September 6, 2026
Mumbai News Kannada
ಸುದ್ದಿ

ತಂತ್ರಜ್ಞಾನ ಮತ್ತು ಭರವಸೆಯ ಸಮ್ಮಿಲನ: ಭಾರತ್ ಬ್ಯಾಂಕ್‌ನಿಂದ ಹೊಸ ನೆಟ್ ಬ್ಯಾಂಕಿಂಗ್ ಅಪ್ಲಿಕೇಶನ್ ಸೇವೆಗಳಿಗೆ ಚಾಲನೆ.





ಮುಂಬಯಿ:ಭಾರತ್ ಬ್ಯಾಂಕಿನ ಡಿಜಿಟಲ್ ಪರಿವರ್ತನೆಯ ಹೆಜ್ಜೆಯಾಗಿ, 15 ಏಪ್ರಿಲ್ 2026 ರಂದು ಗೋರೆಗಾವ್ ಪೂರ್ವದಲ್ಲಿರುವ ಕೇಂದ್ರ ಕಚೇರಿಯಲ್ಲಿ ಬ್ಯಾಂಕಿನ ಹೊಸ ನೆಟ್ ಬ್ಯಾಂಕಿಂಗ್ ಅಪ್ಲಿಕೇಶನಿಗೆ ಅಧಿಕೃತವಾಗಿ ಚಾಲನೆ ನೀಡಲಾಯಿತು.

ಇಂದಿನ ಡಿಜಿಟಲ್ ಯುಗದಲ್ಲಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ತಂತ್ರಜ್ಞಾನ ಹೂಡಿಕೆ ಅನಿವಾರ್ಯ ಮಾತ್ರವಲ್ಲ, ಭವಿಷ್ಯದ ಸ್ಥಿರ ಬೆಳವಣಿಗೆಗೆ ಅತ್ಯಾವಶ್ಯಕ. ಡಿಜಿಟಲ್ ಬ್ಯಾಂಕಿಂಗ್ ಸೇವೆಗಳು ಗ್ರಾಹಕರಿಗೆ ಸಮಯ ಮತ್ತು ಶ್ರಮ ಉಳಿಸುವ ಜೊತೆಗೆ, ಬ್ಯಾಂಕಿನ ಕಾರ್ಯಾಚರಣೆಯ ವೆಚ್ಚವನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ ಹಾಗೂ ಗ್ರಾಹಕರಿಗೆ ಉತ್ತಮ, ವೇಗವಾದ ಮತ್ತು ಸುರಕ್ಷಿತ ಸೇವೆ ನೀಡಲು ಸಹಕರಿಸುತ್ತದೆ.

ಈ ನಿಟ್ಟಿನಲ್ಲಿ ಭಾರತ್ ಬ್ಯಾಂಕ್ ಕೇವಲ ಹಣಕಾಸು ಸೇವೆ ಒದಗಿಸುವ ಸಂಸ್ಥೆ ಮಾತ್ರವಲ್ಲ — ಅದು ಪ್ರತಿ ಗ್ರಾಹಕರ ಬದುಕನ್ನು ಸರಳ ಮತ್ತು ಸಮೃದ್ಧಗೊಳಿಸಲು ಶ್ರಮಿಸುವ ಸಂಸ್ಥೆಯಾಗಿದೆ, ಡಿಜಿಟಲ್ ಯುಗದಲ್ಲಿ ತಂತ್ರಜ್ಞಾನ ಹೂಡಿಕೆ ಎಂದರೆ ಭವಿಷ್ಯದ ಹೂಡಿಕೆ. ಇದರ ಜೊತೆಗೆ, ಗ್ರಾಹಕ ಸ೦ಪರ್ಕ ಸುಧಾರಣೆಯ ನಿಟ್ಟಿನಲ್ಲಿಯೂ ಭಾರತ್ ಬ್ಯಾಂಕ್ ಮಹತ್ವದ ಹೆಜ್ಜೆ ಇರಿಸಿದೆ.

