31 C
Mumbai
September 18, 2026
Mumbai News Kannada
ಮುಂಬಯಿ

ಕನ್ನಡ ಸಂಘ ಸಾಂತಾಕ್ರೂಜ್ ಆಷಾಢ ಆಚರಣೆ: ಕರಾವಳಿ ಜನತೆಗೆ ಆಟಿ (ಆಷಾಢ) ತಿಂಗಳು ಮಹತ್ವದ್ದು – ಸುಜಾತಾ ಆರ್. ಶೆಟ್ಟಿ





ಮುಂಬಯಿ: “ತುಳುನಾಡಿನ ಕೃಷಿ ಸಂಸ್ಕೃತಿಯ ನಾಡಾದ ಕರಾವಳಿಯ ಜಾನಪದ ಕೃಷಿ ಜೀವನ, ನಿಸರ್ಗದ ಮೇಲಿನ ಗೌರವ ಮತ್ತು ಭೂಮಿತಾಯಿಗೆ ಸಲ್ಲಿಸುವ ಧನ್ಯತಾಭಾವದ ಆಚರಣೆಯಾಗಿದೆ ಆಟಿ. ಕರಾವಳಿ ಜನತೆಗೆ ಆಟಿ (ಆಷಾಢ) ತಿಂಗಳು ಅತ್ಯಂತ ಮಹತ್ವದ್ದಾಗಿದೆ” ಎಂದು ಕನ್ನಡ ಸಂಘ ಸಾಂತಾಕ್ರೂಜ್ ಅಧ್ಯಕ್ಷೆ ಸುಜಾತಾ ಆರ್. ಶೆಟ್ಟಿ ತಿಳಿಸಿದರು.
ಬಾಂದ್ರಾ ಪೂರ್ವದ ಖೇರ್‌ವಾಡಿಯ ರಾಜಯೋಗ್ ಸಭಾಗೃಹದಲ್ಲಿ ಕನ್ನಡ ಸಂಘ ಸಾಂತಾಕ್ರೂಜ್ ಆಯೋಜಿಸಿದ ‘ಆಟಿ ಆಷಾಢ ಆಚರಣೆ’ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಕಾರ್ಯಕ್ರಮದಲ್ಲಿ ಅಂಧೇರಿ ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ಹರೀಶ್ ಜಿ. ಅಮೀನ್, ಉಪಾಧ್ಯಕ್ಷರುಗಳಾದ ಪುರುಷೋತ್ತಮ ಎಸ್. ಕೋಟ್ಯಾನ್, ಮೋಹನ್ ಸಿ. ಕೋಟ್ಯಾನ್, ಬಿಲ್ಲವ ಛೇಂಬರ್ ಆಫ್ ಕಾಮರ್ಸ್ ಎಂಡ್ ಇಂಡಸ್ಟ್ರೀ ಕಾರ್ಯಾಧ್ಯಕ್ಷ ಎನ್. ಟಿ. ಪೂಜಾರಿ, ಬಂಟ್ಸ್ ಸಂಘ ಮುಂಬಯಿ ಮಹಿಳಾ ವಿಭಾಗದ ಜೊತೆ ಕೋಶಾಧಿಕಾರಿ ರತ್ನಾ ಪಿ. ಶೆಟ್ಟಿ, ಉದ್ಯಮಿಗಳಾದ ಜಯಶಂಕರ್ ಶೆಟ್ಟಿ, ಮಹೇಶ್ ಶೆಟ್ಟಿ, ಜಯಕೃಷ್ಣ ಶೆಟ್ಟಿ, ಡಾ. ಸರಸ್ವತಿ ಶೆಟ್ಟಿ, ಡಾ. ಶಶಾಂಕ್ ಕಿಶೋರ್, ಕನ್ನಡ ಸಂಘ ಸಾಂತಾಕ್ರೂಜ್‌ನ ಗೌರವಾಧ್ಯಕ್ಷ ಎಲ್. ವಿ. ಅಮೀನ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

