ಜಯ ಸಿ. ಸುವರ್ಣ ಅಭಿಮಾನಿಗಳು, ಮುಂಬಯಿ ಬಿಲ್ಲವರು ಹಾಗೂ ಶ್ರೀ ನಾರಾಯಣ ಗುರು ಭಜನಾ ಮಂಡಳಿ (ಆರ್) ಮುಂಬಯಿ ಮಹಾನಗರ ಇದರ ಸಂಯುಕ್ತ ಆಶ್ರಯದಲ್ಲಿ 172ನೇ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಆಚರಣೆ ಹಾಗೂ ಶ್ರೀ ನಾರಾಯಣ ಗುರು ಭಜನಾ ಮಂಡಳಿ ಅಂಧೇರಿ ಘಟಕದ ಉದ್ಘಾಟನಾ ಸಮಾರಂಭವು ಸೆಪ್ಟೆಂಬರ್ 20, 2026ರ ರವಿವಾರದಂದು ಅಂಧೇರಿ ಈಸ್ಟ್ನ ಮಹಾಕಾಳಿ ಕೇವ್ಸ್ ರೋಡ್ನಲ್ಲಿರುವ ಶೇರ್ ಎ ಪಂಜಾಬ್ ಸೊಸೈಟಿಯ ಸೇಂಟ್ ಡೊಮಿನಿಕ್ ಸ್ಯಾವಿಯೋ ಶಾಲಾ ಆವರಣದಲ್ಲಿ ನಡೆಯಲಿದೆ.
ಈ ಕಾರ್ಯಕ್ರಮದ ಉದ್ಘಾಟನೆಯನ್ನು ಭಾರತ್ ಕೋ-ಆಪರೇಟಿವ್ ಬ್ಯಾಂಕ್ [ಮುಂಬಯಿ] ಲಿಮಿಟೆಡ್ನ ಕಾರ್ಯಾಧ್ಯಕ್ಷರು ಹಾಗೂ ಮುಲ್ಕಿಯ ರಾಷ್ಟ್ರೀಯ ಬಿಲ್ಲವ ಮಹಾ ಮಂಡಲ (ಆರ್) ಅಧ್ಯಕ್ಷರಾದ ಸೂರ್ಯಕಾಂತ ಜಯ ಸುವರ್ಣ ನೆರವೇರಿಸಲಿದ್ದಾರೆ.
ಮುಖ್ಯ ಅತಿಥಿಯಾಗಿ ಭಾರತ್ ಕೋ-ಆಪರೇಟಿವ್ ಬ್ಯಾಂಕ್ [ಮುಂಬಯಿ] ಲಿಮಿಟೆಡ್ನ ನಿರ್ದೇಶಕರಾದ ಶ್ರ ಗಂಗಾಧರ ಜೆ. ಪೂಜಾರಿ ಭಾಗವಹಿಸಲಿದ್ದಾರೆ.
ಗೌರವ ಅತಿಥಿಗಳಾಗಿ ಭಾರತ್ ಕೋ-ಆಪರೇಟಿವ್ ಬ್ಯಾಂಕ್ [ಮುಂಬಯಿ] ಲಿಮಿಟೆಡ್ ನಿರ್ದೇಶಕ ಸುರೇಶ್ ಬಿ. ಸುವರ್ಣ, ಶಿವಪ್ರಸಾದ್ ಪೂಜಾರಿ, ಕಲೀನಾದ ಕುಮಾರ ಸ್ವಾಮಿ, ಸಹಾರ್ಗಾಂವ್ನ ಸುದರ್ಶನ್ ಗೋಪಾಲ್ ಪೂಜಾರಿ, ಸಾಯಿ ಮಂದಿರ ಕಾರ್ಗೋ ಸಂಸ್ಥೆಯ ರಾಮ ಪೂಜಾರಿ (ಸ್ವಾಮಿ), ತುಳು ಕೂಟ ಅಸಲ್ಫಾ ಅಧ್ಯಕ್ಷ ರಾಮನಾಥ ಕೊಟ್ಯಾನ್ ಹಾಗೂ ಬಾಪ್ಟಿಸ್ಟಾವಾಡಿಯ ಚೇತನ್ ದೇವಾಡಿಗ ಉಪಸ್ಥಿತರಿರಲಿದ್ದಾರೆ.
