ಪಡುಬಿದ್ರಿ ನಡಿಪಟ್ಣ ಮೊಗವೀರ ಸಭಾ ಮುಂಬಯಿ ಇದರ 138 ನೇ ವಾರ್ಷಿಕ ಮಹಾಸಭೆಯು ದಿನಾಂಕ 19.07.2026 ರಂದು ಅಂಧೇರಿ ಪಶ್ಚಿಮದ ಎಮ್. ವಿ. ಎಮ್ ಶಾಲೆಯ ಸಭಾಭವನದಲ್ಲಿ ನೆರವೇರಿತು.
ಮುಂಬೈ ಸಭೆಯ ಅಧ್ಯಕ್ಷರಾದ ಜನಾರ್ಧನ್.ಜಿ. ಮಂಡನ್ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು. ದೇವತಾ ಪ್ರಾರ್ಥನೆಯೊಂದಿಗೆ ಸಭೆಯನ್ನು ಪ್ರಾರಂಭಿಸಲಾಯಿತು. ನಂತರ ಎಲ್ಲಾ ಸದಸ್ಯರನ್ನು ಸ್ವಾಗತಿಸಿ ಗತ ವರ್ಷದಲ್ಲಿ ನಿಧನರಾದ ಉರಿನ ಮತ್ತು ಮುಂಬೈ ಸಭೆಯ ಸದಸ್ಯರಿಗೆ 2 ನಿಮಿಷ ಮೌನ ಪ್ರಾರ್ಥನೆ ಸಲ್ಲಿಸಲಾಯಿತು. ಗೌರವ ಪ್ರಧಾನ ಕಾರ್ಯದರ್ಶಿ ತೇಜಪಾಲ್ ಪಿ ಪುತ್ರನ್ ಗತವರ್ಷದ ವರದಿ ಮತ್ತು ಗೌರವ ಕೋಶಾಧಿಕಾರಿ ಭರತ್ ಸುವರ್ಣ ಆಯವ್ಯಯ ಪಟ್ಟಿಯನ್ನು ಸಭೆಗೆ ಮಂಡಿಸಿದರು, ಹಾಗೂ ಸಭೆಯಲ್ಲಿ ಅವುಗಳನ್ನು ಸರ್ವಾನುಮತದಿಂದ ಅಂಗೀಕರಿಸಲಾಯಿತು.
ನಂತರ ಕಳೆದ ವರ್ಷದ S.S.C. H.S.C. M.B.A. ಇಂಜಿನಿಯರಿಂಗ್ ಹಾಗೂ ಇನ್ನಿತರ ಪರೀಕ್ಷೆಯಲ್ಲಿ ಉತ್ತೀರ್ಣರಾದ ಸದಸ್ಯರ ಮಕ್ಕಳಿಗೆ ಬಹುಮಾನವನ್ನು ವಿತರಿಸಲಾಯಿತು. ಅದೇ ರೀತಿ ದಿ. ಕಿಟ್ಟು ಕೋಟ್ಯಾನ್ ಕಾರ್ ಸ್ಮಾರಕಾರ್ಥ ಅವರ ಮೊಮ್ಮಗ ದಿ. ಕುಶಾಲ್ ದಾಸ್ ಎಸ್ ಕೋಟ್ಯಾನ್ ಅವರ ವತಿಯಿಂದ ಕೊಡುವ ಉತ್ತಮ ಕಾರ್ಮಿಕರ ಪ್ರಶಸ್ತಿಯನ್ನು ಶ್ರೀಮತಿ ಹೀರಾ ಡಿ ಶ್ರೀಯಾನ್ ಗೆ ನೀಡಿದರೆ , ದಿ. ಚೆನ್ನಪ್ಪ ಬಂಗೇರ ಪಡುಬಿದ್ರಿ ನಡಿಪಟ್ನ ಸ್ಮಾರಕಾರ್ಥ ಅವರ ಮಗ ದೇವಪ್ಪ ಸಿ ಸಾಲಿಯಾನ್ ಅವರ ವತಿಯಿಂದ ಕೊಡುವ ಉತ್ತಮ ಕ್ರೀಡಾಪಟು ಪ್ರಶಸ್ತಿಯನ್ನು ಮಾ. ಕ್ಷಿತಿಜ್ ಗುಣಪಾಲ್ ಪುತ್ರನ್ ಇವರಿಗೆ ನೀಡಲಾಯಿತು.

