30.5 C
Mumbai
June 8, 2026
Mumbai News Kannada
ಮುಂಬಯಿ

ತೋನ್ಸೆ ಶ್ರೀ ಬ್ರಹ್ಮ ಬೈದರ್ಕಳ ಪಂಚಧೂಮಾವತಿ ಗರಡಿಯ ಪುನರ್ ನಿರ್ಮಾಣ ನಿಮಿತ್ತ ಸಮಾಲೋಚನಾ ಸಭೆ ಹಾಗೂ ಮನವಿ ಪತ್ರ ಬಿಡುಗಡೆ





ಮುಂಬಯಿ ಊರಿನಿಂದ ಪರವೂರಿಗೆ ಮುಂದಿನ ಭವಿಷ್ಯ ರೂಪಿಸಲು ನಾವು ಪ್ರಯಾಣಿಸುವಾಗಹಿರಿಯರ ಆದೇಶದಂತೆ ನಾವು ನಂಬಿಕೊಂಡು ಬಂದಿರುವ ಕುಲದೇವರು ಹಾಗೂ ಗ್ರಾಮದೇವರ ಆಶೀರ್ವಾದವನ್ನು ಪಡೆದು ಬರುತ್ತೇವೆಈ ರೀತಿ ಮುಂಬಯಿಯಂತಹ ಮಹಾನಗರದಲ್ಲಿ ಸಾಧನೆ ಮಾಡಿದವರು ಅನೇಕರುತೋನ್ಸೆ ಶ್ರೀ ಬ್ರಹ್ಮ ಬೈದರ್ಕಳ ಪಂಚಧೂಮಾವತಿ ಗರಡಿಗೆ ಹಿಂದಿನಿಂದಲೂ ಎಲ್ಲರೂ ಸಹಕಾರ ನೀಡುತ್ತಾ ಬಂದಿದ್ದುಗರಡಿಯ ಪುನರ್ ನಿರ್ಮಾಣ ಕಾರ್ಯವು ಉನ್ನತ ಮಟ್ಟದಲ್ಲಿ ನಡೆಯುವುದರಲ್ಲಿ ಎಲ್ಲರೂ ಕೈಜೋಡಿಸುವಲ್ಲಿ ಯಾವುದೇ ಸಂದೇಹವಿಲ್ಲ ಎಂದು ತೋನ್ಸೆ ಶ್ರೀ ಬ್ರಹ್ಮ ಬೈದರ್ಕಳ ಪಂಚಧೂಮಾವತಿ ಗರಡಿ ಸೇವಾ ಟ್ರಷ್ಟ್ಮುಂಬಯಿಯ ಅದ್ಯಕ್ಷರಾದ ನಿತ್ಯಾನಂದ ಡಿಕೋಟ್ಯಾನ್ ವಿಶ್ವಾಸ ವ್ಯಕ್ತಪಡಿಸಿದರು.

