರ್ ಭಟ್,ಉಪಾಧ್ಯಕ್ಷ ಯತಿರಾಜ್ ಸುವರ್ಣ, ಕಾರ್ಯದರ್ಶಿ ವಸಂತ್ ಕೋಟ್ಯಾನ್, ಜೊತೆ ಕಾರ್ಯದರ್ಶಿ ರಾಮಚಂದ್ರ, ರಂಜಿತ್ ಕೊಳುವೈಲು, ಕೋಶಾಧಿಕಾರಿ ಶರತ್ ಕುಮಾರ್, ಸಂತೋಷ್ ಕುಮಾರ್ ಸೇರಿದಂತೆ ಸಮಿತಿಯ ಪ್ರಮುಖರು ಹಾಗೂ ಸರ್ವ ಸದಸ್ಯರು ಈ ಭಕ್ತಿಪೂರ್ವಕ ಆಮಂತ್ರಣವನ್ನು ನೀಡಿದ್ದಾರೆ.
ಕಾರ್ಯಕ್ರಮ :
ದಿನಾಂಕ 03-04-2026ರ ಶುಕ್ರವಾರ ಬೆಳಿಗ್ಗೆ 8.00 ಗಂಟೆಗೆ ನಾಗ ತಂಬಿಲ ಮತ್ತು ಸಂಜೆ 10.00 ಗಂಟೆಗೆ ಕಲಶಾಭಿಷೇಕ ನಡೆಯಲಿದೆ.
ದಿನಾಂಕ 04-04-2026ರ ಶನಿವಾರ ರಾತ್ರಿ 7.00 ಗಂಟೆಗೆ ಭಂಡಾರ ಇಳಿಯುವುದು, ರಾತ್ರಿ 8.30 ರಿಂದ ಅನ್ನಸಂತರ್ಪಣೆ ಹಾಗೂ ರಾತ್ರಿ 10.00 ಕ್ಕೆ ಶ್ರೀ ಕೋಡ್ಬಬ್ಬು ಮತ್ತು ತನ್ನಿಮಾನಿಗ ದೈವಗಳ ನೇಮೋತ್ಸವ ಜರುಗಲಿದೆ. ದಿನಾಂಕ 05-04-2026ರ ಆದಿತ್ಯವಾರ ಬೆಳಿಗ್ಗೆ 11.00 ಕ್ಕೆ ಶ್ರೀ ಧೂಮಾವತಿ-ಬಂಟ ದೈವಗಳ ನೇಮೋತ್ಸವ ನಡೆಯಲಿದ್ದು, ಮಧ್ಯಾಹ್ನ 2.30 ಕ್ಕೆ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಸಂದರ್ಭದಲ್ಲಿ ಜೈ ಕೃಷ್ಣ ಬಿ ಕೋಟ್ಯಾನ್ (ದಕ್ಷಿಣ ಕನ್ನಡ ಜಿಲ್ಲೆಯ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು), ಡಾ.ಗುರುಪ್ರಸಾದ್ ನಾವಡ ( ವೈದ್ಯಕೀಯ ಕ್ಷೇತ್ರ ), ನವೀನ್ ಸಾಲಿಯನ್ ಹೊಸಾಗ್ಮ್ ( ಕ್ಷೇತ್ರದ ಅನ್ನದಾನದ ಸೇವಾಕರ್ತರು)ಇವರನ್ನು ಪುರಸ್ಕಾರ’ ನೀಡಿ ಗೌರವಿಸಲಾಗುವುದು. ತದನಂತರ ಸಂಜೆ 3.00 ಗಂಟೆಗೆ ಶ್ರೀ ಗುಳಿಗ ದೈವದ ನೇಮೋತ್ಸವದೊಂದಿಗೆ ಕಾರ್ಯಕ್ರಮಗಳು ಸಂಪನ್ನಗೊಳ್ಳಲಿವೆ.




