September 6, 2026
Mumbai News Kannada
ಪ್ರಕಟಣೆ

ಶ್ರೀ ಗಜಾನನ ಬಿಲ್ಲವರ ಸೇವಾ ಸಂಘ ಪಡುತೋನ್ಸೆ, ಹೂಡೆ : ಎ. 18,19ರಂದು ವಾರ್ಷಿಕ ಭಜನಾ ಮಂಗಲೋತ್ಸವ ಹಾಗೂ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ





ಉಡುಪಿ ಜಿಲ್ಲೆಯ ಹೂಡೆಯ ಪಡುತೋನ್ಸೆಯಲ್ಲಿರುವ ಶ್ರೀ ಗಜಾನನ ಬಿಲ್ಲವರ ಸೇವಾ ಸಂಘದ ಆಶ್ರಯದಲ್ಲಿ ಶ್ರೀ ದುರ್ಗಾಪರಮೇಶ್ವರೀ ಮಂದಿರದಲ್ಲಿ ವಾರ್ಷಿಕ ಭಜನಾ ಮಂಗಳೋತ್ಸವ ಹಾಗೂ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಇದೇ ಏಪ್ರಿಲ್ 18 ಮತ್ತು 19ರಂದು ಅತ್ಯಂತ ಸಂಭ್ರಮದಿಂದ ಜರುಗಲಿವೆ. ಏಪ್ರಿಲ್ 18ರ ಶನಿವಾರ ಸಂಜೆ 6.30ಕ್ಕೆ ಕಲಶ ಪ್ರತಿಷ್ಠಾಪನೆಯೊಂದಿಗೆ ಕಾರ್ಯಕ್ರಮಗಳು ಚಾಲನೆ ಪಡೆಯಲಿದ್ದು, ನಂತರ ನಿರಂತರ ಭಜನಾ ಕಾರ್ಯಕ್ರಮವು ಮರುದಿನದ ಸೂರ್ಯೋದಯದವರೆಗೆ ನಡೆಯಲಿದೆ. ಏಪ್ರಿಲ್ 19ರ ಭಾನುವಾರ ಬೆಳಿಗ್ಗೆ ಭಜನಾ ಮಂಗಳೋತ್ಸವದ ನಂತರ 9 ಗಂಟೆಗೆ ಸಾಮುದಾಯಿಕ ಶ್ರೀ ಸತ್ಯನಾರಾಯಣ ಪೂಜೆ ಮತ್ತು 11 ಗಂಟೆಗೆ ಮಹಾಪೂಜೆ ನೆರವೇರಲಿದೆ. ಇದೇ ಸಂದರ್ಭದಲ್ಲಿ ಬೆಳಿಗ್ಗೆ 11.15ಕ್ಕೆ ವಿದ್ಯಾರ್ಥಿಗಳಿಗೆ ನೋಟ್‌ಬುಕ್ ವಿತರಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಮಧ್ಯಾಹ್ನ 12.30ರಿಂದ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ.

