28 C
Mumbai
September 18, 2026
Mumbai News Kannada
ಪ್ರಕಟಣೆ

ಕರ್ನಾಟಕ ವಿಶ್ವಕರ್ಮ ಅಸೋಸಿಯೇಷನ್ (ರಿ), ಮುಂಬೈ: ಜೂನ್ 21ರಂದು ಯೋಗ ಮತ್ತು ಉಚಿತ ಆರೋಗ್ಯ ತಪಾಸಣಾ ಶಿಬಿರ






​ಮುಂಬೈ: ಕರ್ನಾಟಕ ವಿಶ್ವಕರ್ಮ ಅಸೋಸಿಯೇಷನ್ (ರಿ), ಮುಂಬೈ ಇದರ ವತಿಯಿಂದ ಜೂನ್ 21ರ ಆದಿತ್ಯವಾರದಂದು ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಉಚಿತ ಯೋಗ ಹಾಗೂ ಆರೋಗ್ಯ ತಪಾಸಣಾ ಶಿಬಿರಗಳನ್ನು ಆಯೋಜಿಸಲಾಗಿದೆ.
​ಮೀರಾ ರೋಡ್‌ನ ಕಾಶಿಗಾಂವ್, ಸಾಯಿ ಕೃಪಾ ಕಾಂಪ್ಲೆಕ್ಸ್, 16A ಹಿಲ್ ವ್ಯೂ ಸೊಸೈಟಿಯಲ್ಲಿರುವ ಸಂಘದ ‘ಪ್ರಿಯಾ ವಿಶ್ವಕರ್ಮ ಸಭಾ ಭವನ’ದಲ್ಲಿ ಅಸೋಸಿಯೇಷನ್‌ನ ಅಧ್ಯಕ್ಷರಾದ ರವೀಶ್ ಆಚಾರ್ಯ ಅವರ ಅಧ್ಯಕ್ಷತೆಯಲ್ಲಿ ಈ ಕಾರ್ಯಕ್ರಮ ಜರುಗಲಿದೆ.
​ಕಾರ್ಯಕ್ರಮದ ವಿವರಗಳು:
​ಉಚಿತ ಯೋಗ ಶಿಬಿರ:
ಬೆಳಗ್ಗೆ 8.30ರಿಂದ 10.30ರ ವರೆಗೆ ನಡೆಯಲಿದ್ದು, ಅಂಬಿಕಾ ಯೋಗಾಶ್ರಮದ 20 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಯೋಗ ಶಿಕ್ಷಕರಾದ ಶ್ರೀ ಸಂದೀಪ್ ಕದಂ ಅವರು ಶಿಬಿರವನ್ನು ನಡೆಸಿ ಕೊಡಲಿದ್ದಾರೆ.
​ಉಚಿತ ಆರೋಗ್ಯ ತಪಾಸಣಾ ಶಿಬಿರ:
ಮೀರಾ ರೋಡ್‌ನ ವೋಕಹಾರ್ಡ್ ಆಸ್ಪತ್ರೆಯ (Wockhardt Hospital) ಸಹಯೋಗದೊಂದಿಗೆ ಬೆಳಗ್ಗೆ 11.00ರಿಂದ ಅಪರಾಹ್ನ 3.00ರ ವರೆಗೆ ಜರಗಲಿದೆ. ಈ ಶಿಬಿರದಲ್ಲಿ ಮುಲುಂಡ್‌ನ ಡಾ. ಅಖಿಲ್ ಮೋಹನ್ ಕೊಡವೂರು ಹಾಗೂ ಮಲಾಡ್ ಪೂರ್ವದ ಆಚಾರ್ಯ ಡೆಂಟಲ್ ಕ್ಲಿನಿಕ್‌ನ ಡಾ. ಶಶಿನ್ ಕುಮಾರೇಶ್ ಆಚಾರ್ಯ ಅವರು ಪಾಲ್ಗೊಳ್ಳಲಿದ್ದಾರೆ.
​ವಿಶ್ವಕರ್ಮ ಸಮಾಜ ಬಾಂಧವರು ಹಾಗೂ ತುಳು-ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಈ ಉಚಿತ ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕಾಗಿ ಕರ್ನಾಟಕ ವಿಶ್ವಕರ್ಮ ಅಸೋಸಿಯೇಷನ್, ಮುಂಬೈ ಪ್ರಕಟಣೆಯಲ್ಲಿ ವಿನಂತಿಸಿದೆ.



Related posts

ಡೋಂಬಿವಲಿ ಶ್ರೀ ಜಗದಂಬಾ ಮಂದಿರದಲ್ಲಿ ಆ ಆಗಸ್ಟ್ 17ರಂದು ‘ನಾಗರ ಪಂಚಮಿ ಮಹೋತ್ಸವ’

Mumbai News Desk

ಹಿರಿಯ ಪತ್ರಕರ್ತ ಚಿದಂಬರ ಬೈಕಂಪಾಡಿಗೆ ಯಕ್ಷಧ್ರುವ ಕಲಾ ಗೌರವ

Mumbai News Desk

ಅ. 25, ತುಳು ವಲ್ ಫೇರ್  ಎಸೋಸಿಯೇಶನ್ ಡೊಂಬಿವಲಿ 27 ನೇ ವಾರ್ಷಿಕೋತ್ಸವ

Mumbai News Desk

ಅ. 24ರಂದು ಮಾಲಾಡ್ ಪೂರ್ವ  ಓಂ ಶ್ರೀ ಸಾಯಿ ದುರ್ಗಾ ನಿತ್ಯಾನಂದ ಟ್ರಸ್ಟ್  ನವರಾತ್ರಿ ಪೂಜೆ 

Chandrahas

ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿ ಮಲಾಡ್: ಜುಲೈ 19ರಂದು ಆಷಾಢ ಹಬ್ಬ ಆಚರಣೆ

Mumbai News Desk

ಮೂಲ್ಕಿ: ಮಾರ್ಚ್ 10ರಂದು, ಹರಿಶ್ಚಂದ್ರ ಪಿ. ಸಾಲಿಯಾನ್ ಅವರ ‘ತುಳುನಾಡ್ಡ ತುಳು ಗಾದೆಲು’ ಕೃತಿ ಲೋಕಾರ್ಪಣೆ

Mumbai News Desk