August 4, 2026
Mumbai News Kannada
ಮುಂಬಯಿ

ಜ್ಞಾನ ವಿಕಾಸ ಮಂಡಳದ ಮೆಹತಾ ಕಾಲೇಜಿನಲ್ಲಿ ಘಟಿಕೋತ್ಸವ:





ವಿದ್ಯಾರ್ಥಿಗಳು ಆರೋಗ್ಯವನ್ನು ಕಾಪಾಡಿಕೊಂಡು ಸಮಾಜ ಸೇವೆ ಮಾಡಲು ಕರೆ: ಕಿಮ್ಸ್ ನಿರ್ದೇಶಕ ಹೃದಯರೋಗ ತಜ್ಞ ಬಿ. ಸಿ.ಕಲ್ಮಠ

ನವಿ ಮುಂಬಯಿ : ಐರೋಲಿ ಯಲ್ಲಿ ಜ್ಞಾನ ವಿಕಾಸ ಮಂಡಳದ ಮೆಹತಾ ಮಹಾವಿದ್ಯಾಲಯದಲ್ಲಿ ಘಟಿಕೋತ್ಸವ ಸಮಾರಂಭ ಕಾಲೇಜಿನ ಸಭಾಗೃಹದಲ್ಲಿ ಹಮ್ಮಿಕೊಳ್ಳಲಾಗಿತ್ತು. ಘಟಿಕೋತ್ಸವದಲ್ಲಿ ಕಿಮ್ಸ್ ಡೈರೆಕ್ಟರ್ ಹಾಗು ಕಾರ್ಡಿಯಾಲಜಿಸ್ಟ್ ಡಾ. ಬಿ.ಸಿ.ಕಲ್ಮಠ ಅವರು ಮುಖ್ಯ ಅಥಿತಿ ಯಾಗಿ ಆಗಮಿಸಿದ್ದರು. ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು ಆರೋಗ್ಯಕ್ಕೆ ಹೆಚ್ಚಿನ ಗಮನ ಹರಿಸಿ ಒಳ್ಳೆಯ ಆರೋಗ್ಯ ಕಾಪಾಡಿ ದೇಶ ಹಾಗು ಸಮಾಜ ಸೇವೆ ಸಲ್ಲಿಸಬೇಕೆಂದು ಹೇಳಿದರು.ಉನ್ನತ ವ್ಯಾಸಂಗ ಮಾಡಿ ಶಿಸ್ತುಬದ್ಧ ಜೀವನ ರೂಪಿಸಿಕೊಳ್ಳಬೇಕು.ಶಿಕ್ಷಣ ಜೀವನದಲ್ಲಿ ಮಹತ್ವದ ಘಟ್ಟ, ಒಳ್ಳೆಯ ಶಿಕ್ಷಣ ಪಡೆದು ಒಳ್ಳೆಯ ನಾಗರಿಕರಾಗಿ ವಿದ್ಯಾಲಯಕ್ಕೆ ಹೆಸರು ತರಬೇಕೆಂದು ಹಾಗು ಸಮಾಜಕ್ಕೆ ಸೇವೆಯನ್ನು ಸಲ್ಲಿಸಬೇಕೆಂದು ಹೇಳಿದರು.
ಪ್ರಾಚಾರ್ಯ ಡಾ. ಬಿ.ಆರ್. ದೇಶಪಾಂಡೆ ಗಣ್ಯರನ್ನು ಸ್ವಾಗತಿಸುತ್ತಾ ಮೆಹತಾ ಮಹಾವಿದ್ಯಾಲಯದ ಕಾರ್ಯಚಟುವಟಿಕೆಗಳು ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆಗೆ ಪ್ರೋತ್ಸಾಹ ನೀಡುತ್ತದೆ.ಮೆಹತಾ ಕಾಲೇಜಿನ ಪದವೀಧರರು ವಿವಿಧ ಕ್ಷೇತ್ರಗಳಲ್ಲಿ ಮಹತ್ವದ ಹುದ್ದೆಗಳನ್ನು ಅಲಂಕರಿಸಿದ್ದಾರೆ ಎಂದು ತಿಳಿಸುತ್ತಾ ಮುಖ್ಯ ಅತಿಥಿ ಡಾ ಬಿ. ಸಿ. ಕಲ್ಮಠ ಅವರನ್ನು , ಆಡಳಿತಮಂಡಳಿಯ ಗಣ್ಯರನ್ನು ಶಿಕ್ಷಕ ಹಾಗು ಶಿಕ್ಷಕೇತರ ಸಿಬ್ಬಂದಿ ಮತ್ತು ಪದವಿ ಪ್ರಮಾಣಪತ್ರ ಪಡೆಯುವ ಪದವೀಧರರನ್ನು ಸ್ವಾಗತಿಸಿದರು.