ಇತಿಹಾಸ ಪ್ರಸಿದ್ದ ತುಳುನಾಡ ವೀರ ಪುರುಷರಾದ ಕೋಟಿ ಚೆನ್ನಯರು ಮತ್ತು ಅವರ ಆರಾಧ್ಯ ದೈವರಾದ ಶ್ರೀ ಬ್ರಹ್ಮ ಬೈದರನ್ನು ನಂಬಿ ಪೂಜಿಸುತ್ತಿದ್ದು ತೋನ್ಸೆ ಶ್ರೀ ಬ್ರಹ್ಮ ಬೈದರ್ಕಳ ಪಂಚಧೂಮಾವತಿ ಗರಡಿಯ ಪುನರ್ ನಿರ್ಮಾಣ ನಿಮಿತ್ತ  ಸಮಾಲೋಚನಾ ಸಭೆ ಹಾಗೂ ಮನವಿ ಪತ್ರ ಬಿಡುಗಡೆ ಸಮಾರಂಭವು ಎರಂದು ಸಂಜೆ ಸಾಂತಾಕ್ರೂಜ್ ಪೂರ್ವದ ಬಿಲ್ಲವ ಭವನದಲ್ಲಿ ನಡೆದಿದ್ದು ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ನಿತ್ಯಾನಂದ ಡಿಕೋಟ್ಯಾನ್ ಅವರು ನಾಡಿನ ಧಾರ್ಮಿಕ ಕ್ಷೇತ್ರಗಳ ಜೀರ್ಣೋದ್ದಾರದಲ್ಲಿ ಮುಂಬಯಿಗರ ಕೊಡುಗೆ ಅಪಾರವಾಗಿದ್ದುಸುಮಾರು ಏಳುವರೆ ಕೋಟಿ ಅಂದಾಜುವೆಚ್ಚದ ಈ ಕಾರ್ಯಕ್ಕೆ ನಿಮ್ಮೆಲ್ಲರ ಭರವಸೆ ಹಾಗೂ ಪ್ರೀತಿ ವಿಶ್ವಾಸದೊಂದೆಗೆ ಮುಂದುವರಿಯುತ್ತಿದ್ದೇವೆಈಗಾಗಲೇ ಎ. 1 ರಂದು ಅನೇಕ ಗಣ್ಯರ ಉಪಸ್ಥಿತಿಯಲ್ಲಿ ಗರಡಿಯ ಪುನರ್ ನಿರ್ಮಾಣ ಕೆಲಸಕ್ಕೆ ಶಿಲಾನ್ಯಾಸ ನೆರವೇರಿಸಲಾಗಿದೆ.  ಇದೇ ರೀತಿ ನಿಮ್ಮೆಲ್ಲರ ಪ್ರೀತಿ ಮತ್ತು ವಿಶ್ವಾಸದೊಂದಿಗೆಪ್ರಾಮಾಣಿಕತೆಯಿಂದ ನಾವು ಒಂದಾಗಿ ಕೋಟಿ ಚೆನ್ನಯರ ಆಶೀರ್ವಾದದೊಂದಿಗೆ ಈ ಕಾರ್ಯವನ್ನು ಉನ್ನತ ಮಟ್ಟದಲ್ಲಿ ಪೂರೈಸೋಣ ಎಂದರು

ಕಾರ್ಯಕ್ರಮಕ್ಕೆ ಚಾಲನೆಯಿತ್ತು ಮಾತಾನಾಡಿದ ತೋನ್ಸೆ ಮೂಲದ ಖಾತ ಉದ್ಯಮಿ ತೋನ್ಸೆ ಎಂಆನಂದ ಶೆಟ್ಟಿಯವರು ಯಾವುದೇ ಊರಲ್ಲಿ ಒಳ್ಳೆಯ ಜನರುದೇವಸ್ಥಾನವಿದ್ದಲ್ಲಿ ಆ ಊರು ಒಳ್ಳೆಯದಾಗುತ್ತದೆ. ಈ ಗರಡಿಯ ಜೀರ್ಣೋದ್ದಾರ ಮಾಡುವ ಯೋಗಭಾಗ್ಯ ತೋನ್ಸೆಯವರಿಗೆ ಸಿಕ್ಕಿದೆ. ಶ್ರೀಮಂತಬಡವಜಾತಿ ಬೇದವಿಲ್ಲದ ಸಾಧ್ಯವಾದಷ್ಟು ಸಹಕರಿಸಿ ಈ ಧಾರ್ಮಿಕ ಕಾರ್ಯದಲ್ಲಿ ಬಾಗಿಯಾಗೋಣ. ನಮ್ಮ ಯಾವುದೇ ಕಾರ್ಯಕ್ಕೆ ನಮ್ಮ ದೈವ ದೇವರು ಮೊದಲು. ಆದುದರಿಂದ ನಾವೆಲ್ಲರೂ ಒಟ್ಟಾಗಿ ಈ ಪುಣ್ಯ ಕಾರ್ಯದಲ್ಲಿ ಬಾಗಿಯಾಗೋಣ ಎಂದರು.

