28.9 C
Mumbai
July 9, 2026
Mumbai News Kannada
ಪ್ರಕಟಣೆ

ಭಜನಾ ಮಂಡಳಿಗಳ ಒಕ್ಕೂಟ ಸಂಸ್ಥೆ ಮುಂಬಯಿ : 5ನೇ ವಾರ್ಷಿಕ ಭಜನೋತ್ಸವ ಮತ್ತು ರಾಜ್ಯ ಮಟ್ಟದ ಭಜನಾ ಸ್ಪರ್ಧೆ





ಮುಂಬಯಿಯ ಭಜನಾ ಮಂಡಳಿಗಳ ಒಕ್ಕೂಟ ಸಂಸ್ಥೆ (ರಿ.) ಹಾಗೂ ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ಮಹಾರಾಷ್ಟ್ರ ಘಟಕದ ಜಂಟಿ ಆಶ್ರಯದಲ್ಲಿ 2026ರ ಅಕ್ಟೋಬರ್ 25ರ ಭಾನುವಾರದಂದು ಮುಂಬಯಿಯ ಮೊಗವೀರ ವ್ಯವಸ್ಥಾಪಕ ಮಂಡಳಿ ಸಭಾಂಗಣದಲ್ಲಿ ‘5ನೇ ವಾರ್ಷಿಕ ಭಜನೋತ್ಸವ – 2026’ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಅಂದು ಬೆಳಿಗ್ಗೆ 8:00 ರಿಂದ ರಾತ್ರಿ 9:00 ರವರೆಗೆ ನಡೆಯಲಿರುವ ಈ ಉತ್ಸವದಲ್ಲಿ ಮುಂಬಯಿಯ ಐದು ವಲಯಗಳ ಭಜನಾ ಪ್ರದರ್ಶನ, ಉದ್ಘಾಟನಾ ಸಮಾರಂಭ, ವಿಶೇಷ ಭಕ್ತಿ ಸಂಗೀತ ಕಚೇರಿ ಹಾಗೂ ಮಹಾರಾಷ್ಟ್ರ-ಕರ್ನಾಟಕ ಜಂಟಿ ಕೀರ್ತನೆಗಳು ಪ್ರಮುಖ ಆಕರ್ಷಣೆಗಳಾಗಿರಲಿವೆ. ಇದೇ ಮೊದಲ ಬಾರಿಗೆ ತುಳು-ಕನ್ನಡಿಗರಿಗಾಗಿ ಮಹಾರಾಷ್ಟ್ರ ರಾಜ್ಯ ಮಟ್ಟದ ಭಜನಾ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದ್ದು, ರಾಜ್ಯದ 36 ಜಿಲ್ಲೆಗಳ ಒಟ್ಟು 500 ಭಜನಾ ಮಂಡಳಿಗಳು ಆನ್‌ಲೈನ್ ಮೂಲಕ ಇದರಲ್ಲಿ ಭಾಗವಹಿಸಲಿವೆ. ಈ ಪೈಕಿ ಅಂತಿಮ ಸುತ್ತಿಗೆ ಆಯ್ಕೆಯಾಗುವ 30 ಮಂಡಳಿಗಳಿಗೆ ಸೆಪ್ಟೆಂಬರ್ ತಿಂಗಳಲ್ಲಿ ಪ್ರದರ್ಶನ ನೀಡಲು ಅವಕಾಶವಿದ್ದು, ವಿಜೇತ ತಂಡಗಳಿಗೆ ಪ್ರಥಮ ಬಹುಮಾನವಾಗಿ 1,00,000 ರೂ., ದ್ವಿತೀಯ 75,000 ರೂ., ತೃತೀಯ 50,000 ರೂ. ಹಾಗೂ ತಲಾ 5,000 ರೂ.ಗಳ 7 ಸಾಂತ್ವನ ಬಹುಮಾನಗಳನ್ನು ವಿತರಿಸಲಾಗುವುದು. ಸ್ಪರ್ಧೆಯ ನೋಂದಣಿ ಮತ್ತು ವೀಡಿಯೊ ಅಪ್‌ಲೋಡ್ ಮಾಡಲು 2026ರ ಆಗಸ್ಟ್ 15 ಕೊನೆಯ ದಿನಾಂಕವಾಗಿದೆ.
ಇದರೊಂದಿಗೆ, ಒಕ್ಕೂಟದ ಅಧ್ಯಕ್ಷರಾದ ಧರ್ಮದರ್ಶಿ ಶ್ರೀ ದೇವು ಬಿ. ಪೂಜಾರಿ ಅವರ ನೇತೃತ್ವದಲ್ಲಿ ಸಾಮಾಜಿಕ ಸಾಮರಸ್ಯ ಹಾಗೂ ಸಂಸ್ಕೃತಿಯ ರಕ್ಷಣೆಗಾಗಿ ಸಂಸ್ಥೆಯು ಈ ವರ್ಷ ಹೊಸ ಸಾಮಾಜಿಕ ಕಲ್ಯಾಣ ಯೋಜನೆಯನ್ನು ಪ್ರಕಟಿಸಿದೆ. ಒಕ್ಕೂಟದಲ್ಲಿ ನೋಂದಾಯಿತವಾಗಿರುವ ಭಜನಾ ಮಂಡಳಿಗಳ ಆರ್ಥಿಕವಾಗಿ ಹಿಂದುಳಿದ ಸದಸ್ಯರ ಕುಟುಂಬಗಳಿಗೆ ಶೈಕ್ಷಣಿಕ, ವೈದ್ಯಕೀಯ ಮತ್ತು ಆರ್ಥಿಕ ನೆರವು ನೀಡಲು ಹಾಗೂ ಅಗತ್ಯವಿರುವ ಮಂಡಳಿಗಳಿಗೆ ಭಜನಾ ಪರಿಕರಗಳನ್ನು ಒದಗಿಸಲು 10 ಲಕ್ಷ ರೂಪಾಯಿಗಳ “ಸೌಕರ್ಯ ನಿಧಿ”ಯನ್ನು ಸ್ಥಾಪಿಸಲಾಗಿದೆ. ಈ ಮಹತ್ಕಾರ್ಯಕ್ಕೆ ಧಾರ್ಮಿಕ ಚಿಂತಕರು ಹಾಗೂ ದಾನಿಗಳು ಆರ್ಥಿಕ ಸಹಕಾರ ನೀಡಬೇಕಾಗಿ ವಿನಂತಿಸಲಾಗಿದ್ದು, ಹೆಚ್ಚಿನ ಮಾಹಿತಿಗಾಗಿ ಸಂಸ್ಥೆಯ ಅಧಿಕೃತ ವೆಬ್‌ಸೈಟ್‌ (www.bmokkoota.org) ಅಥವಾ 9152242599
8169834645
7738652181
9702234922
9870184595
9867496563
7666753145
ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.



