29 C
Mumbai
September 2, 2026
Mumbai News Kannada
ಮುಂಬಯಿ

ಜೋಗೇಶ್ವರಿಯಲ್ಲಿ ವಿಜೃಂಭಣೆಯ ಶ್ರೀ ರಾಘವೇಂದ್ರ ಸ್ವಾಮಿಗಳ 355ನೇ ಆರಾಧನಾ ಮಹೋತ್ಸವ





ಚಿತ್ರ ವರದಿ : ರಮೇಶ್ ಉದ್ಯಾವರ

ಜೊಗೇಶ್ವರಿ, ಸೆ.2: ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ 355ನೇ ಆರಾಧನಾ ಮಹೋತ್ಸವ
ಆ. 29 ರಂದು ಜೋಗೇಶ್ವರಿ ಪಶ್ಚಿಮದ ರಿಲೀಫ್ ರೋಡ್ ಗುಲ್ಶನ್ ನಗರದ ರಾಯರ ಅಭಿನವ ಮಂತ್ರಾಲಯ ಮಠದಲ್ಲಿ ಮಧ್ವಾಚಾರ್ಯ ಮೂಲ ಸಂಸ್ಥಾನದ ಮಂತ್ರಾಲಯ ರಾಘವೇಂದ್ರ ಸ್ವಾಮಿ ಮಠದ ಪೀಠಾಧಿಪತಿ ಶ್ರೀ ಸುಭುಧೇಂದ್ರ ತೀರ್ಥರ ಶುಭಾಶೀರ್ವಾದೊಂದಿಗೆ ಪೂರ್ವಾರಾಧನೆಯಿಂದ, ಮಧ್ಯಾರಾಧನೆ, ಉತ್ತಾರಾರಾಧನೆ ಸಹಿತ ವಿವಿಧ ಧಾರ್ಮಿಕ ಸೇವಾ ಕಾರ್ಯಕ್ರಮಗಳೊಂದಿಗೆ ಭಕ್ತಿ ಭಾವದೊಂದಿಗೆ ಜರಗಿತ್ತು.

ಆ 30 ರಂದು ಮಧ್ಯಾರಾಧನೆಯ ಪ್ರಯುಕ್ತ ಬೆಳಿಗ್ಗೆ ಪ್ರಾತಃಕಾಲದಲ್ಲಿ ನೈರ್ಮಲ್ಯ ವಿಸರ್ಜನೆ ವೇದಪರಾಯಣ ಪಂಚಾಮೃತ ಅಭಿಷೇಕ ಸರ್ವ ಸೇವೆ ಸಂಕಲ್ಪ ಪೂಜೆ ಜರುಗಿದ ನಂತರ ಗಜರಥದಲ್ಲಿ ರಾಯರ ಪ್ರತಿಬಿಂಬದೊಂದಿಗೆ ಬೃಂದಾವನದ ವೃತ್ತದಲ್ಲಿ ಚಂಡೆ ಭಜನೆಯೊಂದಿಗೆ ರಾಯರ ರಥೋತ್ಸವ ಶೋಭಾಯಾತ್ರೆ ಜರುಗಿತು. ಶ್ರೀ ಪ್ರಹ್ಲಾದರಾಯರ ಕನಕಮ್ಮ ಪೂಜೆ ಬ್ರಾಹ್ಮಣ ಅಲಂಕಾರ ಹಷ್ಟೋಧಕ ನೆರವೇರಿದ ಬಳಿಕ ಪ್ರಹ್ಲಾದ ಆಚಾರ್ಯರು ಮಧ್ಯಾಹ್ನದ ಮಹಾಮಂಗಳಾರತಿ ಜರುಗಿತು ಆ ಬಳಿಕ ತೀರ್ಥ ಪ್ರಸಾದ ಅನ್ನ ಸಂತರ್ಪಣೆ ನೆರವೇರಿತು.