ಈ ಸಂದರ್ಭದಲ್ಲಿ ವೇದಿಕೆಯಲ್ಲಿದ್ದ ಗಣ್ಯರು ಗರಡಿಯ ಪುನರ್ ನಿರ್ಮಾಣಕ್ಕಾಗಿ ಮನವಿ ಪತ್ರವನ್ನು ಅಧಿಕೃತವಾಗಿ ಬಿಡುಗಡೆ ಮಾಡಿದರು.

ಪ್ರಾಸ್ತಾವಿಕ ನುಡಿಗಳನ್ನು ಆಡಿದ ಗರಡಿಯ ಅರ್ಚಕರಾದ ಜಯಂತ ಎಅಮೀನ್ ಅವರು ತೋನ್ಸೆ ಶ್ರೀ ಬ್ರಹ್ಮ ಬೈದರ್ಕಳ ಪಂಚಧೂಮಾವತಿ ಗರಡಿಯ ಇತಿಹಾಸವನ್ನು ವಿವರವಾಗಿ ಪರಿಚಯಿಸಿದರು66 ಪ್ರಾಚೀನ ಗರಡಿಗಳಲ್ಲಿ ತೋನ್ಸೆ ಶ್ರೀ ಬ್ರಹ್ಮ ಬೈದರ್ಕಳ ಪಂಚ ಧೂಮಾವತಿ ಗರಡಿಯು ಒಂದಾಗಿದ್ದುಇಂದಿನ ಅಗತ್ಯತೆಗಳಿಗೆ ಅನುಗುಣವಾಗಿ ಗರಡಿಯ ಜೀರ್ಣೋದ್ದಾರ ಕಾರ್ಯವನ್ನು ಕೈಗೊಳ್ಳುವುದು ಅನಿವಾರ್ಯವಾಗಿದ್ದುಈ ಮಹತ್ವದ ಧಾರ್ಮಿಕ ಕಾರ್ಯಕ್ಕೆ ಮುಂಬಯಿಗರ ಸಹಕಾರ ಅತ್ಯಂತ ಅಗತ್ಯವೆಂದರು.

ಗರಡಿಯ ಜೀರ್ಣೋದ್ದಾರ ಸಮಿತಿಯ ಉಪಾಧ್ಯಕ್ಷರಾದ ಉಮೇಶ್ ಪೂಜಾರಿ ಬಡಾನಿಡಿಯೂರು,  ಕಾರ್ಯದರ್ಶಿ ನಂದಕಿಶೋರ್ಕೋಶಾಧಿಕಾರಿ ನ್ಯಾಸಂದೀಪ ಶಂಕರ್ ಮಾತನಾಡಿ ನಮ್ಮ ಕಾಲದಲ್ಲಿ ಈ ಮಹತ್ವದ ಅವಕಾಶ ದೊರೆತಿರುವುದು ನಮ್ಮೆಲ್ಲರ ಸೌಭಾಗ್ಯವಾಗಿದೆಈ ಧಾರ್ಮಿಕ ಕಾರ್ಯದಲ್ಲಿ ಪ್ರತಿಯೊಬ್ಬರೂ ಕೈಜೋಡಿಸಿ ಸಹಕಾರ ನೀಡಬೇಕು ಎಂದರುಉದ್ಯಮಿ ಪ್ರಶಾಂತ್ ಸಿ ಪೂಜಾರಿಕಲಾವಿದಸಮಾಜ ಸೇವಕ ಲಕ್ಷಣ ಕಾಂಚನ್ ಗುಜ್ಜರಬೆಟ್ಟು ಕಾರ್ಯಕ್ರಮಕ್ಕೆ ಶುಭ ಕೋರಿದರು.

ನಾರಾಯಣ ಗುರುಗಳ ಮೂರ್ತಿಗೆ ಪೂಜೆಸಲ್ಲಿಸಿದ ನಂತರ ಸುಲೋಚನಾಭಾರತಿ ಮತ್ತು ಕಸ್ತೂರಿ ಇವರ ಪ್ರಾರ್ಥನೆಯೊಂದಿಗೆ ದೀಪ ಬೆಳಗಿಸಿ ವೇದಿಕೆಯಲ್ಲಿದ್ದ ಎಲ್ಲಾ ಗಣ್ಯರು ಕಾರ್ಯಕ್ರಮಕ್ಕೆ ಚಾಲನೆಯಿತ್ತರು.