ಈ ಪುಣ್ಯ ಕಾರ್ಯಕ್ರಮಗಳಲ್ಲಿ ಸಮಸ್ತ ಭಕ್ತಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶ್ರೀ ದೇವಿಯ ಕೃಪೆಗೆ ಪಾತ್ರರಾಗಬೇಕೆಂದು ಸಂಘದ ಗೌರವಾಧ್ಯಕ್ಷರಾದ ಜಯಪ್ರಕಾಶ್ ಬಿ., ಅಧ್ಯಕ್ಷ ರತನ್ ಡಿ ಸುವರ್ಣ, ಕೋಶಾಧಿಕಾರಿ ನವೀನ್ ಕುಮಾರ್ ಗುಳಿಬೆಟ್ಟು, ಪ್ರಧಾನ ಕಾರ್ಯದರ್ಶಿ ಸತೀಶ್ ಬಿ ಅಂಚನ್, ಉಪಾಧ್ಯಕ್ಷೆ ಇಂದಿರಾ ಪಿ ಅಂಚನ್, ಭಜನಾ ಸಂಚಾಲಕ ಶ್ರೀಧರ್ ಅಂಚನ್, ಜೊತೆ ಕಾರ್ಯದರ್ಶಿ ಸುನಂದ ಸದಾನಂದ, ಪ್ರಧಾನ ಅರ್ಚಕರಾದ ಜಗನ್ನಾಥ್ ಕೋಟಿಯನ್, ಉಪ ಅರ್ಚಕರುಗಳಾದ ಧೀರಜ್, ಸುಶಾಂತ್, ಧ್ರುವನ್, ಶಮನ್, ಅಂತರಿಕ ಲೆಕ್ಕಪರಿಶೋಧಕ ಕ್ರಷ್ಣದಾಸ್ ಮಟ್ಟಿ, ಹಾಗೂ ಕಾರ್ಯಕಾರಿ ಸಮಿತಿ, ಶ್ರೀದೇವಿ ಬಿಲ್ಲವ ಮಹಿಳಾ ಘಟಕ ಮತ್ತು ಯುವ ಸಂಘಟನೆಯ ಸರ್ವ ಸದಸ್ಯರು ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.ಹೆಚ್ಚಿನ ಮಾಹಿತಿಗಾಗಿ : 9845420934/9742471773 ಸಂಪರ್ಕಿಸಬಹುದು.



Related posts

ಮಲಾಡ್ ಶ್ರಿ ವರಮಹಾಲಕ್ಷ್ಮಿ ಪೂಜಾ ಸಮಿತಿ, ಜ. 26 ರಂದು ಮಹಿಳಾ ವಿಭಾಗದ ವತಿಯಿಂದ ಹಳದಿ ಕುಂಕುಮ

Mumbai News Desk

ಶ್ರೀ ಕ್ಷೇತ್ರ ಗೀತಾಂಬಿಕಾ ದೇವಸ್ಥಾನ ಅಸಲ್ಪ :ಜ. 18ಕ್ಕೆ ಸಾಮೂಹಿಕ ಶ್ರೀ ಸತ್ಯನಾರಾಯಣ ಮಹಾಪೂಜೆ ಹಾಗೂ ಪರಿವಾರ ದೇವತೆಗಳಿಗೆ ದೀಪಾರಾಧನೆ.

Mumbai News Desk

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ : ಆಗಸ್ಟ್ 2ಕ್ಕೆ ಆಟಿದ ಬೂತಾರಾದನೆ, ಸಾಕ್ಷ ಚಿತ್ರ ಬಿಡುಗಡೆ ಮತ್ತು ವಿಚಾರಗೋಷ್ಠಿ

Mumbai News Desk

ಬೋರಿವಲಿ ಮಹಿಷ ಮರ್ದಿನಿ ಮಂದಿರ : ಆ. 17  ರಾಜಾ ಅಂಬರೀಷ ತುಳು ಹರಿಕಥೆ:

Mumbai News Desk

ಜ. 11 ರಂದು ಮುಂಬಯಿಯಲ್ಲಿ ಶ್ರೀ ಸತ್ಯಧರ್ಮ ದೇವೀ ದೇವಸ್ಥಾನ ಮುಕ್ಕ, ಮಂಗಳೂರು ಇದರ ಜೀರ್ಣೋದ್ದಾರ ಹಾಗೂ ಬ್ರಹ್ಮಕಲಶೋತ್ಸವದ ಬಗ್ಗೆ ಸಮಾಲೋಚನಾ ಸಭೆ.

Mumbai News Desk

ಕಲ್ಚರಲ್ ಟೀಮ್ ಭಿವಂಡಿ : ನ. 17ರಂದು 5ನೇ ವಾರ್ಷಿಕೋತ್ಸವ

Mumbai News Desk