July 23, 2026
Mumbai News Kannada
ಪ್ರಕಟಣೆ

ಎ. 14ರಂದು. ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಸಾವರ್ಕರ್ ನಗರ ಥಾಣೆ ಇಲ್ಲಿ ಶ್ರೀ ಶನಿ ಗ್ರಂಥ ಪಾರಾಯಣ, ಶ್ರೀ ಸತ್ಯನಾರಾಯಣ ಮಹಾಪೂಜೆ ಸೇರಿದಂತೆ ಧಾರ್ಮಿಕ ಕಾರ್ಯಕ್ರಮಗಳು.







=============
ಮುಂಬಯಿ ಥಾಣೆ ಪಶ್ಚಿಮ ವೀರ್ ಸಾವರ್ಕರ್ ನಗರದಲ್ಲಿರುವ ಶ್ರೀ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಏಪ್ರಿಲ್ 14ರ ಮಂಗಳವಾರದಂದು ಸಂಕ್ರಮಣ ಪೂಜೆ, ಶ್ರೀ ಚಾಮುಂಡೇಶ್ವರಿ ದೇವಿ ದರ್ಶನ ಸೇವೆ,ವಾರ್ಷಿಕ ಸತ್ಯನಾರಾಯಣ ಮಹಾಪೂಜೆ ಹಾಗೂ ಶ್ರೀ ಶನಿ ಗ್ರಂಥ ಪಾರಾಯಣ (ಯಕ್ಷಗಾನ ತಾಳ ಮದ್ದಳೆ ರೂಪದಲ್ಲಿ) ಜರಗಲಿದೆ.
ಶ್ರೀ ಚಾಮುಂಡೇಶ್ವರಿ ಕ್ಷೇತ್ರದ ಸ್ಥಾಪಕ, ಮುಖ್ಯಸ್ಥ ಹಾಗೂ ಜ್ಯೋತಿಷಿ ಶಿವಪ್ರಸಾದ್ ಪೂಜಾರಿ ಪುತ್ತೂರು ಇವರ ಮಾರ್ಗದರ್ಶನ ಹಾಗೂ ನೇತೃತ್ವದಲ್ಲಿ, ಜಗದೀಶ್ ಎಸ್. ತಂತ್ರಿ, ರಘುಚಂದ್ರ ಆಚಾರ್ಯ ಕಾರಿಂಜ, ರಾಧಾಕೃಷ್ಣ ಗುರುಸ್ವಾಮಿ ಇವರುಗಳ ಶುಭಾಶೀರ್ವಾದ ಹಾಗೂ ಸಹಕಾರದೊಂದಿಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರಗಲಿದೆ. ಕಾರ್ಯಕ್ರಮದಂಗವಾಗಿ
ಬೆಳಿಗ್ಗೆ ಗಂ 8 ಕ್ಕೆ ಗಣ ಹೋಮ, ಗಂ 9.30 ಕ್ಕೆ ಶ್ರೀ ಸತ್ಯ ನಾರಾಯಣ ಮಹಾ ಪೂಜೆ,
ಗಂ 11:30 ಕ್ಕೆ ಶ್ರೀ ಚಾಮುಂಡೇಶ್ವರಿ ದೇವಿ ದರ್ಶನ ಸೇವೆ, ಪಂಚಕಜ್ಜಾಯ ಸೇವೆ, ಮಧ್ಯಾಹ್ನ ಗಂ
12:30 ಕ್ಕೆ ಮಹಾ ಮಂಗಳಾರತಿ, ಅನ್ನದಾನ ಸೇವೆ ನಡೆಯಲಿದೆ. ಮಧ್ಯಾಹ್ನ ಗಂ 1.ರಿಂದ ಸಾಯಂ ಗಂ 07:30ರವರೆಗೆ ಸದಾನಂದ ಅಮೀನ್ ಇವರ ಸಹಕಾರದೊಂದಿಗೆ ಶ್ರೀ ಶನೀಶ್ವರ ಮಂದಿರ ಭಟ್ಟಿಪಾಡ ಭಾಂಡುಪ್ ಇವರಿಂದ ಶ್ರೀ ಶನಿ ಗ್ರಂಥ ಪಾರಾಯಣ ಯಕ್ಷಗಾನ ತಾಳಮದ್ದಳೆ ರೂಪದಲ್ಲಿ ಪ್ರದರ್ಶನಗಳ್ಳಲಿದೆ. ಆ ಬಳಿಕ ಮಹಾ ಮಂಗಳಾರತಿ ಅನ್ನಸಂತರ್ಪಣೆ ಜರಗಲಿದೆ. ಈ ಪ್ರಯುಕ್ತ
ಭಕ್ತಭಿಮಾನಿಗಳೆಲ್ಲರೂ ಸಕುಟುಂಬ ಸಮೇತರಾಗಿ ಆಗಮಿಸಿ ಈ ಎಲ್ಲಾ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶ್ರೀ ಚಾಮುಂಡೇಶ್ವರಿ ಹಾಗೂ ಪರಿವಾರ ದೈವ ದೇವರ ಕೃಪೆಗೆ ಪಾತ್ರರಾಗಬೇಕಾಗಿ
ಶ್ರೀ ಚಾಮುಂಡೇಶ್ವರಿ ಕ್ಷೇತ್ರದ ಪರವಾಗಿ ಮುಖ್ಯಸ್ಥರಾದ ಜ್ಯೋತಿಷಿ
ಶಿವಪ್ರಸಾದ್ ಪೂಜಾರಿ ಪುತ್ತೂರು, ಸೇರಿದಂತೆ ಕ್ಷೇತ್ರದ ಭಜನಾ ಮಂಡಳಿ, ಮಹಿಳಾ ವಿಭಾಗ, ಯುವ ವಿಭಾಗ, ಹಾಗೂ ಸರ್ವ ಸದಸ್ಯರು ಪತ್ರಿಕಾ ಪ್ರಕಟಣೆಯ ಮೂಲಕ ವಿನಂತಿಸಿಕೊಂಡಿದ್ದಾರೆ.



Related posts

ಜು. 7 ರಂದು ಗೊರೆಗಾಂವ್ ಕರ್ನಾಟಕ ಸಂಘದ 66ನೇ ವಾರ್ಷಿಕ ಮಹಾಸಭೆ

Mumbai News Desk

ಕಾಂತೇಶ್ವರ ದೇವಸ್ಥಾನ ಕಾಂತಾವರ ಜ14ರಿಂದ 23  ವರ್ಷಾವಧಿ ಜಾತ್ರೆ ರಥೋತ್ಸವ,

Mumbai News Desk

ರಂಗ ತರಬೇತಿ ಶಿಬಿರಕ್ಕೆ ಆಹ್ವಾನ

Mumbai News Desk

ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ, ಆ. 10 ರಂದು ಮುನಿರಾಜ್ ಜೈನ್ ಶ್ರದ್ಧಾಂಜಲಿ ಸಭೆ

Mumbai News Desk

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ನೆಲ್ಲಿಕಾರು, ಮೂಡಬಿದೆರೆ ಶತಮಾನೋತ್ಸವದ ಸಂಭ್ರಮದಲ್ಲಿ ನಮ್ಮ ಶಾಲೆ :

Mumbai News Desk

ಫೆ.12 ರಿಂದ 16 ವರಗೆ ಕುಲಶೇಖರ ಶ್ರೀ ವೀರನಾರಾಯಣ ದೇವಸ್ಥಾನದಲ್ಲಿ ಕುಂಭ ಮಹೋತ್ಸವ,

Mumbai News Desk