August 8, 2026
Mumbai News Kannada
ಪ್ರಕಟಣೆ

ಶ್ರೀ ಅಯ್ಯಪ್ಪ ಸೇವಾ ಚಾರಿಟೇಬಲ್ ಟ್ರಸ್ಟ್ ಫೋರ್ಟ್ ಮುಂಬಯಿ: ಕುಣಿತ ಭಜನಾ ಸ್ಪರ್ಧೆಗೆ ತಂಡಗಳ ಆಹ್ವಾನ





ಮುಂಬಯಿ: ಶ್ರೀ ಅಯ್ಯಪ್ಪ ಸೇವಾ ಸಮಿತಿ ಫೋರ್ಟ್ ಮುಂಬಯಿ ಹಾಗೂ ಅಯ್ಯಪ್ಪ ಸ್ಪೋರ್ಟ್ಸ್ ಕ್ಲಬ್ ಫೋರ್ಟ್ ಮುಂಬಯಿ ಸಂಚಾಲಕತ್ವದ ಶ್ರೀ ಅಯ್ಯಪ್ಪ ಚಾರಿಟೇಬಲ್ ಟ್ರಸ್ಟ್ ಫೋರ್ಟ್ ಮುಂಬಯಿ ಕಳೆದ 43 ವರ್ಷಗಳಿಂದ ಫೋರ್ಟ್ ಪರಿಸರದ ಉಡುಪಿ ಹೋಟೆಲ್ ಎದುರುಗಡೆ ಶ್ರೀ ಅಯ್ಯಪ್ಪ ಸ್ವಾಮಿಯ ಪೂಜೆಯನ್ನು ಮಾಡುತ್ತಾ, ಅಸಂಖ್ಯಾತ ಅಯ್ಯಪ್ಪ ವ್ರತಧಾರಿಗಳನ್ನು ಶಿಸ್ತುಬದ್ಧವಾಗಿ ಶ್ರದ್ಧಾ-ಭಕ್ತಿಗಳಿಂದ ಶಬರಿಮಲೆ ಯಾತ್ರೆ ಮಾಡಿಸಿದ ಸಂಸ್ಥೆಯಾಗಿದೆ.

ತಮ್ಮದೇ ಆದ ಭಜನಾ ಮಂಡಳಿಯನ್ನು ಹೊಂದಿರುವ ಈ ಸಂಸ್ಥೆಯು ಮಕ್ಕಳಲ್ಲಿ ಭಜನೆಯ ಪ್ರೇರಣೆ ನೀಡುವ ಉದ್ದೇಶದಿಂದ ಕಳೆದ ವರ್ಷ ಮೀರಾ ರೋಡ್ ಪರಿಸರದಲ್ಲಿ ಯಶಸ್ವಿ ಭಜನಾ ಸ್ಪರ್ಧೆಯನ್ನು ಆಯೋಜಿಸಿತ್ತು. ಈ ವರ್ಷ ಮಹಾರಾಷ್ಟ್ರದ ತುಳುನಾಡೆಂದೇ ಖ್ಯಾತಿ ಪಡೆದಿರುವ ಡೊಂಬಿವಲಿಯಲ್ಲಿ ಅಕ್ಟೋಬರ್ 4ರ ಭಾನುವಾರದಂದು ಗಣ್ಯಾತಿಗಣ್ಯರ ಸಮ್ಮುಖದಲ್ಲಿ ಬೆಳಿಗ್ಗೆ 9:30 ರಿಂದ ಡೊಂಬಿವಲಿ ಮಾನ್ಪಾಡದ ಡಿ’ ಮಾರ್ಟ್ ಎದುರುಗಡೆ ಇರುವ ‘ಪ್ಲಾಟಿನಮ್ ಸಭಾಗೃಹ’ದಲ್ಲಿ ‘ಕುಣಿತ ಭಜನಾ ಸ್ಪರ್ಧೆ’ಯನ್ನು ಆಯೋಜಿಸಿದೆ.