ಬ್ಯಾಂಕ್ ಪಠ್ಯ ಮತ್ತು ಆಡಿಯೋ ರೂಪದಲ್ಲಿ ಬಹು-ಭಾಷಾ ಸಂದೇಶ ಸೇವೆಯನ್ನು ಪರಿಚಯಿಸುತ್ತಿದೆ. ಈ ಉಪಕ್ರಮವನ್ನು Spoky — AI ಆಧಾರಿತ ಗ್ರಾಹಕ ಸ೦ಪರ್ಕ ವೇದಿಕೆ — ಬೆಂಬಲಿಸುತ್ತಿದ್ದು KYC ನವೀಕರಣ, ಸಾಲ ಸಂಗ್ರಹಣೆ, ಸ್ಥಿರ ಠೇವಣಿ ಹಾಗೂ ಸಮ್ಮತಿ -ಸಂಬಂಧಿತ ಸೇವೆಗಳಲ್ಲಿ ಗ್ರಾಹಕರೊಂದಿಗೆ RBI ಮಾರ್ಗಸೂಚಿ ಅನುಸಾರ ಸ್ಪಷ್ಟ ಮತ್ತು ಸರಳ ಸ೦ಪರ್ಕ ಒದಗಿಸಲಿದೆ.

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಕೂಡ ಡಿಜಿಟಲ್ ಬ್ಯಾಂಕಿಂಗ್ ಅಳವಡಿಕೆಯನ್ನು ಪ್ರೋತ್ಸಾಹಿಸುತ್ತಿದ್ದು, ಎಲ್ಲಾ ಬ್ಯಾಂಕ್‌ಗಳು ಸೈಬರ್ ಸುರಕ್ಷತೆ ಮತ್ತು ಗ್ರಾಹಕ ಡೇಟಾ ಸುರಕ್ಷತೆಗೆ ಆದ್ಯತೆ ನೀಡಬೇಕೆಂದು ಮಾರ್ಗದರ್ಶನ ನೀಡಿದೆ. ಭಾರತ್ ಬ್ಯಾಂಕ್ ಈ ನಿಟ್ಟಿನಲ್ಲಿ ಮಾದರಿ ಹೆಜ್ಜೆ ಇಡುತ್ತಿದ್ದು, ತಂತ್ರಜ್ಞಾನ ಮೂಲಕ ಗ್ರಾಹಕ ಸೇವೆಯನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲು ಸಿದ್ಧವಾಗಿದೆ.

ಭಾರತ್ ಬ್ಯಾಂಕ್ ಯಾವಾಗಲೂ ತನ್ನ ಠೇವಣಿದಾರರಿಗೆ ಅತ್ಯುತ್ತಮ ಸೇವೆ ನೀಡುವಲ್ಲಿ ಮುಂಚೂಣಿಯಲ್ಲಿದ್ದು, ಗ್ರಾಹಕರ ಉಳಿತಾಯಕ್ಕೆ ಗರಿಷ್ಠ ಲಾಭ ದೊರಕಿಸುವ ನಿಟ್ಟಿನಲ್ಲಿ ಸದಾ ಶ್ರಮಿಸುತ್ತಿದೆ. ಇತ್ತೀಚೆಗೆ ಬ್ಯಾಂಕ್ ಲಾಂಗ್ ಟರ್ಮ್ ಸುಬೋರ್ಡಿನಟೇಡ್ ಬಾಂಡ್ಸ್ಅನ್ನು (LTSB) ಜಾರಿಗೆ ತಂದಿದೆ. ಹೆಚ್ಚಿನ ಲಾಭ ಬಯಸುವ ಗ್ರಾಹಕರಿಗೆ ಇದು ನಿಜಕ್ಕೂ ಒಂದು ಸುವರ್ಣ ಅವಕಾಶವಾಗಿದೆ.

ಕೇವಲ ಠೇವಣಿ ಸೇವೆಗಳಿಗೆ ಮಾತ್ರವಲ್ಲ, ಭಾರತ್ ಬ್ಯಾಂಕ್ ದೇಶದ ಆರ್ಥಿಕ ಅಭಿವೃದ್ಧಿಗೆ ನಿಜವಾದ ಪ್ರೇರಕ ಶಕ್ತಿಯಾಗಿ ಕಾರ್ಯ ನಿರ್ವಹಿಸುತ್ತಿದೆ. ಉದ್ಯಮ, ಗೃಹ, ಶಿಕ್ಷಣ ಸೇರಿದಂತೆ ವ್ಯಾಪಕ ಶ್ರೇಣಿಯ ಸಾಲ ಯೋಜನೆಗಳನ್ನು ಆಕರ್ಷಕ ಬಡ್ಡಿದರಗಳಲ್ಲಿ ನೀಡುವ ಮೂಲಕ, ಸಮಾಜದ ಎಲ್ಲಾ ವರ್ಗಗಳ ಕನಸುಗಳನ್ನು ನನಸಾಗಿಸಲು ಬ್ಯಾಂಕ್ ಸದಾ ಸಹಕರಿಸಿದೆ.

