July 21, 2026
Mumbai News Kannada
ಮುಂಬಯಿ

ಮಲಾಡ್ ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿ ಮಹಿಳಾ ವಿಭಾಗದಆಷಾಢ ಹಬ್ಬ ಆಚರಣೆ







ಸಮಿತಿಯು ಸರ್ಕಾರದಲ್ಲಿ ನೋಂದಣಿಯಾಗಿರುವುದರಿಂದ ಸದಸ್ಯರ ಜವಾಬ್ದಾರಿ ಮತ್ತು ಕಾರ್ಯಚಟುವಟಿಕೆಗಳು ಮತ್ತಷ್ಟು ಹೆಚ್ಚಾಗಿವೆ: ನ್ಯಾ. ಜಗನ್ನಾಥ್ ಶೆಟ್ಟಿ ಪಣಿಯೂರು

ಸಮಿತಿಯ ಸದಸ್ಯರು, ಮಹಿಳಾ ವಿಭಾಗ ಹಾಗೂ ಯುವ ವಿಭಾಗದ ಸದಸ್ಯರು ಸಾಂಸ್ಕೃತಿಕ, ಶೈಕ್ಷಣಿಕ ಮತ್ತು ಧಾರ್ಮಿಕ ಕಾರ್ಯಕ್ರಮಗಳನ್ನು ಅತ್ಯಂತ ಉತ್ಸಾಹದಿಂದ ಒಗ್ಗಟ್ಟಿನಿಂದ ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದ್ದು, ಇದೀಗ ಸಮಿತಿಯು ಸರ್ಕಾರದಲ್ಲಿ ನೋಂದಣಿಯಾಗಿರುವುದರಿಂದ ಸದಸ್ಯರ ಜವಾಬ್ದಾರಿ ಮತ್ತು ಕಾರ್ಯಚಟುವಟಿಕೆಗಳು ಮತ್ತಷ್ಟು ಹೆಚ್ಚಾಗಿವೆ. ಸಮಿತಿಯ ಪ್ರತಿಯೊಬ್ಬ ಸದಸ್ಯರೂ ಹೆಚ್ಚಿನ ಹೊಣೆಗಾರಿಕೆಯಿಂದ ಕಾರ್ಯನಿರ್ವಹಿಸುತ್ತಿದ್ದು, ಸಂಘಟನೆಯನ್ನು ಇನ್ನಷ್ಟು ಬಲಪಡಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿದ್ದಾರೆ ಎಂದು ಮಲಾಡ್ ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿಯ ಅಧ್ಯಕ್ಷ ನ್ಯಾ. ಜಗನ್ನಾಥ್ ಎನ್. ಶೆಟ್ಟಿ ಪಣಿಯೂರು ತಿಳಿಸಿದರು.
ಮಲಾಡ್ ಪೂರ್ವ ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿಯ ಮಹಿಳಾ ವಿಭಾಗದ ವತಿಯಿಂದ ಆಷಾಢ ಹಬ್ಬದ ಕಾರ್ಯಕ್ರಮವು ಜುಲೈ 19ರಂದು ಮಲಾಡ್ ಪೂರ್ವದ ಉತ್ಕರ್ಷ ವಿದ್ಯಾ ಮಂದಿರದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಅಕ್ಕಿ ಮುಡಿಯನ್ನು ಅನಾವರಣ ಗೊಳಿಸಿ ಉದ್ಘಾಟಿಸಿ ಮಾತನಾಡಿದ ಸಮಿತಿಯ ಅಧ್ಯಕ್ಷ ನ್ಯಾ. ಜಗನ್ನಾಥ್ ಎನ್. ಶೆಟ್ಟಿ ಪಣಿಯೂರು, ಮುಂದೆ ಸಮಿತಿಯ ವಾರ್ಷಿಕೋತ್ಸವ, ಮಕ್ಕಳ ಉತ್ಸವ ಸೇರಿದಂತೆ ವಿವಿಧ ಸಾಂಸ್ಕೃತಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ಆಯೋಜಿಸಲಾಗುತ್ತಿವೆ. ಈಗಾಗಲೇ ಸದಸ್ಯರು ತಮ್ಮ ಹೆಸರನ್ನು ನೋಂದಾಯಿಸಿರುವ ನಾಲ್ಕು ದಿನಗಳ ಧಾರ್ಮಿಕ ಯಾತ್ರೆಯು ಶೀಘ್ರದಲ್ಲೇ ನಡೆಯಲಿದ್ದು, ಈ ಯಾತ್ರೆಯನ್ನು ಯಶಸ್ವಿಗೊಳಿಸಲು ಎಲ್ಲಾ ಸದಸ್ಯರು ಪೂರ್ಣ ಸಹಕಾರ ನೀಡುವಂತೆ ಅವರು ಮನವಿ ಮಾಡಿ, ಆಟಿ ತಿಂಗಳ ವಿಶೇಷತೆ, ನಮ್ಮ ಆಚರಣೆ, ಸಂಪ್ರದಾಯ, ಸಂಸ್ಕೃತಿ
ಭಾಷೆ ಮತ್ತು ತವರೂರಿನ ಸೊಗಡನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಸಮಿತಿ ಸೇವೆ ಮಾಡುತ್ತಿದ್ದೇವೆ, ವರ್ಷಪೂರ್ತಿ ಮಹಿಳೆಯರ ಲವ ಲವಕೆಯ ಕಾರ್ಯ ಚಟುವಟಿಕೆಗಳು ನಡೆಸುತ್ತಾ ಸಮಿತಿಯನ್ನು ಬಲಿಷ್ಠ ಗೊಳಿಸಿದ್ದಾರೆ,ಮಹಿಳೆಯರು ಮಾಡಿ ತಂದಿರುವ ಅಡುಗೆ ಊಟವಾಗಿರಲಿಲ್ಲ, ಅದರಲ್ಲಿ ಅವರು ಭಾವನಾತ್ಮಕ ಸಂಬಂಧವಿದೆ ಎಂದು ನುಡಿದರು.