ಸಮಾರಂಭ ವನ್ನು ಉದ್ದೇಶಿಸಿ ಮಾತನಾಡಿದ ಜ್ಞಾನ ವಿಕಾಸ ಮಂಡಳದ ಕಾರ್ಯಾಧ್ಯಕ್ಷ ಶ್ರೀ ಕೃಷ್ಣಾ ದೇಶಪಾಂಡೆ ಅವರು ವಿದ್ಯಾರ್ಥಿಗಳು ಸಂಶೋಧನೆ ಕ್ಷೇತ್ರದಲ್ಲಿ ಅನುಭವ ಪಡೆದು ಆವಿಷ್ಕಾರಗಳು ಜನರಿಗೆ ತಲುಪಿಸಬೇಕೆಂದು ಕರೆ ನೀಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಜ್ಞಾನ ವಿಕಾಸ ಮಂಡಳ ಮೆಹತಾ ಕಾಲೇಜಿನ ಅಧ್ಯಕ್ಷರಾದ ಶ್ರೀ ವಿ. ಏನ್ ಹೆಗಡೆ ಅವರು ಮೆಹತಾ ಮಹಾವಿದ್ಯಾಲಯ ಈಗ 25 ವರ್ಷಗಳ ಶಿಕ್ಷಣದ ಸೇವೆಯಲ್ಲಿ ಯಶಸ್ವಿ ಯಾಗಿ ಮುಗಿಸಿ ಬೆಳ್ಳಿಹಬ್ಬದ ಸಂಭ್ರಮದಲ್ಲಿ ಘಟಿಕೋತ್ಸವ ಆಚರಿಸುತ್ತಿದೆ, ವಿದ್ಯಾರ್ಥಿಗಳು ಸಾಮಾಜಿಕ ಜವಾಬ್ದಾರಿ ಅರಿತು ಕೆಲಸ ನಿರ್ವಹಿಸಬೇಕು. ವಿದ್ಯಾರ್ಥಿಗಳು ಉನ್ನತ ಹುದ್ದೆಗಳಲ್ಲಿ ಅಥವಾ ಸ್ವಉದ್ಯೋಗ ನಿರ್ವಹಿಸಿ ಸೇವೆಯೇ ಕರ್ತವ್ಯ ಎಂದು ಪರೋಪಕಾರಿಯಾಗಿ ಜೀವನ ನಡೆಸಬೇಕೆಂದು ಹೇಳಿದರು.
ದೀಪ ಪ್ರಜ್ವಲನೆ ಮತ್ತು ವಿದ್ಯಾಲಯದ ಪ್ರಾರ್ಥನೆ ಹಾಗು ವಿಶ್ವವಿದ್ಯಾಲಯಲಯದ ಗೀತೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. 414 ಪದವಿಪ್ರಮಾಣ ಪತ್ರವನ್ನು ಗಣ್ಯರು ವಿತರಿಸಿ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಜ್ಞಾನ ವಿಕಾಸ ಮಂಡಳದ ಪ್ರಧಾನ ಕಾರ್ಯದರ್ಶಿ ವ್ಯಾಸಮೂರ್ತಿ ಮುಗಳಿ ಹಾಗು ಜೊತೆ ಪ್ರಧಾನ ಕಾರ್ಯದರ್ಶಿ ಶ್ರೀ ಜಾನ್ ಪಿ ಥಾಮಸ್ ವೇದಿಕೆಯ ಮೇಲೆ ಉಪಸ್ತಿತರಿದ್ದರು. ಆಡಳಿತ ಮಂಡಳಿಯ ಸದಸ್ಯರಾದ ಶ್ರೀ ರಮೇಶ್.ವಿ. ಪಾಟೀಲ, ಶ್ರೀ ರಾಹುಲ ಮಾಂಗಲೆ, ಶ್ರೀ ಸತೀಶ ಖಿಲಾರಿ ಶ್ರೀ ಸಮರ ಟಂಕಸಾಲಿ ಹಾಗು ಕಿಮ್ಸ್ ಹಾಸ್ಪಿಟಲ್ ದ ಸೀನಿಯರ್ ಮ್ಯಾನೇಜರ್ ಶ್ರೀ ರಾಜೇಶ ಶುಕ್ಲಾ ಹಾಗು ಶಿಕ್ಷಕ ,ಶಿಕ್ಷಕೇತರ ಸಿಬ್ಬಂದಿ ಮತ್ತು ಪಾಲಕರು ಹಾಗು ಪತ್ರಕರ್ತರು ಕಾರ್ಯಕ್ರಮದಲ್ಲಿ ಉಪಸ್ತಿತರಿದ್ದರು. ಘಟಿಕೋತ್ಸವ ಕಾರ್ಯಕ್ರಮದಲ್ಲಿ 2024-25 ರ ಕಾಲೇಜಿನ ವಾರ್ಷಿಕ ಪತ್ರಿಕೆ ” Horizon” ಉಪಸ್ಥಿತರಿದ್ದ ಗಣ್ಯರು ಬಿಡುಗಡೆ ಮಾಡಿದರು. ಸ್ಟೂಡೆಂಟ್ಸ್ ಕೌನ್ಸಿಲ್ ದ ವತಿಯಿಂದ ಹಮ್ಮಿಕೊಳ್ಳದ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಹಿರಿಯ ಉಪನ್ಯಾಸಕರಾದ ಉಪ ಪ್ರಾಚಾರ್ಯ ಶ್ರೀ ಕೈಲಾಶ್ ಪಾಟೀಲ, ಪ್ರೊ ಉಜ್ವಲಾ ಪವಾರ, ಪ್ರೊ ಜಾಹ್ನವಿ ಕ್ಷೀರಸಾಗರ, ಡಾ.ರಶ್ಮಿ ಲೆಂಗಾಡೆ, ಪ್ರೊ ಪ್ರೇಮಾ ಬರ್ಧನ ಮುಂತಾದವರು ಗಣ್ಯರ ಪರಿಚಯ, ಪದವಿ ಪ್ರಮಾಣ ಪತ್ರಗಳ ವಿತರಣೆ ನಡೆಸಿಕೊಟ್ಟರು. ವಿದ್ಯಾರ್ಥಿ ಕೌನ್ಸಿಲ್ ದ ಕಾರ್ಯದರ್ಶಿ ಆಕರ್ಷಣ ಚೌಧರಿ ಮತ್ತು ಕುಮಾರಿ ಆದಿತಿ ಪುಂಡ ಕಾರ್ಯಕ್ರಮ ನಿರ್ವಹಣೆ ಮತ್ತು ಧನ್ಯವಾದಗಳನ್ನು ಸಮರ್ಪಿಸಿದರು.