ಯುವಪೀಳಿಗೆಗೆ ಜಾನಪದ ಕಲೆ ಹಾಗೂ ಪಾಕವಿಧಾನದ ಪರಿಚಯ ಅಗತ್ಯ

“ಸಂಘದ ಮಹಿಳಾ ಸದಸ್ಯೆಯರೇ ವಿಧವಿಧದ ತಿಂಡಿ-ತಿನಿಸುಗಳನ್ನು ತಯಾರಿಸಿದ್ದರಿಂದ ಇದನ್ನು ಮಹಿಳಾ ಪ್ರಧಾನ ಕಾರ್ಯಕ್ರಮವೆನ್ನಬಹುದು. ಸಂಸ್ಕೃತಿಯ ಜೋಪಾನ ಹಾಗೂ ಶಿಕ್ಷಣದ ಕಾಳಜಿಯನ್ನಿರಿಸಿಕೊಂಡು ಸ್ಥಾನೀಯವಾಗಿ ಈ ಕನ್ನಡ ಸಂಘವು ಅತ್ಯಂತ ಶ್ರಮಿಸುತ್ತಿದೆ” ಎಂದು ಎನ್. ಟಿ. ಪೂಜಾರಿ ತಿಳಿಸಿದರು.
ಕನ್ನಡ ಸಂಘದ ಉಪಾಧ್ಯಕ್ಷ ದೊಡ್ಡಗುತ್ತು ಭುಜಂಗ ಆರ್. ಶೆಟ್ಟಿ ಮಾತನಾಡಿ, “ಸಂಘ-ಸಂಸ್ಥೆಗಳಲ್ಲಿ ‘ಆಟಿ ಕೂಟ’ ಆಚರಿಸುವುದರಿಂದ ಯುವಪೀಳಿಗೆಗೆ ಪ್ರೋತ್ಸಾಹ ನೀಡಿದಂತಾಗುತ್ತದೆ. ಶೈಕ್ಷಣಿಕ ಸಂಸ್ಥೆಗಳಲ್ಲಿ ಹಾಗೂ ಸಾಂಸ್ಕೃತಿಕ ವೇದಿಕೆಗಳಲ್ಲಿ ‘ಆಟಿಡೊಂಜಿ ದಿನ’ (ಆಟಿಯಲ್ಲೊಂದು ದಿನ) ಮಾದರಿಯ ಕಾರ್ಯಕ್ರಮಗಳನ್ನು ಆಯೋಜಿಸಿ, ಯುವಜನತೆಗೆ ಕರಾವಳಿಯ ಪಾಕವಿಧಾನ ಮತ್ತು ಜಾನಪದ ಕಲೆಗಳ ಪರಿಚಯ ಮಾಡಿಕೊಡುವುದು ಉತ್ತಮ ಕ್ರಮವಾಗಿದೆ. ಆದ್ದರಿಂದ ಆಟಿಯ ಸುಖದ ದಿನಕ್ಕೆ ಸಾಟಿಯಿಲ್ಲ. ಇದು ಸಂಬಂಧಗಳನ್ನು ಬೆಸೆಯುವ ಭಾಗ್ಯದಾಯಕ ತಿಂಗಳು” ಎಂದರು.
ಕಾರ್ಯಕ್ರಮದಲ್ಲಿ ಸಂಘದ ಪ್ರೋತ್ಸಾಹಕರಾದ ಸೂರಜ್ ಸದಾನಂದ ಸಫಲಿಗ, ರತ್ನಾ ಪಿ. ಶೆಟ್ಟಿ, ವಜ್ರಾ ಪೂಂಜ, ಸುಚಿತಾ ಶೆಟ್ಟಿ, ಸುಧಾ ಎಲ್. ಅಮೀನ್, ಹರಿಣಿ ಶೆಟ್ಟಿ, ಸುಜಾತಾ ಶೆಟ್ಟಿ, ಉಷಾ ವಿ. ಶೆಟ್ಟಿ, ಪ್ರಸನ್ನ ಶೆಟ್ಟಿ, ದೇವೇಂದ್ರ ಬಂಗೇರಾ, ಕನ್ನಡ ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ಜಯ ವಿ. ಪೂಜಾರಿ, ಗೌರವ ಕೋಶಾಧಿಕಾರಿ ಸುಧಾಕರ್ ಉಚ್ಚಿಲ್, ಜೊತೆ ಕಾರ್ಯದರ್ಶಿ ಚಂದ್ರಹಾಸ ಜೆ. ಕೋಟ್ಯಾನ್, ಜೊತೆ ಕೋಶಾಧಿಕಾರಿ ಬನ್ನಂಜೆ ರವೀಂದ್ರ ಅಮೀನ್, ಶಿಕ್ಷಣ ಸಮಿತಿ ಕಾರ್ಯಾಧ್ಯಕ್ಷ ವಿಜಯಕುಮಾರ್ ಕೆ. ಕೋಟ್ಯಾನ್, ಕಾರ್ಯದರ್ಶಿ ಶಕಿಲಾ ಪಿ. ಶೆಟ್ಟಿ, ಸಲಹಾ ಸಮಿತಿ ಸದಸ್ಯ ಭೋಜ ಎನ್. ಶೆಟ್ಟಿ ಸೇರಿದಂತೆ ಸಂಘದ ವಿಶೇಷ ಆಹ್ವಾನಿತರು ಹಾಗೂ ಸದಸ್ಯರು ಉಪಸ್ಥಿತರಿದ್ದರು.
ಆರಂಭದಲ್ಲಿ ಕಷಾಯ ಹಾಗೂ ಬೆಲ್ಲ ನೀಡಿ ಸದಸ್ಯೆಯರು ಸಾಂಪ್ರದಾಯಿಕವಾಗಿ ಅತಿಥಿಗಳನ್ನು ಸ್ವಾಗತಿಸಿದರು. ಪವಿತ್ರ ದೇವಾಡಿಗ ಪ್ರಾರ್ಥಿಸಿದರು. ಸುಜಾತಾ ಶೆಟ್ಟಿ ಮತ್ತು ಎಲ್. ವಿ. ಅಮೀನ್ ಗಣ್ಯರಿಗೆ ಪುಷ್ಪಗುಚ್ಛ ನೀಡಿ ಗೌರವಿಸಿದರು. ಸಾಮಾಜಿಕ ಮತ್ತು ಸಾಂಸ್ಕೃತಿಕ ಸಮಿತಿ ಕಾರ್ಯಾಧ್ಯಕ್ಷೆ ವನಿತಾ ವೈ. ನೋಂದಾ ಪ್ರಸ್ತಾವನೆಗೈದು ಕಾರ್ಯಕ್ರಮ ನಿರೂಪಿಸಿದರು. ಗೌರವ ಪ್ರಧಾನ ಕಾರ್ಯದರ್ಶಿ ಜಯ ವಿ. ಪೂಜಾರಿ ಸ್ವಾಗತಿಸಿ ವಂದಿಸಿದರು. ಸಂಘದ ಮಹಿಳಾ ಸದಸ್ಯೆಯರು ಆಷಾಢ ಸಾಂಪ್ರದಾಯಿಕ ಶೈಲಿಯ ಖಾದ್ಯಗಳನ್ನು ಸಿದ್ಧಪಡಿಸಿ ನೆರೆದವರಿಗೆ ರಸದೌತಣ ನೀಡಿದರು.