ಸಮಿತಿಯ ಉಪಾಧ್ಯಕ್ಷರಾದ ಭಾರತ್ ಬ್ಯಾಂಕಿನ ನಿರ್ದೇಶಕ ಸಂತೋಷ್ ಕೆ ಪೂಜಾರಿ ಮಾತನಾಡಿ ಜಾತಿಯನ್ನು ಮೀರಿ ಎಲ್ಲರೂ ಮಲಾಡ್ ಪರಿಸರದ ತುಳು ಕನ್ನಡಿಗರು ಒಂದೇ ಸೂರಿನಡಿ ಸಮಾಜದ ಸೇವೆ ಮಾಡುತ್ತಿದ್ದೇವೆ ಎಂದು ನುಡಿದರು.
ಯುವ ವಿಭಾಗದ ಉಪ ಕಾರ್ಯಾಧ್ಯಕ್ಷೆ
ಪ್ರಣಿತಾ ವಿ. ಶೆಟ್ಟಿ ಮಾತನಾಡುತ್ತಾ ಈ ವರ್ಷ ಕೊನೆಯಲ್ಲಿ ಮಕ್ಕಳ ಉತ್ಸವ ನಡೆಯಲಿದೆ, ಅದು ದೊಡ್ಡ ಬಜೆಟಿನ ದಿನಪೂರ್ತಿ ಕಾರ್ಯಕ್ರಮವಾಗಿದೆ ಅದಕ್ಕೆ ತಾವೆಲ್ಲರೂ ಸಹಕಾರ ನೀಡಬೇಕು ಎಂದರು.