ವೇದಿಕೆಯಲ್ಲಿ ಅತಿಥಿಗಳೊಂದಿಗೆ ಮುಂಬಯಿ ಸಮಿತಿಯ ಉಪಾಧ್ಯಕ್ಷರುಗಳಾದ ಡಿ. ಬಿ. ಅಮೀನ್ಸಿ. ಕೆ. ಪೂಜಾರಿಪ್ರಧಾನ ಕಾರ್ಯದರ್ಶಿ ಸಂಜೀವ ಪೂಜಾರಿ ತೋನ್ಸೆಕೋಶಾಧಿಕಾರಿ ರವಿರಾಜ್ ಕಲ್ಯಾಣಪುರ್  ಮತ್ತು ಇತರ ಪದಾಧಿಕಾರಿಗಳೂ ಉಪಸ್ಥಿತರಿದ್ದರು.

ಮುಂಬಯಿ ಸಮಿತಿಯ ಇತರ ಸದಸ್ಯರುಗಳಾದ ಜೊತೆ ಕಾರ್ಯದರ್ಶಿ ಕರುಣಾಕರ  ಬಿ. ಪೂಜಾರಿಜೊತೆ ಕೋಶಾಧಿಕಾರಿ ವಿಜಯ್ ಸನಿಲ್,  ಸದಸ್ಯರಾದ ಅಶೋಕ್  ಕೋಟ್ಯಾನ್ರೂಪ್ ಕುಮಾರ್ ಕಲ್ಯಾಣ್ ಪುರವಿಜಯ ಪಾಲನ್ಸುರೇಶ್ ಅಂಚನ್ಆನಂದ ಜತ್ತನ್ಕ್ರಿಷ್ಣ ಪಾಲನ್ವಿಠಲ್ ಎಸ್ ಪೂಜಾರಿಸದಾನಂದ ಬಿ ಪೂಜಾರಿಉದಯ ಎನ್ ಪೂಜಾರಿಸಲಹೆಗಾರರಾದ ವಿ. ಸಿ. ಪೂಜಾರಿಸೋಮ ಸುವರ್ಣನವೀನ್ ಕುಮಾರ್ ಎಸ್ ಪೂಜಾರಿ ಗುಳಿಬೆಟ್ಟುಸಿಎ ಅಶ್ವಿನ್ ಎಸ್ ಸುವರ್ಣ ಮಹಿಳಾ ಸದಸ್ಯರಾದ ಹೀರಾ ಡಿ. ಅಮೀನ್ಕಸ್ತೂರಿ ಆರ್ ಕಲ್ಯಾಣಪುರ್ಮೃದುಲ್ಲ ಎ. ಕೋಟ್ಯಾನ್ಲಕ್ಷೀ ಡಿ. ಅಂಚನ್ಸುಲೋಚನಾ ಆರ್. ಪೂಜಾರಿ ಜಾನಕಿ ಎ. ಕೋಟ್ಯಾನ್ಸುಶೀಲ ವಿ. ಪೂಜಾರಿಸವಿತಾ ನರೇಶ್ ಕೋಟ್ಯಾನ್ ಮೊದಲದವರು ಸಹಕರಿಸಿದರು.

ಉಪಾಧ್ಯಕ್ಷ ವಿಶ್ವನಾಥ ತೋನ್ಸೆ ಮತ್ತು ಮಾಜಿ ಪ್ರಧಾನ ಕಾರ್ಯದರ್ಶಿ ಶೇಖರ ಗುಜ್ಜರೆಬೆಟ್ಟು ಕಾರ್ಯಕ್ರಮವನ್ನು ನಿರ್ವಹಿಸಿದರು. ಪ್ರಧಾನ ಕಾರ್ಯದರ್ಶಿ ಸಂಜೀವ ಪೂಜಾರಿ ತೋನ್ಸೆ ವಂದನಾರ್ಪಣೆ ಮಾಡಿದರು.