ವಿಭಾಗಗಳು ಮತ್ತು ಬಹುಮಾನಗಳು: ಕುಣಿತ ಭಜನಾ ಸ್ಪರ್ಧೆಯಲ್ಲಿ 5 ರಿಂದ 20 ವರ್ಷದ ಒಳಗಿನ ಬಾಲಕ-ಬಾಲಕಿಯರಿಗೆ ಮತ್ತು 20 ವರ್ಷ ಮೇಲ್ಪಟ್ಟ ಮಹಿಳೆಯರಿಗೆ ಮಾತ್ರ ಅವಕಾಶವಿದ್ದು, ಎರಡೂ ವಿಭಾಗಗಳಲ್ಲಿ ತಲಾ 10 ತಂಡಗಳಿಗೆ ಭಾಗವಹಿಸಲು ಅವಕಾಶ ನೀಡಲಾಗಿದೆ.

ಎರಡೂ ವಿಭಾಗಗಳಿಗೆ ನೀಡಲಾಗುವ ಬಹುಮಾನಗಳು:

  • ಪ್ರಥಮ: ₹25,000
  • ದ್ವಿತೀಯ: ₹15,000
  • ತೃತೀಯ: ₹10,000

ಕುಣಿತ ಭಜನೆಯ ನಿಯಮಗಳು:

  1. ಹಾರ್ಮೋನಿಯಂ ಹಾಗೂ ತಬಲಾ ವಾದಕರನ್ನು ಹೊರತುಪಡಿಸಿ ಕನಿಷ್ಠ 10 ಮತ್ತು ಗರಿಷ್ಠ 12 ಮಂದಿ ಭಜಕರಾಗಿರಬೇಕು.
  2. ದಾಸರ ಪದಗಳ/ಭಜನೆಗೆ ಆದ್ಯತೆ ನೀಡಲಾಗಿದ್ದು, ಅದು ಕಡ್ಡಾಯವಾಗಿದೆ.
  3. ತಬಲಾ ಹಾಗೂ ಹಾರ್ಮೋನಿಯಂ ವಾದಕರಿಗೆ ಯಾವುದೇ ವಯೋಮಿತಿಯ ನಿರ್ಬಂಧವಿಲ್ಲ.
  4. ಒಬ್ಬ ಸದಸ್ಯನಿಗೆ ಒಂದು ತಂಡದಲ್ಲಿ ಮಾತ್ರ ಭಾಗವಹಿಸಲು ಅವಕಾಶವಿದೆ.
  5. ನಿಗದಿತ ಸಮಯಕ್ಕಿಂತ ಒಂದು ಗಂಟೆ ಮುಂಚಿತವಾಗಿ ಹಾಜರಿದ್ದು ನೋಂದಾಯಿಸಿಕೊಳ್ಳಬೇಕು.
  6. ಬಾಲಕ-ಬಾಲಕಿಯರ ವಯೋಮಿತಿ 20 ವರ್ಷದ ಒಳಗಿರಬೇಕು (ಆಧಾರ್ ಕಾರ್ಡ್ ಕಡ್ಡಾಯವಾಗಿ ತರತಕ್ಕದ್ದು).
  7. ಪ್ರತಿ ತಂಡಕ್ಕೆ 15 ನಿಮಿಷಗಳ ಕಾಲಾವಧಿ ಇರಲಿದೆ.
  8. ಕುಣಿತ ಭಜನೆ ಆರಂಭವಾಗಿ 10 ನಿಮಿಷಗಳಾದ ತಕ್ಷಣ ಮೊದಲ ಕರೆಗಂಟೆ ಬಾರಿಸಲಾಗುವುದು. ಉಳಿದ 5 ನಿಮಿಷಗಳ ಒಳಗಾಗಿ ಭಜನೆಯನ್ನು ಮುಗಿಸಬೇಕು.
  9. 15 ನಿಮಿಷಗಳ ಸಮಯಾವಧಿಯನ್ನು ಮೀರಿದಲ್ಲಿ ಅಂಕಗಳನ್ನು ಕಡಿತಗೊಳಿಸಲಾಗುವುದು.
  10. 15ನೇ ನಿಮಿಷಕ್ಕೆ ಬಾರಿಸುವ ಎರಡನೇ ಕರೆಗಂಟೆಯು ಅಂತಿಮ ಕರೆಗಂಟೆಯಾಗಿರುತ್ತದೆ.
  11. ತೀರ್ಪು ನೀಡುವಾಗ ಭಜನೆಯ ಆರಂಭ, ಸಾಂಪ್ರದಾಯಿಕ ಸಮವಸ್ತ್ರ, ಹಾಡಿನ ಆಯ್ಕೆ, ರಾಗ-ತಾಳ-ಲಯ, ಕುಣಿತದ ಸಂಯೋಜನೆ, ತಂಡದ ಹೊಂದಾಣಿಕೆ, ಕ್ರಿಯಾಶೀಲತೆ ಹಾಗೂ ಮುಕ್ತಾಯವನ್ನು ಆಧರಿಸಿ ಅಂಕಗಳನ್ನು ನೀಡಲಾಗುವುದು.
  12. ಭಾಗವಹಿಸಿದ ಎಲ್ಲಾ ಭಜನಾ ತಂಡಗಳಿಗೆ ಪ್ರಮಾಣಪತ್ರ ಹಾಗೂ ಗೌರವಧನವನ್ನು ಸಮಾರೋಪ ಸಮಾರಂಭದಲ್ಲಿ ನೀಡಲಾಗುವುದು.
  13. ತೀರ್ಪುಗಾರರ ನಿರ್ಧಾರವೇ ಅಂತಿಮ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:

