July 23, 2026
Mumbai News Kannada
ತುಳುನಾಡು

ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಮಹಿಮೆ ಸಾರುವ ವೀಡಿಯೋ ಆಲ್ಬಮ್ ಬಿಡುಗಡೆ







.

.

ಶ್ರೀ ಕ್ಷೇತ್ರ ಬಪ್ಪನಾಡು ದೇವಸ್ಥಾನದ ಹಿರಿಮೆ ಸಾರುವ ದೃಶ್ಯ ಕಾವ್ಯದ ವೀಡಿಯೋ ಅಲ್ಬಮ್ ಎಪ್ರಿಲ್ 3 ರಂದು ಕ್ಷೇತ್ರದಲ್ಲಿ ನಡೆದ ಸಮಾರಂಭದಲ್ಲಿ ಬಿಡುಗಡೆ ಗೊಂಡಿತು.ಬಪ್ಪನಾಡು ದುರ್ಗಾ ಪಾರಾಯಣ ಗ್ರೂಪ್ ಪ್ರಸ್ತುತಿಯಲ್ಲಿ, ಮೂಲ್ಕಿಯ ದುರ್ಗಾ ಸ್ಟುಡಿಯೋ ಸಂಕಲನದ ಭಕ್ತಿಗೀತೆಯ ಅಲ್ಬಮ್ ಅದಮಾರು ರಾಮಕೃಷ್ಣ ಭಟ್ ಬೆಂಗಳೂರು ಇವರಿಂದ ರಚಿಸಲ್ಪಟ್ಟ ಹಾಡಿಗೆ ಚಲನಚಿತ್ರ ಸಂಗೀತ ನಿರ್ದೇಶಕ ಶ್ರೀ ಭಾಸ್ಕರ ರಾವ್ ಬಿ.ಸಿ ರೋಡ್ ಅವರು ಸಂಗೀತ ನೀಡಿದ್ದು, ಮಂಗಳೂರಿನ ಮಹಿಳಾ ಶ್ರೀ ಸತ್ಯಸಾಯಿ ಸಂಸ್ಥೆಯ ಉತ್ತರ ವಿಭಾಗದ ಆಧ್ಯಾತ್ಮಿಕ ಸಂಯೋಜಕಿ ಮಂಜುಳಾ ಪ್ರಭಾಕರ್ ರಾವ್ ಅವರು ಧ್ವನಿ ನೀಡಿದ್ದಾರೆ.
ಈ ವಿಶೇಷ ಸಮಾರಂಭದಲ್ಲಿ ಕ್ಷೇತ್ರದ ಪ್ರಮುಖರಾದ ಶ್ರೀ ದುಗ್ಗಣ್ಣ ಸಾವಂತರು, ಅರಸರು ಮೂಲ್ಕಿ ಸೀಮೆ ಹಾಗೂ ಕ್ಷೇತ್ರದ ಕಾರ್ಯ ನಿರ್ವಹಣಾಧಿಕಾರಿ ಶ್ವೇತಾ ಪಳ್ಳಿ,ಶಿಬರೂರು ವೇದಮೂರ್ತಿ ಗೋಪಾಲಕೃಷ್ಣ ತಂತ್ರಿ, ಸರೋಜಿನಿ ಸುವರ್ಣ, ನಾಗೇಶ್ ಬಪ್ಪನಾಡು, ರಾಧಾ ಎಚ್ ಭಟ್, ನಾಗರಾಜ ಹೆಜಮಾಡಿ, ರಾಮಚಂದ್ರ ಬಪ್ಪನಾಡು, ಶ್ರೀನಿವಾಸ ಬಪ್ಪನಾಡು, ಪ್ರಥಮ್ ಎಸ್ ಬಪ್ಪನಾಡು, ಬಿ ಕೆ ಶೆಟ್ಟಿ ಅವರು ಅತಿಥಿಗಳಾಗಿ ಭಾಗವಹಿಸಿದ್ದರು .ಈ ಯೋಜನೆಯು ನಾಗೇಶ್ ಬಪ್ಪನಾಡು ಅವರ ಸಂಯೋಜನೆ ಭಕ್ತಿ ಮತ್ತು ಸಂಗೀತದ ಈ ಅಪೂರ್ವ ಸಂಗಮವನ್ನು ಕಣ್ತುಂಬಿಕೊಳ್ಳಲು ಭಕ್ತಾಭಿಮಾನಿಗಳು ಅಪಾರ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.



Related posts

ಹೂಡೆ : ಶ್ರೀ ಗಜಾನನ ಬಿಲ್ಲವರ ಸೇವಾ ಸಂಘದ 101ನೇ ಭಜನಾ ಮಂಗಳೋತ್ಸವ ಹಾಗೂ ಪ್ರತಿಭಾ ಪುರಸ್ಕಾರ ವೈಭವ

Mumbai News Desk

ಕಟಪಾಡಿ : ಶ್ರೀ ಸಾಯಿ ಈಶ್ವರ್ ಗುರೂಜಿ ಅವರ ಮಾರ್ಗದರ್ಶನದಲ್ಲಿ ಅಯ್ಯಪ್ಪ ಸ್ವಾಮಿ ವ್ರತದಾರಿಗಳಿಗೆ ಅನ್ನದಾನ ಸೇವೆ, ವಿಶ್ರಾಂತಿ ವ್ಯವಸ್ಥೆ

Mumbai News Desk

ಹೆಜಮಾಡಿ ಬಿಲ್ಲವ ಸಂಘದಲ್ಲಿ ಉಚಿತ ವೈದ್ಯಕೀಯ ಹಾಗೂ ದಂತ ತಪಾಸಣಾ ಶಿಬಿರ

Mumbai News Desk

ಸುರತ್ಕಲ್ ಬಂಟರ ಸಂಘದ ನೂತನ ಕಟ್ಟಡ ಸಮಿತಿಯ ಚೆಯರ್ ಮೆನ್ ಆಗಿ ಕರುಣಾಕರ ಶೆಟ್ಟಿ ಮಧ್ಯಗುತ್ತು ಆಯ್ಕೆ

Mumbai News Desk

ಶ್ರೀ ಹೊಸ ಮಾರಿಗುಡಿ ದೇವಸ್ಥಾನ ಕಾಪು : ಸ್ವರ್ಣ ಗದ್ದುಗೆ ನಿರ್ಮಾಣಕ್ಕೆ ಮುಹೂರ್ತ, ಅ. 29ರ ತನಕ ಸ್ವರ್ಣ ಸಮರ್ಪಣೆಗೆ ಭಕ್ತರಿಗೆ ಅವಕಾಶ

Mumbai News Desk

ಬಪ್ಪನಾಡು ಶ್ರೀ ಗಣೇಶೋತ್ಸವ ಸಮಿತಿಗೆ ನೂತನ ಪದಾಧಿಕಾರಿಗಳ ನೇಮಕ : ಅಧ್ಯಕ್ಷರಾಗಿ ಸುನೀಲ್ ಆಳ್ವ ಆಯ್ಕೆ

Mumbai News Desk