31 C
Mumbai
September 18, 2026
Mumbai News Kannada
ಮುಂಬಯಿ

ಮೊಗವೀರ ವ್ಯವಸ್ಥಾಪಕ ಮಂಡಳಿ, ಮುಂಬಯಿ ಇದರ ನವಿ ಮುಂಬಯಿ ಶಾಖೆಯ ವತಿಯಿಂದ ಆಟಿಡೊಂಜಿ ಕೂಟ.





ಮೊಗವೀವ ವ್ಯವಸ್ಥಾಪಕ ಮಂಡಳಿ, ಮುಂಬಯಿ ಇದರ ನವಿ ಮುಂಬಯಿ ಶಾಖೆಯ ವತಿಯಿಂದ ಆಟಿಡೊಂಜಿ ಕೂಟ ಕಾರ್ಯಕ್ರಮವು ಜುಲಾಯಿ 26, 2026ರಂದು ಸಂಜೆ ಗಂಟೆ 6.00ಕ್ಕೆನ್ಯೂ ಪನ್ವೇಲ್‌ ಸೆಕ್ಟರ್‌ 2 ರಲ್ಲಿನ ಆಂಧ್ರ ಕಲಾ ಸಮಿತಿಯ ಸಭಾಗೃಹದಲ್ಲಿ ಜರಗಿತು. ಆರಂಭದಲ್ಲಿ ನಡೆದ ಸಭಾ ಕಾರ್ಯಕ್ರಮ್ರದಲ್ಲಿ ಮಂಡಳಿಯ ಶೈಕ್ಷಣಿಕ ಸಮಿತಿಯ ಚಯರ್‌ಮೇನ್‌ ಅಜಿತ್‌ ಸುವರ್ಣ, ಇನ್‌ ಫ್ರಾಸ್ಟ್ರಕ್ಚರ್‌ ಸಮಿತಿಯ ಚಯರ್‌ಮೇನ್‌ ಧರ್ಮೇಶ್‌ ಪುತ್ರನ್‌ ಹಾಗೂ ಪ್ರಧಾನ ಸಮಿತಿಯ ಸದಸ್ಯರಾದ ಅರವಿಂದ ಪುತ್ರನ್‌ ಉಪಸ್ಥಿತರಿದ್ದರು. ಅತಿಥಿಗಳು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಕುಮಾರಿ ತನ್ವಿ ಕರುಣಾಕರ ಕೋಟ್ಯಾನ್‌ರಿಂದ ಪ್ರಾರ್ಥನೆಯಾದ ಬಳಿಕ ಅಜಿತ್‌ ಸುವರ್ಣರು ಮಾತನಾಡುತ್ತಾ ನವಿ ಮುಂಬಯಿ ಶಾಖೆಯು ನಿರಂತರವಾಗಿ ನಡೆಸುತ್ತಿರುವ ವಿವಿಧ ಕಾರ್ಯಕ್ರಮಗಳ ಬಗ್ಗೆ ತಮ್ಮ ಮೆಚ್ಚುಗೆಯನ್ನುವ್ಯಕ್ತಪಡಿಸಿದರಲ್ಲದೆ ಶಿಕ್ಷಣ ರಂಗದಲ್ಲಿ ಮಂಡಳಿಯು ಮಾಡುತ್ತಿರುವ ಪ್ರಗತಿಯ ಬಗ್ಗೆ ತಿಳಿಸಿದರು. ಅವರು ಮಂಡಳಿಯ ವಿವಿಧ ಸಮಾಜಮುಖಿ ಸೇವೆಯ ಪ್ರಯೋಜನವನ್ನು ಎಲ್ಲರೂ ಪಡೆದುಕೊಳ್ಳಬೇಕೆಂದರು.

ಧರ್ಮೇಶ್‌ ಪುತ್ರನ್‌ರು ಮಾತನಾಡುತ್ತಾ ನವಿ ಮುಂಬಯಿ ಶಾಖೆಯ ಕಾರ್ಯಕ್ರಗಳಲ್ಲಿ ಪಾಲ್ಗೊಳ್ಳಲು ತನಗೆ ಅತೀವ ಆನಂದವಾಗುತ್ತಿದೆ ಎನ್ನುತ್ತಾ ಇನ್ನು ಕೆಲವೇ ತಿಂಗಳಲ್ಲಿ ನವಿ ಮುಂಬಯಿ ಶಾಖೆಯು ತನ್ನದೇ ಆದ ಸ್ವಂತ ಸಭಾಗೃಹವನ್ನು ಹೊಂದಲಿದ್ದು ಮುಂದಿನ ಎಲ್ಲಾ ಕಾರ್ಯಕ್ರಮಗಳನ್ನು ಈ ನೂತನ ಸಭಾಗೃಹದಲ್ಲಿ ನಡೆಸಲಾಗುವುದು ಎಂದರು.