  • ಕಿಶೋರ್ ಕರ್ಕೇರಾ: 9167637971
  • ಪ್ರಕಾಶ್ ಕಾಂಚನ್: 7977937677
  • ಸುಭಾಷ್ ಮೆಂಡನ್: 8369172581

ಆಸಕ್ತ ತಂಡಗಳು ಈ ಸಂಖ್ಯೆಗಳನ್ನು ಸಂಪರ್ಕಿಸುವಂತೆ ಶ್ರೀ ಅಯ್ಯಪ್ಪ ಚಾರಿಟೇಬಲ್ ಟ್ರಸ್ಟ್ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ವಿನಂತಿಸಿದೆ.



Related posts

ಮೊಗವೀರ ವ್ಯವಸ್ಥಾಪಕ ಮಂಡಳಿ ಮುಂಬಯಿ, ನಾಯ್ಗಾಂವ್ – ವಿರಾರ್ ಶಾಖೆಜು. 28ಕ್ಕೆ “ಪ್ರಸ್ತುತ ಶಿಕ್ಷಣ ವ್ಯವಸ್ಥೆ” ಬಗ್ಗೆ ವಿಚಾರ ಸಂಕಿರಣ

Mumbai News Desk

ಮೂಲ್ಕಿ : ಮೇ. 3ರಂದು ಹರಿಶ್ಚಂದ್ರ ಪಿ. ಸಾಲಿಯಾನ್ ಅವರ ‘ನುಡಿಮುತ್ತು’ ಕೃತಿ ಬಿಡುಗಡೆ ಸಮಾರಂಭ

Mumbai News Desk

ಕನ್ನಡ ಸಂಘ ಸಯನ್ : ಮಾ. 29ರಂದು ಬೃಹತ್ ಉದ್ಯೋಗ ಮೇಳ

Mumbai News Desk

ನ 25 ಕ್ಕೆ ಕರ್ನಾಟಕ ಮಿತ್ರ ಮಂಡಳಿ (ರಿ) ಕಲ್ಯಾಣ್ ನ ಆಶ್ರಯದಲ್ಲಿ ಸಾಮೂಹಿಕ ಶ್ರೀ ಶನೀಶ್ವರ ಗ್ರಂಥ ಪಾರಾಯಣ.

Mumbai News Desk

ಸೆ. 5 ರಂದು ಭಾರತದ “Metro Man of India” ಪದ್ಮವಿಭೂಷಣ ಡಾ. ಇ ಶ್ರೀಧರನ್ ಗೆ ‘ಜಾರ್ಜ್ ಫೆರ್ನಾಂಡಿಸ್ ಸಂಸ್ಮರಣ ಪ್ರಶಸ್ತಿ ‘

Mumbai News Desk

ಮೈಸೂರು ಅಸೋಸಿಯೇಷನ್, ಮುಂಬೈ ನ.25 ರಂದು ಕನಕ ಜಯಂತಿ ಆಚರಣೆ

Mumbai News Desk