ಮಂಗಳೂರು -ಮಂಗಳೂರಿನ ಸ್ಟೇಟ್ ಬ್ಯಾಂಕ್ ಹಾಮಿಲ್ಟನ್ ಕಾಂಪ್ಲೆಕ್ಸ್ ನಲ್ಲಿರುವ ಹೆಸರಾಂತ ಸಂಸ್ಥೆ ಹಾನಾ ಪಬ್ಲಿಶರ್ ನ ಸಿಎಂಡಿ, ಕರ್ನಾಟಕ ಸರಕಾರದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ ಸಂಘಟನೆಯಿಂದ ಪ್ರಕಾಶಿತಗೊಳ್ಳುವ ಯುವ ಸಿಂಚನ ಪತ್ರಿಕೆಯ ಸಂಪಾದಕ,ಸಾಮಾಜಿಕ ಮತ್ತು ಜನಪರ ಚಿಂತನೆಯ ಎನ್ ಎಸ್ ಸಿಡಿಎಫ್ ನ ಪ್ರಧಾನ ಕಾರ್ಯದರ್ಶಿ, ಎಂಪಿಎಂಎಲ್ ಎ ನ್ಯೂಸ್, ಬ್ಯಾರಿ ವಾರ್ತೆ, ಬ್ಯಾರಿ ಮಿತ್ರ, ಚಾಲುಕ್ಯ, ಕಚ್ಚೂರುವಾಣಿ,ಹೊಸಂಗಣ ಕರಾವಳಿ ಕೇಸರಿ. ಕರಾವಳಿ ನ್ಯೂಸ್. ಬಂಟ್ಸ್ ನ್ಯೂಸ್, ಸಿಟಿ ನ್ಯೂಸ್ ಸೇರಿದಂತೆ ದಕ್ಷಿಣ ಕನ್ನಡ -ಉಡುಪಿ ಜಿಲ್ಲೆಯ ಜನಪ್ರಿಯ ನಿಯತಾಕಾಲಿಕೆಗಳ ಪ್ರಖ್ಯಾತ ಡಿಸೈನರ್ ದಿನಕರ್ ಡಿ.ಬಂಗೇರ ಅವರ ಮಾತೃಶ್ರೀ,ಕಿರೋಡಿಯನ್ ಕುಟುಂಬದ ಹಿರಿಯ ಸದಸ್ಯೆ, ದಿ. ದೇವಣ್ಣ ಪೂಜಾರಿಯವರ ಧರ್ಮಪತ್ನಿ ರಮಣಿ ಡಿ. ಬಂಗೇರ (80) 21. 6. 2026 ರಂದು ಮುಂಜಾನೆ ಬೈಕಂಪಾಡಿ ಮೀನಕಳಿಯದ ಎಂ.ವಿ. ಸದನ ಸ್ವಗೃಹದಲ್ಲಿ ವಯೋಸಹಜ ಅಸ್ವಸ್ಥದಿಂದ ದೈವಾಧೀನರಾದರು. ಮೃತರ ಅಂತಿಮ ವಿಧಿಯನ್ನು ಬೆಳಿಗ್ಗೆ 10.30 ಕ್ಕೆ ಬೈಕಂಪಾಡಿಯ ಎಂ. ವಿ. ಸದನದಲ್ಲಿ ನೆರವೇರಿಸಿ ಬೆಳ್ಳಿಗೆ 11ಗಂಟೆಗೆ ಸುರತ್ಕಲ್ ಸ್ಮಶಾನದಲ್ಲಿ ಅಂತಿಮ ಸಂಸ್ಕಾರ ನಡೆಸಲಾಯಿತು. ಯುವ ವಾಹಿನಿ ಕೇಂದ್ರ ಸಮಿತಿ ಸೇರಿದಂತೆ ಊರ-ಪರವೂರ ಗಣ್ಯರನೇಕರು, ಎನ್ ಎಸ್ ಸಿಡಿಎಫ್ ಅಧ್ಯಕ್ಷ ಗಂಗಾಧರ್ ಗಾಂಧಿ,ಕರ್ನಾಟಕ ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಷ್ಠಾನದ ಅಧ್ಯಕ್ಷೆ ರಾಣಿ ಪುಷ್ಪಲತಾ ದೇವಿ, ಪ್ರತಿಷ್ಠಾನದ ಆಜೀವ ಸದಸ್ಯೆ ಯೋಗೇಶ್ವರಿ, ಸ್ಥಳೀಯರು ಮೃತರ ಅಂತಿಮ ದರ್ಶನ ಪಡೆದರು. ಎಂಪಿ ಎಂಎಲ್ ಎ ನ್ಯೂಸ್ ಸಂಪಾದಕ ಡಾ. ಅಶೋಕ್ ಶೆಟ್ಟಿ ಬಿ. ಎನ್. ಅವರು ಎಂ. ವಿ. ಸದನಕ್ಕೆ ಭೇಟಿ ನೀಡಿ ಸಂತಾಪ ಸೂಚಿಸಿದರು. ಮೃತರು ದಿನಕರ್ ಡಿ. ಬಂಗೇರ, ಮೋಹನ್ ಡಿ. ಬಂಗೇರ ಮತ್ತು ಶ್ರೀಮತಿ ಶೀಲಾವತಿ ಕೆ.ಸೇರಿದಂತೆ ಮೂವರು ಮಕ್ಕಳು, ಐವರು ಮೊಮ್ಮಕ್ಕಳು, ಬಂಧು ಮಿತ್ರರನ್ನು ಅಗಲಿದ್ದಾರೆ