ಆ ಬಳಿಕ ಮಾತನಾಡಿದ ಶಾಖೆಯ ಕಾರ್ಯಾಧ್ಯಕ್ಷರಾದ ನಾರಾಯಣ ಕೊಟ್ಯಾನರು ನವಿ ಮುಂಬಯಿ ಪರಿಸರದಲ್ಲಿರುವ ಎಲ್ಲಾ ಸಮಾಜ ಬಾಂಧವರು ಮಂಡಳಿಯ ಸದಸ್ಯರಾಗಿ ಸಂಸ್ಥೆಯನ್ನು ಬಲ ಪಡಿಸಬೇಕೆಂದು ಕರೆಯಿತ್ತರು. ಈ ಸಂದರ್ಭದಲ್ಲಿ ವೇದಿಕೆಯಲ್ಲಿದ್ದ ಪ್ರಧಾನ ಕಛೇರಿಯ ಸಮಿತಿ ಸದಸ್ಯರಾದ ಚಂದ್ರಕಾಂತ ಸಾಲ್ಯಾನ್‌, ಪ್ರಧಾನ ಕಛೇರಿಯ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ನಿವೇದಿತಾ ಸಾಲ್ಯಾನ್‌, ಡೊಂಬಿವಿಲಿ ಶಾಖೆಯ ಮಹಿಳಾ ವಿಭಾಗದ ಕಾರ್ಯದರ್ಶಿ ದಮಯಂತಿ ಕೋಟ್ಯಾನ್‌ ಹಾಗೂ ನವಿ ಮುಂಬಯಿ ಶಾಖೆಯ ಸಲಹೆಗಾರರಾದ ಸೋಮನಾಥ ಎಸ್‌.ಕರ್ಕೇರರು ಕೂಡಾ ಸಮಯೋಚಿತವಾಗಿ ಮಾತನಾಡಿದರು. ಶಾಖೆಯ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಜಾನಕಿ ಬಂಗೇರರು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸುತ್ತಾ ಕಳೆದ 14 ವರ್ಷಗಳಿಂದ ಆಟಿಡೊಂಜಿ ಕೂಟವನ್ನು ನಿರಂತರವಾಗಿ ನಡೆಸಿಕೊಂಡು ಬರಲಾಗುತ್ತಿದೆ ಎನ್ನುತ್ತಾ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಏರ್ಪಡಿಸಿದ ಸಲುವಾಗಿ ಮಹಿಳಾ ವಿಭಾಗದ ಸದಸ್ಯೆಯರ ಸಹಕಾರವನ್ನು ಸ್ಮರಿಸಿದರು. ಕಾರ್ಯಕ್ರಮದ ಅಂಗವಾಗಿ ತುಳುನಾಡಿನಲ್ಲಿ ಇಂದಿನ ದಿನಗಳಲ್ಲಿ ಕಾಣಲು ಸಿಗದಿರುವಂಥಾ ಅಪರೂಪದ ಸಾಮಾಗ್ರಿಗಳಾದ ತಟ್ಟಿ, ತಟಿ ಕುಡುಪು, ಸೇರು, ಕಳಸೆ, ಚನ್ನೆಮಣೆ, ತೊಂದುರು [ಇಡ್ಡಿ ಮಾಡುವ ಪಾತ್ರೆ] ಮುಂತಾದುವುಗಳ ಪ್ರದರ್ಶನವು ಎಲ್ಲರ ಗಮನ ಸೆಳೆಯಿತು. ಅಶ್ವಿನಿ ಕೊಟ್ಯಾನ್‌ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರ್ವಹಿಸಿ ಕೊನೆಯಲ್ಲಿ ವಂದಿಸಿದರು. ಪ್ರತಿಭಾ ಸಾಲ್ಯಾನ್‌ ಸಹಕರಿಸಿದರು. ಶಾಖೆಯ ಕಾರ್ಯದರ್ಶಿ ಶೇಖರ ಮೈಂದನ್, ಹಿರಿಯ ಸದಸ್ಯ ಸಿದ್ಧಾರ್ಥ ಕೋಟ್ಯಾನ್‌ ವೇದಿಕೆಯಲ್ಲಿದ್ದರು.
ಕಾರ್ಯಕ್ರಮದಲ್ಲಿ ನವಿ ಮುಂಬಯಿ ಶಾಖೆಯ ಸದಸ್ಯರು ಹಾಗೂ ಅವರ ಕುಟುಂಬಸ್ಥರು ಮಾತ್ರವಲ್ಲದೆ ಪ್ರಧಾನ ಕಛೇರಿಯ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ನಿವೇದಿತಾ ಸಾಲ್ಯಾನ್‌, ಕಾರ್ಯದರ್ಶಿ ರಾಜೇಶ್ವರಿ ಉಪ್ಪೂರ್‌, ಕೋಶಾಧಿಕಾರಿ ಯಶೋದಾ ಕರ್ಕೇರ, ಸಮಿತಿ ಸದಸ್ಯೆಯರಾದ ಮೋಹಿತಾ ಕರ್ಕೇರ, ಹರಿಣಾಕ್ಷಿ ಮತ್ತು ಹರ್ಷಾ, ಹಾಗೂ ಡೋಂಬಿವಿಲಿ ಶಾಖೆಯ ಮಹಿಳಾ ವಿಭಾಗದ ರ್ಕಾದರ್ಶಿ ದಮಯಂತಿ ಕೋಟ್ಯಾನ್‌, ಕೋಶಾಧಿಕಾರಿ ಸವಿತಾ ಸಾಲ್ಯಾನ್‌, ಸಮಿತಿ ಸದಸ್ಯೆಯರಾದ ಶೇವಂತಿ, ಪುಷ್ಪಾ ತಾಮ್ಸೆಮತ್ತು ಶೋಭಾ ಪುತ್ರನ್‌ ಉಪಸ್ಥಿತರಿದ್ದರು. ಕೊನೆಯಲ್ಲಿ ಸದಸ್ಯೆಯರು ತಮ್ಮ ತಮ್ಮ ಮನೆಯಲ್ಲೆ ತಯಾರಿಸಿ ತಂದ ತುಳುನಾಡಿನ ವಿವಿಧ ಬಗೆಯ ಅಡುಗೆಯ ರುಚಿಯನ್ನು ಎಲ್ಲರೂ ಸವಿದರು. ಅದರ ಜೊತೆಯಲ್ಲೆ ಸಿದ್ದಾರ್ಥ ಕೋಟ್ಯಾನ್‌, ಉಷಾ ಕರ್ಕೇರ,ಶ್ರೀ ದೇಸಾಯಿಯವರು ತಮ್ಮ ಸುಮಧುರ ಹಾಡುಗಳಿಂದ ಎಲ್ಲರ ಮನಸೂರೆಗೊಂಡರು.
ವರದಿ:ಸೋಮನಾಥ ಎಸ್‌.ಕರ್ಕೇರ, ಫೋನ್‌: 9819321186