ರಾಯರ ಧಾರ್ಮಿಕ ಆರಾಧನೆಯಲ್ಲಿ ವಿವಿಧ ಭಜನಾ ಸಂಘಟನೆಗಳಿಂದ ಸಾಮೂಹಿಕ ಭಜನಾ ಕಾರ್ಯಕ್ರಮಗಳು ಜರುಗಿದವು.

ಭೌತಿಕವಾಗಿಯೂ ಆಧ್ಯಾತ್ಮಿಕವಾಗಿ ಗುರುರಾಯರೆಂದೇ ಕರೆಯಲ್ಪಡುವ ಮಹಾ ಗುರುವಿನ ಪ್ರಪಂಚಾದ್ಯಂತ ಸಹಸ್ರಾರು ಶ್ರದ್ಧಾ ಭಕ್ತಿಯಿಂದ ಆಚರಿಸಲ್ಪಡುತ್ತಿರುವ ಆರಾಧನೆಯಲ್ಲಿ ರಾಯರ ಜೊಗೇಶ್ವರಿಯ ಅಭಿನಯ ಮಂತ್ರಾಲಯದ ಬೃಂದಾವನದಲ್ಲಿ ಪ್ರಬಂಧಕರಾದ ಕಿಶೋರ್ ದೇಸಾಯಿ ವಿಚಾರಕರ್ತರಾದ ದೀಪಕ್ ವೈದ್ಯ, ಅರ್ಚಕರಾದ ಪ್ರಹ್ಲಾದಾಚಾರ್ಯರು ಇನ್ನಿತರ ವಿಪ್ರವೃಂದರು ಸೇರಿ ವಿವಿಧ ಪೂಜಾ ಕೖಂಕರ್ಯ ವಿಧಿ ವಿಧಾನಗಳನ್ನು ನೆರವೇರಿಸಿದ ಬಳಿಕ ರಾಯರ ಸದ್ಭಕ್ತರಿಗೆ ತೀರ್ಥಪ್ರಸಾದ ಮಂತ್ರಾಕ್ಷತೆ ವಿತರಿಸಿದರು.

ಆಗಸ್ಟ್ 29 ರಿಂದ ಪ್ರಾರಂಭಗೊಂಡು ಆ 31. ರಂದು ಉತ್ತರಾಧನೆಯೊಂದಿಗೆ ಕೊನೆಗೊಂಡ ಮೂರು ದಿನಗಳ ಆರಾಧನೆಯಲ್ಲಿ ದಿನಂಪ್ರತಿ ರಾಯರ ಬೃಂದಾವನಕ್ಕೆ ಅಭಿಷೇಕ, ಪೂಜಾ ವಿಧಿ ವಿಧಾನಗಳ ಜೊತೆಗೆ ರಥೋತ್ಸವ ಶೋಭಾಯಾತ್ರೆ ಜರಗುತ್ತಿದ್ದು ಭಕ್ತರಿಗೆಲ್ಲಾ ಅನ್ನ ಸಂತರ್ಪಣೆ ನೆರವೇರಿತು. ಮಠದ ಸ್ವಯಂ ಸೇವಕರ ತಂಡವು ವಿಶೇಷವಾದ ವ್ಯವಸ್ತೆ ರೂಪಿಸುವ ಮೂಲಕ ಆರಾಧನ ಮಹೋತ್ಸವಕ್ಕೆ ಬಂದ ಭಕ್ತಾದಿಗಳಿಗೆ ಸಹಕರಿಸಿದರು.