ಆಷಾಢದಲ್ಲಿ ಮನೆಯೇ ಔಷಧಾಲಯವಾಗಿತ್ತು: ಎಲ್. ವಿ. ಅಮೀನ್

“ದುಷ್ಟಶಕ್ತಿಗಳ ನಿವಾರಣೆಯ ಸಂಕೇತವಾಗಿ ಆಚರಿಸುವ ಆಷಾಢವು ಸಾಂಪ್ರದಾಯಿಕ ಆಚರಣೆಯಾಗಿದೆ. ನಮ್ಮ ಬಾಲ್ಯದ ದಿನಗಳನ್ನು ಸಾಂಘಿಕವಾಗಿ ಆಚರಿಸುವ ಅವಕಾಶವನ್ನು ಈ ಕನ್ನಡ ಸಂಘ ಮಾಡುತ್ತಿದೆ. ಕರಾವಳಿಯ ಜಾನಪದೀಯ ನಂಬಿಕೆಗಳನ್ನು ನೆನಪಿಸಿಕೊಂಡು ಆಚರಿಸಲು ಇದೊಂದು ಉತ್ತಮ ಅವಕಾಶ. ಆ ದಿನಗಳಲ್ಲಿ ನಮಗೆ ಮನೆಯೇ ಔಷಧಾಲಯವಾಗಿತ್ತು. ಆಹಾರ ವೈವಿಧ್ಯ, ಪಾಕಸಂಸ್ಕೃತಿ ಹಾಗೂ ಆರೋಗ್ಯಕರ ತಿನಿಸುಗಳನ್ನು ಸವಿಯುವ ಕಾಲ ಅದಾಗಿತ್ತು. ಕರಾವಳಿಯ ವೈಜ್ಞಾನಿಕ ಆಹಾರ ಪದ್ಧತಿಯನ್ನು ಬಿಂಬಿಸುವ ಆ ದಿನಗಳನ್ನು ಇಂದು ಸಂಘ-ಸಂಸ್ಥೆಗಳ ಮೂಲಕವಾದರೂ ಆಚರಿಸಿಕೊಳ್ಳುತ್ತಿರುವ ನಾವೇ ಭಾಗ್ಯವಂತರು” ಎಂದು ಕನ್ನಡ ಸಂಘ ಸಾಂತಾಕ್ರೂಜ್‌ನ ಗೌರವಾಧ್ಯಕ್ಷ ಎಲ್. ವಿ. ಅಮೀನ್ ಹೇಳಿದರು.



Related posts

2023-24ರ ಎಸ್ ಎಸ್ ಸಿ ಪರೀಕ್ಷೆಯಲ್ಲಿ   ಶ್ರೀಶ ಕುಶಾಲಪ್ಪ ಮೂಲ್ಯ ಗೆ ಶೇ 93.60 ಅಂಕ.

Mumbai News Desk

ಹರಟೆ ಸಾಹಿತಿ ದಿ. ಚಂದ್ರಶೇಖರ ರಾವ್ ಜನ್ಮದಿನಾಚರಣೆ: ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಣೆ

Mumbai News Desk

ಬಂಟರ ಸಂಘ ವಸಯಿ ದಹಣು ಪ್ರಾದೇಶಿಕ ಸಮಿತಿ,ಹಾಗೂ ತುಳುಕೂಟ ಫೌಂಡೇಶನ್ ಇದರ ಜಂಟಿ ಅಶ್ರಯದಲ್ಲಿ ಶ್ರೀದೇವಿ ಯಕ್ಷ ಕಲಾ ನಿಲಯದ ಮಕ್ಕಳ ಸ್ನೇಹ ಸಮ್ಮಿಲನ

Mumbai News Desk

ಮಹಾರಾಷ್ಟ್ರ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹುದ್ದೆಗೆ ಬಡ್ತಿ: ಕನ್ನಡಿಗ ಡಾ. ಕೆ. ಎಚ್. ಗೋವಿಂದರಾಜ್ (ಐಎಎಸ್) ಅವರಿಗೆ ಒಕ್ಕಲಿಗರ ಸಂಘ ಮಹಾರಾಷ್ಟ್ರ ವತಿಯಿಂದ ಗೌರವ

Mumbai News Desk

ಮೊಗವೀರ ವ್ಯವಸ್ಥಾಪಕ ಮಂಡಳಿ ಮುಂಬಯಿ: ಚೈತನ್ಯ ಕಲಾವಿದರು ಬೈಲೂರು ತಂಡದಿಂದ ‘ಅಷ್ಟೆಮಿ’ ನಾಟಕ ಪ್ರದರ್ಶನ

Mumbai News Desk

ತುಳು ಸಂಘ ಬೊರಿವಲಿ, ಮಹಿಳಾ ವಿಭಾಗದಿಂದ ಅರಸಿನ ಕುಂಕುಮ

Mumbai News Desk