ಮಹಿಳಾ ವಿಭಾಗದ ನಿಕಟಪೂರ್ವ ಕಾರ್ಯಾಧ್ಯಕ್ಷೆ ರತ್ನಾ ಡಿ. ಕುಲಾಲ್ ಎಲ್ಲರನ್ನು ಸ್ವಾಗತಿಸಿದರು. ಕಾರ್ಯದರ್ಶಿ ಶೀಲಾ ಎಂ ಪೂಜಾರಿ ಆಟಿ
ಬಗ್ಗೆ ಮಾಹಿತಿಯಿತ್ತರು.

ಸಮಿತಿಯು ‘ಶ್ರೀ ವರಮಹಾಲಕ್ಷ್ಮಿ ಚಾರಿಟೇಬಲ್ ಫೌಂಡೇಶನ್ (ರಿ.)’ ಹೆಸರಿನಲ್ಲಿ ಸರ್ಕಾರದಲ್ಲಿ ನೋಂದಣಿಯಾಗಿದ್ದು, ಆದಾಯ ತೆರಿಗೆ ಕಾಯ್ದೆಯ 80G ಮಾನ್ಯತೆಗಳನ್ನು ಪಡೆದಿದೆ. ಇದರ ಮೂಲಕ ಸಮಿತಿಯ ಸಮಾಜಮುಖಿ, ಧಾರ್ಮಿಕ ಹಾಗೂ ಶೈಕ್ಷಣಿಕ ಸೇವಾ ಚಟುವಟಿಕೆಗಳಿಗೆ ಮತ್ತಷ್ಟು ಬಲ ದೊರೆತಿದ್ದು, ದಾನಿಗಳಿಗೂ ತೆರಿಗೆ ವಿನಾಯಿತಿ ಸೌಲಭ್ಯ ಲಭ್ಯವಾಗಲಿದೆ ಎಂದು ಸಮಿತಿಯ ಸಂಚಾಲಕ ದಿನೇಶ್ ಕುಲಾಲ್ ತಿಳಿಸಿದರು.

ಯುವ ವಿಭಾಗದ ಕಾರ್ಯಾಧ್ಯಕ್ಷ ಸುದೀಪ್ ಪೂಜಾರಿಯ ಮತ್ತು ನವೀನ್ ಸಾಲ್ಯಾನ್ ಇವರು ಆಟಿ ಕಳಿಂಜ ಪ್ರದರ್ಶನ ನಡೆಸಿದರು. ಪೂಜಾ ಸಮಿತಿಯ ಕಾರ್ಯದರ್ಶಿ ಸನತ್ ಪೂಜಾರಿ ಕೆಲ್ಲಪುತ್ತಿಗೆ
ಆಟಿ ಕಳಿಂಜದ ಬಗ್ಗೆ ಸೂಕ್ತ ಮಾಹಿತಿ ನೀಡಿದರು.

