30 C
Mumbai
August 16, 2026
Mumbai News Kannada
ತುಳುನಾಡು

ಕಾಪು ನಗರದ ಹೃದಯ ಭಾಗದಲ್ಲಿರುವ ಅನಂತ ಮಹಲ್ ವಾಣಿಜ್ಯ ಸಂಕೀರ್ಣದಲ್ಲಿ 80ನೇ ಸ್ವಾತಂತ್ರ್ಯೋತ್ಸವ ಆಚರಣೆ





80 ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಕಾಪುವಿನ ಅನಂತ ಮಹಲ್ ವಾಣಿಜ್ಯ ಸಂಕೀರ್ಣ ಮುಂಭಾಗ ಜೇಸಿಐ ಕಾಪು ಘಟಕದ ಅಧ್ಯಕ್ಷ ವಿಕ್ಕಿ ಪೂಜಾರಿ ಮಡುಂಬು ಮುಖ್ಯ ಅತಿಥಿಯಾಗಿ ಭಾಗವಹಿಸಿ ಧ್ವಜಾರೋಹಣಗೈದು, ನೆರೆದಿದ್ದ ಅಂಗಡಿ ಮಾಲಕರಿಗೆ, ಸಿಬ್ಬಂದಿಗಳಿಗೆ ಮತ್ತು ಸಾರ್ವಜನಿಕರಿಗೆ ಶುಭಾಶಯಗಳನ್ನು ತಿಳಿಸಿದರು.

ಈ ಸಂದರ್ಭದಲ್ಲಿ ಅನಂತ ಮಹಲ್ ಮಾಲಕರಾದ ಗಣೇಶ್ ಆಚಾರ್ಯ ಅವರು ಮಾತನಾಡಿ ದೇಶಕ್ಕೆ ಸ್ವಾತಂತ್ರ್ಯ ತರಲು ಹೋರಾಡಿ ತಮ್ಮ ಪ್ರಾಣವನ್ನು ಲೆಕ್ಕಿಸದೆ ಬಲಿದಾನವನ್ನು ನೀಡಿದ ಹುತಾತ್ಮರ ದೇಶಸೇವೆಯನ್ನು ಸ್ಮರಿಸಿದರು,ಪ್ರಸ್ತುತ ದೇಶದ ಗಡಿ ಕಾಯುವ ವೀರಯೋಧರ ದೇಶ ಸೇವೆಯನ್ನು ಉಲ್ಲೇಖಿಸಿ, ಇಂದು ದೇಶದೆಲ್ಲೆಡೆ ಅತ್ಯಂತ ಸಂಭ್ರಮ ಮತ್ತು ವಿಜೃಂಭಣೆಯಿಂದ ಸ್ವಾತಂತ್ರ್ಯೋತ್ಸವವನ್ನು ಆಚರಿಸಿ ಹಲವೆಡೆ ಸ್ವಚ್ಛತಾ ಕಾರ್ಯಕ್ರಮ, ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಮಾಜಕ್ಕೆ ಮಾದರಿಯಾಗುವ ಕೆಲಸಗಳು ನಡೆಯುತ್ತಿವೆ ಎಂದು ಶ್ಲಾಘನೆ ವ್ಯಕ್ತಪಡಿಸಿದರು.

ಆಗಮಿಸಿದ್ದ ಎಲ್ಲರಿಗೂ ಸಿಹಿ ತಿಂಡಿಯನ್ನು ಹಂಚಲಾಯಿತು.

ಈ ಸಂದರ್ಭದಲ್ಲಿ ಜೇಸಿಐ ಕಾಪು ಘಟಕದ ಪೂರ್ವಾಧ್ಯಕ್ಷ ಜಗದೀಶ್ ಬಂಗೇರ, ರಮೇಶ್ ನಾಯ್ಕ್ ಮತ್ತು ಉಪಾಧ್ಯಕ್ಷರಾದ ಕಾರ್ತಿಕ್ ಆಚಾರ್ಯ ಹಾಗೂ ಮತ್ತಿತರರು ಉಪಸ್ಥಿತರಿದ್ದರು.



Related posts

ಹೊಸ ಅಂಗಣ ತಿಂಗಳ ಕಾರ್ಯಕ್ರಮ : ಕಿಟ್ಟ ಪಂಬದರಿಗೆ ಸನ್ಮಾನ

Mumbai News Desk

ಮೊಗವೀರ ಮಹಾಸಭಾ ಹೆಜಮಾಡಿ ಇದರ ನೂತನ ಅಧ್ಯಕ್ಷರಾಗಿ ಉದ್ಯಮಿ, ಸಮಾಜ ಸೇವಕ ಹರೀಶ್ ಕೋಟ್ಯಾನ್ ಆಯ್ಕೆ

Mumbai News Desk

ಹೆಜಮಾಡಿ : ಅದ್ದೂರಿಯಾಗಿ ಜರುಗಿದ ‘ಸ್ತ್ರೀ ಸ್ಫೂರ್ತಿ-2026’ ಕಾರ್ಯಕ್ರಮ

Mumbai News Desk

ಕಾಪು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ವತಿಯಿಂದ ತಾಲೂಕು ಮಟ್ಟದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೆ ಸನ್ಮಾನ

Mumbai News Desk

ಹೂಡೆ : ಶ್ರೀ ಗಜಾನನ ಬಿಲ್ಲವರ ಸೇವಾ ಸಂಘದ 101ನೇ ಭಜನಾ ಮಂಗಳೋತ್ಸವ ಹಾಗೂ ಪ್ರತಿಭಾ ಪುರಸ್ಕಾರ ವೈಭವ

Mumbai News Desk

ಜನಸಾಮಾನ್ಯರ ಆಶೋತ್ತರಗಳಿಗೆ ಸ್ಪಂದಿಸುವ ‘ಭಾರತ್ ಬ್ಯಾಂಕ್’: ಬೆಳ್ತಂಗಡಿಯ ಸುಸಜ್ಜಿತ ಕಟ್ಟಡದಲ್ಲಿ ಶಾಖೆ ಕಾರ್ಯಾರಂಭ.

Mumbai News Desk