ದಿನದ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ವಿವರ ಪ್ರಕಾರ, ಮಧ್ಯಾಹ್ನ 3.30ಕ್ಕೆ ಬಾಪ್ಟಿಸ್ಟಾವಾಡಿಯ ಶ್ರೀ ಕ್ಷೇತ್ರ ದತ್ತ ಜಗದಂಬಾ ಭಜನಾ ಮಂಡಳಿಯವರಿಂದ ಭಜನೆ, ಸಂಜೆ 5.00ಕ್ಕೆ ಮಹಾ ಮಂಗಳಾರತಿ, ಸಂಜೆ 5.00ಕ್ಕೆ ಸಭಾ ಕಾರ್ಯಕ್ರಮದೊಂದಿಗೆ “ಒಯಿಕ್ಲ ದಿನ ಬರೋಡ್” ತುಳು ನಾಟಕ ಪ್ರದರ್ಶನ ಹಾಗೂ ರಾತ್ರಿ 8.00ಕ್ಕೆ ಗುರು ಪ್ರಸಾದ ವಿತರಣೆ ಮತ್ತು ಅನ್ನ ಸಂತರ್ಪಣೆ ನಡೆಯಲಿದೆ. ಕಾರ್ಯಕ್ರಮದ ಎಲ್ಲಾ ಪೂಜಾ ವಿಧಿವಿಧಾನಗಳನ್ನು ರವೀಂದ್ರ ಶಾಂತಿ ನೆರವೇರಿಸಲಿದ್ದಾರೆ.
ಜಯ ಸಿ. ಸುವರ್ಣ ಅಭಿಮಾನಿಗಳು, ಮುಂಬಯಿ ಬಿಲ್ಲವರು ಗೌರವ ಕಾರ್ಯದರ್ಶಿ ಮೋಹನ್ ಜಿ. ಪೂಜಾರಿ, ಗೌರವ ಕೋಶಾಧಿಕಾರಿ ಶಿವರಾಮ್ ಎಸ್. ಪೂಜಾರಿ, ಶ್ರೀ ನಾರಾಯಣ ಗುರು ಭಜನಾ ಮಂಡಳಿ (ಆರ್) ಮುಂಬಯಿ ಅಧ್ಯಕ್ಷ ಅಶೋಕ್ ಕುಕ್ಯಾನ್ ಸಸಿಹಿತ್ಲು, ಗೌರವ ಪ್ರಧಾನ ಕಾರ್ಯದರ್ಶಿ ಕೇಶವ ಎಸ್. ಪೂಜಾರಿ, ಗೌರವ ಪ್ರಧಾನ ಕೋಶಾಧಿಕಾರಿ ಸಬಿತಾ ಜಿ. ಪೂಜಾರಿ ಹಾಗೂ ಅಂಧೇರಿಯ ಸಂಯೋಜಕರಾದ ಬಾಬು ಕೆ. ಪೂಜಾರಿ, ದೀನ್ದಾಸ್ ಬಿ. ಸನಿಲ್, ನಿರಂಜನ್ ಲಕ್ಷ್ಮಣ್ ಪೂಜಾರಿ, ಭೋಜರಾಜ್ ಪೂಜಾರಿ ಸಹಾರ್ಗಾಂವ್, ಅಶೋಕ್ ಎಸ್. ಕರ್ಕೇರ ಬಂಟ್ವಾಳ್, ಮಹೇಶ್ ಪೂಜಾರಿ ಕಟೀಲ್, ನಿತಿನ್ ಕೊಟ್ಯಾನ್, ಕೃಷ್ಣಾನಂದ ಪೂಜಾರಿ ಬಂಟ್ವಾಳ್ ಮತ್ತು ಸರ್ವ ಸಮಿತಿ ಸದಸ್ಯರು ಎಲ್ಲರಿಗೂ ಆದರದ ಸ್ವಾಗತ ಬಯಸಿದ್ದಾರೆ.




