29 C
Mumbai
September 24, 2026
Mumbai News Kannada
ಕರಾವಳಿ

ಶ್ರೀ ದುರ್ಗಾಪರಮೇಶ್ವರಿ ಕಲಾನಿಕೇತನ ಸಂಗೀತ ಶಾಲೆ, ನಾಡಾ: ತ್ರಾಸಿಯಲ್ಲಿ ಹಿಂದೂಸ್ತಾನಿ ಸಂಗೀತ ಶಾಲೆಯ ಶುಭಾರಂಭ



ತ್ರಾಸಿ, ಅ. 5 : ಶ್ರೀ ದುರ್ಗಾಪರಮೇಶ್ವರಿ ಕಲಾನಿಕೇತನ ಸಂಗೀತ ಶಾಲೆ, ನಾಡಾ ಇದರ ಮೂರನೇ ಶಾಖೆ ತ್ರಾಸಿಯಲ್ಲಿ ಇತ್ತೀಚೆಗೆ ಉದ್ಘಾಟನೆಯಾಯಿತು.

ಉದ್ಯಮಿ ಹಾಗೂ ಕಲಾಪೋಷಕರಾದ ಮಂಜುನಾಥ ಸಾಲಿಯಾನ್ ಶಾಖೆಯನ್ನು ಉದ್ಘಾಟಿಸಿ ಮಾತನಾಡಿ, “ಸಂಗೀತವು ಅದ್ಭುತ ಶಕ್ತಿ. ಸಂಗೀತ ಕಲಿತವರಿಗೆ ಹಾಗೂ ಆಲಿಸುವವರಿಗೆ ಮಾನಸಿಕ ನೆಮ್ಮದಿ ದೊರೆಯುತ್ತದೆ. ಬಾಲ್ಯದಲ್ಲಿಯೇ ಸಂಗೀತಾಭ್ಯಾಸ ಆರಂಭಿಸುವುದು ಅಗತ್ಯ. ಈ ಭಾಗದ ಮಕ್ಕಳಿಗೆ ಈ ಶಾಲೆ ವರದಾನವಾಗಲಿ,” ಎಂದು ಆಶಿಸಿದರು.

ಕಾರ್ಯಕ್ರಮವನ್ನು ಕೊಡುಗೈದಾನಿ ರಾಘವೇಂದ್ರ ಪೂಜಾರಿ ಉದ್ಘಾಟಿಸಿದರು. ನಿವೃತ್ತ ಎಲ್‌ಐಸಿ ಅಧಿಕಾರಿ ಸತೀಶ್ ಮಂಗಳೂರು ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ಪ್ರೊಫೆಸರ್ ಎಂ. ರಾಮಚಂದ್ರ ಪ್ರಶಸ್ತಿ ಪುರಸ್ಕೃತ ಮಹಾಬಲ ಕೆ. ಅವರನ್ನು ಸನ್ಮಾನಿಸಲಾಯಿತು. ಸಂಗೀತ ವಿದ್ವಾನ್ ಗುರುಗಳಾದ ಶರತ್ ನಾಡಾ ಅವರಿಂದ ಹಿಂದೂಸ್ತಾನಿ ಸಂಗೀತ ಕಛೇರಿ ನಡೆಯಿತು.

ವೇದಿಕೆಯಲ್ಲಿ ಖ್ಯಾತ ಸ್ಯಾಕ್ಸೋಫೋನ್ ವಾದಕ ಗೋಪಾಲ್ ದೇವಾಡಿಗ, ಸಾಹಿತಿ ಶೇಖರ ಪೂಜಾರಿ ತಾರಿಬೇರು, ಸದಾನಂದ ಪೂಜಾರಿ, ಗೋವಿಂದ ಹಳಗೇರಿ ಹಾಗೂ ಉದಯ ಆಚಾರ್ಯ ತ್ರಾಸಿ ಅತಿಥಿಗಳಾಗಿ ಭಾಗವಹಿಸಿ ಶುಭ ಹಾರೈಸಿದರು.

ಸಂಗೀತ ಶಾಲೆಯ ವಿದ್ಯಾರ್ಥಿ-ವಿದ್ಯಾರ್ಥಿನಿಯರು ತಮ್ಮ ಪ್ರತಿಭೆ ಪ್ರದರ್ಶಿಸುವುದರೊಂದಿಗೆ ಗುರುಗಳಿಗೆ ಗುರು ವಂದನೆ ಸಲ್ಲಿಸಿದರು. ಶಾಲೆಯ ವಿದ್ಯಾರ್ಥಿನಿ ಶ್ರೀವರ್ಷಾ ಸ್ವಾಗತಿಸಿದರು. ನಾಗರಾಜ ದೇವಳಿ ಹಾಗೂ ಗಣಪು ನಾಯಕವಾಡಿ ಕಾರ್ಯಕ್ರಮ ನಿರೂಪಿಸಿದರೆ, ನಾಗೇಂದ್ರ ಹೇರಂಜಾಲು ವಂದಿಸಿದರು.



Related posts

ನಟ ರಕ್ಷಿತ್ ಶೆಟ್ಟಿ : ಕಾಪು ಮಾರಿಯಮ್ಮ ದರುಶನಗೈದು, ಜೀರ್ಣೋದ್ಧಾರ ಕಾರ್ಯ ವೀಕ್ಷಣೆ

Mumbai News Desk

ಮಂಗಳೂರಿನ ನಗರ ಸೇವಕ ಜಗದೀಶ್ ಶೆಟ್ಟಿ ಆತ್ಮ ಹತ್ಯೆಗೆ ಯತ್ನ.

Mumbai News Desk

ಯಕ್ಷಧ್ರುವ ಪಟ್ಲ ಸಂಭ್ರಮದಲ್ಲಿ   ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಗೌರವ ಪ್ರಧಾನ

Mumbai News Desk

ಕಾಪು ಮೊಗವೀರ ಮಹಿಳಾ ಮಂಡಳಿಯ ರಚನೆಯ ಬಗ್ಗೆ ಪೂರ್ವಭಾವಿ ಸಭೆ ಹಾಗೂ ಸದಸ್ಯೆಯರ ಅರಸಿನ ಕುಂಕುಮ ಕಾರ್ಯಕ್ರಮ.

Mumbai News Desk

ಶ್ರೀ ಭಗವತೀ ತೀಯಾ ಸಮಾಜ ನೇಜಾರ್,  ಮಹಿಳಾ ಘಟಕ ಉದ್ಘಾಟನೆ

Mumbai News Desk

ಕುಂದಾಪುರ ಕನ್ನಡ ಸಂಸ್ಕೃತಿ ಪ್ರತಿಷ್ಠಾನ ಬೈಂದೂರು ಕೆಸರಲ್ಲೊಂದು ದಿನ ಗಮ್ಮತ್,

Mumbai News Desk