29 C
Mumbai
October 8, 2026
Mumbai News Kannada
ಪ್ರಕಟಣೆ

ಘನ್ಸೋಲಿಯ ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಇಂದು ಶ್ರೀ ಪುತ್ತಿಗೆ ಮಠದ ಸ್ವಾಮೀಜಿ ಭೇಟಿ



ಘನ್ಸೋಲಿ: ಉಡುಪಿಯ ಜಗದ್ಗುರು ಶ್ರೀಮನ್ಮಧ್ವಾಚಾರ್ಯ ಮೂಲ ಮಹಾಸಂಸ್ಥಾನ ಶ್ರೀ ಪುತ್ತಿಗೆ ಮಠದ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದಂಗಳವರು ಇಂದು (ಆಗಸ್ಟ್ 21) ಘನ್ಸೋಲಿಯ ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿ ಭಕ್ತರಿಗೆ ಆಶೀರ್ವಚನ ನೀಡಲಿದ್ದಾರೆ.

ಶ್ರೀ ಕ್ಷೇತ್ರದಲ್ಲಿ ಇಂದು ಸಂಜೆ 3:00ರಿಂದ ಸಾಮೂಹಿಕ ಶ್ರೀ ವರಮಹಾಲಕ್ಷ್ಮಿ ವ್ರತ ಪೂಜೆ ಜರುಗಲಿದ್ದು, ಸಂಜೆ 5:00 ಗಂಟೆಗೆ ಶ್ರೀಗಳು ಉಪಸ್ಥಿತರಿದ್ದು ಭಕ್ತರಿಗೆ ಅನುಗ್ರಹ ಸಂದೇಶ ನೀಡಲಿರುವರು.

ಶ್ರೀ ಪುತ್ತಿಗೆ ಮಠದ ಪೀಠಾಧಿಪತಿ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ತಮ್ಮ ಚತುರ್ಥ ‘ವಿಶ್ವ ಗೀತಾ ಪರ್ಯಾಯ’ ಪೂಜಾ ಮಹೋತ್ಸವವನ್ನು ಯಶಸ್ವಿಯಾಗಿ ನೆರವೇರಿಸಿದ ಬಳಿಕ, ತಮ್ಮ 53ನೇ ಚಾತುರ್ಮಾಸ್ಯ ವ್ರತ ದೀಕ್ಷೆಯನ್ನು ನವಿ ಮುಂಬೈನ ವಾಶಿಯಲ್ಲಿರುವ ನೂತನ ಶಾಖಾ ಮಠದಲ್ಲಿ ಆಚರಿಸುತ್ತಿದ್ದಾರೆ.



Related posts

  ಜು 14; ಗೋರೆಗಾಂವ್ ಪೂರ್ವ ಸಹಕಾರವಾಡಿ ಶ್ರೀ ಸದ್ಗುರು ನಿತ್ಯಾನಂದ ಆಶ್ರಮದಲ್ಲಿ  ಉಚಿತ ಆರೋಗ್ಯ, ಮತ್ತು ಕಣ್ಣಿನ ಪರೀಕ್ಷೆ

Mumbai News Desk

ಜು21. ಕುಲಾಲ ಸಂಘದ ಗುರುವಂದನಾ ಭಜನ ಮಂಡಳಿಯಿಂದ ಗುರುಪೂರ್ಣಿಮೆ ಆಚರಣೆ,

Mumbai News Desk

ಆಗಸ್ಟ್‌ 30ರಂದು ‘ತುಲುವೆರೆ ಕಲ ಬೊಂಬೈ ಎಗ್ಗೆ’ ವಾರ್ಷಿಕೋತ್ಸವ: ಹಾಸ್ಯ ಕವಿಗೋಷ್ಠಿಗೆ ಹೆಸರು ನೋಂದಾವಣೆಗೆ ಆಹ್ವಾನ

Mumbai News Desk

ಅಕ್ಟೋಬರ್ 11ರಿಂದ ಬೋರಿವಲಿ ನ್ಯಾನ್ಸಿ ಕಾಂಪ್ಲೆಕ್ಸ್‌ನ ಶ್ರೀ ಜಗದೀಶ್ವರಿ ಮಂದಿರದಲ್ಲಿ 51ನೇ ವರ್ಷದ ನವರಾತ್ರಿ ಹಾಗೂ ದಸರಾ ಮಹೋತ್ಸವ

Mumbai News Desk

 ನ 29,30 ಮತ್ತು ಡಿ 1 ಸತತ ಮೂರು ದಿವಸ  ಮಕ್ಕಳ ಕಲರವದಲ್ಲಿ ನಾಟಕೋತ್ಸವ, ಯಕ್ಷಗಾನೋತ್ಸವ, ವಾರ್ಷಿಕೋತ್ಸವಗಳ ವಿಜೃಂಭಣೆಯ ಮಹಾಮೇಳ.

Mumbai News Desk

ಕರುನಾಡ ಸಿರಿ – ಏಪ್ರಿಲ್ 14ಕ್ಕೆ ವಾರ್ಷಿಕ ಕ್ರೀಡಾಕೂಟ

Mumbai News Desk