ವೇದಿಕೆಯಲ್ಲಿ ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿಯ ಕೋಶಾಧಿಕಾರಿ ಸುರೇಂದ್ರ ಆಚಾರ್ಯ, ಮಹಿಳಾ ವಿಭಾಗದ ಕಾರ್ಯದರ್ಶಿ ಶೀಲಾ ಎಂ ಪೂಜಾರಿ, ಉಪಕಾರ್ಯಾಧ್ಯಕ್ಷರುಗಳಾದ ಸಂಧ್ಯಾ ಎಸ್ ಪ್ರಭು, , ಜೊತೆ ಕಾರ್ಯದರ್ಶಿಗಳಾದ ಭಾರತಿ ಆಚಾರ್ಯ, ವಿದ್ಯಾ ಆಚಾರ್ಯ, ಜೊತೆ ಕೋಶಾಧಿಕಾರಿಗಳಾದ ವಿದ್ಯಾ ನಾಯಕ್ , ಶೋಭಾ ಲಕ್ಷ್ಮಣ್ ರಾವ್ ಗಾಣಿಗ,
ಸಲಹೆಗಾರರಾದ ಮೋಹಿನಿ ಜಗನ್ನಾಥ್ ಶೆಟ್ಟಿ, ಉಪಸ್ಥಿತರಿದ್ದರು.
ಉದ್ಘಾಟನೆ ಸಂದರ್ಭದಲ್ಲಿ ವರ್ಲಿ ಅಪ್ಪಾಜಿ ಬೀಡು ಕ್ಷೇತ್ರದ ಅನ್ನಪೂರ್ಣೇಶ್ವರಿ ಮಹಿಳಾ ವಿಭಾಗ ಕಾರ್ಯಾಧ್ಯಕ್ಷೆ ಕವಿತಾ ಜಿ ಶೆಟ್ಟಿ, ಉಪಾಧ್ಯಕ್ಷೆ ದಿವ್ಯ ಪಿ ಶೆಟ್ಟಿ ಅವರು ಪಾಲ್ಗೊಂಡಿದ್ದರು.
ಮಹಿಳಾ ವಿಭಾಗದ ಜೊತೆ ಕಾರ್ಯದರ್ಶಿ ಶೋಭಾ ಎಲ್ ರಾವ್ ಸಭಾ ಕಾರ್ಯಕ್ರಮ ನಿರೂಪಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮಾವನ್ನು ಭಾರತಿ ಸುರೇಂದ್ರ ಆಚಾರ್ಯ, ನಳಿನಿ ಕರ್ಕೇರ ನಿರೂಪಿಸಿದರು. ಶೃತಿ ಸನತ್ ಪೂಜಾರಿ ವಿಶೇಷ ಆಮಂತಿತರನ್ನು ಆಹ್ವಾನಿಸಿದರು.
ಪುಷ್ಪಲತಾ ಸಾಲ್ಯಾನ್ ಮನೆಯಲ್ಲಿ ಆಟಿಯ ಅಡುಗೆ ತಯಾರಿಸಿ ತಂದ ಎಲ್ಲಾ ಮಹಿಳೆಯ ಹೆಸರನ್ನು ವಾಚಿಸಿದರು. ಶಾರದಾ ಪೂಜಾರಿ ಕೊನೇಗೆ ಧನ್ಯವಾದವಿತ್ತರು.
ಪರಿಸರದ ಮಹಿಳೆಯರು ಸುಮಾರು 60ಕ್ಕೂ ಹೆಚ್ಚು ಮನೆಯಲ್ಲಿ ಆಟಿಯ ಅಡುಗೆ ತಯಾರಿಸಿ ತಂದಿದ್ದರು.
ಸಮಿತಿಯ ಮಹಿಳೆಯರಿಂದ ಮಕ್ಕಳಿಂದ ವೈವಿಧ್ಯಮಯ ನೃತ್ಯ, ಸಂಗೀತ ಕಾರ್ಯಕ್ರಮ ನಡೆಯಿತು,ಅಪಾರ ಸಂಖ್ಯೆಯಲ್ಲಿ ತುಳು ಕನ್ನಡಿಗರು ಪಾಲ್ಗೊಂಡು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು,