ಗಣ್ಯರ ನುಡಿ :

ಒಳ್ಳೆಯ ಮನಸ್ಸಿನ ಜನರಿರುವ ಸುಂದರವಾದ ನಾಡು ತೋನ್ಸೆ. ಗರಡಿಯ ಪುನರ್ ನಿರ್ಮಾಣ ಕೆಲಸಕ್ಕೆ ಶಿಲಾನ್ಯಾಸದ ಕಾರ್ಯಕ್ರಮಕ್ಕೆ ಹೋಗಿದ್ದೆ. ಬಿಲ್ಲವರ ಅಸೋಷಿಯೇಶನಿನ ಅಭಿವೃದ್ದಿಯಲ್ಲಿ ತೋನ್ಸೆಯ ಸಮಾಜ ಬಾಂಧವರ ಕೊಡುಗೆ ಅಪಾರ. ಬಿಲ್ಲವರ ಅಸೋಷಿಯೇಶನಿಗೂ ತೋನ್ಸೆ ಗರಡಿಗೂ ಸೌಹಾರ್ದಯುತ ಸಂಮಂದ. ಕೋಟಿ ಚೆನ್ನಯರ ಆಶೀರ್ವಾದದೊಂದಿಗೆ  ಗರಡಿಯ ಪುನರ್ ನಿರ್ಮಾಣ ಕೆಲಸಕ್ಕೆ ನಾವೆಲ್ಲರೂ ಸಹಕರಿಸೋಣ.

– ಹರೀಶ್ ಜಿ. ಅಮೀನ್ಅಧ್ಯಕ್ಷರುಬಿಲ್ಲವರ ಅಸೋಷಿಯೇಶನ್ಮುಂಬಯಿ

===

. 1 ರಂದು ಗರಡಿಯ ಪುನರ್ ನಿರ್ಮಾಣ ಕೆಲಸಕ್ಕೆ ಶಿಲಾನ್ಯಾಸದ ಕಾರ್ಯಕ್ರಮಕ್ಕೆ ಹೋಗಿದ್ದೆ. ಬಹಳ ಅದ್ದೂರಿಯ ಆ ಕಾರ್ಯಕ್ರಮವನ್ನು ನೋಡಿದ್ದಾಗ ಭ್ರಹ್ಮಕಲಷ ಕಾರ್ಯಕ್ರಮದಂತಾಗಿದೆ ಎನ್ನಬಹುದು. ಮುಂಬಯಿ ಸಮಿತಿಯ ಅಧ್ಯಕ್ಷರಾದ ನಿತ್ಯಾನಂದ ಡಿಕೋಟ್ಯಾನ್ ನಿಜಕ್ಕೂ ಕಠಿಣ ಪರಿಶ್ರಮದ ವ್ಯಕ್ತಿಯಾಗಿದ್ದು ಇವರು ಬಿಲ್ಲವ ಸಮಾಜದ ಆಸ್ತಿಯಂತೆ. ಇವರ ನೇತೃತ್ವದಲ್ಲಿ ತೋನ್ಸೆ ಶ್ರೀ ಬ್ರಹ್ಮ ಬೈದರ್ಕಳ ಪಂಚಧೂಮಾವತಿ ಗರಡಿಯ ಪುನರ್ ನಿರ್ಮಾಣ ಕಾರ್ಯದಲ್ಲಿ ನಾವೆಲ್ಲರೂ ಕೈಜೋಡಿಸೋಣ.

 – ತೋನ್ಸೆ ಜಯಕೃಷ್ಣ ಎ ಶೆಟ್ಟಿಸಂಸ್ಥಾಪಕರುಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ.

