29 C
Mumbai
September 24, 2026
Mumbai News Kannada
ಮುಂಬಯಿ

ಅಯ್ಯಪ್ಪ ಯಕ್ಷ ಕಲಾ ಪ್ರತಿಷ್ಠಾನ, ಮುಂಬೈ: 2026–2028ರ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ



ಮುಂಬೈ, ಅ. 6: ಅಯ್ಯಪ್ಪ ಯಕ್ಷ ಕಲಾ ಪ್ರತಿಷ್ಠಾನವು ಸ್ಥಾಪನೆಯಾದಗಿಂದ ಯಕ್ಷಗಾನ, ಸಾಮಾಜಿಕ ಸೇವೆ, ಶೈಕ್ಷಣಿಕ ನೆರವು ಸೇರಿದಂತೆ ಹಲವು ಸಮಾಜಮುಖಿ ಕಾರ್ಯಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದ್ದು, ಇದೀಗ ಪ್ರತಿಷ್ಠಾನದ 14ನೇ ವಾರ್ಷಿಕ ಮಹಾಸಭೆಯು ಜುಲೈ 19, ರವಿವಾರ ದಂದು ಸಯನ್‌ನ ಕನ್ನಡ ಕಲಾ ಕೇಂದ್ರದ ಕಚೇರಿಯಲ್ಲಿ ಪ್ರತಿಷ್ಠಾನದ ಅಧ್ಯಕ್ಷರಾದ ಜಯರಾಮ್ ಶೆಟ್ಟಿ ಇಡೂರು ಅವರ ಅಧ್ಯಕ್ಷತೆಯಲ್ಲಿ ಯಶಸ್ವಿಯಾಗಿ ನೆರವೇರಿತು.
ಭಾಗವತರಾದ ರಾಘವೇಂದ್ರ ಭಟ್ ಮಾಳ ಅವರ ಗಣಪತಿ ಸ್ತುತಿಯೊಂದಿಗೆ ಸಭೆಯು ಆರಂಭಗೊಂಡಿತು. ಗೌರವ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಮೊಗವೀರ ಬಗ್ವಾಡಿ ಸಭೆಗೆ ಆಗಮಿಸಿದ ಸದಸ್ಯರು ಹಾಗೂ ಕಲಾವಿದರನ್ನು ಸ್ವಾಗತಿಸಿದರು. ವಿಶೇಷ ಅತಿಥಿಗಳಾಗಿ ಅಮೃತ ಅಜಯ್ ಶೆಟ್ಟಿ ಹಾಗೂ ನಿತೀಶ್ ಶೆಟ್ಟಿ ಜಡ್ಡಾಡಿ ಭಾಗವಹಿಸಿದ್ದು, ಸಭೆಯ ಮೆರುಗನ್ನು ಇನ್ನಷ್ಟು ಹೆಚ್ಚಿಸಿತು. ಸಾಮಾನ್ಯವಾಗಿ ಕೆಲವೇ ಸದಸ್ಯರು ಭಾಗವಹಿಸುವ ಮಹಾಸಭೆಯಲ್ಲಿ ಈ ಬಾರಿ ಅತ್ಯಧಿಕ ಸಂಖ್ಯೆಯಲ್ಲಿ ಸದಸ್ಯರು ಪಾಲ್ಗೊಂಡಿದ್ದು ವಿಶೇಷವಾಗಿತ್ತು.

ಮಹಾಸಭೆಯಲ್ಲಿ 2026–2028ರ ಅವಧಿಗೆ ನೂತನ ಪದಾಧಿಕಾರಿಗಳ ಆಯ್ಕೆ ಸರ್ವಾನುಮತದಿಂದ ನಡೆಯಿತು. ಅಧ್ಯಕ್ಷರಾಗಿ ಜಯರಾಮ್ ಶೆಟ್ಟಿ ಇಡೂರು ಪುನರಾಯ್ಕೆಗೊಂಡರೆ, ಪ್ರತಿಷ್ಠಾನದ ಸ್ಥಾಪಕ ಅಧ್ಯಕ್ಷರಾಗಿ ರಾಜು ಮೆಂಡನ್ ವಂಡ್ಸೆ ಅವರನ್ನು ಗೌರವಿಸುದರ ಜೊತೆಗೆ ಗೌರವಾಧ್ಯಕ್ಷರಾಗಿ ಅಶೋಕ್ ಮೊಗವೀರ ಮರತ್ತೂರು ಅವರನ್ನು ಆಯ್ಕೆ ಮಾಡಲಾಯಿತು.

ನೂತನ ಪದಾಧಿಕಾರಿಗಳು:

ಅಧ್ಯಕ್ಷರು: ಜಯರಾಮ್ ಶೆಟ್ಟಿ ಇಡೂರು
ಗೌರವಾಧ್ಯಕ್ಷರು : ಅಶೋಕ್ ಮೊಗವೀರ ಮರತ್ತೂರು
ಉಪಾಧ್ಯಕ್ಷರು: ಅಮೃತಾ ಅಜಯ್ ಶೆಟ್ಟಿ ಹಾಗೂ ನಿತೀಶ್ ಶೆಟ್ಟಿ ಜಡ್ಡಾಡಿ
ಗೌರವ ಪ್ರಧಾನ ಕಾರ್ಯದರ್ಶಿ: ರಾಘವೇಂದ್ರ ಮೊಗವೀರ ಬಗ್ವಾಡಿ
ಗೌರವ ಕೋಶಾಧಿಕಾರಿ: ಮಹೇಂದ್ರ ಶೆಟ್ಟಿ ನಂದ್ರೋಳ್ಳಿ
ಜೊತೆ ಕಾರ್ಯದರ್ಶಿ: ರಮೇಶ್ ಬಿರ್ತಿ
ಜೊತೆ ಕೋಶಾಧಿಕಾರಿ: ಡಾ. ಸೌಜನ್ಯ ಬಿಲ್ಲವ
ಸಾಂಸ್ಕೃತಿಕ ವಿಭಾಗದ ಕಾರ್ಯಾಧ್ಯಕ್ಷ: ಸುರೇಶ್ ಶೆಟ್ಟಿ ನಂದ್ರೋಳ್ಳಿ