ಆಷಾಢ ಮಾಸವು ಸಂಸ್ಕೃತಿ , ಸಂಪ್ರದಾಯ ಮಹತ್ವವನ್ನು ತಿಳಿಸುತ್ತದೆ:
ಗೀತಾ ಜಗನ್ನಾಥ್ ಮೆಂಡನ್

ಅಧ್ಯಕ್ಷತೆಯನ್ನು ವಹಿಸಿದ್ದ ಮಹಿಳಾ ವಿಭಾಗದ ಉಪ ಕಾರ್ಯಾಧ್ಯಕ್ಷೆ ಗೀತಾ ಜಗನ್ನಾಥ್ ಮೆಂಡನ್ ಮಾತನಾಡಿ, ಆಷಾಢ ಮಾಸವು ನಮ್ಮ ಸಂಸ್ಕೃತಿ ಮತ್ತು ಸಂಪ್ರದಾಯದಲ್ಲಿ ವಿಶೇಷ ಮಹತ್ವವನ್ನು ಹೊಂದಿದೆ. ಇಂತಹ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಮ್ಮ ಪರಂಪರೆಯನ್ನು ಉಳಿಸಿ ಬೆಳೆಸುವುದರ ಜೊತೆಗೆ ಮುಂದಿನ ಪೀಳಿಗೆಗೆ ನಮ್ಮ ಸಂಸ್ಕೃತಿಯ ಮಹತ್ವವನ್ನು ಪರಿಚಯಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ, ಮಹಿಳೆಯರು ತಮ್ಮ ಕೈಯಾರೆ ಸಿದ್ಧಪಡಿಸಿದ ಹಲವಾರು ವಿಶೇಷ ತಿಂಡಿಗಳು ಸವಿರುಚಿಗಳು ತುಳುನಾಡಿನ ಅಡುಗೆಯ ಸೊಗಡನ್ನು ಸವಿಯುವ ಅವಕಾಶ ನೀಡಿದ್ದಾರೆ.ಅಟಿ ಕಳಂಜೆಯ ವೇಷಭೂಷಣಗಳು ನೈಜತೆಯನ್ನು ತುಂಬಿತ್ತು. ಮಹಿಳಾ ವಿಭಾಗದ ಎಲ್ಲಾ ಸದಸ್ಯರು ಒಗ್ಗಟ್ಟಿನಿಂದ ಕಾರ್ಯ ಕ್ರಮ ಯಶಸ್ವಿಯಾಗುವಲ್ಲಿ ಶ್ರಮಿಸಿದ್ದಾರೆ
ಎಂದು ನುಡಿದರು.



Related posts

ಬಿಲ್ಲವ ಸೇವಾ ಸಂಘ ಕುಂದಾಪುರ ಮುಂಬಯಿ, ಮಹಿಳಾ ಸಮಿತಿಯ ಸಂಯೋಜನೆಯಲ್ಲಿ ಜರಗಿದ ಮಹಿಳಾ ದಿನಾಚರಣೆ ಮತ್ತು ಅರಸಿನ ಕುಂಕುಮ ಕಾರ್ಯಕ್ರಮ

Mumbai News Desk

ತುಳು ವೆಲ್ ಫೇರ್  ಎಸೋಸಿಯೇಶನ್ ಡೊಂಬಿವಲಿ 27 ನೇ ವಾರ್ಷಿಕೋತ್ಸವ

Mumbai News Desk

ಮುಂಬೈನಲ್ಲಿ 426 ಫ್ಲಾಟ್‌ಗಳು ಲಭ್ಯ : ಬೆಲೆಗಳು ಕೈಗೆಟುಕದ ಕಾರಣ, ಸ್ವಂತ ಮನೆ ಹೊಂದುವವರಿಗೆ ಗ್ರಹ ಖರೀದಿ ಒಂದು ಮರೀಚಿಕೆಯೇ?

Mumbai News Desk

ಗೋರೆಗಾಂವ್ ಕರ್ನಾಟಕ ಸಂಘದ 63ನೇ ನಾಡಹಬ್ಬ ಸಮಾರಂಭಕ್ಕೆ ಚಾಲನೆ ,ಕೃತಿ ಲೋಕಾರ್ಪಣೆ,

Mumbai News Desk

ಬಂಟರ ಸಂಘ ಮುಂಬಯಿ ಜೋಗೇಶ್ವರಿ-ದಹಿಸರ್ ಪ್ರಾದೇಶಿಕ ಸಮಿತಿ “ಆಟಿದ ನೆನೆಪು – ಸ್ಕಿಲ್ಲ್ ಫಾರ್ ಎಂಪ್ಲಾಯ್” ಕಾರ್ಯಕ್ರಮ.

Mumbai News Desk

ಬಿಲ್ಲವರ ಅಸೋಸಿಯೇಶನಿನ ಭಾಂಡುಪ್ ಸ್ಥಳೀಯ ಕಚೇರಿಯಲ್ಲಿ ಆಟಿದ ನೆನಪು ಕಾರ್ಯಕ್ರಮ.

Mumbai News Desk