=====

ಕೋಟಿ ಚೆನ್ನೆಯರು ನೆಲೆಯೂರಿದ ಜಾಗ ತೋನ್ಸೆ ಶ್ರೀ ಬ್ರಹ್ಮ ಬೈದರ್ಕಳ ಪಂಚಧೂಮಾವತಿ ಗರಡಿಗೆ ನಾನು ಹೋಗಿದ್ದೆ. ಈ ಕ್ಷೇತ್ರವು ಜೀರ್ಣೋದ್ದಾರಗೊಳ್ಳೂತ್ತಿರುವುದು ಸಂತೋಷದ ವಿಷಯ. ಇಂದು ಮುಂಬಯಿಯಲ್ಲಿನ ಉನ್ನತ ಮಟ್ಟದ ಉದ್ಯಮಿಗಳು ತೋನ್ಸೆಯವರು ಎನ್ನಲು ಅಭಿಮಾನವಾಗುತ್ತಿದೆ. ಇಂತಹ ದೊಡ್ಡ ವ್ಯಕ್ತಿಗಳು ಅಲ್ಲಿರುವಾಗ ಈ ಕಾರ್ಯವು ಉನ್ನತ ಮಟ್ಟದಲ್ಲಿ ನೆರವೇರುದರಲ್ಲಿ ಸಂದೇಹವಿಲ್ಲ. ಜೀರ್ಣೋದ್ದಾರ ಕಾರ್ಯದಲ್ಲಿ ನಾವೆಲ್ಲರೂ ಬಾಗಿಯಾಗೋಣ.

ಧರ್ಮಪಾಲ ಯು. ದೇವಾಡಿಗಅಧ್ಯಕ್ಷರುವಿಶ್ವ ದೇವಾಡಿಗ ಮಹಾಮಂಡಳ

=====

ಶ್ರೀಮಂತ ಹಾಗೂ ದೀಮಂತ ವ್ಯಕ್ತಿಗಳಲ್ಲಿ ಹೆಚ್ಚಿನವರು ತೋನ್ಸೆಯವರು. ಕೇವಲ ಆರ್ಥಿಕವಾಗಿ ಮಾತ್ರವಲ್ಲದೆ ಹೃದಯ  ಶ್ರೀಮಂತಿಕೆಯನ್ನು ಹೊಂದಿದವರು  ತೋನ್ಸೆ ಪರಿಸರದವರು. ಆದುದರಿಂದ ಇವರೊಂದಿಗೆ ನಾವೆಲ್ಲರೂ ಸಹಕರಿಸೋಣ. ಭ್ರಹ್ಮಕಲಸ ನಮ್ಮ ಜೀವನದಲ್ಲಿ ಅತ್ಯಮೂಲ್ಯ ಸಮಯ. ಸಮಿತಿಯಲ್ಲಿ ಮಹಿಳೆಯರನ್ನು ಹೆಚ್ಚಿನ ಸಂಖ್ಯೆಯಲ್ಲಿ ತೊಡಗಿಸಿದಲ್ಲಿ ಸಮಿಗೆ ಇನ್ನೂ ಹೆಚ್ಚಿನ ಶಕ್ತಿ ದೊರಕುವುದು ಮಾತ್ರವಲ್ಲದೆ ಮುಂದಿನ ಎಲ್ಲಾ ಕಾರ್ಯಕ್ಕೆ ಸಹಕಾರಿಯಾಗುವುದು.

-ಚಂದ್ರಶೇಖರ ಆರ್ ಬೆಳ್ಚಡಮಾಜಿ ಅಧ್ಯಕ್ಷರುತೀಯಾ ಸಮಾಜ ಮುಂಬಯಿ

====

ಇಂದು ಸಂಕಷ್ಟ ಚತುರ್ಥಿಯಾಗಿದ್ದು ಈ ಕಾರ್ಯ ನಿರ್ವಿಘ್ನವಾಗಿ ನೆರವೇರುದರಲ್ಲಿ ಸಂದೇಹವಿಲ್ಲ. ನಮ್ಮ ಎಲ್ಲಾ ಕಾರ್ಯಕ್ಕೆ ನಮ್ಮ ಊರಿನ ದೈವದೇವರ ಆಶ್ರೀವಾದ ಅಗತ್ಯವಿದ್ದು ಈ ಕಾರ್ಯದಲ್ಲಿ ನಾವೆಲ್ಲರೂ ಕೈಜೋಡಿಸೋಣ. 