ಶ್ರೀ ಮೂಲ ಸಂಸ್ಥಾನದ ರಾಘವೇಂದ್ರ ಯತಿ ಸಾರ್ವಭೌಮರು ಆರಾಧ್ಯ ದೇವರಾದ ಶ್ರೀರಾಮಚಂದ್ರರ ಅಪ್ರತಿಮ ಆರಾಧಕರಾಗಿ ಅವಧೂತರಾಗಿ ಲೋಕದ ಒಳಿತನ್ನು ಬಯಸಿ ಸರ್ವಜನಾಂಗದ ಪೂಜಿತರು. ಶ್ರೀ ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವ ಭಕ್ತರಿಗೆ ಆಧ್ಯಾತ್ಮಿಕ ಭಾವನೆ ಹಾಗೂ ಪುಣ್ಯಾನುಭವ ನೀಡುತ್ತದೆ.: ಕಿಶೋರ್ ದೇಸಾಯಿ, ಮುಖ್ಯಪ್ರಬಂಧಕರು ಶ್ರೀ ರಾಘವೇಂದ್ರ ಸ್ವಾಮಿ ಮಠ ಜೋಗಿಶ್ವರಿ ಶಾಖೆ

ಶ್ರೀ ರಾಘವೇಂದ್ರ ಸ್ವಾಮಿಗಳು ಜಾತಿ ಮತ ಪಂಥ ಮೀರಿ ಬೆಳೆದವರು. ತಾರತಮ್ಯವಿಲ್ಲದ ಧರ್ಮ ಪ್ರಚಾರದ ಮೂಲಕ ಲೋಕಕಲ್ಯಾಣಗೈದವರು. ಭಕ್ತರ ಅಂತ:ಕರಣದ ಭಕ್ತಿಗೆ ಸ್ಪಂದಿಸುವುದೊಂದೇ ರಾಯರ ಧರ್ಮ. ಅವರ ಪವಿತ್ರ ಆರಾಧನಾ ಮಹೋತ್ಸವ ಭಕ್ತರ ಬಾಳಿಗೆ ದಿವ್ಯ ಚೇತನವಾಗಲಿ.: #ಹರೂನ್ ಖಾನ್, ಸ್ಥಳೀಯ ಶಾಸಕರು, ಶಿವಸೇನಾ (ಯುಬಿಟಿ)



Related posts

ಶ್ರೀ ನಿತ್ಯಾನಂದ ಸೇವಾ ಸಂಸ್ಥೆ, ಮೀರಾ ಭಾಯಂದರ್ 16ನೇ ವಾರ್ಷಿಕ ಪಾದಯಾತ್ರೆ.

Mumbai News Desk

ಜಯಶ್ರೀ ಕೃಷ್ಣ ಪರಿಸರ ಪ್ರೇಮಿ ಸಮಿತಿಯ ವತಿಯಿಂದ ಸಾರ್ವಜನಿಕ ಸಭೆ

Mumbai News Desk

ಮೀರಾ ರೋಡ್: ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ 36ನೇ ವಾರ್ಷಿಕ ಮಹಾಪೂಜೆ ಭಕ್ತಿ ಸಂಭ್ರಮದೊಂದಿಗೆ ಸಂಪನ್ನ

Mumbai News Desk

ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿ, ಇದರ ಡೊಂಬಿವಲಿ ಸ್ಥಳೀಯ ಸಮಿತಿಯ ವತಿಯಿಂದ ಸಮಾಜದ ವಿದ್ಯಾರ್ಥಿಗಳಿಗಾಗಿ ಪುಸ್ತಕ ಹಾಗೂ ಶಾಲಾ ಪರಿಕರಗಳ ವಿತರಣೆ ಕಾರ್ಯಕ್ರಮ

Mumbai News Desk

9 ಹ್ಯಾಂಡ್ಸ್ ಫೌಂಡೇಶನ್ ವತಿಯಿಂದ ವಿದ್ಯಾರ್ಥಿ ವೇತನ ವಿತರಣೆ

Mumbai News Desk

ಬೋಂಬೆ ಬಂಟ್ಸ್ ಎಸೋಸಿಯೇಶನ್‌ನ ಯುವ ವಿಭಾಗದಿಂದ ದಾಂಡಿಯಾ ನೈಟ್.

Mumbai News Desk