Related posts

ಡಿ.24 : ಚಂದ್ರಹಾಸ ಗುರುಸ್ವಾಮಿ ಇನ್ನಂಜೆಯವರ ಶ್ರೀ ಅಯ್ಯಪ್ಪ ಭಕ್ತವೃಂದದ 35ನೇ ವಾರ್ಷಿಕ ಅಯ್ಯಪ್ಪ ಮಹಾಪೂಜೆ, ಅನ್ನ ಸಂತರ್ಪಣೆ.

Mumbai News Desk

ನಾಸಿಕ್: ನಾಳೆ(ಜ.26) ತುಳು ಸೇವಾ ಸಂಘದ 36ನೇ ವಾರ್ಷಿಕೋತ್ಸವ

Mumbai News Desk

ಮೇ 31, 2026 ರಂದು ಕುಮಾರಿ ಲಿಖಿತಾ ರತ್ನಾಕರ ಕರ್ಕೇರರ ಭರತನಾಟ್ಯಂ ಪ್ರಥಮ ರಂಗ ಪ್ರವೇಶ

Mumbai News Desk

ಡೊಂಬಿವಿಲಿ ಕನ್ನಡಿಗರ ಸ್ನೇಹ ಬಳಗ – ಸೆ.28 ರಂದು ನವರಾತ್ರಿ ವಿಶೇಷ: ಅರಿಶಿನ-ಕುಂಕುಮ ಕಾರ್ಯಕ್ರಮ

Mumbai News Desk

ಶ್ರೀ ಉಮಾಮಹೇಶ್ವರಿ ದೇವಸ್ಥಾನ ಕಾಜುಪಾಡ, ಕುರ್ಲಾ (ಪ ) : ಅ.25ರಂದು ಸಂಪೂರ್ಣ ಶ್ರೀ ದೇವಿ ಮಹಾತ್ಮೆ ಯಕ್ಷಗಾನ

Mumbai News Desk

ಶ್ರೀ ನಾರಾಯಣ ಗುರು ಭಜನಾ ಮಂಡಳಿ  ಮೀರಾ ಭಯಂದರ್. ಜು 10 ರಂದು ಗುರುಪೂರ್ಣಿಮೆ ಆಚರಣೆ.

Mumbai News Desk