ಸಮಿತಿ ಸದಸ್ಯರಾಗಿ ರಾಘವೇಂದ್ರ ಭಟ್ ಮಾಳ, ಅಣ್ಣಪ್ಪ ಪೂಜಾರಿ, ಅರುಣ್ ಶೆಟ್ಟಿ ನೈಕಂಬ್ಳಿ, ಸುಕುಮಾರ ಶೆಟ್ಟಿ ಬೆಳಿಂಜೆ, ಸುಕುಮಾರ್ ಹೆಗ್ಡೆ, ರಾಘವೇಂದ್ರ ದೇವಾಡಿಗ, ರಂಜಿತ್ ಶೆಟ್ಟಿ, ಸಂಪತ್ ಶೆಟ್ಟಿ, ವೀಣಾ ರಾವ್, ಸರಸ್ವತಿ ಬಿಲ್ಲವ, ತನ್ವಿ ರಾವ್, ಶಾರದಾ ಪೂಜಾರಿ, ಪ್ರಭಾವತಿ ಪ್ರಭು, ಸುಚಿತ್ರ ದೇವಾಡಿಗ, ವಿಜಯ ಪುತ್ರನ್, ಪ್ರಭಾಕರ್ ಮೊಗವೀರ, ಗಿರೀಶ್ ಗೌಡ, ದಿಶಾ ಪೂಜಾರಿ, ಶ್ಯಾಮಲಾ ಆರ್. ನಾಯಕ್, ಆಯ್ಕೆಯಾದರು.

ಮುಂದಿನ ಹಲವು ಕಾರ್ಯಕ್ರಮಗಳ
ಜೊತೆಗೆ ಶೈಕ್ಷಣಿಕ ನೆರವು, ಮಹಿಳಾ ಸಬಲೀಕರಣ, ಆರೋಗ್ಯ ಜಾಗೃತಿ ಹಾಗೂ ತಾಯ್ನಾಡಿನ ಸಾಂಸ್ಕೃತಿಕ ಪರಂಪರೆಯನ್ನು ಉಳಿಸಿ ಬೆಳೆಸುವ ಕಾರ್ಯಕ್ರಮಗಳಿಗೆ ಹೆಚ್ಚಿನ ಆದ್ಯತೆ ನೀಡುವ ಬಗ್ಗೆ ತೀರ್ಮಾನಿಸಲಾಯಿತು. ಈ ಉದ್ದೇಶಗಳಿಗೆ ಅನುಗುಣವಾಗಿ ಕೆಲವು ರೂಪರೇಷೆಯನ್ನೂ ಸಭೆಯಲ್ಲಿ ಸಿದ್ಧಪಡಿಸಲಾಯಿತು.

ಅಂತಿಮವಾಗಿ ಎಲ್ಲ ಸದಸ್ಯರ ಸಹಕಾರಕ್ಕೆ ಕೃತಜ್ಞತೆ ಸಲ್ಲಿಸಲಾಯಿತು.



Related posts

84 ವರ್ಷಗಳ ಇತಿಹಾಸವುಳ್ಳಹಿರಿಯ ಜಾತೀಯ ಸಂಸ್ಥೆ ಸಾಫಲ್ಯ ಸೇವಾ ಸಂಘದ 70 ನೇ ವಾರ್ಷಿಕ ಮಹಾಸಭೆ.

Mumbai News Desk

ಶ್ರೀ ಜಗದಂಬಾ ಮಂದಿರದ ಯುವ ವಿಭಾಗದ ವತಿಯಿಂದ ಆದಿವಾಸಿ ಶಾಲೆಗೆ ಭೇಟಿ, ಪುಸ್ತಕ, ಇತರ ಸಾಮಗ್ರಿ ವಿತರಣೆ

Mumbai News Desk

ಮುಂಬೈ : ಮೊದಲ ಮಹಿಳಾ ಬಿಎಂಸಿ ಆಯುಕ್ತರಾಗಿ ಅಶ್ವಿನಿ ಭಿಡೆ ನೇಮಕ

Mumbai News Desk

ಮಲಾಡ್: ಪ್ರಜ್ವಲ್ ಎಸ್. ನಾಯಕ್‌ಗೆ ಶೇ. 89 ಅಂಕ

Mumbai News Desk

ನಾಲಾಸೋಪಾರ ದ ಉದ್ಯಮಿ, ಸಮಾಜ ಸೇವಕ. ಸಂಘಟಕ,  ಶಶಿಧರ. ಕೆ ಶೆಟ್ಟಿ ಇನ್ನಂಜೆಯವರಿಗೆ ಪೋಲಿಸ್ ಇಲಾಖೆಯ ಅತ್ಯುತ್ತಮ  ಸೇವಕರ್ತ ಪ್ರಶಸ್ತಿ ಪ್ರದಾನ .

Mumbai News Desk

ಬಂಟರ ಸಂಘ ಮುಂಬಯಿ – ಜೋಗೇಶ್ವರಿ-ದಹಿಸರ್ ಸಮಿತಿ ಆಶ್ರಯದಲ್ಲಿ “ಭೀಷ್ಮ ಸೇನಾಧಿಪತ್ಯ – ಕರ್ಮಬಂಧ” ಯಕ್ಷಗಾನ ತಾಳಮದ್ದಳೆ

Mumbai News Desk