-ಸದಾನಂದ ಆಚಾರ್ಯಕೋಶಾಧಿಕಾರಿಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ.

====

ಕೋಟಿ ಚೆನ್ನಯರ ಆಶೀರ್ವಾದದಿಂದ ಎಲ್ಲರ ಸಹಕಾರ ಹಾಗೂ ಪ್ರೋತ್ಸಾಹದಿಂದ   ತೋನ್ಸೆ ಶ್ರೀ ಬ್ರಹ್ಮ ಬೈದರ್ಕಳ ಪಂಚಧೂಮಾವತಿ ಗರಡಿಯ ಪುನರ್ ನಿರ್ಮಾಣ ಕಾರ್ಯವು ಉತ್ತಮ ರೀತಿಯಲ್ಲಿ ನೆರವೇರಲಿ ಎಂಬುದಾಗಿ ಶುಭ ಹಾರೈಕೆ.

-ಹೆರ್ಗ ಜಾಬು ಪೂಜಾರಿಎಂ. ಡಿ. – ಬುಧಾಗಿ ಇಂಜಿನಿಯರ್ಸ್ ಮತ್ತು ಕಾಂಟ್ರಾಕ್ಟರ್ಸ್.

=====

ಎಲ್ಲಾ ಸಮಾಜ ಬಾಂದವರು ಒಟ್ಟಾಗಿ ಈ ಪುಣ್ಯ ಕಾರ್ಯಕ್ರಮವನ್ನು ಉನ್ನತ ಮಟ್ಟದಲ್ಲಿ ಯಶಸ್ವಿಗೊಳಿಸೋಣ.

-ಲಕ್ಸ್ಮಣ ಕೆ ಅಮೀನ್ಮಾಲಕರುಗೋಲ್ಡನ್ ಟ್ರಾವೆಲ್ಸ್ ಬೆಂಗಳೂರು

ವರದಿ : ಈಶ್ವರ ಎಂ. ಐಲ್



Related posts

ಗುರು ನಾರಾಯಣ ರಾತ್ರಿ ಪ್ರೌಢ ಶಾಲೆಗೆ ಎಸ್. ಎಸ್. ಸಿ ಪರೀಕ್ಷೆಯಲ್ಲಿ ಶೇ 100 ಫಲಿತಾಂಶ

Mumbai News Desk

ಮೈಸೂರು ಅಸೋಸಿಯೇಷನ್‌ನಲ್ಲಿ ‘ಶ್ರೀರಂಗ ಸ್ಮರಣೆ’ ನಾಟಕೋತ್ಸವಕ್ಕೆ ಚಾಲನೆ

Mumbai News Desk

ಶ್ರೀ ಜಗದಂಬಾ ಮಂದಿರ ಡೊಂಬಿವಲಿ – ನಾಗರ ಪಂಚಮಿ ಆಚರಣೆ

Mumbai News Desk

ಶ್ರೀ ರಾಮಚಂದ್ರಾಪುರ ಮಠದ ಮುಂಬೈ ವಲಯದಲ್ಲಿ “ರಾಮಾವತರಣ” ಗ್ರಂಥದ ಲೋಕಾರ್ಪಣೆ

Mumbai News Desk

ಸಯನ್ ನಿತ್ಯಾನಂದ ಸಭಾಗ್ರಹ ದಲ್ಲಿ ಒಡಿಯೂರು ಶ್ರೀಗಳಿಗೆ ಗುರುವಂದನೆ,

Mumbai News Desk

ಬಿಲ್ಲವರ ಅಸೋಸಿಯೇಶನ್ ಕಲ್ವಾ ಸ್ಥಳೀಯ ಕಚೇರಿಗೆ ಬೆಳ್ಳಿ ಹೊಳಪು! ರಜತ ಮಹೋತ್ಸವ ಸಂಭ್ರಮ.

Mumbai News Desk