Related posts

ಮಲಾಡ್ ಕನ್ನಡ ಸಂಘ ಮಹಿಳಾ ವಿಭಾಗದ ಅರಸಿನ ಕುಂಕುಮ,

Mumbai News Desk

ಮಲಾಡ್ ಶ್ರೀ ವರಮಹಾಲಕ್ಷ್ಮೀ ಪೂಜಾ ಸಮಿತಿಯಿಂದ 15 ನೇ ವಾರ್ಷಿಕ ಸಾಮೂಹಿಕ ವರಮಹಾಲಕ್ಷ್ಮೀ ಪೂಜೆ, ಸಾಂಸ್ಕೃತಿಕ ವೈಭವ, ಯಕ್ಷಗಾನ, ಸನ್ಮಾನ, ಸಮಾರೋಪ ಸಮಾರಂಭ .

Mumbai News Desk

ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಟ್ರಸ್ಟ್ ಮೀರಾಗಾಂವ್ 33ನೇ ವಾರ್ಷಿಕ ಅಯ್ಯಪ್ಪ ಸ್ವಾಮಿ ಮಹಾಪೂಜೆ, ದೀಪೋತ್ಸವ, ಅನ್ನದಾನ

Mumbai News Desk

ಶ್ರೀ ಗುರುದೇವ ಸೇವಾ ಬಳಗ, ಒಡಿಯೂರು,  ಮಹಾರಾಷ್ಟ್ರ ಘಟಕದ ರಜತ ಮಹೋತ್ಸವ ಸಂಭ್ರಮಾಚರಣೆಯ ಪತ್ರಿಕಾಗೋಷ್ಠಿ, 

Mumbai News Desk

ಜ್ಞಾನ ವಿಕಾಸ ಮಂಡಳ ಶಿಕ್ಷಣ ಸಂಸ್ಥೆ ಕಲ್ವಾ : ನೂತನ ಅಧ್ಯಕ್ಷರಾಗಿ ವಿ ಎನ್ ಹೆಗಡೆ ಮರು ಆಯ್ಕೆ.

Mumbai News Desk

ಮುಂಬೈ: ಕುರ್ಲಾ ಬೆಸ್ಟ್ ಬಸ್ ಅಪಘಾತ ಪ್ರಕರಣ, ಚಾಲಕರನ್ನು ನೇಮಿಸಿಕೊಳ್ಳುವಲ್ಲಿ ಮತ್ತು ತರಬೇತಿ ನೀಡುವಲ್ಲಿ ನಿರ್ಲಕ್ಷ – ಪೊಲೀಸರ ಆರೋಪ

Mumbai News Desk