Related posts

ಸಿರಿನಾಡ ವೆಲ್ಫೇರ್ ಅಸೋಸಿಯೇಷನ್‌ ರಜತ ಮಹೋತ್ಸವ: ‘ಆಟಿಡ್ ಒಂಜಿ ದಿನ’ ಹಾಗೂ ಯಕ್ಷಗಾನ ತಾಳಮದ್ದಳೆ

Mumbai News Desk

ಶ್ರೀ ಮೂಕಾಂಬಿಕ ದೇವಿ ದೇವಸ್ಥಾನ ಬಿರ್ಲಾ ಗೇಟ್ ಶಹಾಡ್ : ಮಹಾ ಶಿವರಾತ್ರಿಯ ಅಂಗವಾಗಿ ಏಕಹಾ ಭಜನೆ

Mumbai News Desk

ಮುಂಬೈ: ಬಾಂದ್ರಾದಲ್ಲಿ ರೈಲ್ವೆ ಭೂಮಿ ತೆರವು ವೇಳೆ ಭಾರಿ ಹಂಗಾಮು, ಪೊಲೀಸರ ಮೇಲೆ ಕಲ್ಲು ತೂರಾಟ, ಲಾಠಿ ಪ್ರಹಾರ

Mumbai News Desk

ಶ್ರೀ ಮಹಾ ವಿಷ್ಣು ಮoದಿರದ ಬಾಲಕಿಯರ ಭಜನಾ ತoಡಕ್ಕೆ ಪ್ರಥಮ ಬಹುಮಾನ.

Mumbai News Desk

ಬಾಂಬೆ ಬಂಟ್ಸ್ ಅಸೋಸಿಯೇಶನ್ ಮಹಿಳಾ ವಿಭಾಗ ದಿಂದ ಲಲಿತ ಶಾಸ್ತ್ರ ನಾಮಾವಳಿ ಮತ್ತು ಭಜನೆ.

Mumbai News Desk

ತುಳು ಕನ್ನಡ ವೆಲ್ಫೇರ್ ಅಸೋಸಿಯೇಷನ್ (ರಿ) ಕಾಮೋಟೆ ಇದರ ಮಹಿಳಾ ವಿಭಾಗದ ವತಯಿಂದ ಜಾಗತಿಕ ಮಹಿಳಾ ದಿನಾಚರಣೆ,

Mumbai News Desk