ಭಾರತ್ ಬ್ಯಾಂಕಿನ ಸಾಲ ಸೇವೆಗಳು ಲಕ್ಷಾಂತರ ಕುಟುಂಬಗಳ ಜೀವನ ಮಟ್ಟ ಸುಧಾರಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸಿ, ಭಾರತದ ಅಭಿವೃದ್ಧಿಯಲ್ಲಿ ಭಾಗೀದಾರನಾಗಿ ಗುರುತಿಸಿಕೊಂಡಿದೆ.ವೈಯಕ್ತಿಕ ಸೇವೆಗೆ ಸದಾ ಹೆಸರಾದ ಭಾರತ್ ಬ್ಯಾಂಕ್, ರಾಜ್ಯ ಮತ್ತು ರಾಷ್ಟ್ರ ಮಟ್ಟದ ಸಂಸ್ಥೆಗಳಿಂದ 80ಕ್ಕೂ ಹೆಚ್ಚು ಪ್ರಶಸ್ತಿಗಳನ್ನು ಪಡೆದಿದ್ದು, ಇದು ಬ್ಯಾಂಕಿನ ಸೇವಾ ಶ್ರೇಷ್ಠತೆಗೆ ಸಾಕ್ಷಿಯಾಗಿದೆ. ಇದರೊಂದಿಗೆ, ಬ್ಯಾಂಕ್ ನಿರಂತರವಾಗಿ ‘A’ ವರ್ಗದ ಲೆಕ್ಕಪರಿಶೋಧನಾ ಶ್ರೇಣಿಯನ್ನು ಕಾಯ್ದುಕೊಳ್ಳುತ್ತಾ, ಸ್ವಾಸ್ಥ್ಯಕರ CRAR (Capital to Risk-Weighted Assets Ratio) ಅನ್ನು ನಿರ್ವಹಿಸುವ ಮೂಲಕ ತನ್ನ ಆರ್ಥಿಕ ದೃಢತೆ ಮತ್ತು ವಿಶ್ವಾಸಾರ್ಹತೆಯನ್ನು ಸಾಬೀತುಪಡಿಸಿದೆ.



Related posts

ಉಡುಪಿ : ಕಟಪಾಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಎಲ್‌ಪಿಜಿ ಟ್ಯಾಂಕರ್ ಮಗುಚಿ ಆತಂಕ: ಅಗ್ನಿಶಾಮಕ ದಳದ ಸಮಯೋಚಿತ ಕಾರ್ಯಾಚರಣೆಯಿಂದ ತಪ್ಪಿದ ಭಾರಿ ಅನಾಹುತ

Mumbai News Desk

ಮುಲುಂಡ್ ಕ್ಷೇತ್ರದ ‌ಕಾಂಗ್ರೇಸ್ ಪಕ್ಷದ ಅಭ್ಯರ್ಥಿಯಾಗಿ ರಾಕೇಶ್ ಶೆಟ್ಟಿ  ಕಣಕ್ಕೆ

Mumbai News Desk

ವಸಯಿ ತಾಲೂಕ ಹೋಟೆಲ್ ಎಸೋಸಿಯೇಶನಿಂದ  ಪ್ರತಿಭಟನೆ

Mumbai News Desk

ಸ್ಥಳೀಯರ ಹಕ್ಕುಗಳ ರಕ್ಷಣೆಗೆ ಬೃಹತ್ ಪ್ರತಿಭಟನೆ: ಹೆಜಮಾಡಿ–ಪಡುಬಿದ್ರಿ ಟೋಲ್ ಹೋರಾಟ ಸಮಿತಿಯಿಂದ ಪೋಸ್ಟರ್ ರಿಲೀಸ್

Mumbai News Desk

ಯುವ ಕ್ರಿಕೆಟಿಗ ವೈಭವ್ ಸೂರ್ಯವಂಶಿ ಅವರನ್ನು ಭೇಟಿಯಾದ ಪ್ರಧಾನಿ ಮೋದಿ

Mumbai News Desk

ಮಹಾಕುಂಭ ಮೇಳಕ್ಕೆ ಹರಿದುಬಂದ ಭಕ್ತ ಸಾಗರ: ತ್ರಿವೇಣಿ ಸಂಗಮದಲ್ಲಿ ಕಾಲ್ತುಳಿತ; ಹಲವರ ಸಾವು ಶಂಕೆ, ಅಮೃತಸ್ನಾನಕ್ಕೆ ತಾತ್ಕಾಲಿಕ ತಡೆ

Mumbai News Desk