September 17, 2026
Mumbai News Kannada
ಪ್ರಕಟಣೆ

ಶ್ರೀ ಮದ್ಭಾರತ ಮಂಡಳಿ ಮುಂಬೈ : ಜೂನ್ 20ರಿಂದ 149ನೇ ಪುಣ್ಯ ಗ್ರಂಥ ಪಾರಾಯಣ ಪ್ರಾರಂಭ





ಮುಂಬೈಯ ಹಿರಿಯ ಧಾರ್ಮಿಕ ಸಂಘಟನೆಯಾದ ಶ್ರೀ ಮದ್ಭಾರತ ಮಂಡಳಿಯು 148ವರ್ಷಗಳಿಂದ ಪುಣ್ಯ ಗ್ರಂಥ ಪಾರಾಯಣವನ್ನು ನಡೆಸಿಕೊಂಡು ಬಂದಿರುತ್ತದೆ. ಅಂತೆಯೇ ಈ ವರ್ಷ 149 ನೇ ಪುಣ್ಯ ಗ್ರಂಥ ಪಾರಾಯಣ ಕಾರ್ಯಕ್ರಮವು ಶನಿವಾರ ಜೂನ್ 20ರಂದು ಸಂಜೆ 5 ಕ್ಕೆ ಮಂಡಳಿಯ ಅಂಧೇರಿ ಪಶ್ಚಿಮದ ವೀರಾ ದೇಸಾಯಿ ರಸ್ತೆಯ ಸಮೀಪದ ಎಂ ವಿ ಎಂ ಎಜುಕೇಶನಲ್ ಮಾರ್ಗದಲ್ಲಿರುವ ಶ್ರೀ ಲಕ್ಷ್ಮೀ ನಾರಾಯಣ ಮಂದಿರದಲ್ಲಿ ಪರಂಪರೆಯಂತೆ ಪ್ರಾರಂಭವಾಗಲಿದೆ . ಈ ವರ್ಷ ಗ್ರಂಥ ವಾಚನಕ್ಕೆ ಲಕ್ಷೀಶ ಕವಿ ವಿರಚಿತ “ಜೈಮಿನಿ ಭಾರತ ” ಎಂಬ ಪುಣ್ಯ ಗ್ರಂಥವನ್ನು ಆಯ್ಕೆ ಮಾಡಲಾಗಿದೆ. ಈ ಗ್ರಂಥದ ವಾಚಕರಾಗಿ ಬೈಕಂಪಾಡಿ ಶ್ಯಾಮ್ ಕೆ. ಪುತ್ರನ್ ,ಅರ್ಥ ವಿವರಣೆಗೆ ಮಲ್ಪೆ ಪುಷ್ಪಾ ಜಿ. ಬಂಗೇರ ,ಅರ್ಚಕ ಭಟ್ಟರಾಗಿ ವಾಸು ಉಪ್ಪುರು ,ಚಾಮರ ಸೇವೆಗೆ ಹೊಸಬೆಟ್ಟು ಎಚ್. ಮಹಾಬಲ ಮತ್ತು ಮುಳೂರು ಹರಿಶ್ಚಂದ್ರ ಕೆ.ಕಾಂಚನ್, ಜನಮೇಜಯ ಪೀಠದಲ್ಲಿ ಕುಳೂರು ನಾಗೇಶ್ ಎಲ್. ಮೆಂಡನ್,ಪೂಜಾ ಮೇಲ್ವಿಚಾರಕರಾಗಿ ಅಳಕೆ ಪುರಂದರ ಅಮೀನ್ ಅವರು ಮಂಡಳಿಯ ವಾಡಿಕೆಯಂತೆ ದೀಕ್ಷೆ ಪಡೆದಿರುವರು
ಜೂನ್ 20ರಂದು ಪಾರಾಯಣ ಪ್ರಾರಂಭವಾದ ನಂತರ ಪ್ರತಿ ಶನಿವಾರ ಸಂಜೆ 5 ರಿಂದ 7ರ ವರೆಗೆ ನಡೆಯಲಿದೆ.
ಗ್ರಂಥ ವಾಚನದ ನಂತರ ಭಜನೆ, ಮಹಾ ಆರತಿ, ಪ್ರಸಾದ ವಿತರಣೆ ಜರಗಲಿದೆ.ಈ ಗ್ರಂಥ ವಾಚನವು 2027ರ ಫೆಬ್ರವರಿ ವರೆಗೆ ನಿರಂತರ ಜರಗಲಿದೆ. ಪಾರಾಯಣ ದ ಪೂರ್ವಭಾವಿಯಾಗಿ ಮಂಡಳಿಯ ಶ್ರೀ ಲಕ್ಷ್ಮಿ ನಾರಾಯಣ ದೇವಸ್ಥಾನ ದ ಪ್ರಧಾನ ಅರ್ಚಕರಾದ ಗುರು ಪ್ರಸಾದ್ ಭಟ್ ಅವರಿಂದ ಗಣ ಹೋಮ ಹಾಗೂ ಪರಂಪರೆಯ ವಿಧಿ ವಿಧಾನಗಳು ನಡೆಯಲಿದೆ
ಈ ಪ್ರಾರಂಭೋತ್ಸವದಲ್ಲಿ ತುಳು ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀ ಲಕ್ಷ್ಮಿ ನಾರಾಯಣ ದೇವರ ಕ್ರಪೆಗೆ ಪಾತ್ರರಾಗಬೇಕೆಂದು ಮಂಡಳಿಯ ಅಧ್ಯಕ್ಷರಾದ ಜಗನ್ನಾಥ ಪಿ. ಪುತ್ರನ್, ಪ್ರಧಾನ ಕಾರ್ಯದರ್ಶಿ ಹರಿಶ್ಚಂದ್ರ ಸಿ. ಕಾಂಚನ್ ಹಾಗೂ ಉಪಾಧ್ಯಕ್ಷರಾದ ನಾಗೇಶ್ ಎಲ್. ಮೆಂಡನ್ ಮತ್ತು ಲೋಕನಾಥ್ ಪಿ. ಕಾಂಚನ್, ಜತೆ ಕಾರ್ಯದರ್ಶಿ ಗಳಾದ ಸುರೇಂದ್ರ ನಾಥ ಹಳೆಯಂಗಡಿ ಮತ್ತು ಶ್ಯಾಮ್ ಕೆ. ಪುತ್ರನ್,
ಪ್ರಧಾನ ಕೋಶಾಧಿಕಾರಿ ಕೇಶವ್ ಆರ್. ಪುತ್ರನ್, ಜತೆ ಕೋಶಾಧಿಕಾರಿ ಗಳಾದ ಜಗನ್ನಾಥ ಆರ್. ಕಾಂಚನ್ ಮತ್ತು ರಮೇಶ್ ಎಸ್. ಅಮೀನ್ ಮತ್ತು ಪಾರುಪತ್ಯಗಾರರು ಹಾಗೂ ಸಮಿತಿ ಸದಸ್ಯರು
ವಿನಂತಿ ಮಾಡಿದ್ದಾರೆ.