ಇದೇ ಸಂದರ್ಭದಲ್ಲಿ, ತಮ್ಮ ವೃತ್ತಿ ಜೀವನದಲ್ಲಿ ಅಸಿಸ್ಟೆಂಟ್ ಕಮಿಷನರ್ ಆಫ್ ಕಸ್ಟಮ್ಸ್ ಅಂಡ್ ಜಿ.ಎಸ್.ಟಿ ಆಗಿ ನಿವೃತ್ತಿ ಹೊಂದಿದ ಮತ್ತು ಮುಂಬಯಿ ಜೂಡೊ ಅಸೋಸಿಯೇಷನ್ ಗೆ ಗೌರವ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದ ಸದಸ್ಯರಾದ ಪ್ರಮೋದ್ ಎ ಮಂಡನ್, ಎಂ ವಿ ಎಂ ನವಿಮುಂಬಯಿ ಸಮಿತಿಯಲ್ಲಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿರುವ ನಾರಾಯಣ ಆರ್ ಕೋಟ್ಯಾನ್, ಎಂ ವಿ ಎಂ ವಿರಾರ್ ನಾಯಗಾಂವ್ ಮಹಿಳಾ ವಿಭಾಗದ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದ ಯಶವಂತಿ ಸಿ ಕುಂದರ್, ಎಂ ವಿ ಎಂ ಮಹಿಳಾ ವಿಭಾಗದ ಪ್ರಧಾನ ಕಚೇರಿಯಲ್ಲಿ ಜೊತೆ ಕೋಶಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಚಂದ್ರಾವತಿ ಮಂಡನ್, ಕಣ್ಣಂಗಾರ್ ಮೊಗವೀರ ಮಹಿಳಾ ಸಭಾ ದ ಅಧ್ಯಕ್ಷೆಯಾಗಿ ಸೇವೆ ಸಲ್ಲಿಸುತ್ತಿರುವ ಗುಲಾಬಿ ಕುಂದರ್, ಮುಂಬೈ ಮ್ಯಾರಥಾನ್ ನಲ್ಲಿ ಸತತ 13ನೇ ಬಾರಿ ಭಾಗವಹಿಸಿರುವ ದೇವಪ್ಪ ಸಿ ಸಾಲಿಯಾನ್, ಮತ್ತು ಸಭೆಗೆ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಹಿರಿಯರಾದ ಎಂ.ಟಿ. ಪುತ್ರನ್ ಮತ್ತು ಸದಾನಂದ ಮಂಡನ್ ಇವರುಗಳನ್ನು ಗೌರವಿಸಲಾಯಿತು.

ಸಭೆಯಲ್ಲಿ ಗೌರವ ಅಧ್ಯಕ್ಷರಾದ ಎಂ.ಟಿ. ಪುತ್ರನ್ ಉಪಾಧ್ಯಕ್ಷರಾದ ಶಂಕರ್ ಪುತ್ರನ್, ಹಿರಿಯ ಸದಸ್ಯರಾದ, ಸದಾನಂದ ಮಂಡನ್, ನಾರಾಯಣ ಆರ್ ಕೋಟ್ಯಾನ್, ಪ್ರಮೋದ್ ಮೆಂಡನ್, ಹೀರಾ ಶ್ರಿಯಾನ್, ನಳಿನಿ ಕರ್ಕೇರ, ಚಂದ್ರಾವತಿ ಮೆಂಡನ್ ಅವರು ಯೋಗ್ಯ ಸಲಹೆ ಕೊಟ್ಟರು. ಅಧ್ಯಕ್ಷರಾದ ಜನಾರ್ಧನ್.ಜಿ. ಮಂಡನ್ ಮಾತನಾಡಿ ಸಭೆ ಮತ್ತು ಇತರ ಕಾರ್ಯಕ್ರಮಗಳಲ್ಲಿ ಯುವಕರು ಮತ್ತು ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಿರುವುದು ಸಂತಸದ ವಿಷಯ ಮತ್ತು ಮಹಿಳಾ ಸದಸ್ಯೆಯರ ಯಾವುದೇ ಕಾರ್ಯಕ್ರಮಗಳಿಗೆ ಸಭೆಯ ಸಂಪೂರ್ಣ ಬೆಂಬಲವಿದೆಯೆಂದು ಹೇಳಿದರು. ಕೊನೆಯಲ್ಲಿ ವಂದನಾರ್ಪಣೆಯೊಂದಿಗೆ ಸಭೆಯನ್ನು ಮುಕ್ತಾಯಗೊಳಿಸಲಾಯಿತು.