Related posts

ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಮೀರಾರೋಡ್, ನ.27 ರಂದು ವಾರ್ಷಿಕ ಶ್ರೀ ಅಯ್ಯಪ್ಪ ಮಹಾಪೂಜೆ.

Mumbai News Desk

ಜ.13ಕ್ಕೆ ಗುರು ನಾರಾಯಣ ರಾತ್ರಿ ಪ್ರೌಢ ಶಾಲೆಯ 63ನೇ ವಾರ್ಷಿಕ ದಿನಾಚರಣೆ

Mumbai News Desk

ಬೊರಿವಲಿ ಶ್ರೀ ಮಹಿಷಮರ್ಧಿನಿ ದೇವಸ್ಥಾನ ನಾಗರ ಪಂಚಮಿ ಉತ್ಸವ

Mumbai News Desk

ಮರಳುಗಾಡಿನಿಂದ ಮಹಾನಗರಕ್ಕೆ ಗಮ್ಮತ್ ಕಲಾವಿದೆರ್, ಅ. 27ರಂದು ಕನ್ನಡ ಸಂಘ ಸಯನ್ ನ ವಾರ್ಷಿಕೋತ್ಸವದ ಅಂಗವಾಗಿ ದುಬಾಯಿಯ ಕಲಾವಿದರಿಂದ “ವಾ ಗಳಿಗೆಡ್ ಪುಟುದನಾ” ತುಳು ಹಾಸ್ಯಮಯ ನಾಟಕ ಪ್ರದರ್ಶನ

Mumbai News Desk

ಶ್ರೀ ಶಾಂತ ದುರ್ಗಾ ದೇವಿ ದೇವಸ್ಥಾನ ಗೋರೆಗಾಂವ್, ಬ್ರಹ್ಮಕಲಶೋತ್ಸವ. ಡಿ.10 ರಂದು  ನೂತನ ಬಿಂಬದ ವೈಭವೋಪೇತ ಮೆರವಣಿಗೆ.

Mumbai News Desk

ಕನ್ನಡ ಸಂಘ ಸಯನ್ ವತಿಯಿಂದ ಡಾ. ಸದಾನಂದ ಶೆಟ್ಟಿ ಯವರ ಮುಂದಾಳತ್ವದಲ್ಲಿ 08/02/2025 ರಂದು ಮುಂಬಯಿಯಲ್ಲಿ ಪ್ರಥಮ ಬಾರಿಗೆ ಬೃಹತ್‌ ಉಚಿತ ವೈದ್ಯಕೀಯ ಶಿಬಿರ

Mumbai News Desk